ಕಾರ್ಕಳ : ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿಯ ಪ್ರಾಯೋಜಕತ್ವದಲ್ಲಿ ಸರಕಾರಿ ಪಾಲಿಟೆಕ್ನಿಕ್ ಕಾರ್ಕಳ, ಕಾಬೆಟ್ಟು ಇದರ 2026-27ನೇ ಸಾಲಿನ
ರೋಟರಾಕ್ಟ್ ಕ್ಲಬ್ ನ ನೂತನ ಅಧ್ಯಕ್ಷರ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ದಿನಾಂಕ 13.08.2026ರ ಪೂರ್ವಾಹ್ನ ಸಂಸ್ಥೆಯ ಸಭಾಂಗಣದಲ್ಲಿ ಜರುಗಿತು. ಪದಗ್ರಹಣ ಅಧಿಕಾರಿಯಾಗಿ ರೊ.ಡಾ.ಭರತೇಶ್ ಆದಿರಾಜರವರು ನೂತನ ಅಧ್ಯಕ್ಷರಿಗೆ ಕೊರಳ ಲಾಂಛನವನ್ನು ಹಸ್ತಾಂತರಿಸಿದರು. ನಿಕಟಪೂರ್ವ ಅಧ್ಯಕ್ಷರಾದ ಕು. ಮಹೇಶ ನಾಯ್ಕ ರವರಿಂದ ನೂತನ ಅಧ್ಯಕ್ಷರಾದ ಕು . ಸುಜನ್ ರವರು ಪ್ರಭಾರ ವಹಿಸಿಕೊಂಡರು. ನೂತನ ಕಾರ್ಯದರ್ಶಿ ಕು. ಕೌಶಿಕ್ ರವರು ನಿಕಟಪೂರ್ವ ಕಾರ್ಯದರ್ಶಿ ಕು. ಅಶ್ವತ್ಥ್ ರವರಿಂದ ಪ್ರಭಾರ ವಹಿಸಿಕೊಂಡರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿಯ ಅಧ್ಯಕ್ಷರಾದ ರೊ ಮಂಜುನಾಥ ಹೆಗ್ಡೆ ಯವರು ವಹಿಸಿ ಸರ್ವರನ್ನು ಸ್ವಾಗತಿಸಿ , ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸ್ಥೆಯ ಪ್ರಾಂಶುಪಾಲರಾದ ಶ್ರೀಮತಿ ಸಹನಾರವರು ಶುಭಾಸಂಶನಾ ಮಾತುಗಳನ್ನು
ಆಡಿದರು. ಕಾರ್ಯಕ್ರಮದ ವೇದಿಕೆಯಲ್ಲಿ ಸಂಸ್ಥೆಯ ಸಿವಿಲ್ ವಿಭಾಗದ ವಿಭಾಗಾಧಿಕಾರಿಗಳು ಹಾಗೂ ರೋಟರಾಕ್ಟ್ ಕ್ಲಬ್ ಸಂಚಾಲಕರಾದ ಶ್ರೀ ಚಿತ್ರಕುಮಾರ್ ಕೆ.ವಿ; ಕಂಪ್ಯೂಟರ್ ಸೈನ್ಸ್ ವಿಭಾಗಧಿಕಾರಿಗಳಾದ ಶ್ರೀ ಕುಮಾರ ಕೆ. ಎಂ., ಬೋಧಕರಾದ ಶ್ರೀ. ಬಾಲಚಂದ್ರ ಹೆಬ್ಬಾರ್ , ಕಛೇರಿ ಮುಖ್ಯಸ್ಥರಾದ ಶ್ರೀ. ಗುಣಪಾಲ ಜೈನ್ ಉಪಸ್ಥಿತರಿದ್ದರು.ಸಂಸ್ಥೆಯ ಇನ್ನಿತರ ಎಲ್ಲಾ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಈ ಸಮಾರಂಭದಲ್ಲಿ ಭಾಗವಹಿಸಿದರು. ರೋಟರಿ ಕ್ಲಬ್ ನ ಪೂರ್ವ ಅಧ್ಯಕ್ಷರಾದ ರೊ.ಉಪೇಂದ್ರ ವಾಗ್ಲೆಯವರು ಉಪಸ್ಥಿತರಿದ್ದು, ಸಮಾರಂಭದ ಯಶಸ್ಸಿಗೆ ಸಹಕರಿಸಿದರು.






