Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

ದಕ್ಷಿಣ ಭಾರತದ ಮಾರುಕಟ್ಟೆಗಳಿಗೆ ನಟಿ ಕೃತಿ ಶೆಟ್ಟಿ ಇಂದ್ರಿಯಾ ಬ್ರ್ಯಾಂಡ್ ರಾಯಭಾರಿ: ನೂತನ ವರಮಹಾಲಕ್ಷ್ಮಿ ಅಭಿಯಾನ ಅನಾವರಣ

ಸಮಕಾಲೀನ ವಿನ್ಯಾಸದೊಂದಿಗೆ ಮರುರೂಪುಗೊಳಿಸಿದ ಸಾಂಪ್ರದಾಯಿಕ ಆಭರಣಗಳನ್ನು ಪರಿಚಯಿಸಿದ ಇಂದ್ರಿಯಾ ಸಂಸ್ಥೆ

Dhrishya News by Dhrishya News
13/08/2026
in ಸುದ್ದಿಗಳು
0
ದಕ್ಷಿಣ ಭಾರತದ ಮಾರುಕಟ್ಟೆಗಳಿಗೆ ನಟಿ ಕೃತಿ ಶೆಟ್ಟಿ ಇಂದ್ರಿಯಾ ಬ್ರ್ಯಾಂಡ್ ರಾಯಭಾರಿ: ನೂತನ ವರಮಹಾಲಕ್ಷ್ಮಿ ಅಭಿಯಾನ ಅನಾವರಣ
0
SHARES
2
VIEWS
Share on FacebookShare on Twitter

ಬೆಂಗಳೂರು, ಆಗಸ್ಟ್ 13, 2026: ಆದಿತ್ಯ ಬಿರ್ಲಾ ಗ್ರೂಪ್‌ ನ ಹೆಮ್ಮೆಯ ಆಭರಣ ಸಂಸ್ಥೆ ಇಂದ್ರಿಯಾ, ಮುಂಬರುವ ಸಾಲು-ಸಾಲು ಹಬ್ಬದ ಋತುವಿನ ಶುಭಾರಂಭದ ಹಿನ್ನೆಲೆಯಲ್ಲಿ ಪ್ರಸಿದ್ಧ ನಟಿ ಕೃತಿ ಶೆಟ್ಟಿ ಅವರನ್ನು ದಕ್ಷಿಣ ಭಾರತದ ಮಾರುಕಟ್ಟೆಗಳ ತನ್ನ ಬ್ರ್ಯಾಂಡ್ ರಾಯಭಾರಿಯನ್ನಾಗಿ ಅಧಿಕೃತವಾಗಿ ಘೋಷಿಸಿದೆ.

ಆಂಧ್ರಪ್ರದೇಶ, ತೆಲಂಗಾಣ ಮತ್ತು ಕರ್ನಾಟಕ ರಾಜ್ಯಗಳಲ್ಲಿ ಅತ್ಯಂತ ಜನಪ್ರಿಯರಾಗಿರುವ ನಟಿ ಕೃತಿ ಶೆಟ್ಟಿ, ದೇಶಾದ್ಯಂತ ಯುವ ಪೀಳಿಗೆಯ ನೆಚ್ಚಿನ ಐಕಾನ್ ಆಗಿ ಗುರುತಿಸಿಕೊಂಡಿದ್ದಾರೆ. ಈ ಮೈಲಿಗಲ್ಲಿನ ಭಾಗವಾಗಿ, ದಕ್ಷಿಣ ಭಾರತದ ಅತ್ಯಂತ ಪ್ರಮುಖ ಹಬ್ಬಗಳಲ್ಲಿ ಒಂದಾದ ಹಾಗೂ ಹಬ್ಬದ ಋತುವಿನ ಆರಂಭವನ್ನು ಸೂಚಿಸುವ ಇಂದ್ರಿಯಾದ ವರಮಹಾಲಕ್ಷ್ಮಿ ಅಭಿಯಾನದ ಮುಖ್ಯ ರಾಯಭಾರಿಯಾಗಿ ಕೃತಿ ಕಾಣಿಸಿಕೊಂಡಿದ್ದಾರೆ.

ಸಮೃದ್ಧಿ, ಭಕ್ತಿ ಮತ್ತು ಬಾಂಧವ್ಯದ ಸಂಕೇತವಾಗಿರುವ ಈ ನೂತನ ಕ್ಯಾಂಪೇನ್, ಪ್ರತಿಯೊಂದು ಮನೆಯಲ್ಲೂ ನೆಲೆಸಿರುವ ಲಕ್ಷ್ಮಿ ದೇವಿಯನ್ನು ಗೌರವಿಸುತ್ತದೆ. ಇದರ ಜೊತೆಗೆ ಸಾಂಪ್ರದಾಯಿಕ ಆಚರಣೆಗಳು ಮತ್ತು ಸಮಕಾಲೀನ ವಿನ್ಯಾಸದ ಸಮ್ಮಿಲನದೊಂದಿಗೆ ತಯಾರಿಸಲಾದ ಇಂದ್ರಿಯಾದ ಹಬ್ಬದ ವಿಶೇಷ ಆಭರಣ ಸಂಗ್ರಹವನ್ನು ಪ್ರದರ್ಶಿಸುತ್ತದೆ.

ಹಬ್ಬದ ಋತುವಿನ ಸಂಪ್ರದಾಯಗಳು ಮತ್ತು ಸಾಂಸ್ಕೃತಿಕ ಸಂಕೇತಗಳಿಂದ ಪ್ರೇರಿತವಾದ ಇಂದ್ರಿಯಾದ ಟೆಂಪಲ್ ಜ್ಯುವೆಲ್ಲರಿ ಸಂಗ್ರಹವು, ನಮ್ಮ ಪರಂಪರೆಯ ಕಲಾತ್ಮಕತೆಯನ್ನು ಆಧುನಿಕ ದೃಷ್ಟಿಕೋನದ ಮೂಲಕ ಮರುರೂಪಿಸಿದೆ.

ಈ ಸಂಗ್ರಹದಲ್ಲಿ ಸಂಕೀರ್ಣವಾದ ನಕ್ಕಾಶಿ ಕೆತ್ತನೆ, ಲಕ್ಷ್ಮಿ ದೇವಿಯ ಚಿತ್ರಣ, ಅರಳಿದ ಕಮಲದ ಹೂವುಗಳು, ಭವ್ಯ ನವಿಲುಗಳು, ಕಾಸಿನ ಮಾದರಿಯ ವಿನ್ಯಾಸಗಳು ಹಾಗೂ ದೇವಾಲಯದ ನಯನಮನೋಹರ ಕೆತ್ತನೆಗಳನ್ನು ಒಳಗೊಂಡಿದೆ. ಆಕರ್ಷಕ ಆಂಟಿಕ್ ಗೋಲ್ಡ್ ಫಿನಿಶಿಂಗ್ ಹಾಗೂ ರೋಮಾಂಚಕ ಬಣ್ಣದ ರತ್ನಗಳಿಂದ ಕಂಗೊಳಿಸುವ ಈ ಸಂಗ್ರಹದಲ್ಲಿ ನೆಕ್ಲೇಸ್‌ಗಳು, ಓಲೆಗಳು, ಬಳೆಗಳು, ಬಾಜುಬಂಧ, ಡಾಬು (ಕಮರ್‌ ಬಂಧ್) ಮತ್ತು ಉಂಗುರಗಳು ಲಭ್ಯವಿವೆ. ಇವು ಪ್ರತಿಯೊಂದು ಹಬ್ಬದ ಆಚರಣೆಗೂ ಸೂಕ್ತವಾಗುವಂತೆ ಕಾಲಾತೀತ ಕುಶಲತೆ ಹಾಗೂ ವೈವಿಧ್ಯಮಯ ಶೈಲಿಯನ್ನು ಒದಗಿಸುತ್ತವೆ.

ಈ ಕ್ಯಾಂಪೇನ್‌ನ ಪ್ರಮುಖ ಆಕರ್ಷಣೆಯಾಗಿ ವರಮಹಾಲಕ್ಷ್ಮಿ ಹಬ್ಬದ ಸಿದ್ಧತೆಯ ಹಿನ್ನೆಲೆಯಲ್ಲಿ ನಿರ್ಮಿಸಲಾದ ನೂತನ ಬ್ರ್ಯಾಂಡ್ ಫಿಲ್ಮ್ ನಲ್ಲಿ ಕೃತಿ ಶೆಟ್ಟಿ ನಟಿಸಿದ್ದಾರೆ. ಈ ಕಿರುಚಿತ್ರದಲ್ಲಿ, ಕೃತಿ ತಮ್ಮ ಅತ್ತೆಗೆ ಚಿನ್ನದ ಮಾಲೆಯನ್ನು ಆಯ್ಕೆ ಮಾಡುವ ಸುಂದರ ಕ್ಷಣವನ್ನು ಚಿತ್ರಿಸಲಾಗಿದೆ. ತಮ್ಮ ಜೀವನವನ್ನು ಹಲವು ರೀತಿಯಲ್ಲಿ ಸಮೃದ್ಧಗೊಳಿಸಿದ ಮಹಿಳೆಗೆ ಪ್ರೀತಿ, ಕೃತಜ್ಞತೆ ಮತ್ತು ಗೌರವವನ್ನು ಸಲ್ಲಿಸುವ ಸಂಕೇತವಾಗಿ ಈ ದೃಶ್ಯ ಮೂಡಿಬಂದಿದೆ.

ಹಬ್ಬದ ಸಂಭ್ರಮವನ್ನು ಹೆಚ್ಚಿಸುವ ಭಾವನೆಗಳು, ಪೂಜಾ ವಿಧಿವಿಧಾನಗಳು ಮತ್ತು ಕೌಟುಂಬಿಕ ಕ್ಷಣಗಳನ್ನು ಸೆರೆಹಿಡಿಯುವ ಈ ಜಾಹೀರಾತು, “ನಿಜವಾಗಿಯೂ ಬಂಗಾರದಂತಿರುವ ವ್ಯಕ್ತಿಗೆ ಚಿನ್ನವನ್ನು ಉಡುಗೊರೆಯಾಗಿ ನೀಡಿ” ಎಂಬ ಆಶಯವನ್ನು ಸಾರುತ್ತದೆ.

ಈ ಕುರಿತು ಮಾತನಾಡಿದ ಇಂದ್ರಿಯಾ ಸಂಸ್ಥೆಯ ಮಾರ್ಕೆಟಿಂಗ್ ಮತ್ತು ವಿಶುವಲ್ ಮರ್ಚಂಡೈಸಿಂಗ್ ಮುಖ್ಯಸ್ಥ ಶಾಂತಿ ಸ್ವರೂಪ್ ಪಾಂಡ ಅವರು, “ದಕ್ಷಿಣ ಭಾರತದ ಮಾರುಕಟ್ಟೆಗಳಲ್ಲಿ ವರಮಹಾಲಕ್ಷ್ಮಿ ಹಬ್ಬವು ಅತ್ಯಂತ ಮಹತ್ವದ ಸಾಂಸ್ಕೃತಿಕ ಕಾಲಘಟ್ಟದ ಆರಂಭವಾಗಿದೆ. ಇಲ್ಲಿ ಆಭರಣಗಳು ಕೇವಲ ಅಲಂಕಾರ ವಸ್ತುವಲ್ಲ, ಬದಲಿಗೆ ಸಂಭ್ರಮ, ಕೌಟುಂಬಿಕ ಪರಂಪರೆ ಮತ್ತು ಭಕ್ತಿಯೊಂದಿಗೆ ಆಳವಾಗಿ ಬೆಸೆದುಕೊಂಡಿವೆ. ಒಂದು ಬ್ರ್ಯಾಂಡ್ ಆಗಿ ನಾವು ಕೇವಲ ಹಬ್ಬವನ್ನು ಆಚರಿಸದೆ, ಆ ನೈಜ ಸಾಂಸ್ಕೃತಿಕ ಭಾವನೆಯನ್ನು ಪ್ರತಿಬಿಂಬಿಸಲು ಬಯಸಿದ್ದೆವು. ಕೃತಿ ಶೆಟ್ಟಿ ಅವರು ಈಗಾಗಲೇ ಇಂದ್ರಿಯಾ ಜೊತೆಗಿನ ಒಡನಾಟದ ಮೂಲಕ ಗ್ರಾಹಕರ ಮನ ಗೆದ್ದಿದ್ದಾರೆ. ಈ ಹೊಸ ಕ್ಯಾಂಪೇನ್ ನಮ್ಮ ಸಾಂಸ್ಕೃತಿಕ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ. ನಮ್ಮ ಈ ಹಬ್ಬದ ಸಂಗ್ರಹವು ಇಂದಿನ ಯುವ ಪೀಳಿಗೆಗೆ ಸಂಪ್ರದಾಯವನ್ನು ಆಧುನಿಕ ವಿನ್ಯಾಸದೊಂದಿಗೆ ಆಚರಿಸಲು ಸ್ಪೂರ್ತಿ ನೀಡಲಿದೆ ಎಂದು ನಾವು ನಂಬಿದ್ದೇವೆ” ಎಂದರು.

ತಮ್ಮ ಸಂತಸ ಹಂಚಿಕೊಂಡ ನಟಿ ಕೃತಿ ಶೆಟ್ಟಿ ಅವರು, “ಸಂಪ್ರದಾಯಗಳು ಮತ್ತು ಸಾಂಸ್ಕೃತಿಕ ಮೌಲ್ಯಗಳು ನನ್ನ ಬೆಳೆದುಬಂದ ಹಾದಿಯ ಅವಿಭಾಜ್ಯ ಅಂಗ. ಹಬ್ಬಗಳು ಯಾವಾಗಲೂ ಕುಟುಂಬ, ಕೃತಜ್ಞತೆ ಮತ್ತು ಒಗ್ಗಟ್ಟಿನ ಸಂಕೇತವಾಗಿವೆ. ಈ ಕ್ಯಾಂಪೇನ್ ಆ ಭಾವನೆಯನ್ನು ಅತ್ಯಂತ ಸುಂದರವಾಗಿ ಸೆರೆಹಿಡಿದಿದೆ. ಇಂದ್ರಿಯಾ ಬ್ರ್ಯಾಂಡ್ ಸಂಸ್ಕೃತಿಯನ್ನು ಕೇವಲ ಪ್ರೇರಣೆಯಾಗಿ ಮಾತ್ರವಲ್ಲದೆ ತನ್ನ ಬೆಳವಣಿಗೆಯ ಭಾಗವಾಗಿಸಿಕೊಂಡಿರುವುದು ನನಗೆ ತುಂಬಾ ಇಷ್ಟವಾಯಿತು. ಸಾಂಪ್ರದಾಯಿಕ ಕಲೆ ಮತ್ತು ಇಂದಿನ ಮಹಿಳೆಯರ ಅಭಿರುಚಿಗೆ ತಕ್ಕಂತೆ ಇರುವ ಸಮಕಾಲೀನ ವಿನ್ಯಾಸದ ಈ ಹಬ್ಬದ ಆಭರಣ ಸಂಗ್ರಹ ನಿಜಕ್ಕೂ ಅದ್ಭುತವಾಗಿದೆ” ಎಂದು ಹೇಳಿದರು.

ವರಮಹಾಲಕ್ಷ್ಮಿ ಹಬ್ಬದಿಂದ ಪ್ರಾರಂಭವಾಗುವ ಈ ಜಾಹೀರಾತು ಸಂಪೂರ್ಣ ಹಬ್ಬದ ಋತುವಿನುದ್ದಕ್ಕೂ ಟಿವಿ, ಡಿಜಿಟಲ್, ಪ್ರಿಂಟ್, ಹೊರಾಂಗಣ ಹಾಗೂ ಸ್ಟೋರ್‌ಗಳಲ್ಲಿ ಸಾರ್ವಜನಿಕರನ್ನು ತಲುಪಲಿದೆ.

Previous Post

ಮಾಹೆಯ 5 ಅಂಗಸಂಸ್ಥೆಗಳಲ್ಲಿ ಮೈಕ್ರೋಸಾಫ್ಟ್ ಲ್ಯಾಬ್‌: ಎಐ ಹಾಗೂ ನಾವೀನ್ಯತೆಯತ್ತ ದೃಢ ಹೆಜ್ಜೆ

Next Post

ಕ್ರೈಸ್ಟ್ ವಿವಿ ಸಹಭಾಗಿತ್ವದಲ್ಲಿ ಐಬಿಎಂ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಇನ್ನೋವೇಶನ್ ಸೆಂಟರ್ ಸ್ಥಾಪನೆ: ಎಐ ಕ್ಷೇತ್ರದಲ್ಲಿ ಸಂಶೋಧನೆ, ತರಬೇತಿ, ಪ್ರತಿಭಾ ಸಂಪನ್ಮೂಲ ಅಭಿವೃದ್ಧಿಗೆ ಬಲ

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಕ್ರೈಸ್ಟ್ ವಿವಿ ಸಹಭಾಗಿತ್ವದಲ್ಲಿ ಐಬಿಎಂ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಇನ್ನೋವೇಶನ್ ಸೆಂಟರ್ ಸ್ಥಾಪನೆ: ಎಐ ಕ್ಷೇತ್ರದಲ್ಲಿ ಸಂಶೋಧನೆ, ತರಬೇತಿ, ಪ್ರತಿಭಾ ಸಂಪನ್ಮೂಲ ಅಭಿವೃದ್ಧಿಗೆ ಬಲ

ಕ್ರೈಸ್ಟ್ ವಿವಿ ಸಹಭಾಗಿತ್ವದಲ್ಲಿ ಐಬಿಎಂ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಇನ್ನೋವೇಶನ್ ಸೆಂಟರ್ ಸ್ಥಾಪನೆ: ಎಐ ಕ್ಷೇತ್ರದಲ್ಲಿ ಸಂಶೋಧನೆ, ತರಬೇತಿ, ಪ್ರತಿಭಾ ಸಂಪನ್ಮೂಲ ಅಭಿವೃದ್ಧಿಗೆ ಬಲ

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಕ್ರೈಸ್ಟ್ ವಿವಿ ಸಹಭಾಗಿತ್ವದಲ್ಲಿ ಐಬಿಎಂ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಇನ್ನೋವೇಶನ್ ಸೆಂಟರ್ ಸ್ಥಾಪನೆ: ಎಐ ಕ್ಷೇತ್ರದಲ್ಲಿ ಸಂಶೋಧನೆ, ತರಬೇತಿ, ಪ್ರತಿಭಾ ಸಂಪನ್ಮೂಲ ಅಭಿವೃದ್ಧಿಗೆ ಬಲ

ಕ್ರೈಸ್ಟ್ ವಿವಿ ಸಹಭಾಗಿತ್ವದಲ್ಲಿ ಐಬಿಎಂ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಇನ್ನೋವೇಶನ್ ಸೆಂಟರ್ ಸ್ಥಾಪನೆ: ಎಐ ಕ್ಷೇತ್ರದಲ್ಲಿ ಸಂಶೋಧನೆ, ತರಬೇತಿ, ಪ್ರತಿಭಾ ಸಂಪನ್ಮೂಲ ಅಭಿವೃದ್ಧಿಗೆ ಬಲ

13/08/2026
ದಕ್ಷಿಣ ಭಾರತದ ಮಾರುಕಟ್ಟೆಗಳಿಗೆ ನಟಿ ಕೃತಿ ಶೆಟ್ಟಿ ಇಂದ್ರಿಯಾ ಬ್ರ್ಯಾಂಡ್ ರಾಯಭಾರಿ: ನೂತನ ವರಮಹಾಲಕ್ಷ್ಮಿ ಅಭಿಯಾನ ಅನಾವರಣ

ದಕ್ಷಿಣ ಭಾರತದ ಮಾರುಕಟ್ಟೆಗಳಿಗೆ ನಟಿ ಕೃತಿ ಶೆಟ್ಟಿ ಇಂದ್ರಿಯಾ ಬ್ರ್ಯಾಂಡ್ ರಾಯಭಾರಿ: ನೂತನ ವರಮಹಾಲಕ್ಷ್ಮಿ ಅಭಿಯಾನ ಅನಾವರಣ

13/08/2026
ಮಾಹೆಯ 5 ಅಂಗಸಂಸ್ಥೆಗಳಲ್ಲಿ ಮೈಕ್ರೋಸಾಫ್ಟ್ ಲ್ಯಾಬ್‌: ಎಐ ಹಾಗೂ ನಾವೀನ್ಯತೆಯತ್ತ ದೃಢ ಹೆಜ್ಜೆ

ಮಾಹೆಯ 5 ಅಂಗಸಂಸ್ಥೆಗಳಲ್ಲಿ ಮೈಕ್ರೋಸಾಫ್ಟ್ ಲ್ಯಾಬ್‌: ಎಐ ಹಾಗೂ ನಾವೀನ್ಯತೆಯತ್ತ ದೃಢ ಹೆಜ್ಜೆ

13/08/2026
ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ಪ್ರಾಯೋಜಕತ್ವದಲ್ಲಿ  – BOTTLE BOOTH ಕೊಡುಗೆ

ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ಪ್ರಾಯೋಜಕತ್ವದಲ್ಲಿ  – BOTTLE BOOTH ಕೊಡುಗೆ

13/08/2026

Recent News