Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

ಮಾಹೆ ನೇಚರ್ ಕಾನ್ಫರೆನ್ಸ್’ 2ನೇ ದಿನ: ಸಾಂಕ್ರಾಮಿಕ ರೋಗಗಳ ಕಣ್ಗಾವಲು, ಲಸಿಕಾ ಸ್ವಾವಲಂಬನೆ ಹಾಗೂ ಡಯಾಗ್ನೋಸ್ಟಿಕ್ ಪ್ರಗತಿಗೆ ಒತ್ತು

Dhrishya News by Dhrishya News
15/10/2026
in ಸುದ್ದಿಗಳು
0
ಮಾಹೆ ನೇಚರ್ ಕಾನ್ಫರೆನ್ಸ್’ 2ನೇ ದಿನ: ಸಾಂಕ್ರಾಮಿಕ ರೋಗಗಳ ಕಣ್ಗಾವಲು, ಲಸಿಕಾ ಸ್ವಾವಲಂಬನೆ ಹಾಗೂ ಡಯಾಗ್ನೋಸ್ಟಿಕ್ ಪ್ರಗತಿಗೆ ಒತ್ತು
0
SHARES
3
VIEWS
Share on FacebookShare on Twitter

ಮಣಿಪಾಲ, ಅಕ್ಟೋಬರ್ 15, 2026: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್‌ (ಮಾಹೆ) ವಿಶ್ವವಿದ್ಯಾಲಯ ಎಂದು ಪರಿಗಣಿತವಾಗಿರುವ ಉತ್ಕೃಷ್ಟ ಸಂಸ್ಥೆ ಆಯೋಜಿಸಿರುವ ‘ಮಾಹೆ ನೇಚರ್ ಕಾನ್ಫರೆನ್ಸ್’ನ ಎರಡನೇ ದಿನದ ಗೋಷ್ಠಿಗಳು ಸಾಂಕ್ರಾಮಿಕ ರೋಗಗಳ ಕಣ್ಗಾವಲು ಹಾಗೂ ಜಾಗತಿಕ ರೋಗನಿರೋಧಕ ಶಕ್ತಿಯ ಮಾಪನದಂತಹ ಹೊಸ ವಿಧಾನಗಳ ಮೇಲೆ ಬೆಳಕು ಚೆಲ್ಲಿದವು. “ಬದಲಾಗುತ್ತಿರುವ ಜಗತ್ತಿನಲ್ಲಿ ಸಾಂಕ್ರಾಮಿಕ ರೋಗಗಳ ಸವಾಲುಗಳನ್ನು ಎದುರಿಸುವುದು” ಎಂಬ ವಿಷಯ ಆಧರಿತ ಎರಡು ದಿನದ ಈ ಸಮ್ಮೇಳನವು, ಭವಿಷ್ಯದ ಸಾಂಕ್ರಾಮಿಕಗಳನ್ನು ಎದುರಿಸುವ ನಿಟ್ಟಿನಲ್ಲಿ ಅಗತ್ಯವಿರುವ ಸುಧಾರಿತ ಸಿದ್ಧತೆಗಳ ಕುರಿತು ಚರ್ಚಿಸಲು ಜಾಗತಿಕ ತಜ್ಞರಿಗೆ ವೇದಿಕೆಯೊದಗಿಸಿದೆ.

ಎರಡನೇ ದಿನದ ಮೊದಲ ಗೋಷ್ಠಿಯಲ್ಲಿ ಎಂಐಟಿ ಸ್ಲೋನ್ ಸ್ಕೂಲ್‌ನ ಡಾ. ಮೈಕೆಲ್ ಮಿನಾ ಅವರು “ಸಾಂಕ್ರಾಮಿಕ ರೋಗಗಳ ಕಣ್ಗಾವಲು ಮತ್ತು ಲಸಿಕಾ ಕಾರ್ಯಕ್ರಮಗಳನ್ನು ಬೆಂಬಲಿಸಲು ಜಾಗತಿಕ ಇಮ್ಯುನೊಲಾಜಿಕಲ್ ಅಬ್ಸರ್ವೇಟರಿ” ಕುರಿತು ಮಾತನಾಡಿದರು. ಕೇವಲ ಸೋಂಕಿತರ ಸಂಖ್ಯೆಯನ್ನು ಗಮನಿಸುವ ಬದಲು, ಸಮುದಾಯದಲ್ಲಿ ನಿಯಮಿತವಾಗಿ ರೋಗನಿರೋಧಕಗಳನ್ನು ಪರೀಕ್ಷಿಸುವುದರಿಂದ ಹಿಂದಿನ ಸೋಂಕಿನ ಇತಿಹಾಸ ಹಾಗೂ ದೇಹದ ರೋಗನಿರೋಧಕ ಸಾಮರ್ಥ್ಯವನ್ನು ಹೆಚ್ಚು ನಿಖರವಾಗಿ ಅರ್ಥಮಾಡಿಕೊಳ್ಳಬಹುದು ಎಂಬುದನ್ನು ಅವರು ವಿವರಿಸಿದರು.

ಮತ್ತೊಂದು ಗೋಷ್ಠಿಯಲ್ಲಿ ರ್ವಾಂಡಾದಲ್ಲಿನ ಇಂಟರ್ನ್ಯಾಷನಲ್ ವ್ಯಾಕ್ಸಿನ್ ಇನ್‌ಸ್ಟಿಟ್ಯೂಟ್‌ನ ಆಫ್ರಿಕಾ ಪ್ರಾದೇಶಿಕ ಕಚೇರಿಯ ಡಾ. ನಿಕೈಸ್ ಎನ್ಡೆಂಬಿ ಅವರು, “ಆಫ್ರಿಕಾದ ಲಸಿಕಾ ಸ್ವಾವಲಂಬನೆ ಹಾಗೂ ಆರೋಗ್ಯ ಭದ್ರತೆಯ ಬಲವರ್ಧನೆ” ಕುರಿತು ಮಾತನಾಡಿದರು. ಆಮದು ಲಸಿಕೆಗಳ ಮೇಲೆ ಆಫ್ರಿಕಾ ಹೇಗೆ ಅವಲಂಬಿತವಾಗಿದೆ ಎಂಬುದನ್ನು ವಿವರಿಸಿದ ಅವರು, 2040ರ ಹೊತ್ತಿಗೆ ಶೇ. 60ರಷ್ಟು ಲಸಿಕೆಗಳನ್ನು ಸ್ಥಳೀಯವಾಗಿಯೇ ಉತ್ಪಾದಿಸುವ ಆಫ್ರಿಕನ್ ಒಕ್ಕೂಟದ ಮಹತ್ವಾಕಾಂಕ್ಷೆಯ ಗುರಿಯ ಮೇಲೆ ಬೆಳಕು ಚೆಲ್ಲಿದರು. ಅಲ್ಲದೆ, ಲಸಿಕೆಗಳ ಸುಲಭ ಲಭ್ಯತೆ ಮತ್ತು ಆರೋಗ್ಯ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು, ಲಸಿಕಾ ಸಂಶೋಧನೆ, ಕ್ಲಿನಿಕಲ್ ಪ್ರಯೋಗಗಳು ಮತ್ತು ಸ್ಥಳೀಯ ಉತ್ಪಾದನೆಗೆ ಒತ್ತು ನೀಡುವ ‘ಅಚೀವ್ ಆಫ್ರಿಕಾ’ ಎಂಬ ಹೊಸ ಉಪಕ್ರಮದ ಬಗ್ಗೆ ಅವರು ಮಾಹಿತಿ ನೀಡಿದರು.

ಐಐಟಿ ಮದ್ರಾಸ್‌ನ ಅರವಿಂದ್ ಷಣ್ಮುಗಂ ಅವರು, “ಭಾರತದಲ್ಲಿ ಸರ್ವೈಕಲ್ ಕ್ಯಾನ್ಸರ್ ನಿಯಂತ್ರಣದಲ್ಲಿ ಸಕ್ರಿಯ ಎಚ್‌ಪಿವ ಪರೀಕ್ಷೆಯ ಪಾತ್ರ ಹಾಗೂ ಪರಿಣಾಮ” ಕುರಿತು ವಿಚಾರ ಹಂಚಿಕೊಂಡರು. “ಸೀಮಿತ ಸಂಪನ್ಮೂಲಗಳ ಸವಾಲಿನ ನಡುವೆಯೂ, ಎಚ್‌ಪಿವಿ ಸೋಂಕು ಸರ್ವೈಕಲ್ ಕ್ಯಾನ್ಸರ್ ಆಗಿ ಉಲ್ಬಣಗೊಳ್ಳುವುದನ್ನು ಸಕಾಲಿಕ ಕ್ರಮಗಳ ಮೂಲಕ ತಡೆಯಲು ಖಂಡಿತಾ ಸಾಧ್ಯವಿದೆ” ಎಂದು ಅವರು ಪ್ರತಿಪಾದಿಸಿದರು. ರೋಗ ತಡೆಗಟ್ಟುವ ಕ್ರಮಗಳು ಸೂಕ್ತ ಸಮಯದಲ್ಲಿ ಸರಿಯಾದ ಜನರಿಗೆ ತಲುಪುವಂತೆ ಮಾಡಲು ‘ರಾಜ್ಯವಾರು ಪ್ರತ್ಯೇಕ ಮಾದರಿ’ಗಳನ್ನು ರೂಪಿಸುವುದು ಇಂದಿನ ತುರ್ತು ಅಗತ್ಯವಾಗಿದೆ ಎಂಬುದನ್ನು ಈ ಗೋಷ್ಠಿಯಲ್ಲಿ ಒತ್ತಿಹೇಳಲಾಯಿತು.

“ಕ್ಷಯರೋಗ ಪತ್ತೆ ವ್ಯವಸ್ಥೆಯಲ್ಲಿನ ಬದಲಾವಣೆ” ಕುರಿತು ಉಪನ್ಯಾಸ ನೀಡಿದ ಮೆಕ್‌ಗಿಲ್ ವಿಶ್ವವಿದ್ಯಾಲಯದ ಡಾ. ಮಧುಕರ್ ಪೈ, ಕ್ಷಯರೋಗ ನಿರ್ಣಯ ಸೇವೆಗಳನ್ನು ಮತ್ತಷ್ಟು ಚುರುಕುಗೊಳಿಸುವ ಹಾಗೂ ಎಲ್ಲರಿಗೂ ಸುಲಭವಾಗಿ ಲಭ್ಯವಾಗುವಂತೆ ಮಾಡುವ ಅಗತ್ಯವನ್ನು ಎತ್ತಿತೋರಿಸಿದರು. ಅದರಲ್ಲೂ, ಸೀಮಿತ ಸಂಪನ್ಮೂಲಗಳಿರುವ ಕಡೆಗಳಲ್ಲಿ ಹೆಚ್ಚಿನ ಪ್ರಕರಣಗಳು ಪತ್ತೆಯಾಗದೇ ಹೋಗುತ್ತಿರುವುದರ ಬಗ್ಗೆ ಅವರು ಗಮನಸೆಳೆದರು. ಡಿಜಿಟಲ್ ಉಪಕರಣಗಳ ಜತೆಗೆ, ಮಾಲಿಕ್ಯುಲರ್ ಮತ್ತು ಪಾಯಿಂಟ್-ಆಫ್-ಕೇರ್ ಪರೀಕ್ಷೆಗಳ ಪಾತ್ರದ ಕುರಿತು ಚರ್ಚಿಸಿದ ಅವರು, “ಈ ಹೊಸ ಆವಿಷ್ಕಾರಗಳು ಜನರಿಗೆ ಕೈಗೆಟುಕುವಂತಿರಬೇಕು ಮತ್ತು ಸಾಮಾನ್ಯ ಆರೋಗ್ಯ ಸೇವೆಗಳ ಭಾಗವಾಗಿ ರೂಪುಗೊಳ್ಳಬೇಕು” ಎಂದರು. ರೋಗಿ ಎಲ್ಲೇ ಇದ್ದರೂ ಸಕಾಲಿಕ ಹಾಗೂ ನಿಖರವಾದ ರೋಗನಿರ್ಣಯವನ್ನು ಖಚಿತಪಡಿಸಿಕೊಳ್ಳಲು ಬಲವಾದ ಸಹಯೋಗ, ನಿರಂತರ ಆರ್ಥಿಕ ನೆರವು ಮತ್ತು ಸುಭದ್ರ ಆರೋಗ್ಯ ವ್ಯವಸ್ಥೆಯ ಬೆಂಬಲ ಬೇಕಿದೆ ಎಂಬುದನ್ನು ಅವರು ಹೇಳಿದರು.

“ಡಯಾಗ್ನೋಸ್ಟಿಕ್ ಅಂಡ್ ಸ್ಕ್ರೀನಿಂಗ್” ಶೀರ್ಷಿಕೆಯಡಿ ನಡೆದ 3ನೇ ಗೋಷ್ಠಿಯೊಂದಿಗೆ ಎರಡನೇ ದಿನದ ಕಾರ್ಯಕ್ರಮಗಳಿಗೆ ತರೆಬಿದ್ದಿತು. ವೈಜ್ಞಾನಿಕ ಆವಿಷ್ಕಾರಗಳನ್ನು ಎಲ್ಲರಿಗೂ ಸುಲಭವಾಗಿ ಲಭ್ಯವಾಗುವ, ಕೈಗೆಟುಕುವ ದರದ ಹಾಗೂ ಪರಿಣಾಮಕಾರಿ ಸಾರ್ವಜನಿಕ ಆರೋಗ್ಯ ಕ್ರಮಗಳನ್ನಾಗಿ ಪರಿವರ್ತಿಸುವ ಮಹತ್ವವನ್ನು ಈ ಗೋಷ್ಠಿ ಒತ್ತಿಹೇಳಿತು.

Previous Post

ಬೆಂಗಳೂರಿನಲ್ಲಿ ‘ಟೈಮ್ಸ್ ಹೈಯರ್ ಎಜುಕೇಶನ್ ಏಷ್ಯಾ ಯೂನಿವರ್ಸಿಟೀಸ್ ಶೃಂಗಸಭೆ 2027’: ಭಾರತದ ಮೊದಲ ಆವೃತ್ತಿಗೆ ಮಾಹೆ ಆತಿಥ್ಯ

Next Post

ಮೈಸೂರಿನಲ್ಲಿ ನಡೆದ ದಸರಾ ಕ್ರೀಡಾಕೂಟ–ಸಿಎಂ ಕಪ್ 2026 : ಮಾಹೆಯ ಕರಾಟೆ ಕ್ರೀಡಾಪಟುಗಳಿಗೆ ಚಿನ್ನ ಮತ್ತು ಕಂಚಿನ ಪದಕ

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಮೈಸೂರಿನಲ್ಲಿ ನಡೆದ ದಸರಾ ಕ್ರೀಡಾಕೂಟ–ಸಿಎಂ ಕಪ್ 2026 : ಮಾಹೆಯ ಕರಾಟೆ ಕ್ರೀಡಾಪಟುಗಳಿಗೆ ಚಿನ್ನ ಮತ್ತು ಕಂಚಿನ ಪದಕ

ಮೈಸೂರಿನಲ್ಲಿ ನಡೆದ ದಸರಾ ಕ್ರೀಡಾಕೂಟ–ಸಿಎಂ ಕಪ್ 2026 : ಮಾಹೆಯ ಕರಾಟೆ ಕ್ರೀಡಾಪಟುಗಳಿಗೆ ಚಿನ್ನ ಮತ್ತು ಕಂಚಿನ ಪದಕ

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 24k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಮೈಸೂರಿನಲ್ಲಿ ನಡೆದ ದಸರಾ ಕ್ರೀಡಾಕೂಟ–ಸಿಎಂ ಕಪ್ 2026 : ಮಾಹೆಯ ಕರಾಟೆ ಕ್ರೀಡಾಪಟುಗಳಿಗೆ ಚಿನ್ನ ಮತ್ತು ಕಂಚಿನ ಪದಕ

ಮೈಸೂರಿನಲ್ಲಿ ನಡೆದ ದಸರಾ ಕ್ರೀಡಾಕೂಟ–ಸಿಎಂ ಕಪ್ 2026 : ಮಾಹೆಯ ಕರಾಟೆ ಕ್ರೀಡಾಪಟುಗಳಿಗೆ ಚಿನ್ನ ಮತ್ತು ಕಂಚಿನ ಪದಕ

15/10/2026
ಮಾಹೆ ನೇಚರ್ ಕಾನ್ಫರೆನ್ಸ್’ 2ನೇ ದಿನ: ಸಾಂಕ್ರಾಮಿಕ ರೋಗಗಳ ಕಣ್ಗಾವಲು, ಲಸಿಕಾ ಸ್ವಾವಲಂಬನೆ ಹಾಗೂ ಡಯಾಗ್ನೋಸ್ಟಿಕ್ ಪ್ರಗತಿಗೆ ಒತ್ತು

ಮಾಹೆ ನೇಚರ್ ಕಾನ್ಫರೆನ್ಸ್’ 2ನೇ ದಿನ: ಸಾಂಕ್ರಾಮಿಕ ರೋಗಗಳ ಕಣ್ಗಾವಲು, ಲಸಿಕಾ ಸ್ವಾವಲಂಬನೆ ಹಾಗೂ ಡಯಾಗ್ನೋಸ್ಟಿಕ್ ಪ್ರಗತಿಗೆ ಒತ್ತು

15/10/2026
ಬೆಂಗಳೂರಿನಲ್ಲಿ ‘ಟೈಮ್ಸ್ ಹೈಯರ್ ಎಜುಕೇಶನ್ ಏಷ್ಯಾ ಯೂನಿವರ್ಸಿಟೀಸ್ ಶೃಂಗಸಭೆ 2027’: ಭಾರತದ ಮೊದಲ ಆವೃತ್ತಿಗೆ ಮಾಹೆ ಆತಿಥ್ಯ

ಬೆಂಗಳೂರಿನಲ್ಲಿ ‘ಟೈಮ್ಸ್ ಹೈಯರ್ ಎಜುಕೇಶನ್ ಏಷ್ಯಾ ಯೂನಿವರ್ಸಿಟೀಸ್ ಶೃಂಗಸಭೆ 2027’: ಭಾರತದ ಮೊದಲ ಆವೃತ್ತಿಗೆ ಮಾಹೆ ಆತಿಥ್ಯ

15/10/2026
ವಾಲಿಬಾಲ್‌ನಲ್ಲಿ ಗೌತಮ್ ಆಚಾರ್ಯ ಸಾಧನೆ: ರಾಜ್ಯ ಮಟ್ಟಕ್ಕೆ ಆಯ್ಕೆ

ವಾಲಿಬಾಲ್‌ನಲ್ಲಿ ಗೌತಮ್ ಆಚಾರ್ಯ ಸಾಧನೆ: ರಾಜ್ಯ ಮಟ್ಟಕ್ಕೆ ಆಯ್ಕೆ

15/10/2026

Recent News

imunify-bot-check