Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಕರಾವಳಿ

ಹೇಮಾದ್ರಿ ಗಿರಿಬಾಲೆ – ಜನ ಮನ ರಂಜಿಸಿದ ಗಂಧರ್ವರ ಜನ್ಮಾಂತರಗಳ ಪ್ರಸಂಗ ಕಥೆ

Dhrishya News by Dhrishya News
17/08/2026
in ಕರಾವಳಿ
0
ಹೇಮಾದ್ರಿ ಗಿರಿಬಾಲೆ – ಜನ ಮನ ರಂಜಿಸಿದ ಗಂಧರ್ವರ ಜನ್ಮಾಂತರಗಳ ಪ್ರಸಂಗ ಕಥೆ
0
SHARES
1
VIEWS
Share on FacebookShare on Twitter

ಬ್ರಹ್ಮಾವರ :ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಧನಸಹಾಯ ಯೋಜನೆಯಡಿ ನಾದ ನೂಪುರ ಯಕ್ಷೋತ್ಥಾನ ಟ್ರಸ್ಟ್ ವಂಡಾರು ಆಯೋಜನೆಯಲ್ಲಿ ಆಗಸ್ಟ್ ೧೬, ೨೦೨೬ ನೇ ಭಾನುವಾರ ಕುಂದಾಪುರದ ಹಂಗಾರಕಟ್ಟೆ ಕೇಂದ್ರದ ಸಭಾಭವನದಲ್ಲಿ ಸಂಜೆ ೩ ಗಂಟೆಗೆ ವೀರ ರಾಣಿ ಅಬ್ಬಕ್ಕ ಪ್ರಶಸ್ತಿ ಪುರಸ್ಕೃತ ಶುಭಾಶಯ ಜೈನ್ ವಿರಚಿತ ಹೇಮಾದ್ರಿ ಗಿರಿಬಾಲೆ ಎಂಬ ಪ್ರಸಂಗವು ಪ್ರದರ್ಶನಗೊಂಡಿತು. ಗಂಧರ್ವರ ನಡುವೆ ಜನ್ಮಾಂತರಗಳಲ್ಲಿ ನಡೆಯುವ ದ್ವೇಷ, ಪ್ರೀತಿ, ಶಾಪ, ವರ, ಒಳ್ಳೆಯತನ ಹಾಗೂ ಧರ್ಮದ ವಿಜಯದ ಕುರಿತು ಧೃಶ್ಯಾವಳಿಗಳು ಮೂಡಿ ಬಂದವು. ಲಲಿತಾಂಗ ಎಂಬ ಅವಳಿ ಪಾತ್ರಗಳಲ್ಲಿ ಪ್ರಸನ್ನ ಶೆಟ್ಟಿಗಾರ ಮಂದಾರ್ತಿ, ಹಾಗೂ ಪ್ರಕಾಶ್ ಕಿರಾಡಿ, ಶಾಲ್ಮಲಿ, ಮಲಯಸುಂದರಿ ಹಾಗೂ ಜಯಂತಸೇನೆ ಎಂಬ ಮೂರು ಪಾತ್ರಗಳಲ್ಲಿ ಕಲಾವಿದರಾದ ವಂಡಾರು ಗೋವಿಂದ, ಮೂರು ಜನ್ಮಗಳ ಪ್ರೀತಿ, ಸಂಘರ್ಷ, ಸೇಡಿನ ಎಳೆಯನ್ನು ವಿವಿಧ ರಸಭಾವಗಳಲ್ಲಿ ಪ್ರಸ್ತುಪಡಿಸಿದರು. ಹೇಮಕೀರ್ತಿಯ ಪಾತ್ರದಲ್ಲಿ ಪ್ರಭಾಕರ ಬೇಳಂಜೆ, ಸುದಂತಿಯ ಪಾತ್ರದಲ್ಲಿ ಜಯಂತ ಸುರ್ಗೊಳಿ ಹಾಗೂ ಹಾಸ್ಯಗಾರ ಲಲಿತಾಂಗನ ಸಖ ಕುಸುಮನಾಗಿ ಕ್ಯಾದಗಿ ಮಹಬಲೇಶ್ವರ ಅಭಿನಯಿಸಿದರು.

ಶಾಲ್ಮಲಿ ಹಾಗೂ ಶ್ರೀನಂದರ ಪ್ರೇಮಾನುರಾಗವನ್ನು ಬೇರ್ಪಡಿಸಲು ಸುದಂತಿ ನಡೆಸುವ ಕುತಂತ್ರಗಳು, ಹಾಗೂ ಆಕೆ ಪ್ರತಿ ಜನ್ಮದಲ್ಲೂ ಶ್ರೀನಂದ ಶಾಲ್ಮಲಿಯರನ್ನು ಕಾಡುವ ಹಗೆಯ ಪಣಕ್ಕೆ ಸವಾಲೆಸೆದು ಶಾಲ್ಮಲಿ ಶ್ರೀನಂದರ ಪ್ರೀತಿಯನ್ನು ಗೆಲ್ಲಿಸುವ ಹೇಮಕೀರ್ತಿ ಅವರಿಬ್ಬರ ಆದರ್ಶ ಪ್ರೇಮವನ್ನು ಲೋಕಮುಖದಲ್ಲಿ ಶಾಶ್ವತವಾಗಿ ಉಳಿಯುವಂತೆ ಮಾಡುತ್ತಾನೆ. ಅವರನ್ನು ಒಂದುಗೂಡಿಸಿ ನಿಷ್ಕಲ್ಮಷ ಪ್ರೇಮವನ್ನು ಗೆಲ್ಲಿಸುತ್ತಾನೆ. ಭಾಗವತರಾದ ಮೂಡುಬೆಳ್ಳೆ ಚಂದ್ರಕಾಂತ ರಾವ್ ಅವರ ಸಾರಥ್ಯದಲ್ಲಿ ನಡೆದ ಆಖ್ಯಾನಕ್ಕೆ ಹಿಮ್ಮೇಳದಲ್ಲಿ ಚೆಂಡೆಯಲ್ಲಿ ಎನ್. ಜಿ. ಹೆಗಡೆ ಹಾಗೂ ಮದ್ದಳೆಯಲ್ಲಿ ಮಂಗೇಶ್ ನಾಡಕರ್ಣಿ ಸಹಕರಿಸಿದರು. ಕಾರ್ಯಕ್ರಮ ಪ್ರದರ್ಶನಕ್ಕೆ ಹಂಗಾರಕಟ್ಟೆ ಯಕ್ಷಗಾನ ಕಲಾಕೇಂದ್ರದ ರಾಜಶೇಖರ ಹೆಬ್ಬಾರ್ ರವರು ವೇದಿಕೆ ಒದಗಿಸಿ ಸಹಕರಿಸಿದರು

Previous Post

ಕೃಷ್ಣ ಮಠದಲ್ಲಿ ನೂತನ ಸ್ನಾನಗೃಹ, ಶೌಚಾಲಯ ಹಾಗೂ ವಸತಿಗೃಹ ಲೋಕಾರ್ಪಣೆ

Next Post

ವಿದ್ಯಾರ್ಥಿಗಳು ಸತ್ಪ್ರಜೆಗಳಾಗಿ ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡಬೇಕು : ಶ್ರೀಕಾಂತ ನಾಯಕ್

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ವಿದ್ಯಾರ್ಥಿಗಳು ಸತ್ಪ್ರಜೆಗಳಾಗಿ ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡಬೇಕು : ಶ್ರೀಕಾಂತ ನಾಯಕ್

ವಿದ್ಯಾರ್ಥಿಗಳು ಸತ್ಪ್ರಜೆಗಳಾಗಿ ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡಬೇಕು : ಶ್ರೀಕಾಂತ ನಾಯಕ್

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ವಿದ್ಯಾರ್ಥಿಗಳು ಸತ್ಪ್ರಜೆಗಳಾಗಿ ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡಬೇಕು : ಶ್ರೀಕಾಂತ ನಾಯಕ್

ವಿದ್ಯಾರ್ಥಿಗಳು ಸತ್ಪ್ರಜೆಗಳಾಗಿ ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡಬೇಕು : ಶ್ರೀಕಾಂತ ನಾಯಕ್

17/08/2026
ಹೇಮಾದ್ರಿ ಗಿರಿಬಾಲೆ – ಜನ ಮನ ರಂಜಿಸಿದ ಗಂಧರ್ವರ ಜನ್ಮಾಂತರಗಳ ಪ್ರಸಂಗ ಕಥೆ

ಹೇಮಾದ್ರಿ ಗಿರಿಬಾಲೆ – ಜನ ಮನ ರಂಜಿಸಿದ ಗಂಧರ್ವರ ಜನ್ಮಾಂತರಗಳ ಪ್ರಸಂಗ ಕಥೆ

17/08/2026
ಕೃಷ್ಣ ಮಠದಲ್ಲಿ ನೂತನ ಸ್ನಾನಗೃಹ, ಶೌಚಾಲಯ ಹಾಗೂ ವಸತಿಗೃಹ ಲೋಕಾರ್ಪಣೆ

ಕೃಷ್ಣ ಮಠದಲ್ಲಿ ನೂತನ ಸ್ನಾನಗೃಹ, ಶೌಚಾಲಯ ಹಾಗೂ ವಸತಿಗೃಹ ಲೋಕಾರ್ಪಣೆ

17/08/2026
9ನೇ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧಾಕೂಟದ ಕರಪತ್ರ ಬಿಡುಗಡೆ..!

9ನೇ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧಾಕೂಟದ ಕರಪತ್ರ ಬಿಡುಗಡೆ..!

17/08/2026

Recent News