ಉಡುಪಿ : ಜೂನ್ 26:ಇತ್ತೀಚಿನ ದಿನಗಳಲ್ಲಿ ಉಡುಪಿ ನಗರದಲ್ಲಿ ನಿರಂತರವಾಗಿ ಕೆಲವು ಬಡಾ ರಿಕ್ಷಾ ಚಾಲಕರಿಗೆ ಹಲ್ಲೆ ,ದೌರ್ಜನ್ಯ, ಮಾನಸಿಕ ಹಿಂಸೆ ಯನ್ನು ಉಡುಪಿ ನಗರದಲ್ಲಿ ಇರುವ ರಾಜಕೀಯ ವ್ಯಕ್ತಿ ಗಳ ಕೈಯಲ್ಲಿ ಇರುವ ಕೆಲವು ರಿಕ್ಷಾ ಯೂನಿಯನ್ ಗಳು ನಡೆಸುತ್ತಿದೆ ಇದನ್ನು ಈ ಕೂಡಲೇ ಜಿಲ್ಲಾಧಿಕಾರಿಯವರು ಮತ್ತು ಉಡುಪಿ ಪೋಲಿಸ್ ವರಿಷ್ಠಾಧಿಕಾರಿ ಮಧ್ಯ ಪ್ರವೇಶಿಸಿ ಇಂತಹ ಅನಾಗರಿಕ ರೀತಿಯಲ್ಲಿ ನಡೆಯು ರಿಕ್ಷಾ ಯೂನಿಯನ್ ಗಳ ಮೇಲೆ ಶಿಸ್ತುಕ್ರಮ ಕೈಗೊಳ್ಳ ಬೇಕು ಎಂದು ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಕವಿರಾಜ್. ಎಸ್.ಕಾಂಚನ್ ಒತ್ತಾಯಿಸಿದ್ದಾರೆ
ಈ ಹಿಂದೆ ಹಲವು ಬಾರಿ ಬಾಡಿಗೆ ವಿಚಾರವಾಗಿ ಜಗಳ ,ಹಲ್ಲೆ ಗಳು ನಡೆದಾಗ ಪೋಲಿಸ್ ಅಧಿಕಾರಿಗಳು ಹಾಗೂ ನಗರಸಭೆ ಅಧಿಕಾರಿಗಳು ಮಾತುಕತೆ ನಡೆಸಿ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸಿದರು.
ಇತ್ತೀಚಿಗೆ ಉಡುಪಿ ನಗರದ ಸಿಟಿಬಸ್ ನಿಲ್ದಾಣ, ಸರ್ವಿಸ್ ಬಸ್ ನಿಲ್ದಾಣದಲ್ಲಿ ಇರುವ 4ರಿಕ್ಷಾ ಸ್ಟ್ಯಾಂಡ್ ಗಳಲ್ಲಿ ನಿರಂತರವಾಗಿ ಬಡಾ ಚಾಲಕರ ಮೇಲೆ ದಬ್ಬಾಳಿಕೆಯನ್ನು ನಡೆಸುತ್ತಿದ್ದು ರಿಕ್ಷಾ ಯೂನಿಯನ್ ನ ಸದಸ್ಯರಾಗಲು ಸಾವಿರಾರು ರೂಪಾಯಿ ವಸೂಲಿ ಮಾಡುತ್ತಿದ್ದಾರೆ.ಇವರಿಗೆ ಕೆಲವು ರಾಜಕೀಯ ವ್ಯಕ್ತಿಗಳ ಬೆಂಬಲಿಸುವುದರಿಂದ ಉಡುಪಿ ನಗರದಲ್ಲಿ ಬಡಾ ಚಾಲಕರಿಂದ ಹಗಲು ದರೋಡೆ ನಡೆಸುತ್ತಿದ್ದಾರೆ ಈ ಕೂಡಲೇ ಜಿಲ್ಲಾಧಿಕಾರಿ ಯವರು ಮತ್ತು ಪೋಲಿಸ್ ವರಿಷ್ಠಾಧಿಕಾರಿಯವರು ಪರಿಶೀಲನೆ ನಡೆಸಿ ಅಂತಹ ರಿಕ್ಷಾ ಯೂನಿಯನ್‌ಗಳ ಮತ್ತು ಹಲ್ಲೆ ನಡೆಸುವಂತಹ ರಿಕ್ಷಾ ಚಾಲಕರ ಲೈಸನ್ಸ್ ರದ್ದು ಗೊಳಿಸಬೇಕು ಹಾಗೂ ಹಲ್ಲೆ ಒಳಾಗಾಗಿ ಅಜ್ಜರಕಾಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಬಡಾ ರಿಕ್ಷಾ ಚಾಲಕನಿನೆ ನ್ಯಾಯ ಒದಗಿಸಬೇಕು ಎಂದು ಸಿಐಟಿಯು ಒತ್ತಾಯಿಸಿದೆ