Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಮುಖಪುಟ

ಜಾಗತಿಕ ಮಟ್ಟದ ರ್‍ಯಾಂಕಿಂಗ್ನಲ್ಲಿ ಮಾಹೆ ಮತ್ತಷ್ಟು ಪ್ರಗತಿ ; ದೇಶದಲ್ಲಿ 7ನೇ ಸ್ಥಾನ

Dhrishya News by Dhrishya News
18/08/2026
in ಮುಖಪುಟ
0
ಜಾಗತಿಕ ಮಟ್ಟದ ರ್‍ಯಾಂಕಿಂಗ್ನಲ್ಲಿ ಮಾಹೆ ಮತ್ತಷ್ಟು ಪ್ರಗತಿ ; ದೇಶದಲ್ಲಿ 7ನೇ ಸ್ಥಾನ
0
SHARES
4
VIEWS
Share on FacebookShare on Twitter

ಮಣಿಪಾಲ್‌, ಆಗಸ್ಟ್‌ 18, 2026: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ವಿಶ್ವವಿದ್ಯಾಲಯ ಎಂದು ಪರಿಗಣಿತವಾಗಿರುವ ಉತ್ಕೃಷ್ಟ ಸಂಸ್ಥೆಯು, ಜಾಗತಿಕ ಶೈಕ್ಷಣಿಕ ಮಟ್ಟದಲ್ಲಿ ಮತ್ತೊಂದು ಮೈಲುಗಲ್ಲು ತಲುಪಿದೆ. ಶಾಂಘೈ ರ್‍ಯಾಂಕಿಂಗ್ ಕನ್ಸಲ್ಟೆನ್ಸಿಯ 2026ನೇ ಸಾಲಿನ ಪ್ರತಿಷ್ಠಿತ ‘ಅಕಾಡೆಮಿಕ್ ರ್‍ಯಾಂಕಿಂಗ್ ಆಫ್ ವರ್ಲ್ಡ್ ಯೂನಿವರ್ಸಿಟೀಸ್’ (ಎಆರ್‌ಡಬ್ಲ್ಯುಯು) ಪಟ್ಟಿಯಲ್ಲಿ ಮಾಹೆ 701-800ರ ಶ್ರೇಣಿಗೆ ಏರಿದೆ. ಕಳೆದ ಬಾರಿ 801-900ರ ಶ್ರೇಣಿಯಲ್ಲಿದ್ದು ಇದೀಗ ಶೈಕ್ಷಣಿಕ ಹಾಗೂ ಸಂಶೋಧನಾ ವಲಯದ ತನ್ನ ನಿರಂತರ ಸಾಧನೆಯಿಂದಾಗಿ ವಿಶ್ವಮಟ್ಟದಲ್ಲಿ ತನ್ನ ಸ್ಥಾನದಲ್ಲಿ ಮತ್ತಷ್ಟು ಪ್ರಗತಿಕಂಡಿದೆ. 

ಎಆರ್‌ಡಬ್ಲ್ಯುಯು ಟ್ರ್ಯಾಕರ್ ವಿಶ್ಲೇಷಣೆಯ ಪ್ರಕಾರ, ಮಾಹೆಯು ಜಾಗತಿಕವಾಗಿ 779ನೇ ಮತ್ತು ಭಾರತದಲ್ಲಿ 7ನೇ ಸ್ಥಾನದಲ್ಲಿದೆ. 2025ರ ರ್‍ಯಾಂಕಿಂಗ್‌ಗೆ ಹೋಲಿಸಿದರೆ, ಜಾಗತಿಕ ಮಟ್ಟದಲ್ಲಿ 36 ಹಾಗೂ ರಾಷ್ಟ್ರೀಯ ಮಟ್ಟದಲ್ಲಿ 3 ಸ್ಥಾನಗಳ ಮುನ್ನಡೆ ಸಾಧಿಸಿದೆ.

ಶೈಕ್ಷಣಿಕ ಗುಣಮಟ್ಟ, ಸಂಶೋಧನೆ ಹಾಗೂ ಹೊಸ ಆವಿಷ್ಕಾರಗಳಿಗೆ ಮಾಹೆ ನೀಡುತ್ತಿರುವ ಪ್ರಾಮುಖ್ಯಕ್ಕೆ ಈ ರ್‍ಯಾಂಕಿಂಗ್ ಕನ್ನಡಿಯಾಗಿದೆ. ಜ್ಞಾನದ ವಿಸ್ತರಣೆ ಹಾಗೂ ಸಮಾಜದ ಮೇಲೆ ಸಕಾರಾತ್ಮಕ ಪ್ರಭಾವ ಬೀರುವ ವಿಭಿನ್ನ ಸಂಶೋಧನೆಗಳಿಗೆ ವಿವಿ ನೀಡುತ್ತಿರುವ ಪ್ರೋತ್ಸಾಹವನ್ನು ಇದು ಮತ್ತೊಮ್ಮೆ ಸಾಬೀತುಪಡಿಸಿದೆ.

ಮಾಹೆ ಕುಲಪತಿ ಡಾ. ಶರತ್ ಕೆ. ರಾವ್ ಈ ಬಗ್ಗೆ ಮಾತನಾಡಿ, ‘ಎಆರ್‌ಡಬ್ಲ್ಯುಯು ರ್‍ಯಾಂಕಿಂಗ್‌ನಲ್ಲಿನ ಈ ಮುನ್ನಡೆ ನಮ್ಮ ಬೋಧಕರು, ವಿದ್ಯಾರ್ಥಿಗಳು, ಸಂಶೋಧಕರು ಹಾಗೂ ಸಿಬ್ಬಂದಿಯ ಶ್ರಮದ ಫಲವಾಗಿದೆ. ಶಿಕ್ಷಣ ಮತ್ತು ಸಂಶೋಧನೆಯ ಗುಣಮಟ್ಟವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲು ಇದು ನಮಗೆ ಪ್ರೇರಣೆ ನೀಡಿದೆ. ರಾಷ್ಟ್ರ ನಿರ್ಮಾಣದ ಗುರಿ ಹೊಂದಿರುವ ಮಾಹೆಯು, ಜಾಗತಿಕ ಮಟ್ಟದ ಶಿಕ್ಷಣ ಮತ್ತು ಸಂಶೋಧನೆಗಳ ಮೂಲಕ ಸಮಾಜಕ್ಕೆ ಉತ್ತಮ ಪ್ರತಿಭೆಗಳನ್ನು ನೀಡುವ ಕಾಯಕವನ್ನು ನಿರಂತರವಾಗಿ ಮುಂದುವರಿಸಲಿದೆ’ ಎಂದು ಹೇಳಿದರು. 

2026ರ ಈ ನೂತನ ರ್‍ಯಾಂಕಿಂಗ್ ಜಾಗತಿಕ ಮಟ್ಟದಲ್ಲಿ ಮಾಹೆ ಸಾಧಿಸುತ್ತಿರುವ ಸ್ಥಿರ ಪ್ರಗತಿಗೆ ಸಾಕ್ಷಿಯಾಗಿದೆ. ಬೋಧನೆ, ಸಂಶೋಧನೆ, ಆವಿಷ್ಕಾರ ಹಾಗೂ ಸಮಾಜಮುಖಿ ಕಾರ್ಯಗಳನ್ನು ಒಳಗೊಂಡ ಬಲಿಷ್ಠ ಶೈಕ್ಷಣಿಕ ಪರಿಸರವನ್ನು ನಿರ್ಮಿಸುವ ವಿವಿಯ ಬದ್ಧತೆಗೆ ಇದು ಕಿರೀಟವಿಟ್ಟಂತಾಗಿದೆ.

Previous Post

ಖ್ಯಾತ ನಾಗಸ್ವರ ವಾದಕ ಹೆರ್ಗ ಸುಂದರ ಶೇರಿಗಾರ್ ನಿಧನ..!

Next Post

ಮಣಿಪಾಲದಲ್ಲಿ ಅಮೆಜಾನ್‌ ಡೆಲಿವರಿ ಹಬ್‌ ಫ್ರಾಂಚೈಸಿ ಕೊಡಿಸುವುದಾಗಿ ₹4.20 ಲಕ್ಷ ವಂಚನೆ

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಮಣಿಪಾಲದಲ್ಲಿ ಅಮೆಜಾನ್‌ ಡೆಲಿವರಿ ಹಬ್‌ ಫ್ರಾಂಚೈಸಿ ಕೊಡಿಸುವುದಾಗಿ ₹4.20 ಲಕ್ಷ ವಂಚನೆ

ಮಣಿಪಾಲದಲ್ಲಿ ಅಮೆಜಾನ್‌ ಡೆಲಿವರಿ ಹಬ್‌ ಫ್ರಾಂಚೈಸಿ ಕೊಡಿಸುವುದಾಗಿ ₹4.20 ಲಕ್ಷ ವಂಚನೆ

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಬೆಳ್ಮಣ್ ಜೆಸಿಐ ಸಂಸ್ಥೆಯಿಂದ ತರಬೇತಿ ಶತಕ.

ಬೆಳ್ಮಣ್ ಜೆಸಿಐ ಸಂಸ್ಥೆಯಿಂದ ತರಬೇತಿ ಶತಕ.

18/08/2026
ಮಂಜೇಶ್ವರದಲ್ಲಿ ಗಡಿನಾಡ ಯಕ್ಷ ಸಂಭ್ರಮ ಸಮಾರೋಪ

ಮಂಜೇಶ್ವರದಲ್ಲಿ ಗಡಿನಾಡ ಯಕ್ಷ ಸಂಭ್ರಮ ಸಮಾರೋಪ

18/08/2026
ದಿವ್ಯಾಂಗ ರಕ್ಷಣಾ ಸಮಿತಿಯಿಂದ ಕ್ಯಾನ್ಸರ್ ಜಾಗೃತಿ ಕಾರ್ಯಾಗಾರ ಹಾಗೂ ಆಹಾರ ಕಿಟ್ ವಿತರಣೆ

ದಿವ್ಯಾಂಗ ರಕ್ಷಣಾ ಸಮಿತಿಯಿಂದ ಕ್ಯಾನ್ಸರ್ ಜಾಗೃತಿ ಕಾರ್ಯಾಗಾರ ಹಾಗೂ ಆಹಾರ ಕಿಟ್ ವಿತರಣೆ

18/08/2026
ಐಐಎಸ್‌ಸಿಯ ರೈಸ್ ಫಾರ್ ಹೆಲ್ತಿ ಏಜಿಂಗ್ ಕಾನ್ಫರೆನ್ಸ್ 2026ನಲ್ಲಿ ಹರ್ಬಲೈಫ್ ಭಾಗಿ: ಚಯಾಪಚಯ ಆರೋಗ್ಯ ಮತ್ತು ಆರೋಗ್ಯಕರ ವೃದ್ಧಾಪ್ಯ ಕುರಿತು ಜಾಗೃತಿ

ಐಐಎಸ್‌ಸಿಯ ರೈಸ್ ಫಾರ್ ಹೆಲ್ತಿ ಏಜಿಂಗ್ ಕಾನ್ಫರೆನ್ಸ್ 2026ನಲ್ಲಿ ಹರ್ಬಲೈಫ್ ಭಾಗಿ: ಚಯಾಪಚಯ ಆರೋಗ್ಯ ಮತ್ತು ಆರೋಗ್ಯಕರ ವೃದ್ಧಾಪ್ಯ ಕುರಿತು ಜಾಗೃತಿ

18/08/2026

Recent News