Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

ಸ್ವ ಉದ್ಯಮ ಹಾಗೂ ಕೌಶಲ್ಯ ಆಧಾರಿತ ಉದ್ಯೋಗಕ್ಕೆ ಆಶಾಕಿರಣವಾದ ಕಾರ್ಕಳದ KGTTI..!

Dhrishya News by Dhrishya News
26/06/2025
in ಸುದ್ದಿಗಳು
0
ಸ್ವ ಉದ್ಯಮ ಹಾಗೂ ಕೌಶಲ್ಯ ಆಧಾರಿತ ಉದ್ಯೋಗಕ್ಕೆ ಆಶಾಕಿರಣವಾದ ಕಾರ್ಕಳದ KGTTI..!
0
SHARES
16
VIEWS
Share on FacebookShare on Twitter

ಕಾರ್ಕಳ: ಜೂನ್ 26 ರಾಜ್ಯದಲ್ಲೇ ಪ್ರಥಮ ಬಾರಿಗೆ ತಾಲೂಕು ಮಟ್ಟದ ಕಾರ್ಕಳದಲ್ಲಿ KGTTI (ಕರ್ನಾಟಕ ಜರ್ಮನ್ ಟ್ರೈನಿಂಗ್ ಇನ್ಸ್ಟಿಟ್ಯೂಟ್) ಪ್ರಾರಂಭಿಸಬೇಕೆಂಬುದು ನನ್ನ ಕನಸಾಗಿತ್ತು. ಕಾರ್ಕಳ ವಿಧಾನ ಸಭಾ ಕ್ಷೇತ್ರದ ಗ್ರಾಮೀಣ ವಿದ್ಯಾರ್ಥಿಗಳಿಗೆ ಸ್ವ ಉದ್ಯಮ ನಡೆಸಲು ಕೌಶಲ್ಯ ಆಧಾರಿತ ತರಬೇತಿ ದೊರೆಯಬೇಕು. ಹಾಗೂ ಈಗಿನ ಕಾಲ ಘಟ್ಟದ ಕೌಶಲ್ಯ ಆಧಾರಿತ ಉದ್ಯೋಗಕ್ಕೆ ಪೂರಕ ತರಬೇತಿ ಒದಗಿಸುವ ನಿಟ್ಟಿನಲ್ಲಿ ನಮ್ಮ ಈ ಸಂಸ್ಥೆಯನ್ನು ಪ್ರಾರಂಭಿಸಲಾತ್ತು.

ಈ ಸಂಸ್ಥೆಯ ಪ್ರಮುಖ ವೈಶಿಷ್ಟ್ಯವೆಂದರೆ ಇದೊಂದು ಅಲ್ಪಾವಧಿ ಉದ್ಯೋಗ-ಉದ್ದೇಶಿತ ಕೋರ್ಸ್ಗಳು ಆಗಿದ್ದು ಈ ತರಬೇತಿ ಕೇಂದ್ರದಲ್ಲಿ ನುರಿತ ಶಿಕ್ಷಕರಿಂದ ಸಿಸ್ಕೋ ಸರ್ಟಿಫೈಡ್ ನೆಟ್ ವರ್ಕ್ ಅಸೋಸಿಯೇಟ್ (CCNA) – ರೂಟಿಂಗ್ ಮತ್ತು ಸ್ವಿಚಿಂಗ್, ಸಿಸ್ಕೋಐಟಿ ಎಸೆನ್ಸಿಯಲ್ಸ್ (ITE), ಟ್ಯಾಲಿ ಪ್ರೈಮ್, ಮಾಸ್ಟರ್ಕ್ಯಾಮ್, ಸಿಎನ್ ಸಿ ಮೆಷಿನಿಸ್ಟ್ ಟರ್ನಿಂಗ್ ಮತ್ತು ಮಿಲ್ಲಿಂಗ್, CNC ಪ್ರೋಗ್ರಾಮಿಂಗ್ ಮತ್ತು ಒಪರೇಶನ್ -ಟರ್ನಿಂಗ್, CNC ಪ್ರೋಗ್ರಾಮಿಂಗ್ ಮತ್ತು ಒಪರೇಶನ್–ಮಿಲ್ಲಿಂಗ್, ಆಟೋಕಾಡ್, ಕ್ಯಾಟಿಯ R2022X ಕೋರ್ಸ್ ಸೇರಿದಂತೆಗಳಿಗೆ ತರಬೇತಿ ದೊರೆಯುತ್ತದೆ. ಇದು ಜರ್ಮನ್ ಮಾನದಂಡದಂತೆ ರೂಪಿತವಾಗಿದ್ದು ಪ್ರಚಲಿತ ವೃತ್ತಿಗಳ ಪ್ರಗತಿಶೀಲ ತಂತ್ರಜ್ಞಾನಗಳನ್ನು ಒಳಗೊಂಡಿವೆ. ಪ್ರಾಯೋಗಿಕ ಬೋಧನೆ ಮತ್ತು ಸೈದ್ಧಾಂತಿಕ ಕಠಿಣತೆಯ ತರಬೇತಿ ಪಡೆದ ವಿದ್ಯಾರ್ಥಿಗಳು ಇಂದಿನ ಸ್ಪರ್ಧಾತ್ಮಕ ಜಗತ್ತಿಗೆ ಪ್ರಬುದ್ಧರಾಗಿ ಸಿದ್ಧರಾಗಿರುತ್ತಾರೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಈ ತರಬೇತಿ ಕೇಂದ್ರ ಸ್ಥಾಪನೆಗೆ ಶ್ರಮವಹಿಸಿ ಪ್ರಾರಂಭಿಸಲಾಗಿತ್ತು.

    ಕಳೆದ 2 ವರ್ಷಗಳಿಂದ ನಿರಂತರ ಪ್ರಯತ್ನದ ಫಲವಾಗಿ ಕಾರ್ಕಳದ ಪಾಲಿಟೆಕ್ನಿಕ್ ಕಾಲೇಜು ಆವರಣದಲ್ಲಿ ತರಬೇತಿ ಕೇಂದ್ರದ ನಿರ್ದೇಶಕರಾದ ಶ್ರೀ ಗಿರಿಧರ್ ಸಾಲ್ಯಾನ್ ಮತ್ತು ಸಿಬ್ಬಂದಿ ವರ್ಗದ ಮುತುವರ್ಜಿಯಿಂದ ಸಂಸ್ಥೆ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಪಿ.ಯು.ಸಿ ಮತ್ತು ಎಸ್.ಎಸ್.ಎಲ್.ಸಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ತಾಂತ್ರಿಕ ಕೌಶಲ್ಯದ ಅಲ್ಪಾವಧಿ ತರಬೇತಿ ನೀಡುವ ಕಾರ್ಯದಲ್ಲಿ ಸಂಸ್ಥೆ ಯಶಸ್ಸು ಕಾಣುತ್ತಿದೆ.

  ಈವರೆಗೆ ಈ ಸಂಸ್ಥೆಯಲ್ಲಿ ತರಬೇತಿ ಪಡೆದ 150 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕ್ಯಾಂಪಸ್ ನಿಂದ ನೇರ ಉದ್ಯೋಗಕ್ಕೆ ನೇಮಕವಾಗಿರುವುದು ಹೆಮ್ಮೆಯ ಸಂಗತಿ. ಇದರ ಜೊತೆಗೆ ಇಲ್ಲಿ ತರಬೇತಿ ಪಡೆದ ಹೆಚ್ಚಿನ ವಿದ್ಯಾರ್ಥಿಗಳು ಸ್ವಂತ ಉದ್ಯಮ ಆರಂಭಿಸಿರುತ್ತಾರೆ, ಹಾಗೂ ಸ್ವ ಸಾಮರ್ಥ್ಯದಿಂದ ಉದ್ಯೋಗ ಪಡೆಯುವಲ್ಲಿಯೂ ಯಶಸ್ವಿಯಾಗಿದ್ದಾರೆ. ಒಟ್ಟಾರೆಯಾಗಿ ಶೇಕಡಾ 80% ಗಿಂತ ಅಧಿಕ ವಿದ್ಯಾರ್ಥಿಗಳು ಉದ್ಯೋಗ ಪಡೆದುಕೊಂಡಿರುವುದು ಅತ್ಯಂತ ಗಮನಾರ್ಹ ಹಾಗೂ ಸಾರ್ಥಕ್ಯದ ಸಂಗತಿಯಾಗಿರುತ್ತದೆ.

  ಸಂಸ್ಥೆಯ ಸ್ವಂತ ಕಟ್ಟಡಕ್ಕಾಗಿ ಈಗಾಗಲೇ 1.60 ಎಕ್ರೆ ಜಮೀನನ್ನು ಕಾಯ್ದಿರಿಸಿ ಶಾಸ್ವತ ಕ್ಯಾಂಪಸ್ ನಿರ್ಮಾಣಕ್ಕಾಗಿ ಮುಂದಿನ ಯೋಜನೆ ರೂಪಿಸಲಾಗಿದೆ. ಈ ನಿಟ್ಟಿನಲ್ಲಿ ಕಾರ್ಕಳ ಕ್ಷೇತ್ರದ ನಮ್ಮ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಈ ಕೌಶಲ್ಯ ತರಬೇತಿ ಕೇಂದ್ರದ ಸದುಪಯೋಗ ಪಡೆಯುವಂತೆ ಕಾರ್ಕಳ ಶಾಸಕರು ಮಾಜಿ ಸಚಿವರಾದ ವಿ ಸುನಿಲ್ ಕುಮಾರ್ ರವರು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Previous Post

ಉಡುಪಿ : ಬಡಾ ರಿಕ್ಷಾ ಚಾಲಕರ ಮೇಲೆ ನಡೆಯುವ ಹಲ್ಲೆ,ದೌರ್ಜನ್ಯ,ದಬ್ಬಾಳಿಕೆ ತಡೆಗೆ ಜಿಲ್ಲಾಧಿಕಾರಿ ಹಾಗೂ ಪೋಲಿಸ್ ವರಿಷ್ಠಾಧಿಕಾರಿ ಯವರಿಗೆ ಸಿಐಟಿಯು ಒತ್ತಾಯ..!!

Next Post

ಮಾಹೆಯಲ್ಲಿ ಅಂತರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆ..!!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಮಾಹೆಯಲ್ಲಿ ಅಂತರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆ..!!

ಮಾಹೆಯಲ್ಲಿ ಅಂತರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆ..!!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 24k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಉಡುಪಿ: ಸ್ವಚ್ಛ ಭಾರತ್ ಅಭಿಯಾನ ಸಂಪನ್ನ

ಉಡುಪಿ: ಸ್ವಚ್ಛ ಭಾರತ್ ಅಭಿಯಾನ ಸಂಪನ್ನ

02/10/2026
ಕಥೋಲಿಕ್ ಸಭಾ ಉದ್ಯಾವರ ಮತ್ತು ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ : ಗಾಂಧಿ ಜಯಂತಿಯ ಪ್ರಯುಕ್ತ ರೋಗಿಗಳಿಗೆ ಕಿಟ್ ವಿತರಣೆ

ಕಥೋಲಿಕ್ ಸಭಾ ಉದ್ಯಾವರ ಮತ್ತು ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ : ಗಾಂಧಿ ಜಯಂತಿಯ ಪ್ರಯುಕ್ತ ರೋಗಿಗಳಿಗೆ ಕಿಟ್ ವಿತರಣೆ

02/10/2026
ಉಡುಪಿಯಲ್ಲಿ ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಹೊಸ ಆಯ್ಕೆ: ವಿಘ್ನೇಶ್ವರ ಎಂಟರ್‌ಪ್ರೈಸಸ್ ನಲ್ಲಿ  ವಿವಿಧ ಮಾದರಿಗಳ ಲಭ್ಯತೆ

ಉಡುಪಿಯಲ್ಲಿ ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಹೊಸ ಆಯ್ಕೆ: ವಿಘ್ನೇಶ್ವರ ಎಂಟರ್‌ಪ್ರೈಸಸ್ ನಲ್ಲಿ  ವಿವಿಧ ಮಾದರಿಗಳ ಲಭ್ಯತೆ

02/10/2026
ಮಲ್ಪೆ ಸಮುದ್ರದಲ್ಲಿ ಕಾಲು ಜಾರಿ ಬಿದ್ದು ಮೀನುಗಾರ ನಾಪತ್ತೆ..!

ಕಾಲೇಜಿಗೆ ಹೋದ 20 ವರ್ಷದ ಯುವಕ ನಾಪತ್ತೆ: ಪ್ರಕರಣ ದಾಖಲು..!

01/10/2026

Recent News

imunify-bot-check