Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

ಕೋಟಕ್ ಮಹೀಂದ್ರಾ ಪ್ರೈಮ್ ಲಿಮಿಟೆಡ್‌ ನ ನಾಯಕತ್ವ ಬದಲಾವಣೆ

Dhrishya News by Dhrishya News
31/03/2026
in ಸುದ್ದಿಗಳು
0
ಕೋಟಕ್ ಮಹೀಂದ್ರಾ ಪ್ರೈಮ್ ಲಿಮಿಟೆಡ್‌ ನ ನಾಯಕತ್ವ ಬದಲಾವಣೆ
0
SHARES
3
VIEWS
Share on FacebookShare on Twitter

ಬೆಂಗಳೂರು,  ಮಾರ್ಚ್ 31: ಕೋಟಕ್ ಮಹೀಂದ್ರಾ ಬ್ಯಾಂಕ್ ಲಿಮಿಟೆಡ್‌ ನ ಅಂಗಸಂಸ್ಥೆ ಮತ್ತು ಮುಂಚೂಣಿಯಲ್ಲಿರುವ ವಾಹನ ಹಣಕಾಸು ಸಂಸ್ಥೆಯಾದ ಕೋಟಕ್ ಮಹೀಂದ್ರಾ ಪ್ರೈಮ್ ಲಿಮಿಟೆಡ್ (ಕೆಎಂಪಿಎಲ್), ತನ್ನ ನಿರ್ದೇಶಕ ಮಂಡಳಿಯು ಅನುಮೋದಿಸಿರುವ ನಾಯಕತ್ವ ಬದಲಾವಣೆಯನ್ನು ಘೋಷಿಸಿದೆ.

ಸದಸ್ಯರ ಅನುಮೋದನೆಗೆ ಒಳಪಟ್ಟು, ಜೂನ್ 1, 2026 ರಿಂದ ಜಾರಿಗೆ ಬರುವಂತೆ ಮೂರು ವರ್ಷಗಳ ಅವಧಿಗೆ ಶ್ರೀ ಸೂರಜ್ ರಾಜಪ್ಪನ್ ಅವರನ್ನು ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಓ) ಆಗಿ ಮಂಡಳಿಯು ನೇಮಕ ಮಾಡಿದೆ. ಶ್ರೀ ಸೂರಜ್ ರಾಜಪ್ಪನ್ ಅವರು ತಮ್ಮ ವೃತ್ತಿಜೀವನವನ್ನು ಕೋಟಕ್ ಮಹೀಂದ್ರಾ ಪ್ರೈಮ್ ಲಿಮಿಟೆಡ್‌ ನಲ್ಲೇ ಪ್ರಾರಂಭಿಸಿದ್ದು, ಈ ಸಂಸ್ಥೆಯಲ್ಲಿ 24 ವರ್ಷಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿರುವ ಅನುಭವವನ್ನು ಹೊಂದಿದ್ದಾರೆ.

Suraj Rajappan_Managing Director & CEO

ಪ್ರಸ್ತುತ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಓ ಆಗಿರುವ ಶ್ರೀ ಶಾರುಖ್ ತೋಡಿವಾಲಾ ಅವರು ಕೋಟಕ್ ಸಮೂಹದಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿದ ನಂತರ, ಮೇ 31, 2026 ರಂದು ನಿವೃತ್ತರಾಗಲಿದ್ದಾರೆ.

ಈ ಕುರಿತು ಕೋಟಕ್ ಮಹೀಂದ್ರಾ ಬ್ಯಾಂಕ್‌ ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಓ ಆದ ಅಶೋಕ್ ವಾಸ್ವಾನಿ ಅವರು ಮಾತನಾಡಿ , “ಶಾರುಖ್ ಅವರು ಕೋಟಕ್ ಮಹೀಂದ್ರಾ ಪ್ರೈಮ್‌ ನಲ್ಲಿ ಅದ್ಭುತ ಬೆಳವಣಿಗೆ ಶಕ್ತಿ, ಶಿಸ್ತುಬದ್ಧ ರಿಸ್ಕ್ ಮ್ಯಾನೇಜ್‌ ಮೆಂಟ್ ಮತ್ತು ಗ್ರಾಹಕ ಕೇಂದ್ರಿತ ಮನೋಭಾವದ ಪರಂಪರೆಯನ್ನು ಬಿಟ್ಟು ಹೋಗುತ್ತಿದ್ದಾರೆ. ನಾವು ಸೂರಜ್ ಅವರನ್ನು ನಾಯಕತ್ವ ಸ್ಥಾನಕ್ಕೆ ಮನಃಪೂರ್ವಕವಾಗಿ ಸ್ವಾಗತಿಸುತ್ತಿದ್ದೇವೆ. ಅವರ ಆಳವಾದ ಉದ್ಯಮ ಅನುಭವ ಮತ್ತು ಕಾರ್ಯಕ್ಷಮತೆಯ ಸಾಮರ್ಥ್ಯಗಳು ಕೆಎಂಪಿಎಲ್ ಸಂಸ್ಥೆಯನ್ನು ಬೆಳವಣಿಗೆಯ ಹಾದಿಯಲ್ಲಿ ಮುಂದಿನ ಹಂತಕ್ಕೆ ಕೊಂಡೊಯ್ಯಲು ನೆರವಾಗಲಿವೆ ಎಂಬ ನಂಬಿಕೆ ನಮಗಿದೆ,” ಎಂದು ತಿಳಿಸಿದರು.

ಕೆಎಂಪಿಎಲ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಓ ಶಾರುಖ್ ತೋಡಿವಾಲಾ ಅವರು ಮಾತನಾಡಿ, “ಕೆಎಂಪಿಎಲ್‌ನ 30 ವರ್ಷಗಳ ಪಯಣದ ಭಾಗವಾಗಿರುವುದು ಮತ್ತು ಅದರ ಬೆಳವಣಿಗೆಗೆ ಕೊಡುಗೆ ನೀಡಿರುವುದು ನಿಜಕ್ಕೂ ತೃಪ್ತಿದಾಯಕವಾಗಿದೆ, ಹಾಗೂ ಈ ಕಂಪನಿಯನ್ನು ಮುನ್ನಡೆಸಲು ಸಿಕ್ಕ ಅವಕಾಶ ನನಗೆ ಸಂದ ಗೌರವವಾಗಿದೆ. ಸೂರಜ್ ಮತ್ತು ನಾಯಕತ್ವದ ತಂಡವು ಈ ಬಲವಾದ ಅಡಿಪಾಯದ ಮೇಲೆ ಸಂಸ್ಥೆಯನ್ನು ಮತ್ತಷ್ಟು ಕಟ್ಟಿ, ಕೆಎಂಪಿಎಲ್ ಅನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತಾರೆ ಎಂಬ ವಿಶ್ವಾಸ ನನಗಿದೆ,” ಎಂದರು.

ಕೆಎಂಪಿಎಲ್‌ನ ನಿಯೋಜಿತ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಓ ಆದ ಸೂರಜ್ ರಾಜಪ್ಪನ್ ಮಾತನಾಡಿ, “ಮಂಡಳಿಯು ನನ್ನ ಮೇಲೆ ಇಟ್ಟಿರುವ ನಂಬಿಕೆಗೆ ನಾನು ಚಿರಋಣಿ. ಕೆಎಂಪಿಎಲ್ ಶಿಸ್ತುಬದ್ಧ ಕಾರ್ಯನಿರ್ವಹಣೆ, ಹೊಸತನ ಮತ್ತು ಅತ್ಯುತ್ತಮ ಗ್ರಾಹಕ ಕೇಂದ್ರಿತ ಅನುಭವದ ಮೇಲೆ ತನ್ನ ಗಮನವನ್ನು ಮುಂದುವರಿಸಲಿದೆ. ಹಾಗೆಯೇ, ನಮ್ಮೆಲ್ಲಾ ಓಇಎಂ ಮತ್ತು ಡೀಲರ್ ಪಾಲುದಾರರೊಂದಿಗೆ ನಮ್ಮ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ,” ಎಂದು ತಿಳಿಸಿದರು.

ಭಾರತೀಯ ವಾಹನ ಹಣಕಾಸು ಕ್ಷೇತ್ರದಲ್ಲಿ ದೀರ್ಘ ಮತ್ತು ಅದ್ಭುತ ಪಯಣ

ಕೋಟಕ್ ಮಹೀಂದ್ರಾ ಪ್ರೈಮ್ ಲಿಮಿಟೆಡ್ (ಕೆಎಂಪಿಎಲ್) ನ ಬೇರು 1996ರಲ್ಲಿದೆ. ಇದನ್ನು ಆಗ ಕೋಟಕ್ ಮಹೀಂದ್ರಾ ಫೈನಾನ್ಸ್ ಮತ್ತು ಫೋರ್ಡ್ ಕ್ರೆಡಿಟ್ ಇಂಟರ್ ನ್ಯಾಷನಲ್ ನಡುವಿನ 60:40 ಜಂಟಿ ಉದ್ಯಮವಾಗಿ ‘ಕೋಟಕ್ ಮಹೀಂದ್ರಾ ಪ್ರೈಮಸ್ ಲಿಮಿಟೆಡ್’ ಹೆಸರಿನಲ್ಲಿ ಸ್ಥಾಪಿಸಲಾಯಿತು. ಇದು ಭಾರತದ ಆರಂಭಿಕ ಸುಸಂಘಟಿತ ಕಾರ್ ಫೈನಾನ್ಸ್ ಸಂಸ್ಥೆಗಳಲ್ಲಿ ಒಂದಾಗಿದೆ. 2005ರಲ್ಲಿ, ಕೋಟಕ್ ಮಹೀಂದ್ರಾ ಬ್ಯಾಂಕ್, ಫೋರ್ಡ್ ಕ್ರೆಡಿಟ್‌ ನ ಪಾಲನ್ನು ಸ್ವಾಧೀನಪಡಿಸಿಕೊಂಡಿತು, ಈ ಮೂಲಕ ಕಂಪನಿಯು ಕೋಟಕ್ ಸಮೂಹದ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾಯಿತು. ತದನಂತರ ಇದನ್ನು ಕೋಟಕ್ ಮಹೀಂದ್ರಾ ಪ್ರೈಮ್ ಲಿಮಿಟೆಡ್ ಎಂದು ಮರುನಾಮಕರಣ ಮಾಡಲಾಯಿತು.

ಕಳೆದ ಸುಮಾರು ಮೂರು ದಶಕಗಳಲ್ಲಿ, ಕೆಎಂಪಿಎಲ್ ಭಾರತದ ಆಟೋಮೊಬೈಲ್ ಮತ್ತು ಸಾಲ ಮಾರುಕಟ್ಟೆಗಳ ಬೆಳವಣಿಗೆಯ ಜೊತೆಯೇ ಬೆಳೆದು ಬಂದಿದೆ. ರಿಸ್ಕ್ ಮ್ಯಾನೇಜ್‌ಮೆಂಟ್‌ನ ಶಿಸ್ತು, ಉತ್ತಮ ಆಡಳಿತ ಮತ್ತು ಸಾಂಸ್ಥಿಕ ಬೆಳವಣಿಗೆಯಲ್ಲಿ ತನ್ನನ್ನು ತಾನು ಭದ್ರಪಡಿಸಿಕೊಂಡಿರುವ ಈ ಸಂಸ್ಥೆಯು, ಕೋಟಕ್ ಸಮೂಹದ ವಿಶಾಲ ಹಣಕಾಸು ಸೇವೆಗಳ ಪರಿಸರ ವ್ಯವಸ್ಥೆಯೊಂದಿಗೆ ನಿಕಟವಾಗಿ ಬೆರೆತುಕೊಂಡಿದೆ.

Previous Post

ಮಣಿಪಾಲದಲ್ಲಿ AHA 2025 CPR ಮಾರ್ಗಸೂಚಿ ಬಿಡುಗಡೆ: ಸಮುದಾಯ ತರಬೇತಿಗೆ ಒತ್ತು..!!

Next Post

ಇಂದಿನ ರಾಶಿಭವಿಷ್ಯ: ದ್ವಾದಶ ರಾಶಿಗಳಿಗೆ ದಿನಫಲ (31-03-2026, ಮಂಗಳವಾರ)

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಇಂದಿನ ರಾಶಿಭವಿಷ್ಯ: ದ್ವಾದಶ ರಾಶಿಗಳಿಗೆ ದಿನಫಲ (31-03-2026, ಮಂಗಳವಾರ)

ಇಂದಿನ ರಾಶಿಭವಿಷ್ಯ: ದ್ವಾದಶ ರಾಶಿಗಳಿಗೆ ದಿನಫಲ (31-03-2026, ಮಂಗಳವಾರ)

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಇಂದಿನ ರಾಶಿಭವಿಷ್ಯ: ದ್ವಾದಶ ರಾಶಿಗಳಿಗೆ ದಿನಫಲ (31-03-2026, ಮಂಗಳವಾರ)

ಇಂದಿನ ರಾಶಿಭವಿಷ್ಯ: ದ್ವಾದಶ ರಾಶಿಗಳಿಗೆ ದಿನಫಲ (31-03-2026, ಮಂಗಳವಾರ)

31/03/2026
ಕೋಟಕ್ ಮಹೀಂದ್ರಾ ಪ್ರೈಮ್ ಲಿಮಿಟೆಡ್‌ ನ ನಾಯಕತ್ವ ಬದಲಾವಣೆ

ಕೋಟಕ್ ಮಹೀಂದ್ರಾ ಪ್ರೈಮ್ ಲಿಮಿಟೆಡ್‌ ನ ನಾಯಕತ್ವ ಬದಲಾವಣೆ

31/03/2026
ಮಣಿಪಾಲದಲ್ಲಿ AHA 2025 CPR ಮಾರ್ಗಸೂಚಿ ಬಿಡುಗಡೆ: ಸಮುದಾಯ ತರಬೇತಿಗೆ ಒತ್ತು..!!

ಮಣಿಪಾಲದಲ್ಲಿ AHA 2025 CPR ಮಾರ್ಗಸೂಚಿ ಬಿಡುಗಡೆ: ಸಮುದಾಯ ತರಬೇತಿಗೆ ಒತ್ತು..!!

31/03/2026
ಅಖಂಡ ಭಜನೋತ್ಸವದೊಂದಿಗೆ ಸೀತಾ ರಾಮ ಕಲ್ಯಾಣೋತ್ಸವ

ಅಖಂಡ ಭಜನೋತ್ಸವದೊಂದಿಗೆ ಸೀತಾ ರಾಮ ಕಲ್ಯಾಣೋತ್ಸವ

31/03/2026

Recent News

ಇಂದಿನ ರಾಶಿಭವಿಷ್ಯ: ದ್ವಾದಶ ರಾಶಿಗಳಿಗೆ ದಿನಫಲ (31-03-2026, ಮಂಗಳವಾರ)

ಇಂದಿನ ರಾಶಿಭವಿಷ್ಯ: ದ್ವಾದಶ ರಾಶಿಗಳಿಗೆ ದಿನಫಲ (31-03-2026, ಮಂಗಳವಾರ)

31/03/2026
ಕೋಟಕ್ ಮಹೀಂದ್ರಾ ಪ್ರೈಮ್ ಲಿಮಿಟೆಡ್‌ ನ ನಾಯಕತ್ವ ಬದಲಾವಣೆ

ಕೋಟಕ್ ಮಹೀಂದ್ರಾ ಪ್ರೈಮ್ ಲಿಮಿಟೆಡ್‌ ನ ನಾಯಕತ್ವ ಬದಲಾವಣೆ

31/03/2026
ಮಣಿಪಾಲದಲ್ಲಿ AHA 2025 CPR ಮಾರ್ಗಸೂಚಿ ಬಿಡುಗಡೆ: ಸಮುದಾಯ ತರಬೇತಿಗೆ ಒತ್ತು..!!

ಮಣಿಪಾಲದಲ್ಲಿ AHA 2025 CPR ಮಾರ್ಗಸೂಚಿ ಬಿಡುಗಡೆ: ಸಮುದಾಯ ತರಬೇತಿಗೆ ಒತ್ತು..!!

31/03/2026
ಅಖಂಡ ಭಜನೋತ್ಸವದೊಂದಿಗೆ ಸೀತಾ ರಾಮ ಕಲ್ಯಾಣೋತ್ಸವ

ಅಖಂಡ ಭಜನೋತ್ಸವದೊಂದಿಗೆ ಸೀತಾ ರಾಮ ಕಲ್ಯಾಣೋತ್ಸವ

31/03/2026
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved