ಉಡುಪಿ: ದಿವ್ಯಾಂಗ ರಕ್ಷಣಾ ಸಮಿತಿ (ರಿ.) ಕೋಡವೂರು ಹಾಗೂ ಬೆಂಗಳೂರಿನ MCKS ಫುಡ್ ಫಾರ್ ದಿ ಹಂಗ್ರಿ ಫೌಂಡೇಶನ್ ಇವರ ಜಂಟಿ ಆಶ್ರಯದಲ್ಲಿ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಆಸ್ಪತ್ರೆ, NCD ಘಟಕ ಹಾಗೂ ಆದರ್ಶ ಆಸ್ಪತ್ರೆ ಉಡುಪಿ ಇವರ ಸಹಭಾಗಿತ್ವದಲ್ಲಿ ಕ್ಯಾನ್ಸರ್ ಜಾಗೃತಿ ಕಾರ್ಯಾಗಾರ ಹಾಗೂ ಮಾಸಿಕ ಆಹಾರ ಕಿಟ್ ವಿತರಣೆ ಕಾರ್ಯಕ್ರಮ ನಡೆಯಿತು.
ಸತತ ಏಳು ವರ್ಷಗಳಿಂದ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ದಿವ್ಯಾಂಗ ರಕ್ಷಣಾ ಸಮಿತಿಯ 49ನೇ ಮಾಸಿಕ ಸವಲತ್ತು ವಿತರಣಾ ಕಾರ್ಯಕ್ರಮ ಇದಾಗಿತ್ತು.
ಕಾರ್ಯಕ್ರಮದಲ್ಲಿ ಆದರ್ಶ ಆಸ್ಪತ್ರೆಯ ಕ್ಯಾನ್ಸರ್ ತಜ್ಞ ಡಾ. ಅನಂತ ಎಸ್. ಮಠದ್ ಅವರು ಕ್ಯಾನ್ಸರ್‌ನ ಆರಂಭಿಕ ಲಕ್ಷಣಗಳು, ರೋಗವನ್ನು ತಡೆಗಟ್ಟುವ ಕ್ರಮಗಳು ಹಾಗೂ ಚಿಕಿತ್ಸಾ ವಿಧಾನಗಳ ಕುರಿತು ಮಾಹಿತಿ ನೀಡಿದರು.
ಇದೇ ವೇಳೆ ಆಯ್ಕೆಯಾದ ದಿವ್ಯಾಂಗರು ಹಾಗೂ ಅಶಕ್ತ ಫಲಾನುಭವಿಗಳಿಗೆ ಮಾಸಿಕ ಆಹಾರ ಧಾನ್ಯಗಳ ಕಿಟ್‌ಗಳನ್ನು ವಿತರಿಸಲಾಯಿತು.
ಕಾರ್ಯಕ್ರಮವನ್ನು ಸಮಿತಿಯ ಸಂಚಾಲಕ ಕೆ. ವಿಜಯ ಕೋಡವೂರು ಉದ್ಘಾಟಿಸಿದರು.
MCKS ಫೌಂಡೇಶನ್‌ನ ನಿಧಿ, ಜಿಲ್ಲಾ ಆಸ್ಪತ್ರೆಯ ಹೆಲ್ತ್ ಇನ್‌ಸ್ಪೆಕ್ಟರ್ ಮಂಜುನಾಥ್, ಆಪ್ತ ಸಮಾಲೋಚಕ ಮನು, ಮಹಿಳಾ ಸಮಿತಿ ಅಧ್ಯಕ್ಷೆ ಗುಣವತಿ ಕೋಡವೂರು, ಅಶೋಕ್ ಶೆಟ್ಟಿಗಾರ್, ಅಮಿತ್ ಗರ್ಡೇ ಹಾಗೂ ಓಸ್ ವೇಲ್ಡ್ ಪೇರರ್ ಉಪಸ್ಥಿತರಿದ್ದರು.

ಸರ್ವೋತ್ತಮ ಹೆರ್ಗ ಹಾಗೂ ಜಯ ಪೂಜಾರಿ ಸ್ವಾಗತಿಸಿದರು. ಹರೀಶ್ ಧನ್ಯವಾದ ಸಮರ್ಪಿಸಿದರು.
ಸಮಿತಿಯ ಈ ನಿರಂತರ ಸೇವಾ ಕಾರ್ಯವು ದಿವ್ಯಾಂಗರು ಹಾಗೂ ಅಶಕ್ತರಿಗೆ ಅಗತ್ಯ ನೆರವು ಒದಗಿಸುವುದರ ಜೊತೆಗೆ ಆರೋಗ್ಯ ಜಾಗೃತಿಗೂ ಮಹತ್ವ ನೀಡುತ್ತಿದೆ.







