ಉಡುಪಿ,ಮಾ.24; ಮಣಿಪಾಲದಿಂದ ಖಾಸಗಿ ಸಿಟಿ ಬಸ್ಸಿನಲ್ಲಿ ಉಡುಪಿಗೆ ಪ್ರಯಾಣಿಸುತ್ತಿದ್ದ, ಪ್ರಯಾಣಿಕನಿಗೆ, ಎಂ.ಜಿ.ಎಂ ಕಾಲೇಜು ಸನಿಹ ರಕ್ತವಾಂತಿ ಪ್ರಾರಂಭವಾಗಿ, ಆರೋಗ್ಯ ಸ್ಥಿತಿ ಗಂಭೀರಗೊಂಡಿತು. ತಕ್ಷಣ ಬಸ್ಸಿನ ಮಾಲಿಕ ಮಧುಸೂದನ್ ಶೆಟ್ಟಿ, ಸಮಾಜಸೇವಕ ನಿತ್ಯಾನಂದ ಒಳಕಾಡುವರಿಗೆ ಮಾಹಿತಿ ನೀಡಿದರು.
ಸಿಟಿ ಬಸ್ಸು ನಿಲ್ದಾಣದಡೆಗೆ ಅಂಬುಲೆನ್ಸ್ ವಾಹನದಲ್ಲಿ ಧಾವಿಸಿ ಬಂದ ಒಳಕಾಡುವರು, ಪ್ರಯಾಣಿಕನನ್ನು ಬಸ್ಸಿನ ನಿರ್ವಾಹಕ, ಹಾಗೂ ಸ್ಥಳದಲ್ಲಿದ್ದ ಕಾಲೇಜು ವಿದ್ಯಾರ್ಥಿಗಳ ನೆರವಿನಿಂದ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲುಪಡಿಸಿದ್ದಾರೆ. ಪ್ರಜ್ಞಾಹಿನ ಸ್ಥಿತಿಯಲ್ಲಿದ್ದ ರೋಗಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನಡೆಯುತ್ತಿದೆ. ಪ್ರಯಾಣಿಕನನ್ನು ಕುಂದಾಪುರದ ನಿವಾಸಿ ಸಂತೋಷ(45ವ) ಎಂದು ಗುರುತಿಸಲಾಗಿದೆ.
ಇದೀಗ ವ್ಯಕ್ತಿ ಚಿಕಿಸ್ಥೆ ಫಲಕಾರಿ ಆಗದೆ ಸಾವನಪ್ಪಿದ್ದಾರೆ ಎಂದು ತಿಳಿದು ಬಂದಿದೆ
ಮಾಹಿತಿ :ನಿತ್ಯಾನಂದ ಒಳಕಾಡು ಸಾಮಾಜಿಕ ಕಾರ್ಯಕರ್ತರು ಉಡುಪಿ







