Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

ಐಐಎಸ್‌ಸಿಯ ರೈಸ್ ಫಾರ್ ಹೆಲ್ತಿ ಏಜಿಂಗ್ ಕಾನ್ಫರೆನ್ಸ್ 2026ನಲ್ಲಿ ಹರ್ಬಲೈಫ್ ಭಾಗಿ: ಚಯಾಪಚಯ ಆರೋಗ್ಯ ಮತ್ತು ಆರೋಗ್ಯಕರ ವೃದ್ಧಾಪ್ಯ ಕುರಿತು ಜಾಗೃತಿ

Dhrishya News by Dhrishya News
18/08/2026
in ಸುದ್ದಿಗಳು
0
ಐಐಎಸ್‌ಸಿಯ ರೈಸ್ ಫಾರ್ ಹೆಲ್ತಿ ಏಜಿಂಗ್ ಕಾನ್ಫರೆನ್ಸ್ 2026ನಲ್ಲಿ ಹರ್ಬಲೈಫ್ ಭಾಗಿ: ಚಯಾಪಚಯ ಆರೋಗ್ಯ ಮತ್ತು ಆರೋಗ್ಯಕರ ವೃದ್ಧಾಪ್ಯ ಕುರಿತು ಜಾಗೃತಿ
0
SHARES
7
VIEWS
Share on FacebookShare on Twitter

ಬೆಂಗಳೂರು : ಪ್ರಮುಖ ಆರೋಗ್ಯ ಮತ್ತು ಕ್ಷೇಮ ಸಂಸ್ಥೆಯಾದ ಹರ್ಬಲೈಫ್, ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ಲಾಂಗ್ವಿಟಿ ಇಂಡಿಯಾ ಇನಿಶಿಯೇಟಿವ್ ಆಯೋಜಿಸಿದ್ದ ರೈಸ್ ಫಾರ್ ಹೆಲ್ತಿ ಏಜಿಂಗ್ ಕಾನ್ಫರೆನ್ಸ್ 2026 ಸಮ್ಮೇಳನದಲ್ಲಿ ಪ್ಲಾಟಿನಂ ಪ್ರಾಯೋಜಕತ್ವ ವಹಿಸಿಕೊಳ್ಳುವ ಮೂಲಕ ಕಾರ್ಯಕ್ರಮದಲ್ಲಿ ಭಾಗವಹಿಸಿದೆ. ವಿಜ್ಞಾನ ಆಧಾರಿತ ಪೌಷ್ಟಿಕಾಂಶ, ಚಯಾಪಚಯ ಆರೋಗ್ಯ, ಹೊಸ ಆವಿಷ್ಕಾರ ಹಾಗೂ ಸಹಯೋಗದ ಮೂಲಕ ಆರೋಗ್ಯಕರ ವೃದ್ಧಾಪ್ಯವನ್ನು ಸಾಧಿಸುವ ತನ್ನ ಬದ್ಧತೆಯನ್ನು ಹರ್ಬಲೈಫ್ ಈ ಮೂಲಕ ಪುನರುಚ್ಚರಿಸಿದೆ.

ಭಾರತದಲ್ಲಿ ಮಧುಮೇಹ, ಬೊಜ್ಜು, ರಕ್ತದೊತ್ತಡ ಮತ್ತು ಇತರ ಸಾಂಕ್ರಾಮಿಕವಲ್ಲದ ರೋಗಗಳು ಸೇರಿದಂತೆ ಚಯಾಪಚಯ ಆರೋಗ್ಯ ಸವಾಲುಗಳ ಹೊರೆ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ, ಆರೋಗ್ಯಕರ ವೃದ್ಧಾಪ್ಯವು ಸಾರ್ವಜನಿಕ ಆರೋಗ್ಯದ ಪ್ರಮುಖ ಆದ್ಯತೆಯಾಗಿ ಹೊರಹೊಮ್ಮುತ್ತಿದೆ. ಸಾಕ್ಷ್ಯಾಧಾರಿತ ಪೌಷ್ಟಿಕಾಂಶ, ಆರೋಗ್ಯಕರ ಜೀವನಶೈಲಿ ಮತ್ತು ಸಮುದಾಯದ ಬೆಂಬಲದ ಮೂಲಕ ಚಯಾಪಚಯ ಕ್ಷೇಮವನ್ನು ಕಾಪಾಡುವುದು, ಜನರು ವಯಸ್ಸಾದಂತೆ ಹೆಚ್ಚು ಆರೋಗ್ಯಕರ ಮತ್ತು ಸಕ್ರಿಯ ಜೀವನ ನಡೆಸಲು ನಿರ್ಣಾಯಕ ಪಾತ್ರ ವಹಿಸುತ್ತದೆ ಎಂಬುದು ಹರ್ಬಲೈಫ್‌ ನ ಬಲವಾದ ನಂಬಿಕೆಯಾಗಿದೆ.

ಎರಡು ದಿನಗಳ ಕಾಲ ನಡೆದ ಈ ಸಮ್ಮೇಳನದಲ್ಲಿ ಭಾರತ ಹಾಗೂ ವಿಶ್ವದ ಪ್ರಮುಖ ಸಂಸ್ಥೆಗಳ ಖ್ಯಾತ ವಿಜ್ಞಾನಿಗಳು, ವೈದ್ಯರು, ಸಂಶೋಧಕರು, ನೀತಿ ನಿರೂಪಕರು, ಸಂಶೋಧಕರು ಮತ್ತು ಉದ್ಯಮದ ಮುಂಚೂಣಿ ನಾಯಕರು ಭಾಗವಹಿಸಿದ್ದರು. ಆರೋಗ್ಯ ರಕ್ಷಣೆಯಲ್ಲಿ ಮುನ್ಸೂಚಕ (ಪ್ರಿಡಿಕ್ಟಿವ್), ತಡೆಗಟ್ಟುವ (ಪ್ರಿವೆಂಟಿವ್) ಮತ್ತು ವೈಯಕ್ತೀಕರಿಸಿದ ವಿಧಾನಗಳನ್ನು ಬಳಸುವಲ್ಲಿ ಎಐ, ಡಿಜಿಟಲ್ ಹೆಲ್ತ್ ತಂತ್ರಜ್ಞಾನಗಳು, ಬಯೋಮಾರ್ಕರ್‌ ಗಳು ಮತ್ತು ಪೌಷ್ಟಿಕಾಂಶ ವಿಜ್ಞಾನದ ಪಾತ್ರದ ಕುರಿತು ಚರ್ಚಿಸಲಾಯಿತು. ದೀರ್ಘಾಯುಷ್ಯ ವಿಜ್ಞಾನ ಹಾಗೂ ತಡೆಗಟ್ಟುವ ಆರೋಗ್ಯದ ಕುರಿತಾದ ಸಂವಾದವನ್ನು ನಡೆಸಲು ಮತ್ತು ಶಿಕ್ಷಣ, ಆರೋಗ್ಯ ರಕ್ಷಣೆ, ತಂತ್ರಜ್ಞಾನ ಹಾಗೂ ಉದ್ಯಮ ಕ್ಷೇತ್ರಗಳ ನಡುವೆ ಪರಸ್ಪರ ಸಹಯೋಗವನ್ನು ಬೆಳೆಸಲು ಈ ಸಮ್ಮೇಳನವು ಉತ್ತಮ ವೇದಿಕೆಯನ್ನು ಒದಗಿಸಿತು.

ಸಮ್ಮೇಳನದ ಅಂಗವಾಗಿ ಹರ್ಬಲೈಫ್ ಸಂಸ್ಥೆಯು “ಆರೋಗ್ಯಕರ ಚಯಾಪಚಯದಿಂದಲೇ ಆರೋಗ್ಯಕರ ವೃದ್ಧಾಪ್ಯ ಆರಂಭ” ಎಂಬ ವಿಷಯದ ಕುರಿತು ವಿಶೇಷ ಕಾರ್ಯಾಗಾರವನ್ನು ಆಯೋಜಿಸಿತ್ತು. ಇದರಲ್ಲಿ ದೇಶಾದ್ಯಂತ 20,000ಕ್ಕೂ ಹೆಚ್ಚು ಅಸೋಸಿಯೇಟ್‌ ಗಳು, ಗ್ರಾಹಕರು ಮತ್ತು ಉದ್ಯೋಗಿಗಳು ವರ್ಚುವಲ್ ಆಗಿ ಭಾಗವಹಿಸಿದ್ದರು.

ವೈಜ್ಞಾನಿಕ ವಿಶ್ವಾಸಾರ್ಹತೆ, ಪ್ರಾಯೋಗಿಕ ಪ್ರಸ್ತುತತೆ ಮತ್ತು ಆಕರ್ಷಕ ಸ್ವರೂಪದ ಈ ಗೋಷ್ಠಿಯಲ್ಲಿ, ಶಾಶ್ವತ ನಡವಳಿಕೆಯ ಬದಲಾವಣೆಯನ್ನು ಪ್ರೋತ್ಸಾಹಿಸುವಲ್ಲಿ ಸಮುದಾಯದ ಪಾತ್ರದ ಬಗ್ಗೆ ಮಹತ್ವದ ಒಳನೋಟಗಳನ್ನು ನೀಡಲಾಯಿತು. ಚಯಾಪಚಯ, ನಿದ್ರೆ, ಒತ್ತಡ ನಿರ್ವಹಣೆ, ದೈಹಿಕ ಚಟುವಟಿಕೆ, ಸಮುದಾಯದ ಪ್ರಭಾವ ಮತ್ತು ಆರೋಗ್ಯಕರ ಜೀವನಶೈಲಿಯ ಅಭ್ಯಾಸಗಳ ಕುರಿತಾದ ಮಾಹಿತಿಯು ಭಾಗವಹಿಸಿದವರಿಗೆ ಅಪಾರ ಪ್ರಯೋಜನ ನೀಡಿತು.

*ಈ ಸಮ್ಮೇಳನದ ಸಹಯೋಗದ ಕುರಿತು ಮಾತನಾಡಿದ ಹರ್ಬಲೈಫ್ ಇಂಡಿಯಾದ ಮ್ಯಾನೇಜಿಂಗ್ ಡೈರೆಕ್ಟರ್ ಅಜಯ್ ಖನ್ನಾ ಅವರು*, “ಜಗತ್ತಿನಾದ್ಯಂತ ಜನರ ಜೀವಿತಾವಧಿ ಹೆಚ್ಚುತ್ತಿರುವಂತೆ, ನಮ್ಮ ಗಮನವು ಕೇವಲ ಜೀವಿತಾವಧಿಯನ್ನು ಹೆಚ್ಚಿಸುವುದರಿಂದ ಆರೋಗ್ಯಕರ ಆಯಸ್ಸನ್ನು ಸುಧಾರಿಸುವತ್ತ ಬದಲಾಗಬೇಕಿದೆ. ಉತ್ತಮ ಪೋಷಕಾಂಶ, ಸಕ್ರಿಯ ಜೀವನಶೈಲಿ, ವೈಜ್ಞಾನಿಕ ಪ್ರಗತಿ ಮತ್ತು ಬಲವಾದ ಸಾಮಾಜಿಕ ಸಂಪರ್ಕಗಳಿಂದ ಬೆಂಬಲಿತವಾದ ಚಯಾಪಚಯ ಆರೋಗ್ಯವು ಆರೋಗ್ಯಕರ ವೃದ್ಧಾಪ್ಯಕ್ಕೆ ಅಡಿಪಾಯವಾಗಿದೆ. ರೈಸ್ ಫಾರ್ ಹೆಲ್ತಿ ಏಜಿಂಗ್ ನಂತಹ ವೇದಿಕೆಗಳು ಶೈಕ್ಷಣಿಕ, ಆರೋಗ್ಯ ಮತ್ತು ಉದ್ಯಮ ಕ್ಷೇತ್ರಗಳ ನಡುವೆ ಅರ್ಥಪೂರ್ಣ ಸಂವಾದಕ್ಕೆ ಅವಕಾಶ ಕಲ್ಪಿಸುತ್ತವೆ. ಇದು ವೈಜ್ಞಾನಿಕ ಜ್ಞಾನವನ್ನು ಪ್ರಾಯೋಗಿಕ ಪರಿಹಾರಗಳನ್ನಾಗಿ ಪರಿವರ್ತಿಸಿ, ಜನರು ಹೆಚ್ಚು ಆರೋಗ್ಯಕರ ಮತ್ತು ಸಕ್ರಿಯ ಜೀವನ ನಡೆಸಲು ಶಕ್ತಿ ತುಂಬುತ್ತದೆ” ಎಂದರು.

*ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ಡೆವಲಪ್‌ ಮೆಂಟಲ್ ಬಯಾಲಜಿ ಮತ್ತು ಜೆನೆಟಿಕ್ಸ್ ವಿಭಾಗದ ಪ್ರಾಧ್ಯಾಪಕ ಪ್ರೊ. ದೀಪಕ್ ಕುಮಾರ್ ಸೈನಿ ಮಾತನಾಡಿ* , “ಆರೋಗ್ಯಕರ ವೃದ್ಧಾಪ್ಯಕ್ಕೆ ದೀರ್ಘಾಯುಷ್ಯ ಮತ್ತು ಜೀವನದ ಗುಣಮಟ್ಟವನ್ನು ರೂಪಿಸುವ ಜೈವಿಕ, ಕ್ಲಿನಿಕಲ್ ಮತ್ತು ಜೀವನಶೈಲಿಯ ಅಂಶಗಳ ಆಳವಾದ ತಿಳುವಳಿಕೆ ಅಗತ್ಯವಿದೆ. ರೈಸ್ ಫಾರ್ ಹೆಲ್ತಿ ಏಜಿಂಗ್ ಸಮ್ಮೇಳನವು ವೈಜ್ಞಾನಿಕ ಸಂವಾದ ಮತ್ತು ಸಹಯೋಗವನ್ನು ಮುನ್ನಡೆಸಲು ವಿವಿಧ ಕ್ಷೇತ್ರಗಳ ತಜ್ಞರನ್ನು ಒಂದೆಡೆ ತಂದಿದೆ. ಸಾಕ್ಷ್ಯಾಧಾರಿತ ಆರೋಗ್ಯ ಮತ್ತು ಕ್ಷೇಮಕ್ಕೆ ಬದ್ಧವಾಗಿರುವ ಹರ್ಬಲೈಫ್‌ ನೊಂದಿಗೆ ಪಾಲುದಾರಿಕೆ ಹೊಂದಲು ನಮಗೆ ಸಂತೋಷವಾಗಿದೆ. ಸಂಶೋಧನೆಯನ್ನು ಸಮುದಾಯಕ್ಕೆ ಪ್ರಯೋಜನವಾಗುವ ಪ್ರಾಯೋಗಿಕ ಪರಿಹಾರಗಳನ್ನಾಗಿ ಪರಿವರ್ತಿಸುವ ನಮ್ಮ ಪ್ರಯತ್ನಗಳಿಗೆ ಈ ಸಹಯೋಗ ಪೂರಕವಾಗಿದೆ” ಎಂದು ತಿಳಿಸಿದರು.

ವಿಜ್ಞಾನ ಆಧಾರಿತ ಪೌಷ್ಟಿಕಾಂಶ ಮತ್ತು ಕ್ಷೇಮದಲ್ಲಿ ಬೇರೂರಿರುವ ಸಂಸ್ಥೆಯಾಗಿ, ಜನರು ತಮ್ಮ ಪ್ರತಿಯೊಂದು ಹಂತದಲ್ಲೂ ಆರೋಗ್ಯಕರ ಮತ್ತು ಸಕ್ರಿಯ ಜೀವನವನ್ನು ನಡೆಸಲು ನೆರವಾಗುವ ಜ್ಞಾನ ಹಂಚಿಕೆ, ಆವಿಷ್ಕಾರ ಹಾಗೂ ಸಹಯೋಗದ ಯೋಜನೆಗಳಿಗೆ ಹರ್ಬಲೈಫ್ ನಿರಂತರ ಬೆಂಬಲವನ್ನು ಒದಗಿಸುತ್ತಿದೆ.

Previous Post

ಮಣಿಪಾಲದಲ್ಲಿ ಅಮೆಜಾನ್‌ ಡೆಲಿವರಿ ಹಬ್‌ ಫ್ರಾಂಚೈಸಿ ಕೊಡಿಸುವುದಾಗಿ ₹4.20 ಲಕ್ಷ ವಂಚನೆ

Next Post

ದಿವ್ಯಾಂಗ ರಕ್ಷಣಾ ಸಮಿತಿಯಿಂದ ಕ್ಯಾನ್ಸರ್ ಜಾಗೃತಿ ಕಾರ್ಯಾಗಾರ ಹಾಗೂ ಆಹಾರ ಕಿಟ್ ವಿತರಣೆ

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ದಿವ್ಯಾಂಗ ರಕ್ಷಣಾ ಸಮಿತಿಯಿಂದ ಕ್ಯಾನ್ಸರ್ ಜಾಗೃತಿ ಕಾರ್ಯಾಗಾರ ಹಾಗೂ ಆಹಾರ ಕಿಟ್ ವಿತರಣೆ

ದಿವ್ಯಾಂಗ ರಕ್ಷಣಾ ಸಮಿತಿಯಿಂದ ಕ್ಯಾನ್ಸರ್ ಜಾಗೃತಿ ಕಾರ್ಯಾಗಾರ ಹಾಗೂ ಆಹಾರ ಕಿಟ್ ವಿತರಣೆ

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಬೆಳ್ಮಣ್ ಜೆಸಿಐ ಸಂಸ್ಥೆಯಿಂದ ತರಬೇತಿ ಶತಕ.

ಬೆಳ್ಮಣ್ ಜೆಸಿಐ ಸಂಸ್ಥೆಯಿಂದ ತರಬೇತಿ ಶತಕ.

18/08/2026
ಮಂಜೇಶ್ವರದಲ್ಲಿ ಗಡಿನಾಡ ಯಕ್ಷ ಸಂಭ್ರಮ ಸಮಾರೋಪ

ಮಂಜೇಶ್ವರದಲ್ಲಿ ಗಡಿನಾಡ ಯಕ್ಷ ಸಂಭ್ರಮ ಸಮಾರೋಪ

18/08/2026
ದಿವ್ಯಾಂಗ ರಕ್ಷಣಾ ಸಮಿತಿಯಿಂದ ಕ್ಯಾನ್ಸರ್ ಜಾಗೃತಿ ಕಾರ್ಯಾಗಾರ ಹಾಗೂ ಆಹಾರ ಕಿಟ್ ವಿತರಣೆ

ದಿವ್ಯಾಂಗ ರಕ್ಷಣಾ ಸಮಿತಿಯಿಂದ ಕ್ಯಾನ್ಸರ್ ಜಾಗೃತಿ ಕಾರ್ಯಾಗಾರ ಹಾಗೂ ಆಹಾರ ಕಿಟ್ ವಿತರಣೆ

18/08/2026
ಐಐಎಸ್‌ಸಿಯ ರೈಸ್ ಫಾರ್ ಹೆಲ್ತಿ ಏಜಿಂಗ್ ಕಾನ್ಫರೆನ್ಸ್ 2026ನಲ್ಲಿ ಹರ್ಬಲೈಫ್ ಭಾಗಿ: ಚಯಾಪಚಯ ಆರೋಗ್ಯ ಮತ್ತು ಆರೋಗ್ಯಕರ ವೃದ್ಧಾಪ್ಯ ಕುರಿತು ಜಾಗೃತಿ

ಐಐಎಸ್‌ಸಿಯ ರೈಸ್ ಫಾರ್ ಹೆಲ್ತಿ ಏಜಿಂಗ್ ಕಾನ್ಫರೆನ್ಸ್ 2026ನಲ್ಲಿ ಹರ್ಬಲೈಫ್ ಭಾಗಿ: ಚಯಾಪಚಯ ಆರೋಗ್ಯ ಮತ್ತು ಆರೋಗ್ಯಕರ ವೃದ್ಧಾಪ್ಯ ಕುರಿತು ಜಾಗೃತಿ

18/08/2026

Recent News