ತೀರ್ಥಹಳ್ಳಿ:ಜುಲೈ 26:ರಾಷ್ಟ್ರೀಯ ಹೆದ್ದಾರಿ 169ಎ ಕುರುವಳ್ಳಿ – ಬಾಳೆಬೈಲು ಬೈಪಾಸ್ ರಸ್ತೆಯಲ್ಲಿ ಮತ್ತೆ ನಿಧಾನ ರೀತಿಯಲ್ಲಿ ಮಣ್ಣು ಜರಿಯುತ್ತಿರುವ ಕಾರಣದಿಂದ ಮುಂಜಾಗ್ರತಾ ಕ್ರಮವಾಗಿ ರಸ್ತೆಯಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ.
ಈಗಾಗಲೇ ತಡೆಗೋಡೆ ಕುಸಿದು ಮಣ್ಣು ರಸ್ತೆಯ ಮೇಲೆ ಬಂದಿತ್ತು. ಆದರೂ ಈ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿ ಕೊಡಲಾಗಿತ್ತು. ಆದರೆ ನಿರಂತರ ಗಾಳಿ ಹಾಗೂ ಮಳೆಯ ಅಬ್ಬರದಿಂದ ಮತ್ತೆ ಮಣ್ಣು ಜರಿಯಲು ಆರಂಭವಾಗಿದ್ದು ವಾಹನ ಚಾಲಕರಿಗೆ ಮತ್ತು ಸಾರ್ವಜನಿಕರಿಗೆ ತೊಂದರೆ ಆಗಬಾರದು ಎಂಬ ಕಾರಣದಿಂದ ಮುಂಜಾಗ್ರತಾ ಕ್ರಮವಾಗಿ ವಾಹನ ಸಂಚಾರವನ್ನು ಬ್ಯಾರಿಕೆಡ್ ಹಾಕಿ ಬಂದ್ ಮಾಡಲಾಗಿದೆ.
ಸ್ಥಳದಲ್ಲಿ ತೀರ್ಥಹಳ್ಳಿ ಡಿವೈಎಸ್’ಪಿ ಗಜಾನನ ವಾಮನ ಸುತಾರ, ರಾಷ್ಟ್ರೀಯ ಹೆದ್ದಾರಿ ಇಂಜಿನಿಯರ್ ನವೀನ್ ರಾಜ್ ಸೇರಿದಂತೆ ಅನೇಕ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಂ ಹೂಡಿದ್ದಾ








