ಉಡುಪಿ: ಭವಾನಿ ಬಿಲ್ಡರ್ಸ್ ಆ್ಯಂಡ್ ಡೆವಲಪರ್ಸ್ ಸಂಸ್ಥೆಯ ವತಿಯಿಂದ ಪರ್ಕಳ ಮಾರ್ಕೆಟ್ ಸರ್ಕಲ್ ಸಮೀಪ ನಿರ್ಮಿಸಲಾದ ನೂತನ ಭವಾನಿ ಎಮರಾಲ್ಡ್ ವಸತಿ ಸಮುಚ್ಚಯದ ಉದ್ಘಾಟನಾ ಸಮಾರಂಭ ಅಕ್ಟೋಬರ್ 16ರಂದು ಪೂರ್ವಾಹ್ನ 11.25ಕ್ಕೆ ನಡೆಯಲಿದೆ.
ಕಾರ್ಯಕ್ರಮದಲ್ಲಿ ಕಟಪಾಡಿ ಶ್ರೀ ಆನೆಗುಂದಿ ಸಂಸ್ಥಾನದ ಸರಸ್ವತಿ ಪೀಠದ ಶ್ರೀ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮಿಗಳು ಹಾಗೂ ಕಕ್ಕುಂಜೆ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಟ್ರಸ್ಟಿ, ನಾಗಪಾತ್ರಿ ನಾಗಾನಂದ ವಾಸುದೇವ ಆಚಾರ್ಯ ಅವರು ಆಶೀರ್ವಚನ ನೀಡಲಿದ್ದಾರೆ.
ಮಾಂಡವಿ ರಿಯಲ್ ಎಸ್ಟೇಟ್ ಆ್ಯಂಡ್ ಡೆವಲಪರ್ಸ್ನ ವ್ಯವಸ್ಥಾಪಕ ನಿರ್ದೇಶಕ ಡಾ. ಜೆರ್ರಿ ವಿನ್ಸೆಂಟ್ ಡಯಾಸ್ ಅವರು ವಸತಿ ಸಮುಚ್ಚಯವನ್ನು ಉದ್ಘಾಟಿಸಲಿದ್ದಾರೆ. ಬಡಗುಬೆಟ್ಟು ಕ್ರೆಡಿಟ್ ಕೋಆಪರೇಟಿವ್ ಸೊಸೈಟಿಯ ಅಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ ಉಪಸ್ಥಿತರಿರುವರು.
ಭವಾನಿ ಬಿಲ್ಡರ್ಸ್ ಸಂಸ್ಥೆಯು ಈಗಾಗಲೇ ಭವಾನಿ ರೂಬಿ ಪ್ಯಾಲೇಸ್, ಭವಾನಿ ರೆಡ್ ಕೋರಲ್, ಭವಾನಿ ರೆಸಿಡೆನ್ಸಿ ಹಾಗೂ ಭವಾನಿ ಹೆಸೋನೈಟ್ ಸೇರಿದಂತೆ ವಿವಿಧ ವಸತಿ ಯೋಜನೆಗಳನ್ನು ನಿರ್ಮಿಸಿದೆ. ಇದೀಗ ಭವಾನಿ ಎಮರಾಲ್ಡ್ ಯೋಜನೆಯೂ ಪೂರ್ಣಗೊಂಡಿದ್ದು, ವಾಸಕ್ಕೆ ಸಿದ್ಧವಾಗಿದೆ. ಈ ಯೋಜನೆಯಲ್ಲಿ ಕೆಲವೇ ಫ್ಲ್ಯಾಟ್ಗಳು ಮಾರಾಟಕ್ಕೆ ಲಭ್ಯವಿವೆ ಎಂದು ಸಂಸ್ಥೆಯ ಪ್ರವರ್ತಕರು ತಿಳಿಸಿದ್ದಾರೆ.
ಇದೇ ಸಂಸ್ಥೆಯ ಮುಂದಿನ ಯೋಜನೆಯಾದ ಭವಾನಿ ಪರ್ಲ್ ಸ್ಟೋನ್ ವಸತಿ ಸಮುಚ್ಚಯದ ಕಾಮಗಾರಿ ಮಣಿಪಾಲದ ಸರಳೇಬೆಟ್ಟಿನಲ್ಲಿ ಪ್ರಗತಿಯಲ್ಲಿದೆ. ಈ ಯೋಜನೆಯ ಫ್ಲ್ಯಾಟ್ಗಳ ಮುಂಗಡ ಬುಕ್ಕಿಂಗ್ಗೆ ನವರಾತ್ರಿ ಹಬ್ಬದ ಪ್ರಯುಕ್ತ ವಿಶೇಷ ರಿಯಾಯಿತಿ ಘೋಷಿಸಲಾಗಿದೆ.
ಹೆಚ್ಚಿನ ಮಾಹಿತಿ ಹಾಗೂ ಬುಕ್ಕಿಂಗ್ಗಾಗಿ www.bhavanibuilders.in ವೆಬ್ಸೈಟ್ ಸಂಪರ್ಕಿಸಬಹುದು ಎಂದು ಸಂಸ್ಥೆಯ ಪ್ರವರ್ತಕರಾದ ನಾರಾಯಣ ಆಚಾರ್, ಭವಾನಿ ನಾರಾಯಣ ಆಚಾರ್ ಹಾಗೂ ಪುನೀತ್ ಕುಮಾರ್ ತಿಳಿಸಿದ್ದಾರೆ.








