ಉಡುಪಿ:ನದಿಯಲ್ಲಿ ಮರುವಾಯಿ ಹೆಕ್ಕಲು ಹೋಗಿ ನಾಲ್ವರು ಯುವಕರಲ್ಲಿ ಮೂವರು ನೀರುಪಾಲು, ಓರ್ವ ಕಣ್ಮರೆಯಾದ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನಲ್ಲಿ ನಿನ್ನೆ(ಭಾನುವಾರ) ಘಟನೆ ನಡೆದಿದೆ.
ನೀರು ಪಾಲಾದ ಯುವಕರನ್ನ ಉಡುಪಿ ಮತ್ತು ಶೃಂಗೇರಿ ಮೂಲದವರು ಅಂತ ಗುರುತಿಸಲಾಗಿದೆ. ಇಬಾಜ್, ಫಜಾನ್, ಸೂಫಾನ್ ಫರಾನ್ ನೀರುಪಾಲಾದ ಯುವಕರಾಗಿದ್ದಾರೆ.
ನೀರುಪಾಲಾದ ಯುವಕರು ರಂಜಾನ್ ಹಬ್ಬಕ್ಕೆ ಬ್ರಹ್ಮಾವರದ ಸಂಬಂಧಿಕರ ಮನೆಗೆ ಬಂದಿದ್ದರು. ಕುಕ್ಕುಡೆ ಕಿಣಿಯರ ಕುದ್ರು ಸಮೀಪ ನಡೆದ ಘಟನೆ ನಡೆದಿದೆ.
ಏಳು ಯುವಕರ ತಂಡ ಸಂಜೆ ದೋಣಿ ಮೂಲಕ ಮೀನು ಹಿಡಿಯಲು ತೆರಳಿತ್ತು. ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿ ಮೂವರು ಯುವಕರು ನೀರಿನಲ್ಲಿ ಕೊಚ್ಚಿ ಹೋಗಿರುವ ಸಾಧ್ಯತೆ ಇದೆ ಅಂತ ತಿಳಿದು ಬಂದಿದೆ. ಕಣ್ಮರೆಯಾದ ಯುವಕರಿಗಾಗಿ ಸ್ಥಳೀಯರು, ಪೊಲೀಸರು ಹಾಗೂ ಅಗ್ನಿಶಾಮಕ ದಳದಿಂದ ಶೋಧಕಾರ್ಯ ಆರಂಭಿಸಿದ್ದಾರೆ.