Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಕರಾವಳಿ

ಇಂದಿನ ರಾಶಿಭವಿಷ್ಯ: ದ್ವಾದಶ ರಾಶಿಗಳಿಗೆ ದಿನಫಲ (31-03-2026, ಮಂಗಳವಾರ)

Dhrishya News by Dhrishya News
31/03/2026
in ಕರಾವಳಿ, ಮುಖಪುಟ
0
ಇಂದಿನ ರಾಶಿಭವಿಷ್ಯ: ದ್ವಾದಶ ರಾಶಿಗಳಿಗೆ ದಿನಫಲ (31-03-2026, ಮಂಗಳವಾರ)
0
SHARES
30
VIEWS
Share on FacebookShare on Twitter

🪐 ದ್ವಾದಶ ರಾಶಿಗಳ ದಿನಭವಿಷ್ಯ: ದಿನಾಂಕ: 31-03-2026, ಮಂಗಳವಾರ

ಇಂದಿನ ದಿನದ ಗ್ರಹಗತಿಗಳ ಪ್ರಭಾವದಿಂದ ದ್ವಾದಶ ರಾಶಿಗಳ ಜೀವನದಲ್ಲಿ ವಿಭಿನ್ನ ಫಲಿತಾಂಶಗಳು ಕಂಡುಬರುತ್ತವೆ. ಕೆಲವರಿಗೆ ಹೊಸ ಅವಕಾಶಗಳು, ಆರ್ಥಿಕ ಲಾಭ ಮತ್ತು ಸಂತೋಷದ ಕ್ಷಣಗಳು ದೊರೆಯುವ ಸಾಧ್ಯತೆ ಇದ್ದರೆ, ಇನ್ನೂ ಕೆಲವರು ಎಚ್ಚರಿಕೆಯಿಂದ ನಡೆದುಕೊಂಡರೆ ಉತ್ತಮ ಫಲಗಳನ್ನು ಪಡೆಯಬಹುದು. ಕುಟುಂಬ, ಉದ್ಯೋಗ, ಆರೋಗ್ಯ ಮತ್ತು ಹಣಕಾಸು ವಿಷಯಗಳಲ್ಲಿ ಸಮತೋಲನ ಕಾಪಾಡಿಕೊಳ್ಳುವುದು ಅಗತ್ಯ. ದೈವಸ್ಮರಣೆ, ಧೈರ್ಯ ಮತ್ತು ಸೂಕ್ತ ನಿರ್ಧಾರಗಳು ಇಂದಿನ ದಿನವನ್ನು ಶುಭಕರವಾಗಿಸಬಹುದು. 🪐

🐏ಮೇಷರಾಶಿ🐏

📃,ಇದುವರೆಗೂ ಅನುಭವಿಸಿದ ಸಂಕಟಗಳು ಕಣ್ಮರೆಯಾಗುವ ಸಾಧ್ಯತೆ ಇದೆ. ಈ ದಿನ ಹೊಸ ಉತ್ಸಾಹ ನೆಮ್ಮದಿ ಮೂಡುವುದು. ಬಂಧುಗಳಿಂದ ಮತ್ತು ಮಿತ್ರರಿಂದ ಸಹಕಾರ ದೊರೆಯುವುದು. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು. ನಿಮ್ಮ ಮಾತುಗಳು ನಿಮ್ಮನ್ನು ಗೆಲ್ಲಿಸಲಿವೆ. ಜನರ ನಡುವೆ ಗುರುತಿಸಿಕೊಳ್ಳುವಿರಿ,

ಗಮನಿಸಿ:- ಇಂದು ದೂರದ ಪ್ರಯಾಣವನ್ನು ಮುಂದೂಡುವುದು ಒಳ್ಳೆಯದು,

ಪರಿಹಾರ:-ಶ್ರೀ ಆಂಜನೇಯ ಸ್ವಾಮಿ ದೇವಾಲಯಕ್ಕೆ ಹೋಗಿ ಬನ್ನಿ,

🐂ವೃಷಭರಾಶಿ🐂

,ನಿಮ್ಮ ಮಾತಿನ ಜಾಣ್ಮೆ ಸರಳವಾದ ನಡೆ ನುಡಿಗಳಿಂದ ಜನರ ಪ್ರಶಂಸೆಯನ್ನು ಪಡೆಯಲು ಹೇರಳ ಅವಕಾಶಗಳು ಒದಗಿ ಬರುವುದು. ಸಂಗಾತಿಯ ಸಹಕಾರ ದೊರೆಯುವುದು. ಆರ್ಥಿಕ ಸಮಸ್ಯೆ ಕಡಿಮೆ ಆಗುವುದು. ಹಣದ ಪರದಾಟ ತಪ್ಪುವ ಯೋಜನೆಗಳನ್ನು ನಿಮ್ಮ ದೈವ ರೂಪಿಸುತ್ತದೆ. ಆದರೆ ಅದಕ್ಕಾಗಿ ಅವಸರ ಪಡಬೇಡಿ.ಬರುವಹಣಕಾಸಿನಲ್ಲಿ ಉಳಿತಾಯ ಮಾಡಿ,

ಗಮನಿಸಿ:-ಸಾಲ ತೀರಿಸುವ ಬಗ್ಗೆ ಗಮನ ನೀಡಿ, 

ಪರಿಹಾರ:-ಶ್ರೀಅನ್ನಪೂರ್ಣೇಶ್ವರಿಯನ್ನು ಸ್ಮರಿಸುತ್ತಅನಾಥರಿಗೆ ಅನ್ನದಾನ ಮಾಡಿ,

👥ಮಿಥುನ ರಾಶಿ👥

ಮಿತ್ರರ ಜೊತೆ ಭೂರಿ ಭೋಜನ ಸವಿಯುವ ಭಾಗ್ಯ ನಿಮ್ಮದಾಗುವುದು. ಮತ್ತು ಸ್ನೇಹಿತರಿಂದ ಉತ್ತಮ ಸಲಹೆಗಳು ಕೇಳಿಬರುವುವು. ಅವನ್ನು ನೀವು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಹೆಚ್ಚು ಅನುಕೂಲವಾಗುವುದು. ನಿಮ್ಮ ಸೌಮ್ಯ ನಡವಳಿಕೆಯ ಪರಿಣಾಮದಿಂದ ಉತ್ತಮ ಫಲವನ್ನು ಹೊಂದುವಿರಿ. ಕೆಲಸದಲ್ಲಿ ಬಡ್ತಿ ದೊರೆಯುವುದು. ವೈಯಕ್ತಿಕ ಕೆಲಸ ಕಾರ್ಯಗಳಲ್ಲಿ ಯಶಸ್ಸು ದೊರೆಯುವುದು,

ಗಮನಿಸಿ:-ಮಕ್ಕಳ ವಿದ್ಯಾಭ್ಯಾಸದಲ್ಲಿನ ಪ್ರಗತಿ ನಿಮಗೆ ಸಂತಸ ತರುವುದು,

ಪರಿಹಾರ:-ಶ್ರೀ ಆಂಜನೇಯನ ಪ್ರಾರ್ಥನೆ ಮಾಡಿ,

🦀ಕಟಕ ರಾಶಿ🦀

ವಿವಾಹ ಯೋಗ್ಯರಿಗೆ ಕಂಕಣಭಾಗ್ಯದ ವಿವಾಹದ ಮಾತುಕತೆಗಳು ಫಲಪ್ರದವಾಗುವುವು. ಆರ್ಥಿಕ ವಿಷಯದಲ್ಲಿ ಚೇತರಿಕೆ ಕಂಡುಬರುವುದು. ನಿಮ್ಮ ಮನಸ್ಸಿನ ಸ್ಥಿತಿಯಂತೆ ಕಾರ್ಯ ಕೈಗೂಡುವುದರಿಂದ ಒಳಿತಾಗುವುದು. ರಾಜಕಾರಣಿಗಳಿಗೆ ವಿರೋಧಿಗಳಿಂದ ತೊಂದರೆ ಇದೆ. ಧನಲಾಭದ ವಿಷಯದಲ್ಲಿ ದೈವ ನಿಮಗೆ ಸಹಕರಿಸಲಿದೆ,

ಗಮನಿಸಿ:- ಇಂದು ಮನೆಯಲ್ಲಿ ಸಂಗಾತಿಯ ಹುಸುಕೋಪಕ್ಕೆ ಗುರಿ ಆಗುವಿರಿ, 

ಪರಿಹಾರ:-ಕುಲದೇವರನ್ನು ಪ್ರಾರ್ಥನೆ ಮಾಡಿ,

🦁ಸಿಂಹ ರಾಶಿ🦁

ಮಾತೇ ಬಂಡವಾಳ ಮಾಡಿಕೊಂಡಿರುವ ವ್ಯಕ್ತಿಗಳಿಗೆ ಸುದಿನ. ಭೂ ವ್ಯವಹಾರದವರಿಗೆ ಉತ್ತಮ ಲಾಭ. ವ್ಯಾಪಾರ ವ್ಯವಹಾರದಲ್ಲಿ ಹೆಚ್ಚಿನ ಲಾಭ ಕಂಡು ಬರುವುದು. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ. ಕಾರಣವಿರದ ಚಿಂತೆ ಹಾಗೂ ಖಿನ್ನತೆಗಳನ್ನು ಬಿಟ್ಟು ಗೆಳೆಯರೊಂದಿಗೆ ಚರ್ಚಿಸಿ. ಒಳಿತಿನ ದಾರಿ ನಿಮಗೆ ಗೋಚರವಾಗುವುದು,

ಗಮನಿಸಿ:- ಇಂದು ನಿಮ್ಮ ಪ್ರಾಮಾಣಿಕತೆಗೆ ತಕ್ಕ ಪ್ರತಿಫಲ ದೊರೆಯಲಿದೆ,

ಪರಿಹಾರ:-ತಾಯಿದುರ್ಗಾಮಾತೆಯನ್ನು ಪ್ರಾರ್ಥಿಸಿ,

👩‍🦳ಕನ್ಯಾ ರಾಶಿ👩‍🦳

ಬುದ್ಧಿವಂತರಾದ ನಿಮಗೆ ಮೋಸ ಮಾಡುವ ವ್ಯಕ್ತಿ ಎದುರಾಗಬಹುದು. ಅವಸರ ಮಾಡದೆ ಇದ್ದಲ್ಲಿ ಕಾರ್ಯ ಸಾಫಲ್ಯವನ್ನು ಹೊಂದುವುದು. ನೀವಾಡುವ ಮಾತು ಇನ್ನೊಬ್ಬರ ಮನಸ್ಸನ್ನು ನೋಯಿಸದಿರಲಿ. ಈ ಬಗ್ಗೆ ಎಚ್ಚರ ವಹಿಸಿ. ಕೇವಲ ಯೋಚನೆಗಳಲ್ಲೇ ಮುಳುಗಿರಬೇಡಿ. ಅದರಿಂದ ಹೊರಕ್ಕೆ ಬನ್ನಿ. ನಂಬಿಕಸ್ಥರು ಲಾಭದ ದಾರಿ ತೋರುವರು,

ಗಮನಿಸಿ:- ನಿಮ್ಮ ಅಚಾತುರ್ಯಕ್ಕೆ ನೀವು ಬೆಲೆ ತೆರಬೇಕಾಗುವುದು,

ಪರಿಹಾರ:-ಶ್ರೀ ಆಂಜನೇಯ ಸ್ವಾಮಿ ಜಪವನ್ನು ಮಾಡಿ,

⚖️ತುಲಾ ರಾಶಿ⚖️

📃,ಹಳೆಯ ವಿವಾದಕ್ಕೆ ತೆರೆ ಬೀಳಲಿದೆ. ಆದಷ್ಟು ತಾಳ್ಮೆಯಿಂದ ಇರಿ. ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ನಿಮ್ಮ ಸಹಕಾರ ಅತ್ಯಗತ್ಯ. ಕೆಲ ಸಮಯವಾದರೂ ವಿಶ್ರಾಂತಿ ಪಡೆದಲ್ಲಿ ಮುಂದಿನ ಕೆಲಸವನ್ನು ಅತ್ಯುತ್ಸಾಹದಿಂದ ಮಾಡಲು ಅನುಕೂಲವಾಗುವುದು. ದೈಹಿಕ ಆರೋಗ್ಯ ಕೂಡಾ ಅಷ್ಟೆ ಪ್ರಮುಖವಾದುದು,

ಗಮನಿಸಿ:-ಇಂದು ಕೌಟುಂಬಿಕ ಜೀವನದಲ್ಲಿ ಸ್ವಲ್ಪ ವಿರಸ ತೋರುವ ಸಾಧ್ಯತೆ ಇರುವುದು,

ಪರಿಹಾರ:-ಶಿವಪಂಚಾಕ್ಷರಿ ಮಂತ್ರ ಜಪಿಸಿ,

🦂ವೃಶ್ಚಿಕ ರಾಶಿ🦂

ಮೇಲಧಿಕಾರಿಗಳ ಮೆಚ್ಚುಗೆಗೆ ಪಾತ್ರರಾಗುವ ನೀವು ಇತರರ ಅಸೂಯೆಗೆ ಒಳಗಾಗುವಿರಿ. ಆರೋಗ್ಯದ ವಿಚಾರದಲ್ಲಿ ಎಚ್ಚರದಿಂದ ಇರುವುದು ಕ್ಷೇಮ. ತಾತ್ಕಾಲಿಕ ಸಾಲಕ್ಕಾಗಿ ನಿಮ್ಮ ಬಳಿ ಬರುವವರನ್ನು ನಿರ್ಲಕ್ಷಿಸಿ. ನೀವು ಅಭಿಪ್ರಾಯ ನೀಡುವಾಗ ಇತರರ ಭಾವನೆಗಳನ್ನು ವಿಶೇಷವಾಗಿ ಪರಿಗಣಿಸಿ. ನೀವು ಮಾಡಿದ ಯಾವುದೇ ತಪ್ಪು ನಿರ್ಧಾರ ಅವರಿಗೆ ಮಾತ್ರ ವ್ಯತಿರಿಕ್ತ ಪರಿಣಾಮ ಉಂಟುಮಾಡುತ್ತದೆ,

ಗಮನಿಸಿ:-ಇಂದು ನಿಮಗೆ ಮಾನಸಿಕ ಒತ್ತಡ ಉಂಟಾಗಬಹುದು, ಪರಿಹಾರ:-ಸೂರ್ಯಾರಾಧನೆಯನ್ನು ಮಾಡಿ,

🏹ಧನಸ್ಸು ರಾಶಿ🏹

ನಿಮ್ಮ ಸಾಮಾಜಿಕ ಕಾಳಜಿ ಮತ್ತು ಸೇವೆಯನ್ನು ಜನರು ಕೊಂಡಾಡುವರು. ಅಪೂರ್ಣವಾಗಿರುವ ಕೆಲಸಗಳನ್ನು ಬೇಗ ಮಾಡಿ ಮುಗಿಸಿ. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ. ನಿಮ್ಮ ಮುಂಗೋಪದ ವಿಚಾರವಾಗಿ ಸಂಗಾತಿಯಿಂದ ಅಸಹಕಾರ ಬರುವ ಸಾಧ್ಯತೆ ಇದೆ,

ಗಮನಿಸಿ:-ಇಂದು ಸಂಗಾತಿಯ ಇಷ್ಟಾನಿಷ್ಟಗಳ ಕಡೆಗೂ ಗಮನ ಹರಿಸುವುದು ಒಳ್ಳೆಯದು,

ಪರಿಹಾರ:- ಶ್ರೀ ದತ್ತಾತ್ರೇಯ ಸ್ವಾಮಿಯನ್ನು ಸ್ಮರಣೆ ಮಾಡಿ,

🐊ಮಕರ ರಾಶಿ🐊

ಸದ್ಯಕ್ಕೆ ನಿಮ್ಮ ಎದುರಿರುವ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿ. ಇದರಿಂದ ನಿಮಗೆ ಸಮಾಜದಲ್ಲಿ ಗೌರವ ಮನ್ನಣೆ ದೊರೆಯುವುದು. ಹಲವು ತಾಪತ್ರಯಗಳ ನಡುವೆಯೂ ಹಮ್ಮಿಕೊಂಡ ಕಾರ್ಯವನ್ನು ಮಾಡಿ ಮುಗಿಸುವಿರಿ ಮತ್ತು ಈ ಮೂಲಕ ನಿಮ್ಮನ್ನು ವಿರೋಧಿಸುತ್ತಿದ್ದವರ ಮನದಲ್ಲೂ ಕೂಡಾ ಸಂತಸ ಸಂಭ್ರಮವನ್ನುಂಟು ಮಾಡುವಿರಿ. ಕುಟುಂಬದವರೊಂದಿಗೆ ನೆಮ್ಮದಿಯಿಂದ ಕಾಲ ಕಳೆಯುವಿರಿ,

ಗಮನಿಸಿ:- ಇಂದು ಅನಿರೀಕ್ಷಿತ ದನಲಾಭವಾಗುವುದು, 

ಪರಿಹಾರ:-ದೇವಾಲಯಕ್ಕೆ ಎಳ್ಳು ದಾನ ಮಾಡಿ,

⚱️ಕುಂಭ ರಾಶಿ⚱️

ಬಿರುಬಿಸಿಲಿನ ಬಾಧೆಗೆ ಬಳಲಿದಂತೆ, ಗ್ರಹಗಳ ಅಶುಭಫಲ ಸಂಚಾರದಿಂದ ಬಳಲುವಿರಿ. ಸಕಲ ಗ್ರಹಬಲ ನೀನೇ ಸರಸಿಜಾಕ್ಷ ಎಂದು ಭಗವಂತನಲ್ಲಿ ಮೊರೆ ಹೋಗಿ. ನಿಮ್ಮ ಕಾರ್ಯಗಳಲ್ಲಿ ಅಲ್ಪ ಗೆಲುವು ಕಂಡುಬರುವುದು. ವಿಜಯದ ಯೋಜನೆಗಾಗಿ ಕಾರ್ಯಶೀಲರಾಗಿ. ಉತ್ತಮ ಸಹವರ್ತಿಗಳು ನಿಮ್ಮನ್ನು ಸಂಧಿಸುತ್ತಾರೆ. ನೀವು ಮಾಡಿದ ಸಂಶೋಧನಾ ಕೆಲಸಕ್ಕೆ ಶೀಘ್ರವೇ ಮನ್ನಣೆ ದೊರೆಯುವುದು,

ಗಮನಿಸಿ:-ನಿಮ್ಮ ಮುಂದಿನ ದಾರಿ ಸುಗಮವಾಗುವುದು,

ಪರಿಹಾರ:-ಶ್ರೀ ಸೋಮೇಶ್ವರ ಸ್ವಾಮಿಯನ್ನು ಸ್ಮರಿಸಿ,

🐬ಮೀನ ರಾಶಿ🐬

ಸಂಸಾರವು ಸುಖಮಯವಾಗಿರುವುದು. ಸುಮ್ಮನೆ ನೀವೇ ಅಪಾರ್ಥಗಳನ್ನು ಕಲ್ಪಿಸಿಕೊಂಡು ಸುಂದರ ಬದುಕನ್ನು ಹಾಳುಮಾಡಿಕೊಳ್ಳದಿರಿ. ಹೊಸ ಕುಟುಂಬದ ಸದಸ್ಯರ ಆಗಮನದ ಸುದ್ದಿ ನಿಮ್ಮನ್ನು ರೋಮಾಂಚನಗೊಳಿಸಬಹುದು.

ನಿಮ್ಮ ಮುಂಗೋಪದ ವಿಚಾರವಾಗಿ ಸಂಗಾತಿಯಿಂದ ಅಸಹಕಾರ ಬರುವ ಸಾಧ್ಯತೆ ಇದೆ. ಹಾಗಾಗಿ ಸಂಗಾತಿಯ ಇಷ್ಟಾನಿಷ್ಟಗಳ ಕಡೆಗೂ ಗಮನ ಹರಿಸುವುದು ಒಳ್ಳೆಯದು, ಗಮನಿಸಿ:-ಇಂದು ಹಣಕಾಸಿನ ತೊಂದರೆ ಇರುವುದಿಲ್ಲ,

ಪರಿಹಾರ:-ಶ್ರೀ ಗಂಧದ ತಿಲಕವನ್ನು ಹಣೆಗೆ ಹಚ್ಚಿಕೊಳ್ಳಿ,

ಇಂದಿನ ದಿನಭವಿಷ್ಯವು ನಿಮ್ಮ ದಿನಚರಿಯಲ್ಲಿ ಮಾರ್ಗದರ್ಶನ ನೀಡಲಿ. ಶುಭ ಫಲಗಳು ಹೆಚ್ಚಾಗಿ ದೊರೆಯಲಿ, ಸವಾಲುಗಳನ್ನು ಧೈರ್ಯದಿಂದ ಎದುರಿಸಿ ಯಶಸ್ಸಿನತ್ತ ಸಾಗಿರಿ. ದೈವಾನುಗ್ರಹ, ಶ್ರದ್ಧೆ ಮತ್ತು ಸಕಾರಾತ್ಮಕ ಚಿಂತನೆ ನಿಮ್ಮ ಜೀವನವನ್ನು ಮತ್ತಷ್ಟು ಬೆಳಗಿಸಲಿ

ಮೂಲ: ಜ್ಯೋತಿಷ್ಯರು, ಪ್ರಾಚೀನ ಶಾಸ್ತ್ರಾಸಕ್ತ ಎಲ್. ವಿವೇಕಾನಂದ ಆಚಾರ್ಯ

Previous Post

ಕೋಟಕ್ ಮಹೀಂದ್ರಾ ಪ್ರೈಮ್ ಲಿಮಿಟೆಡ್‌ ನ ನಾಯಕತ್ವ ಬದಲಾವಣೆ

Next Post

ಮಣಿಪಾಲದ ಎಂಸಿಒಪಿಎಸ್‌ನಲ್ಲಿ ‘ಫಾರ್ಮಾ ಅನ್ವೇಷಣ್-2026’ ಸಮಾವೇಶ: ಫಾರ್ಮಸಿ ಶಿಕ್ಷಣದ ಜಾಗತಿಕ ಸವಾಲುಗಳ ಕುರಿತು ಚರ್ಚೆ

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಮಣಿಪಾಲದ ಎಂಸಿಒಪಿಎಸ್‌ನಲ್ಲಿ ‘ಫಾರ್ಮಾ ಅನ್ವೇಷಣ್-2026’ ಸಮಾವೇಶ: ಫಾರ್ಮಸಿ ಶಿಕ್ಷಣದ ಜಾಗತಿಕ ಸವಾಲುಗಳ ಕುರಿತು ಚರ್ಚೆ

ಮಣಿಪಾಲದ ಎಂಸಿಒಪಿಎಸ್‌ನಲ್ಲಿ ‘ಫಾರ್ಮಾ ಅನ್ವೇಷಣ್-2026’ ಸಮಾವೇಶ: ಫಾರ್ಮಸಿ ಶಿಕ್ಷಣದ ಜಾಗತಿಕ ಸವಾಲುಗಳ ಕುರಿತು ಚರ್ಚೆ

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಭಾರೀ ಮಳೆ ಹಿನ್ನೆಲೆ ಉಡುಪಿ ಜಿಲ್ಲೆಯಲ್ಲಿ ನಾಳೆ (ಜು,25) ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ..!

ನಾಳೆ (ಆಗಸ್ಟ್ 4) ಉಡುಪಿ ಜಿಲ್ಲೆಯಲ್ಲಿ ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ

03/08/2026
ಮಾಹೆ ರಾಷ್ಟ್ರೀಯ ಛಾಯಾಗ್ರಹಣ ಸ್ಪರ್ಧೆ ಮತ್ತು ಪ್ರದರ್ಶನ 2026 ಪ್ರಕಟಣೆ

ಮಾಹೆ ರಾಷ್ಟ್ರೀಯ ಛಾಯಾಗ್ರಹಣ ಸ್ಪರ್ಧೆ ಮತ್ತು ಪ್ರದರ್ಶನ 2026 ಪ್ರಕಟಣೆ

03/08/2026
ಭಾರತೀಯ ಫ್ಯಾಷನ್ ವೀಕ್‌ನಲ್ಲಿ ಹೌಸ್ ಆಫ್ ಮಸಾಬಾ ಅವರ ವಧು ಪ್ರದರ್ಶನಕ್ಕಾಗಿಯೇ ವಿನ್ಯಾಸಗೊಳಿಸಲಾದ ವಿಶೇಷ ಚಿನ್ನದ, ಸಾಂಪ್ರದಾಯಿಕ ಹಾಗೂ ದೇವಾಲಯ ಶೈಲಿಯ ಕರಕುಶಲ ಆಭರಣಗಳಿಗೆ ವೇದಿಕೆ ಕಲ್ಪಿಸಿಸಿರುವ ಆದಿತ್ಯ ಬಿರ್ಲಾ ಜ್ಯುವೆಲ್ಲರಿ ಪ್ರಾಯೋಜಿತ ಇಂದ್ರಿಯಾ

ಜನ್ಮಾಷ್ಟಮಿ ವಿಶೇಷ: ಶ್ರೀಕೃಷ್ಣ ಮಠದಲ್ಲಿ ಯಶಸ್ವಿಯಾಗಿ ನಡೆದ ಚಿತ್ರಕಲಾ ಸ್ಪರ್ಧೆ

ಜನ್ಮಾಷ್ಟಮಿ ವಿಶೇಷ: ಶ್ರೀಕೃಷ್ಣ ಮಠದಲ್ಲಿ ಯಶಸ್ವಿಯಾಗಿ ನಡೆದ ಚಿತ್ರಕಲಾ ಸ್ಪರ್ಧೆ

03/08/2026

Recent News