ಕುಂದಾಪುರ, ಅ. 14: ಹಳ್ನಾಡು ಗ್ರಾಮದ ಶಂಕರ ಆಚಾರ್ಯ (36) ಎಂಬವರು ನಾಪತ್ತೆಯಾಗಿರುವ ಕುರಿತು ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಂಕರ ಆಚಾರ್ಯ ಅವರು ಇಂಟೀರಿಯರ್ ಕೆಲಸ ಮಾಡಿಕೊಂಡಿದ್ದು, ಅ. 13ರಂದು ಬೆಳಿಗ್ಗೆ 10.30ಕ್ಕೆ ಕೆಲಸದ ನಿಮಿತ್ತ ಸಾಲಿಗ್ರಾಮಕ್ಕೆ ಹೋಗುವುದಾಗಿ ತಿಳಿಸಿ, ಸ್ವಿಫ್ಟ್ ಕಾರಿನಲ್ಲಿ ಮನೆಯಿಂದ ತೆರಳಿದ್ದರು.
ಬಳಿಕ ಅವರ ಪತ್ನಿ ಪ್ರಮೀಳಾ (33) ಹಲವು ಬಾರಿ ಮೊಬೈಲ್ಗೆ ಕರೆ ಮಾಡಿದಾಗ ಸ್ವಿಚ್ ಆಫ್ ಆಗಿತ್ತು. ಸಂಬಂಧಿಕರು, ಸ್ನೇಹಿತರು ಹಾಗೂ ಮನೆಯ ಸುತ್ತಮುತ್ತ ಹುಡುಕಾಡಿದರೂ ಶಂಕರ ಆಚಾರ್ಯ ಅವರ ಸುಳಿವು ಪತ್ತೆಯಾಗಿಲ್ಲ.
ಈ ಕುರಿತು ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಗಂಡಸು ಕಾಣೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.







