Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

ಶಿರೂರು : ಗುಡ್ಡಕುಸಿತ ಸಂತ್ರಸ್ತರಿಗೆ ರಾಮಚಂದ್ರಾಪುರ ಮಠ ಸಹಾಯಹಸ್ತ..!!

Dhrishya News by Dhrishya News
26/07/2024
in ಸುದ್ದಿಗಳು
0
0
SHARES
19
VIEWS
Share on FacebookShare on Twitter

ಗೋಕರ್ಣ:ಜುಲೈ 26: ಶಿರೂರು ಗುಡ್ಡಕುಸಿತದ ಸಂದರ್ಭದಲ್ಲಿ ಗಂಗಾವಳಿ ನದಿ ನೀರು ಅಪ್ಪಳಿಸಿ ಏಳು ಮನೆಗಳು ಸಂಪೂರ್ಣ ಕೊಚ್ಚಿಕೊಂಡು ಹೋಗಿದ್ದು, ಸಂತ್ರಸ್ತ ಕುಟುಂಬಗಳಿಗೆ ರಾಮಚಂದ್ರಾಪುರ ಮಠ ಸಹಾಯಹಸ್ತ ಚಾಚಿದೆ.

ಗೋಕರ್ಣದ ಅಶೋಕೆಯಲ್ಲಿ ಚಾತುರ್ಮಾಸ್ಯ ವ್ರತ ಕೈಗೊಂಡಿರುವ ಶ್ರೀರಾಘವೇಶ್ವರ ಭಾರತೀಸ್ವಾಮೀಜಿಯವರು ಶ್ರೀಮಠದ ನಿಯೋಗವನ್ನು ಘಟನಾ ಸ್ಥಳಕ್ಕೆ ಅಗತ್ಯ ನೆರವಿನ ವಸ್ತುಗಳೊಂದಿಗೆ ಶ್ರೀಮಠದ ನಿಯೋಗವನ್ನು ಕಳುಹಿಸಿಕೊಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ತಂಡ, ಸಂತ್ರಸ್ತರಿಗೆ ಸಾಂತ್ವನ ಹೇಳಿ, ನಗದು, ಆಹಾರಧಾನ್ಯದ ಕಿಟ್‌ಗಳನ್ನು ಸಂತ್ರಸ್ತರ ಕುಟುಂಬಗಳಿಗೆ ವಿತರಿಸಿತು.

ಶ್ರೀ ರಾಘವೇಶ್ವರಭಾರತೀಮಹಾಸ್ವಾಮೀಜಿ ಮತ್ತು ಹವ್ಯಕ ಮಹಾಮಂಡಲದ ಅಧ್ಯಕ್ಷ ಮೋಹನ ಭಾಸ್ಕರ ಹೆಗಡೆ ಮಾರ್ಗದರ್ಶನದಲ್ಲಿ ವಿವಿವಿ ಆಡಳಿತಾಧಿಕಾರಿ ಡಾ.ಪ್ರಸನ್ನ ಕುಮಾರ್, ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಉದಯಶಂಕರ ಮಿತ್ತೂರು, ಪ್ರಾಂತ ಉಪಾಧ್ಯಕ್ಷ ಜಿ.ಎಸ್.ಹೆಗಡೆ, ಕುಮಟಾ ಮಂಡಲ ಅಧ್ಯಕ್ಷ ಸುಬ್ರಾಯ ಭಟ್ ನೇತೃತ್ವದಲ್ಲಿ ತಂಡ ಎಲ್ಲ ಸಂತ್ರಸ್ತರನ್ನು ಭೇಟಿ ಮಾಡಿ ಸಾಂತ್ವನ ಹೇಳುವ ಜತೆಗೆ ಗಂಜಿ ಕೇಂದ್ರಕ್ಕೂ ಭೇಟಿ ನೀಡಿ ಆಸರೆ ಪಡೆದಿರುವ ೮೩ ಮಂದಿಯ ಊಟೋಪಚಾರಕ್ಕೆ ದಿನಸಿ ವಿತರಿಸಿದರು. 

ಗುಡ್ಡ ಕುಸಿದು ಭಾರಿ ಪ್ರಮಾಣದ ಮಣ್ಣು ತುಂಬಿ ಹರಿಯುತ್ತಿದ್ದ ಗಂಗಾವಳಿ ನದಿಗೆ ದಿಢೀರನೇ ಬಿದ್ದ ಹಿನ್ನೆಲೆಯಲ್ಲಿ ನದಿ ನೀರು ಸುಮಾರು ೨೦೦ ಮೀಟರ್ ದೂರದ ಜನವಸತಿ ಮೇಲೆ ಸುನಾಮಿ ಅಲೆಗಳಂತೆ ಅಪ್ಪಳಿಸಿ, ಏಳು ಮನೆಗಳನ್ನು ಸಂಪೂರ್ಣ ಕೊಚ್ಚಿಕೊಂಡು ಹೋಗಿದೆ. ಹಾಲಕ್ಕಿ ಜನಾಂಗಕ್ಕೆ ಸೇರಿದ ಈ ಕುಟುಂಬಗಳು ತಮ್ಮ ಸಂಬAಧಿಕರ ಮನೆಯಲ್ಲಿ ಆಸರೆ ಪಡೆದಿದ್ದು, ಎಲ್ಲ ಸಂತ್ರಸ್ತ ಕುಟುಂಬಗಳನ್ನು ಭೇಟಿ ಮಾಡಿ ಸಾಂತ್ವನ ಹೇಳಲಾಯಿತು.

ಘಟನೆ ಬಗ್ಗೆ ರಾಘವೇಶ್ವರಭಾರತೀ ಸ್ವಾಮೀಜಿಯವರು ತೀವ್ರ ಆಘಾತ ವ್ಯಕ್ತಪಡಿಸಿದ್ದು, ಶ್ರೀಗಳು ಚಾತುರ್ಮಾಸ್ಯ ವ್ರತಾಚರಣೆಯಲ್ಲಿರುವುರಿಂದ ಎಲ್ಲೂ ಹೊರಹೋಗುವಂತಿಲ್ಲ. ಆದರೆ ಸಂತ್ರಸ್ತರ ಸಂಕಷ್ಟಗಳಿಗೆ ಸ್ಪಂದಿಸಿ ನಿಯೋಗವನ್ನು ಕಳುಹಿಸಿಕೊಟ್ಟಿದ್ದಾರೆ. ಸಂತ್ರಸ್ತರು ಸ್ಥೆöರ‍್ಯ ಕಳೆದುಕೊಳ್ಳುವ ಅಗತ್ಯವಿಲ್ಲ. ಶ್ರೀಮಠ ಸದಾ ನಿಮ್ಮ ಬೆಂಬಲಕ್ಕಿದೆ ಎಂಬ ಸ್ವಾಮೀಜಿಯವರ ಅಭಯವನ್ನು ಸಂತ್ರಸ್ತರಿಗೆ ತಿಳಿಸಲಾಯಿತು.

ಪ್ರತಿ ಕುಟುಂಬಗಳಿಗೆ ತಕ್ಷಣಕ್ಕೆ ೫ ಸಾವಿರ ರೂಪಾಯಿ ನಗದು, ಅಕ್ಕಿ, ತರಕಾರಿ, ಸಕ್ಕರೆ, ತೊಗರಿಬೇಳೆ, ತೆಂಗಿನಕಾಯಿ, ಶ್ರೀಗಳ ಮಂತ್ರಾಕ್ಷತೆ, ರಾಮದೇವರ ಪ್ರಸಾದ ಇದ್ದ ಕಿಟ್‌ಗಳನ್ನು ವಿತರಿಸಲಾಯಿತು. ಶ್ರೀಮಠದ ನೆರವು ಸ್ವೀಕರಿಸಿದ ಮಂಜುನಾಥ ಹನುಮಂತ ಗೌಡ, ನೀಲಾ ಮುದ್ದುಗೌಡ, ಬೊಮ್ಮ ಅನಂತ ಗೌಡ, ಗಣಪತಿ ಬೊಮ್ಮ ಗೌಡ, ದಾದಾ ತೊಳಸಪ್ಪ ಗೌಡ, ಗೋವಿಂದ ಕೃಷ್ಣ ಗೌಡ, ಮಾದೇಶ ಮೋಹನ ಅಂಬಿಗ ಕೃತಜ್ಞತೆ ಸಲ್ಲಿಸಿ, “ಎಲ್ಲವನ್ನೂ ಕಳೆದುಕೊಂಡು ಅನಾಥರಾಗಿದ್ದ ನಮಗೆ ಶ್ರೀಗಳ ಅಭಯದಿಂದ ಧರ‍್ಯ ಬಂದಿದೆ. ಮತ್ತೆ ಬದುಕು ಕಟ್ಟಿಕೊಳ್ಳುವ ಭರವಸೆ ಮೂಡಿದೆ” ಎಂದು ಹೇಳಿದರು.

ಸಂತ್ರಸ್ತರನ್ನು ಗುರುತಿಸುವಲ್ಲಿ ಮತ್ತು ನೆರವನ್ನು ಅರ್ಹರಿಗೆ ತಲುಪಿಸುವಲ್ಲಿ ತಾಲೂಕು ಪಂಚಾಯ್ತಿ ಸದಸ್ಯ ಮಹೇಶ್ ಶೆಟ್ಟಿ ನೇತೃತ್ವದ ತಂಡ ಸಹಕರಿಸಿತು. ಸಗಡಗೇರಿ ಪಂಚಾಯ್ತಿ ಸದಸ್ಯ ಕೃಷ್ಣಗೌಡ, ಜಗದೀಶ್, ತಾಲೂಕು ಪಂಚಾಯ್ತಿ ಮಾಜಿ ಸದಸ್ಯ ನಾಗೇಶ್ ಗೌಡ, ಗೋಕರ್ಣ ಗ್ರಾಮಪಂಚಾಯ್ತಿ ಅಧ್ಯಕ್ಷೆ ಸುಮನಾ ಗೌಡ, ಹನೇಹಳ್ಳಿ ಪಂಚಾಯ್ತಿ ಅಧ್ಯಕ್ಷ ಸಣ್ಣುಗೌಡ, ಹಾಲಕ್ಕಿ ಸಮಾಜದ ಮುಖಂಡರಾದ ಶಂಕರಗೌಡ ಹೆಗ್ರೆ, ನಾಗೇಶ್‌ಗೌಡ ಕುಡ್ಲೆ, ಶ್ರೀಮಠದ ಪ್ರತಿನಿಧಿಗಳಾದ ಎಸ್.ವಿ.ಹೆಗಡೆ, ಗೋಪಾಲಕೃಷ್ಣ ಹೆಗಡೆ ಮತ್ತಿತರರು ನಿಯೋಗಲ್ಲಿದ್ದರು.

Previous Post

ವಿದುಷಿ. ಶ್ರಾವ್ಯ ಹಿರಿಯಡ್ಕ ಭರತನಾಟ್ಯದಲ್ಲಿ ದೂರದರ್ಶನ ‘ಬಿ’ ಗ್ರೇಡ್ ಕಲಾವಿದೆಯಾಗಿ ಆಯ್ಕೆ..!!

Next Post

ಮಾಹೆಯ ಮಣಿಪಾಲ್‌ ಸೆಂಟರ್‌ ಫಾರ್‌ ಬಯೋಥೆರಾಪಿಟಿಕ್ಸ್‌ ರಿಸರ್ಚ್‌  ವತಿಯಿಂದ    ಎಫ್‌ಪಿಎಲ್‌ಸಿ ಮತ್ತು ಬಯೋ-ಎಲ್‌ಸಿ ತಂತ್ರಜ್ಞಾನದ ಕಾರ್ಯಾಗಾರ ಉದ್ಘಾಟನೆ..!!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post

ಮಾಹೆಯ ಮಣಿಪಾಲ್‌ ಸೆಂಟರ್‌ ಫಾರ್‌ ಬಯೋಥೆರಾಪಿಟಿಕ್ಸ್‌ ರಿಸರ್ಚ್‌  ವತಿಯಿಂದ    ಎಫ್‌ಪಿಎಲ್‌ಸಿ ಮತ್ತು ಬಯೋ-ಎಲ್‌ಸಿ ತಂತ್ರಜ್ಞಾನದ ಕಾರ್ಯಾಗಾರ ಉದ್ಘಾಟನೆ..!!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಏಪ್ರಿಲ್ 1ರಿಂದ ರಾಷ್ಟ್ರೀಯ ಹೆದ್ದಾರಿ ಟೋಲ್ ದರ ಏರಿಕೆ

ಏಪ್ರಿಲ್ 1ರಿಂದ ರಾಷ್ಟ್ರೀಯ ಹೆದ್ದಾರಿ ಟೋಲ್ ದರ ಏರಿಕೆ

24/03/2026
ರಘುಪತಿ ಭಟ್ ಧರಣಿಗೆ ಒಂದೇ ದಿನದಲ್ಲಿ ಯಶಸ್ಸು: ರೆಸಾರ್ಟ್ ಏಕವಿನ್ಯಾಸ ನಕ್ಷೆ ಮಂಜೂರು

ರಘುಪತಿ ಭಟ್ ಧರಣಿಗೆ ಒಂದೇ ದಿನದಲ್ಲಿ ಯಶಸ್ಸು: ರೆಸಾರ್ಟ್ ಏಕವಿನ್ಯಾಸ ನಕ್ಷೆ ಮಂಜೂರು

24/03/2026
ಆರೋಗ್ಯ ಕೇಂದ್ರದಲ್ಲಿ ತೆರಿಗೆ ಪಾವತಿ ಕೇಂದ್ರ ಕಾಮಗಾರಿ: ಆರೋಗ್ಯ ಇಲಾಖೆ ಆಕ್ಷೇಪ – ಕಾಮಗಾರಿ ಸ್ಥಗಿತಕ್ಕೆ ಸೂಚನೆ

ಆರೋಗ್ಯ ಕೇಂದ್ರದಲ್ಲಿ ತೆರಿಗೆ ಪಾವತಿ ಕೇಂದ್ರ ಕಾಮಗಾರಿ: ಆರೋಗ್ಯ ಇಲಾಖೆ ಆಕ್ಷೇಪ – ಕಾಮಗಾರಿ ಸ್ಥಗಿತಕ್ಕೆ ಸೂಚನೆ

24/03/2026
ಧರ್ಮಾಂತರಗೊಂಡವರಿಗೆ ಎಸ್‌ಸಿ, ಎಸ್ಟಿ ಸ್ಥಾನಮಾನ ಅನ್ವಯಿಸುವುದಿಲ್ಲ: ಸುಪ್ರೀಂ ಕೋರ್ಟ್ ಸ್ಪಷ್ಟನೆ

ಧರ್ಮಾಂತರಗೊಂಡವರಿಗೆ ಎಸ್‌ಸಿ, ಎಸ್ಟಿ ಸ್ಥಾನಮಾನ ಅನ್ವಯಿಸುವುದಿಲ್ಲ: ಸುಪ್ರೀಂ ಕೋರ್ಟ್ ಸ್ಪಷ್ಟನೆ

24/03/2026

Recent News

ಏಪ್ರಿಲ್ 1ರಿಂದ ರಾಷ್ಟ್ರೀಯ ಹೆದ್ದಾರಿ ಟೋಲ್ ದರ ಏರಿಕೆ

ಏಪ್ರಿಲ್ 1ರಿಂದ ರಾಷ್ಟ್ರೀಯ ಹೆದ್ದಾರಿ ಟೋಲ್ ದರ ಏರಿಕೆ

24/03/2026
ರಘುಪತಿ ಭಟ್ ಧರಣಿಗೆ ಒಂದೇ ದಿನದಲ್ಲಿ ಯಶಸ್ಸು: ರೆಸಾರ್ಟ್ ಏಕವಿನ್ಯಾಸ ನಕ್ಷೆ ಮಂಜೂರು

ರಘುಪತಿ ಭಟ್ ಧರಣಿಗೆ ಒಂದೇ ದಿನದಲ್ಲಿ ಯಶಸ್ಸು: ರೆಸಾರ್ಟ್ ಏಕವಿನ್ಯಾಸ ನಕ್ಷೆ ಮಂಜೂರು

24/03/2026
ಆರೋಗ್ಯ ಕೇಂದ್ರದಲ್ಲಿ ತೆರಿಗೆ ಪಾವತಿ ಕೇಂದ್ರ ಕಾಮಗಾರಿ: ಆರೋಗ್ಯ ಇಲಾಖೆ ಆಕ್ಷೇಪ – ಕಾಮಗಾರಿ ಸ್ಥಗಿತಕ್ಕೆ ಸೂಚನೆ

ಆರೋಗ್ಯ ಕೇಂದ್ರದಲ್ಲಿ ತೆರಿಗೆ ಪಾವತಿ ಕೇಂದ್ರ ಕಾಮಗಾರಿ: ಆರೋಗ್ಯ ಇಲಾಖೆ ಆಕ್ಷೇಪ – ಕಾಮಗಾರಿ ಸ್ಥಗಿತಕ್ಕೆ ಸೂಚನೆ

24/03/2026
ಧರ್ಮಾಂತರಗೊಂಡವರಿಗೆ ಎಸ್‌ಸಿ, ಎಸ್ಟಿ ಸ್ಥಾನಮಾನ ಅನ್ವಯಿಸುವುದಿಲ್ಲ: ಸುಪ್ರೀಂ ಕೋರ್ಟ್ ಸ್ಪಷ್ಟನೆ

ಧರ್ಮಾಂತರಗೊಂಡವರಿಗೆ ಎಸ್‌ಸಿ, ಎಸ್ಟಿ ಸ್ಥಾನಮಾನ ಅನ್ವಯಿಸುವುದಿಲ್ಲ: ಸುಪ್ರೀಂ ಕೋರ್ಟ್ ಸ್ಪಷ್ಟನೆ

24/03/2026
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved