Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

ಡಲ್ಲಾಸ್‌ನಲ್ಲಿ ದೇಶೀಯ ಗೋಶಾಲೆಗೆ ಪುತ್ತಿಗೆ ಶ್ರೀಗಳ ಭೇಟಿ – ಗೋಸಂರಕ್ಷಣಾ ಕಾರ್ಯಕ್ಕೆ ಮೆಚ್ಚುಗೆ

ವಿದೇಶದಲ್ಲಿಯೂ  ಭಾರತೀಯ ಸಂಸ್ಕೃತಿ ಮತ್ತು ಗೋಸಂರಕ್ಷಣೆಗೆ ಆದ್ಯತೆ ನೀಡುತ್ತಿರುವುದು ಶ್ಲಾಘನೀಯ: ಪುತ್ತಿಗೆ ಶ್ರೀಗಳು

Dhrishya News by Dhrishya News
14/10/2026
in ಸುದ್ದಿಗಳು
0
ಡಲ್ಲಾಸ್‌ನಲ್ಲಿ ದೇಶೀಯ ಗೋಶಾಲೆಗೆ ಪುತ್ತಿಗೆ ಶ್ರೀಗಳ ಭೇಟಿ – ಗೋಸಂರಕ್ಷಣಾ ಕಾರ್ಯಕ್ಕೆ ಮೆಚ್ಚುಗೆ
0
SHARES
14
VIEWS
Share on FacebookShare on Twitter

ಡಲ್ಲಾಸ್ (ಅಮೆರಿಕ): ಉಡುಪಿ ಶ್ರೀಕೃಷ್ಣ ಮಠದ ಪರ್ಯಾಯೋತ್ತರ ವಿಶ್ವಸಂಚಾರದಲ್ಲಿರುವ ಪರಮಪೂಜ್ಯ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಡಲ್ಲಾಸ್ ಸಮೀಪದ ದೇಶೀಯ ಗೋಶಾಲೆಗೆ ಭೇಟಿ ನೀಡಿ, ಗೋಸಂರಕ್ಷಣಾ ಕಾರ್ಯವನ್ನು ವೀಕ್ಷಿಸಿ ಸಂತಸ ವ್ಯಕ್ತಪಡಿಸಿದರು.

ಭಾರತೀಯ ಮೂಲದ ಐಟಿ ಎಂಜಿನಿಯರ್ ಶ್ರೀ ವಿಶ್ವನಾಥ ಶರ್ಮಾ ಅವರು ತಮ್ಮ ಸ್ನೇಹಿತರ ಸಹಕಾರದೊಂದಿಗೆ ಸುಮಾರು 100 ಎಕರೆ ವಿಸ್ತೀರ್ಣದ, ವಿಶಾಲ ಜಲಾಶಯ ಹಾಗೂ ನಿಸರ್ಗರಮ್ಯ ಪರಿಸರವನ್ನು ಹೊಂದಿರುವ ಪ್ರದೇಶದಲ್ಲಿ ಅತ್ಯಂತ ಪರಿಶ್ರಮದಿಂದ ಈ ಗೋಶಾಲೆಯನ್ನು ನಿರ್ಮಿಸಿದ್ದಾರೆ.

ಭಾರತೀಯ ದೇಶೀಯ ಗೋತಳಿಗಳ ಸಂರಕ್ಷಣೆ, ಅವುಗಳ ಮಹತ್ವದ ಕುರಿತು ಜನಜಾಗೃತಿ ಮೂಡಿಸುವುದು ಹಾಗೂ ಭಾರತೀಯ ಸನಾತನ ಸಂಸ್ಕೃತಿಯ ಗೋಸೇವಾ ಪರಂಪರೆಯನ್ನು ವಿದೇಶದಲ್ಲಿಯೂ ಉಳಿಸಿ ಬೆಳೆಸುವುದು ಈ ಗೋಶಾಲೆಯ ಪ್ರಮುಖ ಉದ್ದೇಶವಾಗಿದೆ.

ಶ್ರೀ ವಿಶ್ವನಾಥ ಶರ್ಮಾ ಅವರು ಪೂಜ್ಯ ಶ್ರೀಪಾದರನ್ನು ಅತ್ಯಂತ ಭಕ್ತಿಗೌರವದಿಂದ ಸ್ವಾಗತಿಸಿ, ಗೋಶಾಲೆಯ ವಿವಿಧ ಚಟುವಟಿಕೆಗಳನ್ನು ಪರಿಚಯಿಸಿ ಆಶೀರ್ವಾದ ಪಡೆದರು.

ಈ ಸಂದರ್ಭದಲ್ಲಿ ಅನುಗ್ರಹ ಸಂದೇಶ ನೀಡಿದ ಶ್ರೀಪಾದರು, “ಗಾವೋ ವಿಶ್ವಸ್ಯ ಮಾತರಃ” – ಗೋವುಗಳು ವಿಶ್ವಕ್ಕೇ ತಾಯಂದಿರು. ಗೋಮಾತೆಯ ಸಂರಕ್ಷಣೆ ನಮ್ಮೆಲ್ಲರ ಪವಿತ್ರ ಕರ್ತವ್ಯ. ವಿದೇಶದಲ್ಲಿದ್ದರೂ ಭಾರತೀಯ ಸಂಸ್ಕೃತಿ ಮತ್ತು ಗೋಸಂರಕ್ಷಣೆಯ ಮಹತ್ವವನ್ನು ಅರಿತು, ಇಂತಹ ಮಹತ್ತರ ಸೇವಾಕಾರ್ಯವನ್ನು ಕೈಗೊಂಡಿರುವುದು ಅತ್ಯಂತ ಸಂತೋಷದ ಸಂಗತಿ. ನಿಮ್ಮ ಪರಿಶ್ರಮ ಇನ್ನಷ್ಟು ಯಶಸ್ವಿಯಾಗಿ, ಗೋಸಂರಕ್ಷಣೆಯ ಸಂದೇಶ ಎಲ್ಲೆಡೆ ತಲುಪುವಂತಾಗಲಿ. ಅಮೆರಿಕದಲ್ಲಿ ಇಂತಹ ಗೋಶಾಲೆಗಳನ್ನು ಸ್ಥಾಪಿಸಿ ಗೋಸೇವೆ ಮಾಡುತ್ತಿರುವ ಭಾರತೀಯರೆಲ್ಲರೂ ಅಭಿನಂದನಾರ್ಹರು” ಎಂದು ಶ್ಲಾಘಿಸಿ, ಮಂತ್ರಾಕ್ಷತೆ ನೀಡಿ ಹರಸಿದರು.

ಗೋಶಾಲೆಯಲ್ಲಿ ಸಂರಕ್ಷಿಸಲ್ಪಟ್ಟಿರುವ ದೇಶೀಯ ಗೋವುಗಳನ್ನು ವೀಕ್ಷಿಸಿದ ಶ್ರೀಪಾದರು ವಿಶೇಷ ಸಂತಸ ವ್ಯಕ್ತಪಡಿಸಿದರು. ಇದೇ ಗೋಶಾಲೆಯ ಸಮೀಪದಲ್ಲಿ ಶ್ರೀಕೃಷ್ಣ ಮಂದಿರವೊಂದನ್ನು ನಿರ್ಮಿಸುವ ಸಂಕಲ್ಪದ ಬಗ್ಗೆಯೂ ತಮ್ಮ ಇಂಗಿತವನ್ನು ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಶ್ರೀ ಪುತ್ತಿಗೆ ಮಠದ ದಿವಾನರಾದ ಶ್ರೀ ನಾಗರಾಜಾಚಾರ್ಯ, ಅಂತಾರಾಷ್ಟ್ರೀಯ ಕಾರ್ಯದರ್ಶಿ ಶ್ರೀ ಪ್ರಸನ್ನಾಚಾರ್ಯ, ಶ್ರೀ ಪ್ರಮೋದ್ ವಿಟ್ಟಲ್ ಶ್ರೀ ಪಿ. ಎಸ್. ಆಚಾರ್ಯ ಹಾಗೂ ಇತರ ಭಕ್ತರು ಉಪಸ್ಥಿತರಿದ್ದರು.

ಅಮೆರಿಕದ ನೆಲದಲ್ಲಿ ಭಾರತೀಯ ಗೋಸಂರಕ್ಷಣೆಯ ಪರಂಪರೆಯನ್ನು ಉಳಿಸಿ ಬೆಳೆಸುತ್ತಿರುವ ಈ ಸೇವಾಕಾರ್ಯಕ್ಕೆ ಪೂಜ್ಯ ಶ್ರೀಪಾದರ ಭೇಟಿ ಮತ್ತು ಆಶೀರ್ವಾದ ವಿಶೇಷ ಪ್ರೇರಣೆ ನೀಡಿತು.

Previous Post

ಜಿ.ಪಂ., ತಾ.ಪಂ., ಗ್ರಾ.ಪಂ. ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಲು ಕುತ್ಯಾರು ನವೀನ್ ಶೆಟ್ಟಿ ಕರೆ

Next Post

ನ್ಯೂ ನೊವೆಲ್ಟಿ ಜುವೆಲರ್ಸ್‌ನಲ್ಲಿ ಹಬ್ಬದ ಪ್ರಯುಕ್ತ ವಿಶೇಷ ಆಫರ್

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ನ್ಯೂ ನೊವೆಲ್ಟಿ ಜುವೆಲರ್ಸ್‌ನಲ್ಲಿ ಹಬ್ಬದ ಪ್ರಯುಕ್ತ ವಿಶೇಷ ಆಫರ್

ನ್ಯೂ ನೊವೆಲ್ಟಿ ಜುವೆಲರ್ಸ್‌ನಲ್ಲಿ ಹಬ್ಬದ ಪ್ರಯುಕ್ತ ವಿಶೇಷ ಆಫರ್

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 24k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಮೈಸೂರಿನಲ್ಲಿ ನಡೆದ ದಸರಾ ಕ್ರೀಡಾಕೂಟ–ಸಿಎಂ ಕಪ್ 2026 : ಮಾಹೆಯ ಕರಾಟೆ ಕ್ರೀಡಾಪಟುಗಳಿಗೆ ಚಿನ್ನ ಮತ್ತು ಕಂಚಿನ ಪದಕ

ಮೈಸೂರಿನಲ್ಲಿ ನಡೆದ ದಸರಾ ಕ್ರೀಡಾಕೂಟ–ಸಿಎಂ ಕಪ್ 2026 : ಮಾಹೆಯ ಕರಾಟೆ ಕ್ರೀಡಾಪಟುಗಳಿಗೆ ಚಿನ್ನ ಮತ್ತು ಕಂಚಿನ ಪದಕ

15/10/2026
ಮಾಹೆ ನೇಚರ್ ಕಾನ್ಫರೆನ್ಸ್’ 2ನೇ ದಿನ: ಸಾಂಕ್ರಾಮಿಕ ರೋಗಗಳ ಕಣ್ಗಾವಲು, ಲಸಿಕಾ ಸ್ವಾವಲಂಬನೆ ಹಾಗೂ ಡಯಾಗ್ನೋಸ್ಟಿಕ್ ಪ್ರಗತಿಗೆ ಒತ್ತು

ಮಾಹೆ ನೇಚರ್ ಕಾನ್ಫರೆನ್ಸ್’ 2ನೇ ದಿನ: ಸಾಂಕ್ರಾಮಿಕ ರೋಗಗಳ ಕಣ್ಗಾವಲು, ಲಸಿಕಾ ಸ್ವಾವಲಂಬನೆ ಹಾಗೂ ಡಯಾಗ್ನೋಸ್ಟಿಕ್ ಪ್ರಗತಿಗೆ ಒತ್ತು

15/10/2026
ಬೆಂಗಳೂರಿನಲ್ಲಿ ‘ಟೈಮ್ಸ್ ಹೈಯರ್ ಎಜುಕೇಶನ್ ಏಷ್ಯಾ ಯೂನಿವರ್ಸಿಟೀಸ್ ಶೃಂಗಸಭೆ 2027’: ಭಾರತದ ಮೊದಲ ಆವೃತ್ತಿಗೆ ಮಾಹೆ ಆತಿಥ್ಯ

ಬೆಂಗಳೂರಿನಲ್ಲಿ ‘ಟೈಮ್ಸ್ ಹೈಯರ್ ಎಜುಕೇಶನ್ ಏಷ್ಯಾ ಯೂನಿವರ್ಸಿಟೀಸ್ ಶೃಂಗಸಭೆ 2027’: ಭಾರತದ ಮೊದಲ ಆವೃತ್ತಿಗೆ ಮಾಹೆ ಆತಿಥ್ಯ

15/10/2026
ವಾಲಿಬಾಲ್‌ನಲ್ಲಿ ಗೌತಮ್ ಆಚಾರ್ಯ ಸಾಧನೆ: ರಾಜ್ಯ ಮಟ್ಟಕ್ಕೆ ಆಯ್ಕೆ

ವಾಲಿಬಾಲ್‌ನಲ್ಲಿ ಗೌತಮ್ ಆಚಾರ್ಯ ಸಾಧನೆ: ರಾಜ್ಯ ಮಟ್ಟಕ್ಕೆ ಆಯ್ಕೆ

15/10/2026

Recent News

imunify-bot-check