Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

ಬೆಂಗಳೂರಿನಲ್ಲಿ ‘ಟೈಮ್ಸ್ ಹೈಯರ್ ಎಜುಕೇಶನ್ ಏಷ್ಯಾ ಯೂನಿವರ್ಸಿಟೀಸ್ ಶೃಂಗಸಭೆ 2027’: ಭಾರತದ ಮೊದಲ ಆವೃತ್ತಿಗೆ ಮಾಹೆ ಆತಿಥ್ಯ

Dhrishya News by Dhrishya News
15/10/2026
in ಸುದ್ದಿಗಳು
0
ಬೆಂಗಳೂರಿನಲ್ಲಿ ‘ಟೈಮ್ಸ್ ಹೈಯರ್ ಎಜುಕೇಶನ್ ಏಷ್ಯಾ ಯೂನಿವರ್ಸಿಟೀಸ್ ಶೃಂಗಸಭೆ 2027’: ಭಾರತದ ಮೊದಲ ಆವೃತ್ತಿಗೆ ಮಾಹೆ ಆತಿಥ್ಯ
0
SHARES
6
VIEWS
Share on FacebookShare on Twitter

Manipal, October 15, 2026: ‘ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್’ (ಮಾಹೆ) ವಿಶ್ವವಿದ್ಯಾಲಯ ಎಂದು ಪರಿಗಣಿತವಾಗಿರುವ ಉತ್ಕೃಷ್ಟ ಸಂಸ್ಥೆಯು, ಭಾರತದಲ್ಲಿಯೇ ಮೊಟ್ಟಮೊದಲ ಬಾರಿಗೆ ನಡೆಯುತ್ತಿರುವ ಪ್ರತಿಷ್ಠಿತ ‘ಟೈಮ್ಸ್ ಹೈಯರ್ ಎಜುಕೇಶನ್ ಏಷ್ಯಾ ಯೂನಿವರ್ಸಿಟೀಸ್ ಶೃಂಗಸಭೆ 2027’ಗೆ ಆತಿಥ್ಯ ವಹಿಸಲಿದೆ. 2027ರ ಏಪ್ರಿಲ್ 20ರಿಂದ 22ರವರೆಗೆ ಮಾಹೆ ಬೆಂಗಳೂರು ಕ್ಯಾಂಪಸ್‌ನಲ್ಲಿ ಈ ಕಾರ್ಯಕ್ರಮ ನಡೆಯಲಿದೆ.

ಏಷ್ಯಾ ಮತ್ತು ವಿಶ್ವದಾದ್ಯಂತ ಉನ್ನತ ಶಿಕ್ಷಣ ಕ್ಷೇತ್ರದಲ್ಲಿನ ಬದಲಾಗುತ್ತಿರುವ ಆದ್ಯತೆಗಳ ಕುರಿತು ಚರ್ಚಿಸಲು ಹಾಗೂ ವಿಚಾರ ವಿನಿಮಯ ಮಾಡಿಕೊಳ್ಳಲು ವಿಶ್ವವಿದ್ಯಾಲಯಗಳ ನಾಯಕರು, ವಿದ್ವಾಂಸರು, ನೀತಿ ನಿರೂಪಕರು, ಸಂಶೋಧಕರು ಮತ್ತು ಉದ್ಯಮ ರಂಗದ ಪ್ರತಿನಿಧಿಗಳಿಗೆ ಈ ಶೃಂಗಸಭೆಯು ಒಂದು ಪ್ರಮುಖ ವೇದಿಕೆಯಾಗಲಿದೆ.

2027ರ ಶೃಂಗಸಭೆಯು “ಪ್ರತಿಭೆ, ಪರಿವರ್ತನೆ ಮತ್ತು ವಿಸ್ತಾರ: ವಿಸ್ತರಣೆಯ ಯುಗದಲ್ಲಿ ನಾಯಕತ್ವ” ಎಂಬ ವಿಷಯದಡಿ ನಡೆಯಲಿದೆ. ಉನ್ನತ ಶಿಕ್ಷಣದ ಹಾದಿಯಲ್ಲಿನ ಅವಕಾಶ ಮತ್ತು ಸವಾಲುಗಳಾದ ಪ್ರತಿಭಾ ಅಭಿವೃದ್ಧಿ, ತಾಂತ್ರಿಕ ಬದಲಾವಣೆ, ಅಂತಾರಾಷ್ಟ್ರೀಕರಣ, ಸಂಶೋಧನೆ ಮತ್ತು ಆವಿಷ್ಕಾರದ ಜತೆಗೆ ಜನಸಂಖ್ಯಾ ಪಲ್ಲಟ ಮತ್ತು ಹವಾಮಾನ ಬದಲಾವಣೆ ಕುರಿತು ಗಣ್ಯರು ಇಲ್ಲಿ ಬೆಳಕು ಚೆಲ್ಲಲಿದ್ದಾರೆ.

ಈ ಶೃಂಗಸಭೆಯ ಮತ್ತೊಂದು ಪ್ರಮುಖ ಆಕರ್ಷಣೆಯೆಂದರೆ, ‘ದಿ ಏಷ್ಯಾ ಯೂನಿವರ್ಸಿಟಿ ರ‍್ಯಾಂಕಿಂಗ್ಸ್ 2027’ರ ಪಟ್ಟಿಯನ್ನು ವೇದಿಕೆಯ ಮೇಲೆ ನೇರವಾಗಿ ಪ್ರಕಟಿಸುವುದು. ಇದರೊಂದಿಗೆ ‘ದಿ ಏಷ್ಯಾ ಅವಾರ್ಡ್ಸ್ 2027’ರ ಪ್ರಶಸ್ತಿ ಪ್ರದಾನ ಸಮಾರಂಭವೂ ನಡೆಯಲಿದ್ದು, ಏಷ್ಯಾ ವಲಯದಾದ್ಯಂತ ಇರುವ ಪ್ರಮುಖ ಶಿಕ್ಷಣ ಸಂಸ್ಥೆಗಳು ಮತ್ತು ಉನ್ನತ ಶಿಕ್ಷಣ ಕ್ಷೇತ್ರದ ಗಣ್ಯರನ್ನು ಈ ವೇದಿಕೆಯು ಒಂದೆಡೆ ಸೇರಿಸಲಿದೆ.

ಮಾಹೆ ಸಹ ಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್ ಅವರು ಮಾತನಾಡಿ, “ಭಾರತದಲ್ಲಿ ‘ಟೈಮ್ಸ್ ಹೈಯರ್ ಎಜುಕೇಶನ್ ಏಷ್ಯಾ ಯೂನಿವರ್ಸಿಟೀಸ್ ಶೃಂಗಸಭೆ’ಯನ್ನು ಆಯೋಜಿಸುತ್ತಿರುವುದು, ಜಾಗತಿಕ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ನಮ್ಮ ದೇಶದ ಬೆಳೆಯುತ್ತಿರುವ ಪ್ರಾಮುಖ್ಯತೆಯನ್ನು ಎತ್ತಿತೋರಿಸುತ್ತದೆ. ನಮ್ಮ ಬೆಂಗಳೂರು ಕ್ಯಾಂಪಸ್‌ನಲ್ಲಿ ಈ ಅಂತರರಾಷ್ಟ್ರೀಯ ಮಟ್ಟದ ಕಾರ್ಯಕ್ರಮಕ್ಕೆ ಆತಿಥ್ಯ ವಹಿಸುತ್ತಿರುವುದಕ್ಕೆ ಹಾಗೂ ಏಷ್ಯಾದಾದ್ಯಂತ ವಿಶ್ವವಿದ್ಯಾಲಯಗಳು, ಶಿಕ್ಷಣ ಮತ್ತು ಸಂಶೋಧನಾ ವಲಯದ ಭವಿಷ್ಯವನ್ನು ರೂಪಿಸಬಲ್ಲ ಮಹತ್ವದ ಚರ್ಚೆಗಳಲ್ಲಿ ಭಾಗವಹಿಸುತ್ತಿರುವುದಕ್ಕೆ ಮಾಹೆ ಹೆಮ್ಮೆಪಡುತ್ತದೆ,” ಎಂದು ಹರ್ಷ ವ್ಯಕ್ತಪಡಿಸಿದರು.

ಶೃಂಗಸಭೆಯ ಕುರಿತು ಮಾತನಾಡಿದ ಮಾಹೆಯ ಕುಲಪತಿ ಡಾ. ಶರತ್ ಕೆ. ರಾವ್, “ಮಾಹೆ ಬೆಂಗಳೂರಿನಲ್ಲಿ ‘ಟಿಎಚ್‌ಇ ಏಷ್ಯಾ ಯೂನಿವರ್ಸಿಟೀಸ್ ಶೃಂಗಸಭೆ 2027’ ಆಯೋಜಿಸುತ್ತಿರುವುದು, ಏಷ್ಯಾದಲ್ಲಿ ಉನ್ನತ ಶಿಕ್ಷಣದ ಭವಿಷ್ಯದ ಕುರಿತು ಅರ್ಥಪೂರ್ಣ ಸಂವಾದವನ್ನು ಉತ್ತೇಜಿಸಲು ದೊರೆತ ಒಂದು ಮಹತ್ವದ ಅವಕಾಶವಾಗಿದೆ. ಈ ಶೃಂಗಸಭೆಯು ಭಾರತದಲ್ಲಿ ಇದೇ ಮೊದಲ ಬಾರಿಗೆ ನಡೆಯುತ್ತಿದೆ, ಈ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿರುವ ಎಲ್ಲಾ ಗಣ್ಯರನ್ನು ಬೆಂಗಳೂರಿಗೆ ಸ್ವಾಗತಿಸಲು ಮತ್ತು ಜ್ಞಾನ ವಿನಿಮಯ, ಸಹಯೋಗ ಹಾಗೂ ನಾವೀನ್ಯತೆಗೆ ವಿಪುಲ ಅವಕಾಶಗಳನ್ನು ಸೃಷ್ಟಿಸಲು ಮಾಹೆ ಕಾತುರದಿಂದ ಕಾಯುತ್ತಿದೆ,” ಎಂದು ತಿಳಿಸಿದರು.

ಈ ಶೃಂಗಸಭೆಯು ಮಾಹೆ ಬೆಂಗಳೂರಿನ ತಂತ್ರಜ್ಞಾನ ಮತ್ತು ನಾವೀನ್ಯತೆಯ ಪರಿಸರವನ್ನು ಅನಾವರಣಗೊಳಿಸಲಿದೆ. ಅಂತರರಾಷ್ಟ್ರೀಯ ಪ್ರತಿನಿಧಿಗಳಿಗೆ ವಿಶ್ವವಿದ್ಯಾಲಯದ ಶೈಕ್ಷಣಿಕ ಹಾಗೂ ಸಂಶೋಧನಾ ವ್ಯವಸ್ಥೆಯೊಂದಿಗೆ ತೊಡಗಿಸಿಕೊಳ್ಳಲು ಇದೊಂದು ಮಹತ್ವದ ವೇದಿಕೆಯಾಗಲಿದೆ.

ಕಾರ್ಯಕ್ರಮದ ವಿವರಗಳು:

ಕಾರ್ಯಕ್ರಮ: ಟೈಮ್ಸ್ ಹೈಯರ್ ಎಜುಕೇಶನ್ (THE) ಏಷ್ಯಾ ಯೂನಿವರ್ಸಿಟೀಸ್ ಶೃಂಗಸಭೆ 2027
ದಿನಾಂಕ: 20–22 ಏಪ್ರಿಲ್ 2027
ಸ್ಥಳ: ಮಾಹೆ ಕ್ಯಾಂಪಸ್, ಗೋವಿಂದಪುರ, ಯಲಹಂಕ, ಬೆಂಗಳೂರು
ವಿಷಯ: ಪ್ರತಿಭೆ, ಪರಿವರ್ತನೆ ಮತ್ತು ವಿಸ್ತಾರ: ವಿಸ್ತರಣೆಯ ಯುಗದಲ್ಲಿ ನಾಯಕತ್ವ
ಆತಿಥ್ಯ: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ)
ಆಯೋಜಕರು: ಟೈಮ್ಸ್ ಹೈಯರ್ ಎಜುಕೇಶನ್ (THE)

ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ:

https://shorturl.at/oOQRi

ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಕುರಿತು:

ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ವಿಶ್ವವಿದ್ಯಾಲಯ ಎಂದು ಪರಿಗಣಿತವಾಗಿರುವ ಉತ್ಕೃಷ್ಟ ಸಂಸ್ಥೆಯಾಗಿದೆ. ಆರೋಗ್ಯ ವಿಜ್ಞಾನ, ನಿರ್ವಹಣೆ, ಕಾನೂನು, ಮಾನವಿಕ ಹಾಗೂ ಸಮಾಜ ವಿಜ್ಞಾನ, ತಂತ್ರಜ್ಞಾನ ಮತ್ತು ವಿಜ್ಞಾನ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ 400ಕ್ಕೂ ಹೆಚ್ಚು ವಿಶೇಷ ಕೋರ್ಸ್‌ಗಳನ್ನು ಮಾಹೆ ನೀಡುತ್ತಿದೆ. ಮಣಿಪಾಲ, ಮಂಗಳೂರು, ಬೆಂಗಳೂರು, ಜಂಶೆಡ್ಪುರ ಹಾಗೂ ದುಬೈ ಕ್ಯಾಂಪಸ್‌ಗಳ ಮೂಲಕ ಶಿಕ್ಷಣ, ಸಂಶೋಧನೆ ಮತ್ತು ಮೂಲಸೌಕರ್ಯ ಕ್ಷೇತ್ರಗಳಲ್ಲಿ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾಹೆ ವಿಶಿಷ್ಟ ಗುರುತನ್ನು ಸಂಪಾದಿಸಿದೆ. 2020ರಲ್ಲಿ ಭಾರತ ಸರ್ಕಾರದ ಶಿಕ್ಷಣ ಸಚಿವಾಲಯವು ಮಾಹೆಗೆ ಪ್ರತಿಷ್ಠಿತ ‘ಇನ್‌ಸ್ಟಿಟ್ಯೂಷನ್ ಆಫ್ ಎಮಿನೆನ್ಸ್’ ಮಾನ್ಯತೆಯನ್ನು ನೀಡಿದೆ. ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ ಚೌಕಟ್ಟಿನ (NIRF) 2025ರ ಶ್ರೇಯಾಂಕದಲ್ಲಿ ದೇಶದಲ್ಲಿ 3ನೇ ಸ್ಥಾನ ಪಡೆದಿರುವ ಮಾಹೆ, ಗುಣಮಟ್ಟದ ಶಿಕ್ಷಣ, ಸಮೃದ್ಧ ಕ್ಯಾಂಪಸ್ ಜೀವನ ಮತ್ತು ಜಾಗತಿಕ ಮಟ್ಟದ ವೃತ್ತಿ ಅವಕಾಶಗಳನ್ನು ಹುಡುಕುವ ವಿದ್ಯಾರ್ಥಿಗಳ ಆದ್ಯತೆಯ ತಾಣವಾಗಿದೆ.

Previous Post

ವಾಲಿಬಾಲ್‌ನಲ್ಲಿ ಗೌತಮ್ ಆಚಾರ್ಯ ಸಾಧನೆ: ರಾಜ್ಯ ಮಟ್ಟಕ್ಕೆ ಆಯ್ಕೆ

Next Post

ಮಾಹೆ ನೇಚರ್ ಕಾನ್ಫರೆನ್ಸ್’ 2ನೇ ದಿನ: ಸಾಂಕ್ರಾಮಿಕ ರೋಗಗಳ ಕಣ್ಗಾವಲು, ಲಸಿಕಾ ಸ್ವಾವಲಂಬನೆ ಹಾಗೂ ಡಯಾಗ್ನೋಸ್ಟಿಕ್ ಪ್ರಗತಿಗೆ ಒತ್ತು

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಮಾಹೆ ನೇಚರ್ ಕಾನ್ಫರೆನ್ಸ್’ 2ನೇ ದಿನ: ಸಾಂಕ್ರಾಮಿಕ ರೋಗಗಳ ಕಣ್ಗಾವಲು, ಲಸಿಕಾ ಸ್ವಾವಲಂಬನೆ ಹಾಗೂ ಡಯಾಗ್ನೋಸ್ಟಿಕ್ ಪ್ರಗತಿಗೆ ಒತ್ತು

ಮಾಹೆ ನೇಚರ್ ಕಾನ್ಫರೆನ್ಸ್’ 2ನೇ ದಿನ: ಸಾಂಕ್ರಾಮಿಕ ರೋಗಗಳ ಕಣ್ಗಾವಲು, ಲಸಿಕಾ ಸ್ವಾವಲಂಬನೆ ಹಾಗೂ ಡಯಾಗ್ನೋಸ್ಟಿಕ್ ಪ್ರಗತಿಗೆ ಒತ್ತು

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 24k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಮೈಸೂರಿನಲ್ಲಿ ನಡೆದ ದಸರಾ ಕ್ರೀಡಾಕೂಟ–ಸಿಎಂ ಕಪ್ 2026 : ಮಾಹೆಯ ಕರಾಟೆ ಕ್ರೀಡಾಪಟುಗಳಿಗೆ ಚಿನ್ನ ಮತ್ತು ಕಂಚಿನ ಪದಕ

ಮೈಸೂರಿನಲ್ಲಿ ನಡೆದ ದಸರಾ ಕ್ರೀಡಾಕೂಟ–ಸಿಎಂ ಕಪ್ 2026 : ಮಾಹೆಯ ಕರಾಟೆ ಕ್ರೀಡಾಪಟುಗಳಿಗೆ ಚಿನ್ನ ಮತ್ತು ಕಂಚಿನ ಪದಕ

15/10/2026
ಮಾಹೆ ನೇಚರ್ ಕಾನ್ಫರೆನ್ಸ್’ 2ನೇ ದಿನ: ಸಾಂಕ್ರಾಮಿಕ ರೋಗಗಳ ಕಣ್ಗಾವಲು, ಲಸಿಕಾ ಸ್ವಾವಲಂಬನೆ ಹಾಗೂ ಡಯಾಗ್ನೋಸ್ಟಿಕ್ ಪ್ರಗತಿಗೆ ಒತ್ತು

ಮಾಹೆ ನೇಚರ್ ಕಾನ್ಫರೆನ್ಸ್’ 2ನೇ ದಿನ: ಸಾಂಕ್ರಾಮಿಕ ರೋಗಗಳ ಕಣ್ಗಾವಲು, ಲಸಿಕಾ ಸ್ವಾವಲಂಬನೆ ಹಾಗೂ ಡಯಾಗ್ನೋಸ್ಟಿಕ್ ಪ್ರಗತಿಗೆ ಒತ್ತು

15/10/2026
ಬೆಂಗಳೂರಿನಲ್ಲಿ ‘ಟೈಮ್ಸ್ ಹೈಯರ್ ಎಜುಕೇಶನ್ ಏಷ್ಯಾ ಯೂನಿವರ್ಸಿಟೀಸ್ ಶೃಂಗಸಭೆ 2027’: ಭಾರತದ ಮೊದಲ ಆವೃತ್ತಿಗೆ ಮಾಹೆ ಆತಿಥ್ಯ

ಬೆಂಗಳೂರಿನಲ್ಲಿ ‘ಟೈಮ್ಸ್ ಹೈಯರ್ ಎಜುಕೇಶನ್ ಏಷ್ಯಾ ಯೂನಿವರ್ಸಿಟೀಸ್ ಶೃಂಗಸಭೆ 2027’: ಭಾರತದ ಮೊದಲ ಆವೃತ್ತಿಗೆ ಮಾಹೆ ಆತಿಥ್ಯ

15/10/2026
ವಾಲಿಬಾಲ್‌ನಲ್ಲಿ ಗೌತಮ್ ಆಚಾರ್ಯ ಸಾಧನೆ: ರಾಜ್ಯ ಮಟ್ಟಕ್ಕೆ ಆಯ್ಕೆ

ವಾಲಿಬಾಲ್‌ನಲ್ಲಿ ಗೌತಮ್ ಆಚಾರ್ಯ ಸಾಧನೆ: ರಾಜ್ಯ ಮಟ್ಟಕ್ಕೆ ಆಯ್ಕೆ

15/10/2026

Recent News

imunify-bot-check