ಉಡುಪಿ, ಅ. 14: ನವರಾತ್ರಿ ಹಾಗೂ ದಸರಾ ಹಬ್ಬದ ಪ್ರಯುಕ್ತ ಉಡುಪಿ ಬಡಗುಪೇಟೆಯಲ್ಲಿರುವ ಪ್ರಸಿದ್ಧ ನ್ಯೂ ನೊವೆಲ್ಟಿ ಜುವೆಲರ್ಸ್ ಗ್ರಾಹಕರಿಗಾಗಿ ವಿಶೇಷ ರಿಯಾಯಿತಿ ಕೊಡುಗೆಗಳನ್ನು ಘೋಷಿಸಿದೆ.
ಚಿನ್ನ, ವಜ್ರ ಹಾಗೂ ಬೆಳ್ಳಿ ಆಭರಣಗಳ ಖರೀದಿಯನ್ನು ಉತ್ತೇಜಿಸುವ ಉದ್ದೇಶದಿಂದ ವಿವಿಧ ಆಕರ್ಷಕ ಕೊಡುಗೆಗಳನ್ನು ಸಂಸ್ಥೆ ಪರಿಚಯಿಸಿದೆ. 10 ಗ್ರಾಂ ಚಿನ್ನಾಭರಣಗಳ ಖರೀದಿಗೆ ₹7,500 ಫ್ಲಾಟ್ ರಿಯಾಯಿತಿ, ಒಂದು ಕ್ಯಾರೆಟ್ ವಜ್ರಾಭರಣಗಳ ಖರೀದಿಗೆ ₹7,500 ಫ್ಲಾಟ್ ರಿಯಾಯಿತಿ ಹಾಗೂ ಒಂದು ಕಿಲೋ ಬೆಳ್ಳಿ ಸಾಮಗ್ರಿಗಳ ಖರೀದಿಗೆ ₹7,500 ಫ್ಲಾಟ್ ರಿಯಾಯಿತಿ ನೀಡಲಾಗುತ್ತಿದೆ. ಇದರೊಂದಿಗೆ ಬೆಳ್ಳಿ ಆಭರಣಗಳ ಖರೀದಿಗೆ ಶೇ. 5ರಷ್ಟು ರಿಯಾಯಿತಿಯೂ ಲಭ್ಯವಿದೆ.
ಅಕ್ಟೋಬರ್ 11ರಿಂದ ಆರಂಭಗೊಂಡಿರುವ ಈ ವಿಶೇಷ ಕೊಡುಗೆ ಅಕ್ಟೋಬರ್ 22ರವರೆಗೆ ಇರಲಿದೆ.
ಏಳು ದಶಕಗಳಿಗೂ ಮಿಕ್ಕಿ ಚಿನ್ನಾಭರಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ನ್ಯೂ ನೊವೆಲ್ಟಿ ಜುವೆಲರ್ಸ್ ಗ್ರಾಹಕರ ವಿಶ್ವಾಸಕ್ಕೆ ಪಾತ್ರವಾದ ಸಂಸ್ಥೆಯಾಗಿದೆ. ಇಲ್ಲಿ 916 ಪರಿಶುದ್ಧ ಹಾಲ್ಮಾರ್ಕ್ ಚಿನ್ನಾಭರಣಗಳು, ವಜ್ರಾಭರಣಗಳು, ಹರಳುಗಳು ಹಾಗೂ ಬೆಳ್ಳಿ ಸಾಮಗ್ರಿಗಳ ವೈವಿಧ್ಯಮಯ ಸಂಗ್ರಹ ಲಭ್ಯವಿದೆ.
ಮದುವೆ ಸೇರಿದಂತೆ ವಿವಿಧ ಶುಭ ಸಮಾರಂಭಗಳಿಗೆ ಅಗತ್ಯವಿರುವ ವಿಶೇಷ ಆಭರಣಗಳ ಜೊತೆಗೆ, ಗ್ರಾಹಕರ ಅಭಿರುಚಿಗೆ ತಕ್ಕಂತೆ ಆಭರಣಗಳನ್ನು ವಿನ್ಯಾಸಗೊಳಿಸಿ ತಯಾರಿಸಿಕೊಡುವ ವ್ಯವಸ್ಥೆಯೂ ಇದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.








