Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

ಮಾಹೆಯ ಮಣಿಪಾಲ್‌ ಸೆಂಟರ್‌ ಫಾರ್‌ ಬಯೋಥೆರಾಪಿಟಿಕ್ಸ್‌ ರಿಸರ್ಚ್‌  ವತಿಯಿಂದ    ಎಫ್‌ಪಿಎಲ್‌ಸಿ ಮತ್ತು ಬಯೋ-ಎಲ್‌ಸಿ ತಂತ್ರಜ್ಞಾನದ ಕಾರ್ಯಾಗಾರ ಉದ್ಘಾಟನೆ..!!

Dhrishya News by Dhrishya News
26/07/2024
in ಸುದ್ದಿಗಳು
0
0
SHARES
17
VIEWS
Share on FacebookShare on Twitter

ಮಣಿಪಾಲ ಜುಲೈ 26, 2024 : ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಶನ್‌ [ಮಾಹೆ] ನ ಮಣಿಪಾಲ್‌ ಸೆಂಟರ್‌ ಫಾರ್‌ ಬಯೋಥೆರಾಪಿಟಿಕ್ಸ್‌ ರಿಸರ್ಚ್‌ [ಎಂಸಿಬಿರ್‌]ನ ವತಿಯಿಂದ ಪ್ರೊಟೀನ್‌ ಲಿಕ್ವಿಡ್‌ ಕ್ರೊಮ್ಯಾಟೋಗ್ರಫಿ [ಎಫ್‌ಪಿಎಲ್‌ಸಿ] ಮತ್ತು ಬಯೋ ಲಿಕ್ವಿಡ್‌ ಕ್ರೊಮ್ಯಾಟೋಗ್ರಫಿ [ಬಯೋ-ಎಲ್‌ಸಿ] ತಂತ್ರಜ್ಞಾನದ ಕಾರ್ಯಾಗಾರವನ್ನು ಎಂಸಿಬಿಆರ್‌ ಲೆಕ್ಟರ್‌ ಹಾಲ್‌ನಲ್ಲಿ ಇಂದು ಉದ್ಘಾಟಿಸಲಾಯಿತು. ಈ ಕಾರ್ಯಾಗಾರವು ಜುಲೈ 27, 2024 ರವರೆಗೆ ನಡೆಯಲಿದ್ದು ಇದರಲ್ಲಿ ಜೈವಿಕ ತಂತ್ರಜ್ಞಾನ [ಬಯೋಟೆಕ್ನಾಲಜಿ] ಮತ್ತು ಜೀವ ವಿಜ್ಞಾನ [ಲೈಫ್‌ ಸಾಯನ್ಸಸ್‌] ಗಳಲ್ಲಿ ಬಳಕೆಯಾಗುವ ಮಹತ್ತ್ವದ ತಂತ್ರಜ್ಞಾನದ ಬಗ್ಗೆ ಆಳವಾದ ಜ್ಞಾನವನ್ನು ಒದಗಿಸುವಂಥ ಪ್ರಾಯೋಗಿಕ ತರಬೇತಿ ನೀಡಲಾಗುತ್ತಿದೆ. 

ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿದ್ದ ಮಾಹೆ ಮಣಿಪಾಲದ ಆರೋಗ್ಯ ವಿಜ್ಞಾನ ವಿಭಾಗಗಳ ಡಾ. ಶರತ್ ಕೆ ರಾವ್, ಅವರು ಸಂಬಂಧಿತ ಕ್ಷೇತ್ರಗಳಲ್ಲಿ ತಾಂತ್ರಿಕ ಪ್ರಾವೀಣ್ಯತೆಯನ್ನು ಕಾಪಾಡಿಕೊಳ್ಳಲು ನಿರಂತರ ಕಲಿಕೆ ಮತ್ತು ಕೌಶಲ್ಯ ಅಭಿವೃದ್ಧಿಯ ಮಹತ್ವವನ್ನು ಒತ್ತಿ ಹೇಳಿದರು. ಅವರು ತಮ್ಮ ಪರಿಣತಿಯನ್ನು ಹೆಚ್ಚಿಸಲು ಮತ್ತು ತಮ್ಮ ಕ್ಷೇತ್ರಗಳಿಗೆ ಪರಿಣಾಮಕಾರಿಯಾಗಿ ಕೊಡುಗೆ ನೀಡಲು ಕಾರ್ಯಾಗಾರವನ್ನು ಬಳಸಿಕೊಳ್ಳುವಂತೆ ಅವರು ಭಾಗವಹಿಸಿದವರನ್ನು ಪ್ರೋತ್ಸಾಹಿಸಿದರು.

ಕಂಟ್ರಿ ಬಯೋಫಾರ್ಮಾದ ಮಾರುಕಟ್ಟೆ ಅಭಿವೃದ್ಧಿ ವ್ಯವಸ್ಥಾಪಕ ಮತ್ತು ಬೆಂಗಳೂರಿನ ಅಜಿಲೆಂಟ್‌ ಟೆಕ್ನಾಲಜೀಸ್‌ನಲ್ಲಿ ವಿಜ್ಞಾನಿಯಾಗಿರುವ ಡಾ. ವಾದಿರಾಜ ಭಟ್‌ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಅವರು ಮಾತನಾಡುತ್ತ, ‘ಜೀವ-ಔಷಧಿ [ಬಯೋಫಾರ್ಮಾ]ಯ ಉದ್ಯಮಾಭಿವೃದ್ಧಿ ಮತ್ತು ವೈಜ್ಞಾನಿಕ ಸಂಶೋಧನೆಯಲ್ಲಿ ಕ್ರೊಮಾಟೋಗ್ರಫಿ ತಂತ್ರಜ್ಞಾನದ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಜೀವಔಷಧೀಯವಿಜ್ಞಾನದ ಸುಧಾರಣೆಗೆ ಮೂಲಭೂತವಾಗಿ ಕ್ರೊಮಾಟೋಗ್ರಫಿ ತಂತ್ರಜ್ಞಾನವು ಅವಶ್ಯವಾಗಿದೆ. ಜೀವ-ಔಷಧಿ [ಬಯೋಫಾರ್ಮಾ]ದ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡವರು ಕ್ರೊಮ್ಯಾಟೋಗ್ರಫಿ ತಂತ್ರಜ್ಞಾನ ಬಳಕೆ ಮತ್ತು ಪ್ರಯೋಗವನ್ನು ಅರ್ಥಮಾಡಿಕೊಳ್ಳುವುದು ಆವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಪ್ರಸ್ತುತ ಕಾರ್ಯಾಗಾರಕ್ಕೆ ಮಹತ್ತ್ವವಿದೆ’ ಎಂದರು.  

ಕಾರ್ಯಾಗಾರದ ಆಯೋಜನ ಸಮಿತಿಯ ಅಧ್ಯಕ್ಷ ಮತ್ತು ಮಣಿಪಾಲ್‌ ಸೆಂಟರ್‌ ಫಾರ್‌ ಬಯೋಥೆರಾಪಿಟಿಕ್ಸ್‌ ರಿಸರ್ಚ್‌ [ಎಂಸಿಬಿರ್‌]ನ ಸಂಸ್ಥಾಪಕ ಸಂಚಾಲಕರಾದ ಡಾ. ರವಿರಾಜ್‌ ಎನ್‌. ಎಸ್‌. ಅವರು ಪ್ರಸ್ತಾವನೆಯೊಂದಿಗೆ ಎಲ್ಲರನ್ನೂ ಸ್ವಾಗತಿಸಿದರು. ಅವರು ತಮ್ಮ ಭಾಷಣದಲ್ಲಿ, ‘ಮಣಿಪಾಲ್‌ ಸೆಂಟರ್‌ ಫಾರ್‌ ಬಯೋಥೆರಾಪಿಟಿಕ್ಸ್‌ ರಿಸರ್ಚ್‌ [ಎಂಸಿಬಿರ್‌] ಬಯೋಥೆರಾಪಿಟಿಕ್ಸ್‌ನ ಕ್ಷೇತ್ರಗಳಲ್ಲಿ ನಿರಂತರ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳುವುದರ ಮೂಲಕ ಓಷಧೀಯ ಕ್ಷೇತ್ರದಲ್ಲಿ ಕೌಶಲಾಭಿವೃದ್ಧಿಗೆ ಮಹತ್ತ್ವದ ಕೊಡುಗೆ ನೀಡುತ್ತಿದೆ. ಎಂಸಿಬಿಆರ್‌ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಪ್ರಾಯೋಗಿಕ ಕೌಶಲವನ್ನು ಹೆಚ್ಚಿಸುವ ಕಾರ್ಯಕ್ರಮಗಳ ಆಯೋಜನೆಗೆ ಬದ್ಧವಾಗಿದೆ. ಬಯೋಥೆರಾಪಿಟಿಕ್ಸ್‌ ಕ್ಷೇತ್ರದಲ್ಲಿ ಸಂಶೋಧಕರನ್ನು ಮತ್ತು ವೃತ್ತಿಪರರನ್ನು ಆವಶ್ಯಕ ವೃತ್ತಿಕೌಶಲದೊಂದಿಗೆ ತರಬೇತಿಗೊಳಿಸಿ ಶೈಕ್ಷಣಿಕ ಸಂಶೋಧನೆ ಮತ್ತು ಔದ್ಯಮಿಕ ಕ್ಷೇತ್ರಗಳ ಅಂತರವನ್ನು ಕಡಿಮೆ ಮಾಡುವುದು ನಮ್ಮ ಉದ್ದೇಶವಾಗಿದೆ’ ಎಂದರು. 

ಎಂಸಿಬಿರ್‌ನ ಸಹಾಯಕ ಪ್ರಾಧ್ಯಾಪಕ ಮತ್ತು ಆಯೋಜನ ಕಾರ್ಯದರ್ಶಿ ಡಾ. ಸೌವಿಕ್‌ ಡೇ ಅವರು ಕಾರ್ಯಾಗಾರದ ವಿವರಗಳನ್ನು ನೀಡಿದರು, ಸಿಂಜೀನ್‌ ಇಂಟರ್‌ನ್ಯಾಶನಲ್‌ ಲಿ. ನ ಬಯೋಫಾರ್ಮಾ ಟೆಕ್ನಿಕಲ್‌ ಅಪರೇಶನ್ಸ್‌ ಆ್ಯಂಡ್‌ ಎನಲೈಟಿಕಲ್‌ ಡೆವಲಪ್‌ಮೆಂಟ್‌ ಬಯೋಲಾಜಿಕ್ಸ್‌ ನ ಡಾ. ಅಮರನಾಥ್‌ ಚಟರ್ಜಿ ಅವರು ಕಾರ್ಯಾಗಾರದ ಆಶಯಭಾಷಣ ಮಾಡಿದರು. 

ಎಂಸಿಬಿಆರ್‌ನ ಸಹಾಯಕ ಪ್ರಾಧ್ಯಾಪಕ ಡಾ. ಅಭಯರಾಜ್‌ ಜೋಶಿ ಧನ್ಯವಾದ ಸಮರ್ಪಿಸಿದರು. ಸಂಶೋಧನ ವಿದ್ಯಾರ್ಥಿ ಅನಿರುದ್ಧ್‌ ಶ್ರೀನಿವಾಸ್‌ ಕಾರ್ಯಕ್ರಮವನ್ನು ನಿರ್ವಹಿಸಿದರು.

Previous Post

ಶಿರೂರು : ಗುಡ್ಡಕುಸಿತ ಸಂತ್ರಸ್ತರಿಗೆ ರಾಮಚಂದ್ರಾಪುರ ಮಠ ಸಹಾಯಹಸ್ತ..!!

Next Post

ತೀರ್ಥಹಳ್ಳಿ : ಬೈಪಾಸ್ ರಸ್ತೆಯಲ್ಲಿ ಮತ್ತೆ ನಿಧಾನವಾಗಿ  ಜರಿಯುತ್ತಿರುವ ಮಣ್ಣು : ಮುಂಜಾಗ್ರತಾ ಕ್ರಮವಾಗಿ ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧ..!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post

ತೀರ್ಥಹಳ್ಳಿ : ಬೈಪಾಸ್ ರಸ್ತೆಯಲ್ಲಿ ಮತ್ತೆ ನಿಧಾನವಾಗಿ  ಜರಿಯುತ್ತಿರುವ ಮಣ್ಣು : ಮುಂಜಾಗ್ರತಾ ಕ್ರಮವಾಗಿ ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧ..!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಏಪ್ರಿಲ್ 1ರಿಂದ ರಾಷ್ಟ್ರೀಯ ಹೆದ್ದಾರಿ ಟೋಲ್ ದರ ಏರಿಕೆ

ಏಪ್ರಿಲ್ 1ರಿಂದ ರಾಷ್ಟ್ರೀಯ ಹೆದ್ದಾರಿ ಟೋಲ್ ದರ ಏರಿಕೆ

24/03/2026
ರಘುಪತಿ ಭಟ್ ಧರಣಿಗೆ ಒಂದೇ ದಿನದಲ್ಲಿ ಯಶಸ್ಸು: ರೆಸಾರ್ಟ್ ಏಕವಿನ್ಯಾಸ ನಕ್ಷೆ ಮಂಜೂರು

ರಘುಪತಿ ಭಟ್ ಧರಣಿಗೆ ಒಂದೇ ದಿನದಲ್ಲಿ ಯಶಸ್ಸು: ರೆಸಾರ್ಟ್ ಏಕವಿನ್ಯಾಸ ನಕ್ಷೆ ಮಂಜೂರು

24/03/2026
ಆರೋಗ್ಯ ಕೇಂದ್ರದಲ್ಲಿ ತೆರಿಗೆ ಪಾವತಿ ಕೇಂದ್ರ ಕಾಮಗಾರಿ: ಆರೋಗ್ಯ ಇಲಾಖೆ ಆಕ್ಷೇಪ – ಕಾಮಗಾರಿ ಸ್ಥಗಿತಕ್ಕೆ ಸೂಚನೆ

ಆರೋಗ್ಯ ಕೇಂದ್ರದಲ್ಲಿ ತೆರಿಗೆ ಪಾವತಿ ಕೇಂದ್ರ ಕಾಮಗಾರಿ: ಆರೋಗ್ಯ ಇಲಾಖೆ ಆಕ್ಷೇಪ – ಕಾಮಗಾರಿ ಸ್ಥಗಿತಕ್ಕೆ ಸೂಚನೆ

24/03/2026
ಧರ್ಮಾಂತರಗೊಂಡವರಿಗೆ ಎಸ್‌ಸಿ, ಎಸ್ಟಿ ಸ್ಥಾನಮಾನ ಅನ್ವಯಿಸುವುದಿಲ್ಲ: ಸುಪ್ರೀಂ ಕೋರ್ಟ್ ಸ್ಪಷ್ಟನೆ

ಧರ್ಮಾಂತರಗೊಂಡವರಿಗೆ ಎಸ್‌ಸಿ, ಎಸ್ಟಿ ಸ್ಥಾನಮಾನ ಅನ್ವಯಿಸುವುದಿಲ್ಲ: ಸುಪ್ರೀಂ ಕೋರ್ಟ್ ಸ್ಪಷ್ಟನೆ

24/03/2026

Recent News

ಏಪ್ರಿಲ್ 1ರಿಂದ ರಾಷ್ಟ್ರೀಯ ಹೆದ್ದಾರಿ ಟೋಲ್ ದರ ಏರಿಕೆ

ಏಪ್ರಿಲ್ 1ರಿಂದ ರಾಷ್ಟ್ರೀಯ ಹೆದ್ದಾರಿ ಟೋಲ್ ದರ ಏರಿಕೆ

24/03/2026
ರಘುಪತಿ ಭಟ್ ಧರಣಿಗೆ ಒಂದೇ ದಿನದಲ್ಲಿ ಯಶಸ್ಸು: ರೆಸಾರ್ಟ್ ಏಕವಿನ್ಯಾಸ ನಕ್ಷೆ ಮಂಜೂರು

ರಘುಪತಿ ಭಟ್ ಧರಣಿಗೆ ಒಂದೇ ದಿನದಲ್ಲಿ ಯಶಸ್ಸು: ರೆಸಾರ್ಟ್ ಏಕವಿನ್ಯಾಸ ನಕ್ಷೆ ಮಂಜೂರು

24/03/2026
ಆರೋಗ್ಯ ಕೇಂದ್ರದಲ್ಲಿ ತೆರಿಗೆ ಪಾವತಿ ಕೇಂದ್ರ ಕಾಮಗಾರಿ: ಆರೋಗ್ಯ ಇಲಾಖೆ ಆಕ್ಷೇಪ – ಕಾಮಗಾರಿ ಸ್ಥಗಿತಕ್ಕೆ ಸೂಚನೆ

ಆರೋಗ್ಯ ಕೇಂದ್ರದಲ್ಲಿ ತೆರಿಗೆ ಪಾವತಿ ಕೇಂದ್ರ ಕಾಮಗಾರಿ: ಆರೋಗ್ಯ ಇಲಾಖೆ ಆಕ್ಷೇಪ – ಕಾಮಗಾರಿ ಸ್ಥಗಿತಕ್ಕೆ ಸೂಚನೆ

24/03/2026
ಧರ್ಮಾಂತರಗೊಂಡವರಿಗೆ ಎಸ್‌ಸಿ, ಎಸ್ಟಿ ಸ್ಥಾನಮಾನ ಅನ್ವಯಿಸುವುದಿಲ್ಲ: ಸುಪ್ರೀಂ ಕೋರ್ಟ್ ಸ್ಪಷ್ಟನೆ

ಧರ್ಮಾಂತರಗೊಂಡವರಿಗೆ ಎಸ್‌ಸಿ, ಎಸ್ಟಿ ಸ್ಥಾನಮಾನ ಅನ್ವಯಿಸುವುದಿಲ್ಲ: ಸುಪ್ರೀಂ ಕೋರ್ಟ್ ಸ್ಪಷ್ಟನೆ

24/03/2026
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved