Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

ಕ್ರೈಸ್ಟ್ ವಿವಿ ಸಹಭಾಗಿತ್ವದಲ್ಲಿ ಐಬಿಎಂ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಇನ್ನೋವೇಶನ್ ಸೆಂಟರ್ ಸ್ಥಾಪನೆ: ಎಐ ಕ್ಷೇತ್ರದಲ್ಲಿ ಸಂಶೋಧನೆ, ತರಬೇತಿ, ಪ್ರತಿಭಾ ಸಂಪನ್ಮೂಲ ಅಭಿವೃದ್ಧಿಗೆ ಬಲ

ಹೊಸ ಕೇಂದ್ರವು ವಿದ್ಯಾರ್ಥಿಗಳು, ಸಂಶೋಧಕರು ಮತ್ತು ಪಿಎಚ್‌ಡಿ ಅಭ್ಯರ್ಥಿಗಳಿಗೆ ಎಐ ಸಂಶೋಧನೆ, ನಾವೀನ್ಯತೆ ಮತ್ತು ಕೌಶಲ್ಯಾಭಿವೃದ್ಧಿಯನ್ನು ಹೆಚ್ಚಿಸಲು ಐಬಿಎಂ ಬಾಬ್ ಸೇರಿದಂತೆ ಪ್ರಮುಖ ಉದ್ಯಮ ಮಟ್ಟದ ಎಐ ತಂತ್ರಜ್ಞಾನಗಳ ಬಳಕೆಗೆ ಅವಕಾಶ ಒದಗಿಸಲಿದೆ.

Dhrishya News by Dhrishya News
13/08/2026
in ಸುದ್ದಿಗಳು
0
ಕ್ರೈಸ್ಟ್ ವಿವಿ ಸಹಭಾಗಿತ್ವದಲ್ಲಿ ಐಬಿಎಂ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಇನ್ನೋವೇಶನ್ ಸೆಂಟರ್ ಸ್ಥಾಪನೆ: ಎಐ ಕ್ಷೇತ್ರದಲ್ಲಿ ಸಂಶೋಧನೆ, ತರಬೇತಿ, ಪ್ರತಿಭಾ ಸಂಪನ್ಮೂಲ ಅಭಿವೃದ್ಧಿಗೆ ಬಲ
0
SHARES
12
VIEWS
Share on FacebookShare on Twitter

ಬೆಂಗಳೂರು, ಆಗಸ್ಟ್ 11, 2026: ಕ್ರೈಸ್ಟ್ ವಿಶ್ವವಿದ್ಯಾನಿಲಯ ಹಾಗೂ ತಂತ್ರಜ್ಞಾನ ದೈತ್ಯ ಐಬಿಎಂ (NYSE: IBM) ಜಂಟಿಯಾಗಿ ಎಐ ಕ್ಷೇತ್ರದಲ್ಲಿ ಶಿಕ್ಷಣ ಮತ್ತು ಸಂಶೋಧನೆಗೆ ಉತ್ತೇಜನ ನೀಡಲು ಐಬಿಎಂ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಇನ್ನೋವೇಶನ್ ಸೆಂಟರ್ ಅನ್ನು ಸ್ಥಾಪಿಸಿವೆ. ಈ ಹೊಸ ಎಐ ಕೇಂದ್ರವು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು, ಅಧ್ಯಾಪಕರು ಹಾಗೂ ಪಿಎಚ್‌ಡಿ ಸಂಶೋಧನಾ ವಿದ್ಯಾರ್ಥಿಗಳಿಗೆ ಉದ್ಯಮ ಮಟ್ಟದ ಅತ್ಯಾಧುನಿಕ ಎಐ ತಂತ್ರಜ್ಞಾನಗಳನ್ನು ನೇರವಾಗಿ ಬಳಸಿ ಪ್ರಯೋಗ ನಡೆಸಲು ವೇದಿಕೆ ಕಲ್ಪಿಸಲಿದೆ.

ಮುಖ್ಯವಾಗಿ ಜನರೇವ್ ಎಐ, ಏಜೆಂಟಿಕ್ ಎಐ, ಲಾರ್ಜ್ ಲ್ಯಾಂಗ್ವೇಜ್ ಮಾಡೆಲ್ಸ್ (ಎಲ್ಎಲ್ಎಂ), ರಿಟ್ರೀವಲ್ ಆಗ್ಮೆಂಟೆಡ್ ಜನರೇಷನ್ (ಆರ್ ಎ ಜಿ) ಹಾಗೂ ಇಂಟೆಲಿಜೆಂಟ್ ಆಟೋಮೇಷನ್‌ ನಂತಹ ಉದಯೋನ್ಮುಖ ಕ್ಷೇತ್ರಗಳಲ್ಲಿ ಪ್ರಾಯೋಗಿಕ ಜ್ಞಾನ ಪಡೆಯಲು ಇದು ನೆರವಾಗಲಿದೆ. ಎಐ ಸಾಫ್ಟ್‌ ವೇರ್ ಅಭಿವೃದ್ಧಿಗೆ ನೆರವಾಗುವ IBM Bob, ಎಐ ಡೆವಲಪ್‌ಮೆಂಟ್ ಸ್ಟುಡಿಯೋ watsonx.ai ಹಾಗೂ ಎಐ ನಿಯಂತ್ರಣ ವ್ಯವಸ್ಥೆಯಾದ watsonx Orchestrate ತಂತ್ರಜ್ಞಾನಗಳು ಇಲ್ಲಿ ಲಭ್ಯವಿರಲಿವೆ. ಉದ್ಯಮ ರಂಗದ ವಾಸ್ತವಿಕ ಸವಾಲುಗಳಿಗೆ ಎಐ ತಂತ್ರಜ್ಞಾನದ ಮೂಲಕ ನೂತನ ಪರಿಹಾರಗಳನ್ನು ಕಂಡುಕೊಳ್ಳಲು ಸಂಶೋಧಕರಿಗೆ ಅವಕಾಶ ಸಿಗಲಿದೆ.

ಈ ಕುರಿತು ಕ್ರೈಸ್ಟ್ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಫಾದರ್ ಜೋಸ್ ಸಿ ಸಿ ಅವರು ಮಾತನಾಡಿ , “ಕೃತಕ ಬುದ್ಧಿಮತ್ತೆಯು ಸಮಾಜದ ಪ್ರತಿಯೊಂದು ಕ್ಷೇತ್ರವನ್ನು ಮರುರೂಪಿಸುತ್ತಿದೆ. ಐಬಿಎಂ ಜೊತೆಗಿನ ಈ ಪಾಲುದಾರಿಕೆಯ ಮೂಲಕ ಕ್ರೈಸ್ಟ್ ವಿಶ್ವವಿದ್ಯಾಲಯವು ಶಿಕ್ಷಣ, ಸಂಶೋಧನೆ ಮತ್ತು ಉದ್ಯಮ ರಂಗಗಳು ಒಂದಾಗುವ ಭವಿಷ್ಯದ ನಾವೀನ್ಯತಾ ವ್ಯವಸ್ಥೆಯನ್ನು ನಿರ್ಮಿಸುತ್ತಿದೆ. ಐಬಿಎಂ ಎಐ ಇನ್ನೋವೇಶನ್ ಸೆಂಟರ್ ನಮ್ಮ ವಿದ್ಯಾರ್ಥಿಗಳು ಮತ್ತು ಸಂಶೋಧಕರಿಗೆ ಉದ್ಯಮ ಮಟ್ಟದ ಎಐ ತಂತ್ರಜ್ಞಾನಗಳ ಬೆಂಬಲ ನೀಡಲಿದ್ದು, ಜವಾಬ್ದಾರಿಯುತ ಹಾಗೂ ನೈತಿಕ ಎಐ ಜಗತ್ತಿಗೆ ಕೊಡುಗೆ ನೀಡುವ ಜೊತೆಗೆ ಪರಿಣಾಮಕಾರಿ ಪರಿಹಾರಗಳನ್ನು ಕಂಡುಕೊಳ್ಳಲು ನೆರವಾಗಲಿದೆ” ಎಂದರು.

ಈ ಸಹಭಾಗಿತ್ವದ ಭಾಗವಾಗಿ, ಐಬಿಎಂ ಎಕ್ಸ್‌ ಪರ್ಟ್ ಲ್ಯಾಬ್ಸ್ ಅಧ್ಯಾಪಕರು, ಪಿಎಚ್‌ಡಿ ಅಭ್ಯರ್ಥಿಗಳು ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಉದ್ಯಮ ಮಟ್ಟದ ಎಐ ತಂತ್ರಜ್ಞಾನಗಳಲ್ಲಿ ಪ್ರಾಯೋಗಿಕ ತರಬೇತಿ ಹಾಗೂ ನೈಪುಣ್ಯ ಕಾರ್ಯಕ್ರಮಗಳನ್ನು ನಡೆಸಲಿದೆ. ಇದು ವಿವಿಧ ವಿಷಯಗಳಲ್ಲಿ ಎಐ ಆಧಾರಿತ ಆಪ್‌ ಗಳ ಅಭಿವೃದ್ಧಿಯನ್ನು ಚುರುಕುಗೊಳಿಸಲು ನೆರವಾಗಲಿದೆ. ಜೊತೆಗೆ, ವಿದ್ಯಾರ್ಥಿಗಳ ಕಲಿಕೆ ಮತ್ತು ಪ್ರಮಾಣಪತ್ರ ಪಡೆಯಲು ಐಬಿಎಂ ಉಚಿತ ತಂತ್ರಜ್ಞಾನ ಶಿಕ್ಷಣ ಕಾರ್ಯಕ್ರಮವಾದ IBM SkillsBuild ಬಳಕೆಗೆ ಲಭ್ಯವಿರಲಿದೆ.

ಐಬಿಎಂ ಇಂಡಿಯಾ & ದಕ್ಷಿಣ ಏಷ್ಯಾದ ತಂತ್ರಜ್ಞಾನ ಮಾರಾಟ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕ ಸಿದ್ಧೇಶ್ ನಾಯಕ್ ಅವರು ಮಾತನಾಡಿ , “ಎಐ ನಾವೀನ್ಯತೆಯ ಭವಿಷ್ಯವು ಶಿಕ್ಷಣ ಸಂಸ್ಥೆಗಳು ಮತ್ತು ಉದ್ಯಮ ರಂಗದ ನಡುವಿನ ಬಲವಾದ ಸಹಯೋಗವನ್ನು ಅವಲಂಬಿಸಿದೆ. ಈ ಆಳವಾದ ಬಾಂಧವ್ಯದ ಮೂಲಕ ಭಾರತದ ಎಐ ಪ್ರತಿಭೆಗಳ ಜಾಲವನ್ನು ಬಲಪಡಿಸುವುದು, ಸಂಶೋಧನೆ ಹಾಗೂ ಹೊಸ ಆವಿಷ್ಕಾರ ಪ್ರಕ್ರಿಯೆಯನ್ನು ವೇಗಗೊಳಿಸುವುದು ಮತ್ತು ಎಐ ಭವಿಷ್ಯಕ್ಕೆ ಅಗತ್ಯವಿರುವ ಮಾನವಶಕ್ತಿಯನ್ನು ಸಿದ್ಧಪಡಿಸುವುದು ನಮ್ಮ ಮುಖ್ಯ ಉದ್ದೇಶವಾಗಿದೆ” ಎಂದರು.

ಮುಂದುವರಿಸಿ ಮಾತನಾಡಿದ ಅವರು, “ಈ ಯೋಜನೆಯು ವಿದ್ಯಾರ್ಥಿಗಳು, ಬೋಧಕ ಸಿಬ್ಬಂದಿ, ಸಂಶೋಧಕರು ಮತ್ತು ಪಿಎಚ್‌ಡಿ ಸಂಶೋಧನಾ ವಿದ್ಯಾರ್ಥಿಗಳು ಉದ್ಯಮ ಮಟ್ಟದ ಎಐ ತಂತ್ರಜ್ಞಾನಗಳನ್ನು ನೈಜ ಪ್ರಪಂಚದ ಸವಾಲುಗಳಿಗೆ ಅನ್ವಯಿಸುತ್ತಾ, ಅವುಗಳ ಪ್ರಾಯೋಗಿಕ ಅನುಭವವನ್ನು ಪಡೆಯಲು ನೆರವಾಗಲಿದೆ” ಎಂದು ಹೇಳಿದರು.”

ಈ ಕುರಿತು ಮಾತನಾಡಿದ ಐಬಿಎಂ ಇಂಡಿಯಾ ಸಾಫ್ಟ್‌ವೇರ್ ಲ್ಯಾಬ್‌ ನ ಉಪಾಧ್ಯಕ್ಷ ವಿಶಾಲ್ ಚಹಲ್ ಅವರು , “ಸಾಫ್ಟ್‌ ವೇರ್ ಅನ್ನು ನಿರ್ಮಿಸುವ ಸಾಂಪ್ರದಾಯಿಕ ವಿಧಾನವನ್ನು ಎಐ ತಂತ್ರಜ್ಞಾನವು ಮೂಲಭೂತವಾಗಿ ಬದಲಾಯಿಸುತ್ತಿದೆ. ಈ ಇನ್ನೋವೇಶನ್ ಸೆಂಟರ್ ಮೂಲಕ ವಿದ್ಯಾರ್ಥಿಗಳು ಮತ್ತು ಸಂಶೋಧಕರು ಐಬಿಎಂ ಬಾಬ್ ಜೊತೆಗೂಡಿ ಕೆಲಸ ಮಾಡಲಿದ್ದು, ಸಾಫ್ಟ್‌ ವೇರ್ ಜೀವಿತಾವಧಿಯ ಪ್ರತಿಯೊಂದು ಹಂತದಲ್ಲೂ ಎಐ ಹೇಗೆ ವೇಗವನ್ನು ತರಬಲ್ಲದು ಎಂಬುದರ ಪ್ರಾಯೋಗಿಕ ಅನುಭವ ಪಡೆಯಲಿದ್ದಾರೆ. ಉದ್ಯಮ ಮಟ್ಟದ ಸಾಫ್ಟ್‌ ವೇರ್ ಅಭಿವೃದ್ಧಿಯನ್ನು ಶೈಕ್ಷಣಿಕ ಕ್ಷೇತ್ರಕ್ಕೆ ಹತ್ತಿರ ತರುವ ಮೂಲಕ, ನೈಜ ಪ್ರಪಂಚದ ಬಳಕೆಗೆ ಸೂಕ್ತವಾದ, ದೊಡ್ಡ ಪ್ರಮಾಣದಲ್ಲಿ ಬೆಳೆಸಬಹುದಾದ ಮತ್ತು ವಿಶ್ವಾಸಾರ್ಹ ಎಐ ಅಪ್ಲಿಕೇಶನ್‌ ಗಳನ್ನು ನಿರ್ಮಿಸಲು ಮುಂದಿನ ಪೀಳಿಗೆಯ ಆವಿಷ್ಕಾರಕರನ್ನು ಸಜ್ಜುಗೊಳಿಸುವುದು ನಮ್ಮ ಆಶಯವಾಗಿದೆ” ಎಂದು ಹೇಳಿದರು.”

ಸಂಶೋಧನೆ, ಉದ್ಯಮಗಳ ಸಹಭಾಗಿತ್ವ, ಇಂಟರ್ನ್‌ಶಿಪ್‌ ಗಳು, ಹ್ಯಾಕಥಾನ್‌ ಗಳು ಮತ್ತು ಹೊಸ ಆವಿಷ್ಕಾರ ಸವಾಲುಗಳನ್ನು ಪರಿಹರಿಸಲು ಈ ಕೇಂದ್ರವು ಬೆಂಬಲ ನೀಡಲಿದ್ದು, ವಿದ್ಯಾರ್ಥಿಗಳು ಮತ್ತು ಸಂಶೋಧಕರಿಗೆ ಉದಯೋನ್ಮುಖ ಎಐ ತಂತ್ರಜ್ಞಾನಗಳಲ್ಲಿ ಪ್ರಯೋಗಗಳನ್ನು ನಡೆಸಲು ಮತ್ತು ಭವಿಷ್ಯಕ್ಕೆ ಸಿದ್ಧವಿರುವ ಎಐ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ಸೂಕ್ತ ವೇದಿಕೆಯನ್ನು ಒದಗಿಸುತ್ತದೆ.

Previous Post

ದಕ್ಷಿಣ ಭಾರತದ ಮಾರುಕಟ್ಟೆಗಳಿಗೆ ನಟಿ ಕೃತಿ ಶೆಟ್ಟಿ ಇಂದ್ರಿಯಾ ಬ್ರ್ಯಾಂಡ್ ರಾಯಭಾರಿ: ನೂತನ ವರಮಹಾಲಕ್ಷ್ಮಿ ಅಭಿಯಾನ ಅನಾವರಣ

Next Post

ಸರ್ಕಾರಿ ಪಾಲಿಟೆಕ್ನಿಕ್ ಕಾರ್ಕಳದಲ್ಲಿ ರೋಟರಾಕ್ಟ್ ಕ್ಲಬ್‌ನ ನೂತನ ಪದಾಧಿಕಾರಿಗಳ ಪದಗ್ರಹಣ

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಸರ್ಕಾರಿ ಪಾಲಿಟೆಕ್ನಿಕ್ ಕಾರ್ಕಳದಲ್ಲಿ ರೋಟರಾಕ್ಟ್ ಕ್ಲಬ್‌ನ ನೂತನ ಪದಾಧಿಕಾರಿಗಳ ಪದಗ್ರಹಣ

ಸರ್ಕಾರಿ ಪಾಲಿಟೆಕ್ನಿಕ್ ಕಾರ್ಕಳದಲ್ಲಿ ರೋಟರಾಕ್ಟ್ ಕ್ಲಬ್‌ನ ನೂತನ ಪದಾಧಿಕಾರಿಗಳ ಪದಗ್ರಹಣ

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 24k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಫೀನಿಕ್ಸ್‌ನಲ್ಲಿ ಭಗವದ್ಗೀತಾ ಲೇಖನ ಯಜ್ಞ ಸಂಪನ್ನ

ಫೀನಿಕ್ಸ್‌ನಲ್ಲಿ ಭಗವದ್ಗೀತಾ ಲೇಖನ ಯಜ್ಞ ಸಂಪನ್ನ

25/10/2026
ಬಡ್ಡಿದರ ಏರಿಕೆಯ ನಡುವೆ ಹೊಸ ಮನೆ ಖರೀದಿದಾರರಿಗೆ ಎದುರಾಗಿದೆ ಗುಪ್ತ ಅಪಾಯ: ದೀರ್ಘಾವಧಿ ಸಾಲ ಮತ್ತು ಹೆಚ್ಚುವರಿ ಆರ್ಥಿಕ ಹೊರೆ

ಬಡ್ಡಿದರ ಏರಿಕೆಯ ನಡುವೆ ಹೊಸ ಮನೆ ಖರೀದಿದಾರರಿಗೆ ಎದುರಾಗಿದೆ ಗುಪ್ತ ಅಪಾಯ: ದೀರ್ಘಾವಧಿ ಸಾಲ ಮತ್ತು ಹೆಚ್ಚುವರಿ ಆರ್ಥಿಕ ಹೊರೆ

24/10/2026
ಗಣೇಶ ವಿಸರ್ಜನಾ ಮೆರವಣಿಗೆ ಬಳಿಕ ಗಲಾಟೆ: ಯುವಕನಿಗೆ ಹಲ್ಲೆ, ಜೀವ ಬೆದರಿಕೆ ಆರೋಪ

ಬೈಂದೂರು ರೈಲು ನಿಲ್ದಾಣದಲ್ಲಿ ಪ್ರಯಾಣಿಕನ ಮೊಬೈಲ್ ಕಳವು, UPI ಮೂಲಕ ₹19,847 ಹಣ ವರ್ಗಾವಣೆ..!

24/10/2026
ಅಕ್ಟೋಬರ್ 25 : ಉದ್ಯಾವರದಲ್ಲಿ ‘ಪ್ರಾಜೆಕ್ಟ್ ಪಂಚತಂತ್ರ’ ನಾಟಕ ಪ್ರದರ್ಶನ

ಅಕ್ಟೋಬರ್ 25 : ಉದ್ಯಾವರದಲ್ಲಿ ‘ಪ್ರಾಜೆಕ್ಟ್ ಪಂಚತಂತ್ರ’ ನಾಟಕ ಪ್ರದರ್ಶನ

24/10/2026

Recent News

imunify-bot-check