ಉಡುಪಿ:ಮೇ 03:ಇಂದಿನ ದಿನವು ದ್ವಾದಶ ರಾಶಿಗಳವರಿಗೂ ವಿಭಿನ್ನ ಫಲಿತಾಂಶಗಳನ್ನು ತರಲಿದೆ. ಗ್ರಹಗಳ ಚಲನೆ ಮತ್ತು ನಕ್ಷತ್ರಗಳ ಪ್ರಭಾವದ ಹಿನ್ನೆಲೆಯಲ್ಲಿ, ಕೆಲವರಿಗೆ ಯಶಸ್ಸಿನ ಸೂಚನೆಗಳು ಕಂಡುಬಂದರೆ, ಇನ್ನೂ ಕೆಲವರಿಗೆ ಎಚ್ಚರಿಕೆ ಅಗತ್ಯವಿದೆ. ನಿಮ್ಮ ರಾಶಿಗೆ ಇಂದು ಹೇಗಿದೆ ಎಂಬುದನ್ನು ತಿಳಿದುಕೊಳ್ಳಿ ಮತ್ತು ದಿನವನ್ನು ಉತ್ತಮವಾಗಿ ರೂಪಿಸಿಕೊಳ್ಳಿ.
*01,🐏ಮೇಷರಾಶಿ🐏*
📃,ಇದುವರೆಗೂ ನಿಮ್ಮನ್ನು ವಿರೋಧಿಸುತ್ತಿದ್ದ ಜನರೇ ನಿಮ್ಮ ಗೆಳೆತನವನ್ನು ಬಯಸಿ ನಿಮ್ಮ ಬಳಿಬರುವರು. ಅವರು ನಿಜವಾದ ಕಾಳಜಿಯನ್ನು ತೋರಿದಲ್ಲಿ ಮಾತ್ರ ಸ್ನೇಹ ಸಂಬಂಧವನ್ನು ಮುಂದುವರೆಸಬಹುದು, ಜನಾಭಿಪ್ರಾಯವು ನಿಮ್ಮ ಪರವಾಗುವುದು ಜನ ಮನ್ನಣೆ ನಿಮಗಿಂದು ದೊರೆಯುವದು, ಗಮನಿಸಿ:-ಈ ದಿನ ನೀವು ಮಾಡುವ ಕೆಲಸಗಳು ನಿಮಗೆ ಶುಭವಾಗುವವು,
ಪರಿಹಾರ:-ಈದಿನವೆಂಕಟೇಶ್ವರನ ದರ್ಶನ ಮಾಡಿ,
*02,🐂ವೃಷಭರಾಶಿ🐂*
📃,ಕೆಲವು ಕಾಲದಿಂದ ತಟಸ್ಥಗೊಂಡಿದ್ದ ನಿಮ್ಮ ವ್ಯಾಪಾರ, ಸ್ವಉದ್ಯೋಗ ಯೋಜನೆಗಳಿಗೆ ಚಾಲನೆ ದೊರೆಯುವುದು ಮತ್ತು ಅದರಿಂದ ಸಾಕಾರಸಿದ್ದಿಯು ಲಭಿಸುವುದು, ಈ ದಿನ ನಿಮ್ಮನ್ನು ಆಲಸ್ಯವು ಅಸಫಲತೆ ನಿಮ್ಮದಾಗುವುದು, ಹೊಸ ಯೋಜನೆಗಳನ್ನು ಅಥವಾ ಹೊಸಕಾರ್ಯಗಳನ್ನು ನೀವಿಂದು ನಿಶ್ಚಿನಿತರಾಗಿ ಆರಂಭಿಸಬಹುದು,
ಗಮನಿಸಿ:- ಇಂದು ನಿಮ್ಮ ಗುರು ಹಿರಿಯರ ಮಾರ್ಗದರ್ಶನ ಪಡೆಯಿರಿ,
ಪರಿಹಾರ:-ಶ್ರೀ ಆಂಜನೇಯ ಸ್ತೋತ್ರ ಪಠಿಸಿ,
*03,👥ಮಿಥುನ ರಾಶಿ👥*
📃,ಈ ದಿನ ಮುಖ್ಯ ನಿರ್ಣಯಗಳನ್ನು ತೆಗೆದುಕೊಳ್ಳಲು, ಹೊಸ ಕಾರ್ಯವನ್ನು ಆರಂಭಿಸಲು ಖರೀದಿ/ಮಾರಾಟ ವ್ಯವಹಾರಗಳನ್ನು ಮಾಡಲು ಈ ದಿನ ಉತ್ತಮವಾಗಿದೆ, ಮನುಜನು ಮಾಡುವ ಕೆಲಸ ಯಶಸ್ವಿಯಾಗುವುದಕ್ಕೆ ಕೇವಲ ಲೌಕಿಕ ಪ್ರಯತ್ನ ಸಾಲದು,
ಗಮನಿಸಿ:- ನಿಮಗೆ ದೈವದ ಆಶೀರ್ವಾದವೂಬೇಕು.ಹಾಗಾಗಿ ನವಗ್ರಹಗಳ ದರ್ಶನಮಾಡಿ,
ಪರಿಹಾರ:-ನಿಮ್ಮ ಮನೆ ದೇವರ ಪ್ರಾರ್ಥನೆ ಮಾಡಿ,
*04,🦀ಕಟಕ ರಾಶಿ🦀*
📃,ನೆನೆಬಿದ್ದ ಕೆಲಸಗಳಿಂದಾಗಿ ನಿಮ್ಮಲ್ಲಿ ಇಂದು ಲವಲವಿಕೆ ಕಂಡುಬರುವುದಿಲ್ಲ.ನಿದ್ದೆಗೇಡು ಬುದ್ಧಿಗೇಡು ಎನ್ನುವಂತೆ ಸಣ್ಣಪುಟ್ಟ ವಿಷಯಗಳ ಮೇಲೆ ಕೂಗಾಡುವಿರಿ. ಆದಷ್ಟು ತಾಳ್ಮೆ ಇರಲಿ. ಈ ದಿನವೂ ನಿಮ್ಮ ಮನವುಅಸ್ತವ್ಯಸ್ತವಾಗಿರುವದು, ಶಾಂತಚಿತರಾಗಿರಲು ಪ್ರಯತ್ನಿಸಿ,
ಗಮನಿಸಿ:- ಇಂದು ನಿಮ್ಮ ಪರಿಸ್ಥಿತಿಗಳನ್ನು ಸಮರ್ಥ ರೀತಿಯಿಂದ ಎದುರಿಸಿ,
ಪರಿಹಾರ:-ಶಿವನ ಮಂತ್ರವನ್ನು ಪಠಿಸಿ,
*05,🦁ಸಿಂಹ ರಾಶಿ🦁*
📃,ಬಾಳಸಂಗಾತಿಯ ಆರೋಗ್ಯದ ಬಗ್ಗೆ ಎಚ್ಚರ ವಹಿಸಬೇಕಾಗುವುದು. ಉದ್ಯೋಗದಲ್ಲಿ ದಿಢೀರನೆ ಸಮಸ್ಯೆಗಳು ಎದುರಾಗುವ ಸಂದರ್ಭವಿದೆ. ಕೆಲವು ವಿಷಯಗಳಲ್ಲಿ ಆತುರದ ನಿರ್ಧಾರವು ಕೆಡಕುಗಳಿಗೆ ಮೂಲ ಕಾರಣವಾಗುವುದು. ಸೃಜನಶೀಲಕ್ಷೇತ್ರಗಳಲ್ಲಿರುವವರು. ಬಹಳ ದಿನಗಳಿಂದ ಕಾಯುತ್ತಿದ್ದ ಪ್ರಸಿದ್ಧಿ ಮತ್ತು ಗುರುತಿಸುವಿಕೆಯನ್ನು ಪಡೆಯುವ ಒಂದು ಯಶಸ್ವಿ ದಿನ,
ಗಮನಿಸಿ:- ಇಂದು ನಿಮಗೆ ಮನಃಶಾಂತಿ ದೊರೆಯುತ್ತದೆ,
ಪರಿಹಾರ:-ಶ್ರೀಗುರುರಾಘವೇಂದ್ರರ ಪ್ರಾರ್ಥನೆ ಮಾಡಿ,
*06,👩🦳ಕನ್ಯಾ ರಾಶಿ👩🦳*
📃,ಸಣ್ಣ ವಿಷಯವೂ ಗಹನವಾಗಿ ಕಾಡುವುದು. ಸಣ್ಣಪುಟ್ಟ ವಿಷಯಗಳೇ ನಿಮ್ಮ ಮನಸ್ಸಿನ ಚಿಂತೆಗೆ ಕಾರಣವಾಗುವವು. ಹಣಕಾಸಿನ ಮೇಲೆ ಹೆಚ್ಚಿನ ಹಿಡಿತವಿಟ್ಟುಕೊಳ್ಳುವುದು ಒಳ್ಳೆಯದು. ಸಾಲಕ್ಕೆ ಸಂಬಂದಿಸಿದ ವಿಚಾರಗಳನ್ನು ಈ ದಿನ ಮುಂದೂಡುವದು ಶುಭ,
ಗಮನಿಸಿ:- ಇಂದು ನಿಮ್ಮ ಮಕ್ಕಳ ಸಮಸ್ಯೆಗಳನ್ನು ನಿಭಾಯಿಸಲು ಸ್ವಲ್ಪ ಸಮಯ ತೆಗೆದುಕೊಳ್ಳಿ,
ಪರಿಹಾರ:-ನಿಮ್ಮಕುಲದೇವರಸ್ಮರಣೆ ಮಾಡಿ,
*07,⚖️ತುಲಾ ರಾಶಿ⚖️*
📃,ತುಂಬಿದ ಕೊಡ ತುಳಕಲಾರದು. ಅಂತೆಯೆ ಖಾಲಿ ಇರದ ಕೊಡವೂ ಶಬ್ದ ಮಾಡಲಾರದು. ಆದರೆ ನೀವು ತುಂಬಿದಕೊಡದಂತೆಸಮಯಕ್ಕೆ. ತಕ್ಕಂತೆ ನಡೆದುಕೊಳ್ಳುವ ಸ್ವಭಾವ ಇರುವ ನಿಮ್ಮನ್ನು ಎಲ್ಲರೂ ಮೆಚ್ಚುವರು. ಹಣಕಾಸಿನ ವಿಚಾರ ಪ್ರಗತಿಯಲ್ಲಿರುತ್ತದೆ. ಗಮನಿಸಿ:- ಇಂದು ನಿಮ್ಮ ದೇಹದ ನೋವು ಮತ್ತು ಒತ್ತಡ ಸಂಬಂಧಿತ ಸಮಸ್ಯೆಗಳನ್ನು ತಳ್ಳಿಹಾಕಲು ಸಾಧ್ಯವಿಲ್ಲ,
ಪರಿಹಾರ:-ಶಿವ ನಾಮ ಸ್ಮರಣೆ ಮಾಡಿ,
*08,🦂ವೃಶ್ಚಿಕ ರಾಶಿ🦂*
📃,ಇಟ್ಟ ಗುರಿ ಬಿಟ್ಟ ಬಾಣದಂತೆ ನಿಮ್ಮ ಗಮನವು ನಿರ್ದಿಷ್ಟವಾದ ಕಾರ್ಯದತ್ತ ಕೇಂದ್ರೀಕೃತವಾಗಿದೆ. ಹಾಗಾಗಿ ಗೆಲುವು ನಿಮ್ಮದಾಗುವುದು. ಗೆಳೆಯರು ನಿಮ್ಮನ್ನು ಅರ್ಥ ಮಾಡಿಕೊಂಡು ಸಹಾಯ ಹಸ್ತ ನೀಡುವರು,
ಗಮನಿಸಿ:- ಇಂದು ನಿಮ್ಮ ಖರ್ಚುಗಳಲ್ಲಿ ಅನಿರೀಕ್ಷಿತ ಏರಿಕೆ ನಿಮ್ಮ ಮನಸ್ಸಿನ ಶಾಂತಿಗೆ ಭಂಗ ತರುತ್ತದೆ,
ಪರಿಹಾರ:-ಗಣಪತಿಯನ್ನು ಪ್ರಾರ್ಥಿಸಿ,
*09,🏹ಧನುಸ್ಸು ರಾಶಿ🏹*
📃,ವ್ಯಾಪಾರ-ವ್ಯವಹಾರಗಳು ನಿಮ್ಮ ಮನಸ್ಸಿನಂತೆ ಆಗುವುದು ಹಾಗೂ ನೀವು ಹಾಕಿದ ಬಂಡವಾಳಕ್ಕೂ ಮಿಗಿಲಾಗಿ ಲಾಭಾಂಶ ದೊರೆಯುವುದು. ಬಂದ ಲಾಭಾಂಶಗಳಲ್ಲಿ ಸ್ವಲ್ಪ ಭಾಗದಷ್ಟು ದಾನ ಮಾಡಿ. ಈ ದಿನ ಮಾಡಿದ ಕಾರ್ಯಗಳಲ್ಲಿ ಜಯಶೀಲರಾಗುವಿರಿ, ಗಮನಿಸಿ:- ಇಂದುನಿಮ್ಮ ಹಿರಿಯರೊಂದಿಗೆ ಮನಸ್ತಾಪಕ್ಕಿಳಿಯದಿರಿ,
ಪರಿಹಾರ:-ವಿಷ್ಣು ಸಹಸ್ರ ನಾಮ ಜಪಿಸಿ,
*10,🐊ಮಕರ ರಾಶಿ🐊*
📃, ಮನೆಯಲ್ಲಿನ ಕಲಹಗಳು ನಿಮ್ಮನ್ನು ಮಾನಸಿಕ ಒತ್ತಡದಲ್ಲಿಸುತ್ತದೆ. ನಿಮ್ಮನ್ನು ಹೆಚ್ಚು ಪ್ರೀತಿಸುವ ವ್ಯಕ್ತಿಯನ್ನು ನೋಯಿಸದಿರಿ. ಇಂದು ನೀವು ಕೆಲಸದಲ್ಲಿ ಎಲ್ಲರಲ್ಲೂ ಮೇಲುಗೈ ಸಾಧಿಸಬಹುದು. ನಿಮ್ಮ ಕಾರ್ಯ ಸಾಧನೆಗೆ ಹಿರಿಯರ ಸಲಹೆ ಪಡೆಯಿರಿ. ನಿಮ್ಮ ಖರ್ಚುಗಳನ್ನು ನಿಯಂತ್ರಿಸಲು. ಕೇವಲ ಅಗತ್ಯವಾದ ವಸ್ತುಗಳನ್ನು ಮಾತ್ರ ಖರೀದಿಸಿ,
ಗಮನಿಸಿ:- ಇಂದು ನಿಮ್ಮ ಗುರು ಹಿರಿಯರ ಸಲಹೆ ಪಡೆಯಿರಿ,
ಪರಿಹಾರ:- ನಿಮ್ಮ ಕುಲ ದೇವರ ಪ್ರಾರ್ಥನೆ ಮಾಡಿ,
*11,⚱️ಕುಂಭ ರಾಶಿ⚱️*
📃,ನಿಮ್ಮ ಮತ್ತು ನಿಮ್ಮ ಗ್ರಾಹಕರ ನಡುವೆ ಇದ್ದ ಭಿನ್ನಾಭಿಪ್ರಾಯಗಳಿಗೆ ಮುಕ್ತಿ ದೊರೆಯುವುದು. ಈ ಹಿಂದೆ ಮಾಡಿದ ತಪ್ಪನ್ನೇ ಪುನಃ ಮಾಡುವುದು ಬುದ್ಧಿವಂತರ ಲಕ್ಷ ಣವಲ್ಲ, ನಿಮ್ಮ ಉದ್ಯೋಗದ ಕಡೆ ಗಮನವಿರಿಸಿ,
ಗಮನಿಸಿ: -ಮುಖ್ಯ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಇತರರನ್ನು ಕುರಡಾಗಿ ನಂಬಬೇಡಿ ಗುರು ಹಿರಿಯರ ಸಲಹೆ ಪಡೆಯಿರಿ,
ಪರಿಹಾರ:- ಇಂದು ನಿಮ್ಮಇಷ್ಟ ದೈವದ ಪ್ರಾರ್ಥನೆ ಮಾಡಿ,
*12,🐋ಮೀನ ರಾಶಿ🐋*
📃,ಈ ದಿನ ಸಾಲಕ್ಕೆ ಸಂಬಂಧ ಪಟ್ಟ ವಿಚಾರಗಳಿಂದ ದೂರವಿರಿ, ಅತಿ ಮುಖ್ಯ ನಿರ್ಣಯಗಳನ್ನು ಇಂದು ಮುಂದೂಡಿ, ಈ ದಿನ ದುಃಖದಾಯಕ ಘಟನೆಗಳು ಸಂಭವಿಸಬಹುದು, ಯಾವುದೇ ರೀತಿಯ ಮನಸ್ತಾಪ ಜಗಳಗಳಿಗೆ ಭಾಗಿಯಾಗದಿರಿ, ಮಾನಸಿಕ ಚಿಂತೆ ನಿಮ್ಮನ್ನಿಂದು ಕಾಡುವುದು,
ಗಮನಿಸಿ:- ಇಂದು ನಿಮ್ಮಖರ್ಚಿನ ಕಡೆ ವಿಶೇಷ ಗಮನವಿರಲಿ,
ಪರಿಹಾರ:- ಶಿವಪಂಚಾಕ್ಷರಿ ಮಂತ್ರವನ್ನು ಪಠಿಸಿ,
ಇವು ಇಂದಿನ ದ್ವಾದಶ ರಾಶಿಗಳ ದಿನಭವಿಷ್ಯ. ಗ್ರಹಗಳ ಪ್ರಭಾವವು ನಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತದೆ ಎಂಬ ನಂಬಿಕೆಯಲ್ಲಿ, ಈ ಮಾಹಿತಿಯನ್ನು ಮಾರ್ಗದರ್ಶನವಾಗಿ ಪಡೆದುಕೊಳ್ಳಿ. ನಾಳೆಯ ದಿನಭವಿಷ್ಯಕ್ಕಾಗಿ ದ್ರಶ್ಯ ನ್ಯೂಸ್ ವೆಬ್ ಸೈಟ್ ಭೇಟಿ ನೀಡುವುದನ್ನು ಮರೆಯಬೇಡಿ. ಶುಭ ದಿನ! 🌟
ಮೂಲ :ಪ್ರಾಚೀನ ಶಾಸ್ತ್ರಾಸಕ್ತ,ಎಲ್ ವಿವೇಕಾನಂದ ಆಚಾರ್ಯ







