ಬೈಂದೂರು, ಅ. 14: ಕೆರ್ಗಾಲ್ ಗ್ರಾಮ ಶಂಕರ ದೇವಾಡಿಗ (ವಯಸ್ಸು 37) ಎಂಬವರು ನಾಪತ್ತೆಯಾಗಿರುವ ಕುರಿತು ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅ. 11ರಂದು ಬೆಳಿಗ್ಗೆ ತಮ್ಮ ಮೂಲ ಮನೆ ಮೊಗೇರಿ, ಕೆರ್ಗಾಲಿಗೆ ಹೋಗಿ ಬರುವುದಾಗಿ ಮನೆಯಿಂದ ತೆರಳಿದ್ದ ಅವರು, ಬೆಳಿಗ್ಗೆ 11.30ರ ವೇಳೆಗೆ ಮನೆಗೆ ವಾಪಸ್ಸಾಗುವುದಾಗಿ ತಿಳಿಸಿದ್ದರು. ಆದರೆ, ಮನೆಗೆ ಮರಳದೆ ಹಾಗೂ ಸಂಬಂಧಿಕರ ಮನೆಗೂ ತೆರಳದೆ ನಾಪತ್ತೆಯಾಗಿದ್ದಾರೆ ಎಂದು ಅವರ ಪುತ್ರ ಸುಕುಮಾರ್ ದೇವಾಡಿಗ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಕುರಿತು ಬೈಂದೂರು ಪೊಲೀಸ್ ಠಾಣೆಯಲ್ಲಿ ಗಂಡಸು ಕಾಣೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.







