Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

ಭಾರತದ ಹೊಸ ಪದವೀಧರರಿಗೆ ಎಐ ಸ್ಪೆಷಲಿಸ್ಟ್ ಮತ್ತು ಕಂಟೆಂಟ್ ಕ್ರಿಯೇಟರ್ ಅತ್ಯಂತ ವೇಗದ ಬೆಳವಣಿಗೆ ಇರುವ ಹುದ್ದೆಗಳು: ಲಿಂಕ್ಡ್‌ ಇನ್

Dhrishya News by Dhrishya News
16/04/2026
in ಸುದ್ದಿಗಳು
0
ಭಾರತದ ಹೊಸ ಪದವೀಧರರಿಗೆ ಎಐ ಸ್ಪೆಷಲಿಸ್ಟ್ ಮತ್ತು ಕಂಟೆಂಟ್ ಕ್ರಿಯೇಟರ್ ಅತ್ಯಂತ ವೇಗದ ಬೆಳವಣಿಗೆ ಇರುವ ಹುದ್ದೆಗಳು: ಲಿಂಕ್ಡ್‌ ಇನ್
0
SHARES
1
VIEWS
Share on FacebookShare on Twitter

ವೃತ್ತಿಜೀವನ ಆರಂಭಿಸುವವರಿಗೆ ಮಾನವ ಸಂಪನ್ಮೂಲ (ಎಚ್ ಆರ್), ಕನ್ಸಲ್ಟಿಂಗ್, ಐಟಿ ಮತ್ತು ಪ್ರಾಜೆಕ್ಟ್ ಮ್ಯಾನೇಜ್‌ ಮೆಂಟ್ ವಿಭಾಗಗಳು ವೇಗವಾಗಿ ಬೆಳೆಯುತ್ತಿರುವ ಕ್ಷೇತ್ರಗಳಾಗಿವೆ.

ಯುಟಿಲಿಟಿಸ್, ಶಿಕ್ಷಣ, ಸರ್ಕಾರಿ ಆಡಳಿತ, ಸಾರಿಗೆ ಮತ್ತು ಲಾಜಿಸ್ಟಿಕ್ಸ್ ಹಾಗೂ ಎನರ್ಜಿ ಟೆಕ್ನಾಲಜಿ ಕ್ಷೇತ್ರಗಳಲ್ಲಿ ಆರಂಭಿಕ ವೃತ್ತಿಜೀವನದ ಬೆಳವಣಿಗೆ ಉತ್ತಮವಾಗಿದೆ.

ವಿಜಯವಾಡ, ಭೋಪಾಲ್, ಜೈಪುರ, ಇಂದೋರ್, ಗ್ವಾಲಿಯರ್ ಮತ್ತು ವಡೋದರಾ ನಗರಗಳು ಉದ್ಯೋಗ ನೇಮಕಾತಿಯ ಪ್ರಮುಖ ಕೇಂದ್ರಗಳಾಗಿ ವೇಗದ ಬೆಳವಣಿಗೆ ದಾಖಲಿಸಿವೆ.

 

ಭಾರತ, 16 ಏಪ್ರಿಲ್, 2026: ವಿಶ್ವದ ಅತಿದೊಡ್ಡ ವೃತ್ತಿಪರ ಜಾಲವಾದ ಲಿಂಕ್ಡ್‌ ಇನ್, ಉದ್ಯೋಗ ಮಾರುಕಟ್ಟೆಗೆ ಪ್ರವೇಶಿಸುತ್ತಿರುವ ಹೊಸ ಪದವೀಧರರಿಗೆ ಅವಕಾಶಗಳು ಎಲ್ಲಿವೆ ಎಂದು ತಿಳಿಯಲು ನೆರವಾಗುಲು ಮತ್ತು ಬದಲಾಗುತ್ತಿರುವ ಉದ್ಯೋಗದ ಸ್ವರೂಪವನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುವ ನಿಟ್ಟಿನಲ್ಲಿ, ತನ್ನ ‘ಗ್ರಾಡ್ಸ್ ಗೈಡ್ 2026’ ಅನ್ನು ಬಿಡುಗಡೆ ಮಾಡಿದೆ. ಈ ವರದಿಯು ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಉದ್ಯೋಗಗಳು, ಕೈಗಾರಿಕೆಗಳು ಮತ್ತು ಸ್ಥಳಗಳ ಬಗ್ಗೆ ಒಳನೋಟಗಳನ್ನು ನೀಡುತ್ತದೆ. ಲಿಂಕ್ಡ್‌ ಇನ್ ಅಂಕಿಅಂಶಗಳ ಪ್ರಕಾರ, ಎಐ ಸ್ಪೆಷಲಿಸ್ಟ್, ಜನರೇಟಿವ್ ಎಐ ಇಂಜಿನಿಯರ್ ಮತ್ತು ಡಿಜಿಟಲ್ ಕಂಟೆಂಟ್ ಕ್ರಿಯೇಟರ್ ಹುದ್ದೆಗಳಿಗೆ ಯುವ ಪ್ರತಿಭೆಗಳ ನಡುವೆ ಹೆಚ್ಚಿನ ಬೇಡಿಕೆ ಕಂಡುಬರುತ್ತಿದೆ.

ಉದ್ಯಮ ಮತ್ತು ಜನಕೇಂದ್ರಿತ ವಲಯಗಳಲ್ಲಿ ಹೆಚ್ಚುತ್ತಿರುವ ಅವಕಾಶಗಳು

ಯುವ ವೃತ್ತಿಪರರಿಗೆ ಕೇವಲ ತಂತ್ರಜ್ಞಾನ ಮಾತ್ರವಲ್ಲದೆ, ಉದ್ಯಮ ಅಭಿವೃದ್ಧಿ ಮತ್ತು ಜನಕೇಂದ್ರಿತ ಕೈಗಾರಿಕೆಗಳಲ್ಲೂ ಅವಕಾಶಗಳು ಲಭ್ಯವಾಗುತ್ತಿವೆ. ಶಿಕ್ಷಣ, ಸರ್ಕಾರಿ ಆಡಳಿತ, ಸಾರಿಗೆ ಮತ್ತು ಲಾಜಿಸ್ಟಿಕ್ಸ್ ಹಾಗೂ ಎನರ್ಜಿ ಟೆಕ್ನಾಲಜಿ ಜೊತೆಗೆ ‘ಯುಟಿಲಿಟಿಸ್’ ಕ್ಷೇತ್ರವು ಈಗ ವೃತ್ತಿಜೀವನ ಆರಂಭಿಸುವವರಿಗೆ ವೇಗವಾಗಿ ಬೆಳೆಯುತ್ತಿರುವ ವಿಭಾಗಗಳಲ್ಲಿ ಒಂದಾಗಿದೆ. ಮಾನವ ಸಂಪನ್ಮೂಲ, ಕನ್ಸಲ್ಟಿಂಗ್, ಮಾಹಿತಿ ತಂತ್ರಜ್ಞಾನ (ಐಟಿ), ಮಾರ್ಕೆಟಿಂಗ್, ಪ್ರೋಗ್ರಾಂ ಮತ್ತು ಪ್ರಾಜೆಕ್ಟ್ ಮ್ಯಾನೇಜ್‌ ಮೆಂಟ್ ಹಾಗೂ ಬಿಸಿನೆಸ್ ಡೆವಲಪ್‌ ಮೆಂಟ್ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಆರಂಭಿಕ ಹಂತದ ಉದ್ಯೋಗಾವಕಾಶಗಳು ಹೆಚ್ಚುತ್ತಿವೆ.

 

*ಈ ಕುರಿತು ಲಿಂಕ್ಡ್‌ ಇನ್‌ ನ ಕರಿಯರ್ ಎಕ್ಸ್ ಪರ್ಟ್ ಮತ್ತು ಇಂಡಿಯಾ ಸೀನಿಯರ್ ಮ್ಯಾನೇಜಿಂಗ್ ಎಡಿಟರ್ ಆದ ನಿರಾಜಿತಾ ಬ್ಯಾನರ್ಜಿ* ಅವರು, “ತಮ್ಮ ವೃತ್ತಿಜೀವನವನ್ನು ಆರಂಭಿಸುತ್ತಿರುವ ಯುವ ವೃತ್ತಿಪರರಿಗೆ ನನ್ನ ಅತ್ಯುತ್ತಮ ಸಲಹೆ ಎಂದರೆ, ಅಸಾಂಪ್ರದಾಯಿಕ ಹಾದಿಗಳು ಮತ್ತು ಅನಿರೀಕ್ಷಿತ ಸ್ಥಳಗಳಲ್ಲಿ ಸಿಗುವ ಉದ್ಯೋಗ ಅವಕಾಶಗಳಿಗೆ ಮುಕ್ತವಾಗಿರಿ. ಸರಿಯಾದ ಅವಕಾಶವು ನೀವು ನಿರೀಕ್ಷಿಸಿದ ಕಡೆಯೇ ಇರಬೇಕೆಂದಿಲ್ಲ. ಅದು ಬೇರೆ ಯಾವುದೋ ಉದ್ಯಮದಲ್ಲಿರಬಹುದು, ಹೊಸ ನಗರದಲ್ಲಿರಬಹುದು ಅಥವಾ ನೀವು ಇದುವರೆಗೆ ಪರಿಗಣಿಸದ ಹುದ್ದೆಯೂ ಆಗಿರಬಹುದು. ಕೌಶಲಗಳು ಒಂದು ವಲಯದಿಂದ ಇನ್ನೊಂದು ವಲಯಕ್ಕೂ ಹೊಂದಿಕೊಳ್ಳಬಲ್ಲ ಇಂದಿನ ಕ್ರಿಯಾತ್ಮಕ ಉದ್ಯೋಗ ಮಾರುಕಟ್ಟೆಯಲ್ಲಿ, ವೃತ್ತಿಪರರು ಬಹುಮುಖ ಕೌಶಲಗಳನ್ನು ಬೆಳೆಸಿಕೊಳ್ಳುವುದು ಬಹಳ ಮುಖ್ಯ. ಆರಂಭಿಕ ವೃತ್ತಿಜೀವನವು ವಿವಿಧ ಹುದ್ದೆಗಳು ಮತ್ತು ಉದ್ಯಮಗಳ ಅನುಭವದಿಂದ ಹೆಚ್ಚು ಉತ್ತಮವಾಗಿ ರೂಪುಗೊಳ್ಳುತ್ತವೆ. ಆದರೆ ಮೊದಲ ಉದ್ಯೋಗದ ಹಾದಿಯು ಯಾವಾಗಲೂ ನೇರವಾಗಿರುವುದಿಲ್ಲ, ಹಾಗಾಗಿ ವೈವಿಧ್ಯಮಯ ಅನುಭವಗಳಿಗೆ ಮುಕ್ತವಾಗಿರುವುದು ನಿಮ್ಮ ವೃತ್ತಿಜೀವನಕ್ಕೆ ವೇಗವನ್ನು ನೀಡಲು ಮತ್ತು ನಿಮಗೆ ಸೂಕ್ತವಾದ ಉದ್ಯೋಗವನ್ನು ಕಂಡುಕೊಳ್ಳಲು ಸಹಾಯ ಮಾಡುತ್ತದೆ” ಎಂದು ಹೇಳುತ್ತಾರೆ.

 

ಲಿಂಕ್ಡ್‌ ಇನ್ ಗ್ರಾಡ್ಸ್ ಗೈಡ್ 2026ರ ಪ್ರಕಾರ ಪದವೀಧರರಿಗಾಗಿ ಈ ವರ್ಷದ ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ಉದ್ಯೋಗಗಳು, ವಲಯಗಳು ಮತ್ತು ಕಾರ್ಯವಿಭಾಗಗಳು ಇಲ್ಲಿವೆ:

 

ವೇಗವಾಗಿ ಬೆಳೆಯುತ್ತಿರುವ ಉದ್ಯೋಗ ಹುದ್ದೆಗಳು: ವೇಗವಾಗಿ ಬೆಳೆಯುತ್ತಿರುವ ವಲಯಗಳು

ವೇಗವಾಗಿ ಬೆಳೆಯುತ್ತಿರುವ ಕಾರ್ಯವಿಭಾಗಗಳು:

ಎಐ ಸ್ಪೆಷಲಿಸ್ಟ್ ಯುಟಿಲಿಟಿಸ್ ಮಾನವ ಸಂಪನ್ಮೂಲ (ಎಚ್ ಆರ್)

ಜನರೇಟಿವ್ ಎಐ ಇಂಜಿನಿಯರ್ ಶಿಕ್ಷಣ ಕನ್ಸಲ್ಟಿಂಗ್

ಡಿಜಿಟಲ್ ಕಂಟೆಂಟ್ ಕ್ರಿಯೇಟರ್ ಸರ್ಕಾರಿ ಆಡಳಿತ ಮಾಹಿತಿ ತಂತ್ರಜ್ಞಾನ (ಐಟಿ)

ಬ್ರ್ಯಾಂಡ್ ರೆಪ್ರೆಸೆಂಟೇಟಿವ್ ಟ್ರಾನ್ಸ್ ಪೋರ್ಟೇಷನ್ ಮತ್ತು ಲಾಜಿಸ್ಟಿಕ್ಸ್ ಮಾರ್ಕೆಟಿಂಗ್

ಐಟಿ ಸ್ಪೆಷಲಿಸ್ಟ್ ಎನರ್ಜಿ ಟೆಕ್ನಾಲಜಿ ಪ್ರೋಗ್ರಾಮ್ ಮತ್ತು ಪ್ರೊಜೆಕ್ಟ್ ಮ್ಯಾನೇಜ್ ಮೆಂಟ್

ಮೀಡಿಯಾ ಪ್ರೊಡಕ್ಷನ್ ಕ್ರೂ  

ಬಿಡ್ ಮ್ಯಾನೇಜರ್  

ಕೆಟಗರಿ ಮ್ಯಾನೇಜರ್  

ಟೆಕ್ನಿಕಲ್ ಸಪೋರ್ಟ್ ಕನ್ಸಲ್ಟೆಂಟ್  

ಸ್ಟೋರೇಜ್ ಇಂಜಿನಿಯರ್  

ಸಣ್ಣ ಸಂಸ್ಥೆಗಳು ಮತ್ತು ಮಹಾನಗರವಲ್ಲದ ನಗರಗಳಲ್ಲಿ ಹೆಚ್ಚುತ್ತಿರುವ ನೇಮಕಾತಿ

ಸಣ್ಣ ಕಂಪನಿಗಳು ಉದ್ಯೋಗ ಮಾರುಕಟ್ಟೆಯ ಪ್ರಮುಖ ಪ್ರವೇಶ ದ್ವಾರಗಳಾಗಿ ಬೆಳೆಯುತ್ತಿವೆ. ಹೀಗಾಗಿ, ವೃತ್ತಿಜೀವನ ಆರಂಭಿಸುವವರು ಕೇವಲ ದೊಡ್ಡ ಕಂಪನಿಗಳ ಬಗ್ಗೆ ಮಾತ್ರ ಯೋಚಿಸದೆ ಸಣ್ಣ ಸಂಸ್ಥೆಗಳಲ್ಲಿನ ಅವಕಾಶಗಳನ್ನು ಪರಿಗಣಿಸುವುದು ಅನಿವಾರ್ಯವಾಗಿದೆ. ಪದವೀಧರರಿಗೆ 1 ರಿಂದ 10 ಉದ್ಯೋಗಿಗಳಿರುವ ಸಣ್ಣ ಸಂಸ್ಥೆಗಳಲ್ಲಿನ ನೇಮಕಾತಿಯು 2023 ಮತ್ತು 2025ರ ನಡುವೆ 64% ರಷ್ಟು ಹೆಚ್ಚಾಗಿದೆ. ಇನ್ನು ಒಟ್ಟಾರೆ ಆರಂಭಿಕ ಹಂತದ ಉದ್ಯೋಗಿಗಳನ್ನು ಪರಿಗಣಿಸಿದರೆ, ಈ ಬೆಳವಣಿಗೆಯು 168% ರಷ್ಟಿದೆ. ಉದ್ಯೋಗಾವಕಾಶಗಳು ಈಗ ಭೌಗೋಳಿಕವಾಗಿ ಎಲ್ಲಾ ಕಡೆ ವ್ಯಾಪಿಸುತ್ತಿವೆ. ವಿಜಯವಾಡ, ಭೋಪಾಲ್, ಜೈಪುರ, ಇಂದೋರ್, ಗ್ವಾಲಿಯರ್ ಮತ್ತು ವಡೋದರಾ ಅಂತಹ ನಗರಗಳು ಈಗ ಮಹಾನಗರಗಳ ಜೊತೆಗೆ ಭಾರತದ ಪ್ರಮುಖ ನೇಮಕಾತಿ ಕೇಂದ್ರಗಳಾಗಿ ಹೊರಹೊಮ್ಮುತ್ತಿದ್ದು, ಇದು ಯುವಕರಿಗೆ ಸಾಂಪ್ರದಾಯಿಕ ಉದ್ಯೋಗ ಕೇಂದ್ರಗಳ ಹೊರತಾಗಿ ಹೆಚ್ಚಿನ ಆಯ್ಕೆಗಳನ್ನು ನೀಡುತ್ತಿದೆ.

 

ಇಂಟರ್ನ್‌ ಶಿಪ್ ಮೂಲಕ ವೃತ್ತಿಜೀವನದತ್ತ ಹೆಜ್ಜೆ

2020-2022ಕ್ಕೆ ಹೋಲಿಸಿದರೆ, 2023-2025ರ ಅವಧಿಯಲ್ಲಿ ಆರಂಭಿಕ ಹಂತದ ನೇಮಕಾತಿಗಳಲ್ಲಿ ಇಂಟರ್ನ್‌ ಶಿಪ್ ಪೂರ್ಣಗೊಳಿಸಿದವರ ಸಂಖ್ಯೆ ಹೆಚ್ಚಿದೆ. ಲಿಂಕ್ಡ್‌ ಇನ್ ದತ್ತಾಂಶದ ಪ್ರಕಾರ, ಕಾನೂನು, ಪ್ರಾಡಕ್ಟ್ ಮ್ಯಾನೇಜ್‌ ಮೆಂಟ್, ಕನ್ಸಲ್ಟಿಂಗ್, ಇಂಜಿನಿಯರಿಂಗ್ ಮತ್ತು ಬಿಸಿನೆಸ್ ಡೆವಲಪ್‌ ಮೆಂಟ್ ವಿಭಾಗಗಳಲ್ಲಿ ಇದು ಗಣನೀಯವಾಗಿ ಕಂಡುಬಂದಿದೆ. ಪದವಿ ಮುಗಿದ ನಂತರ ಇಂಟರ್ನ್‌ ಶಿಪ್ ಮಾಡುವ ಪ್ರವೃತ್ತಿಯೂ ಹೆಚ್ಚುತ್ತಿದ್ದು, ವಿಶೇಷವಾಗಿ ಪ್ರೋಗ್ರಾಂ ಮತ್ತು ಪ್ರಾಜೆಕ್ಟ್ ಮ್ಯಾನೇಜ್‌ ಮೆಂಟ್, ಇಂಜಿನಿಯರಿಂಗ್, ಐಟಿ, ಮೀಡಿಯಾ ಮತ್ತು ಮಾರ್ಕೆಟಿಂಗ್ ಕ್ಷೇತ್ರಗಳಲ್ಲಿ ಇದು ಹೆಚ್ಚಾಗಿ ಕಂಡುಬರುತ್ತಿದೆ.

 

ನೀವು ಈಗಷ್ಟೇ ವೃತ್ತಿಜೀವನ ಆರಂಭಿಸುತ್ತಿದ್ದರೆ, ಉದ್ಯೋಗ ಮಾರುಕಟ್ಟೆಯನ್ನು ಆತ್ಮವಿಶ್ವಾಸದಿಂದ ಎದುರಿಸಲು ಲಿಂಕ್ಡ್‌ ಇನ್ ವೃತ್ತಿಜೀವನ ತಜ್ಞರಾದ ನಿರಾಜಿತಾ ಬ್ಯಾನರ್ಜಿ ಅವರು ನೀಡಿರುವ ಕೆಲವು ಸಲಹೆಗಳು ಇಲ್ಲಿವೆ:

 “ಅದೃಶ್ಯ” ಉದ್ಯೋಗ ಮಾರುಕಟ್ಟೆಯನ್ನು ನಿರ್ಲಕ್ಷಿಸಬೇಡಿ: ನಿಮ್ಮ ಕೌಶಲಗಳು ನೀವು ಅಂದುಕೊಂಡಿದ್ದಕ್ಕಿಂತ ಹೆಚ್ಚು ಬಹುಮುಖಿಯಾಗಿವೆ. ಲಿಂಕ್ಡ್‌ ಇನ್‌ ನ ಎಐ-ಚಾಲಿತ ಉದ್ಯೋಗ ಹುಡುಕಾಟವು ನಿಮ್ಮ ಹಿನ್ನೆಲೆಗೆ ಹೊಂದಿಕೆಯಾಗುವ ಹುದ್ದೆಗಳನ್ನು ತೋರಿಸುವ ಮೂಲಕ ಇದನ್ನು ಸಾಬೀತುಪಡಿಸುತ್ತದೆ. ನೀವು ಯಾವತ್ತೂ ಪರಿಗಣಿಸದ ಉದ್ಯಮಗಳು ಅಥವಾ ಹುದ್ದೆಗಳನ್ನೂ ಇದು ನಿಮಗೆ ಸೂಚಿಸುತ್ತದೆ. ಈ ಎಐ-ಚಾಲಿತ ಉದ್ಯೋಗ ಹುಡುಕಾಟವು ಪ್ರಸ್ತುತ ಇಂಗ್ಲಿಷ್, ಸ್ಪ್ಯಾನಿಷ್, ಫ್ರೆಂಚ್, ಪೋರ್ಚುಗೀಸ್ ಮತ್ತು ಜರ್ಮನ್ ಭಾಷೆಗಳಲ್ಲಿ ಲಭ್ಯವಿದೆ.

● ಹೆಚ್ಚು ಫಲಿತಾಂಶ ನೀಡುವ ಕಡೆ ಗಮನಹರಿಸಿ: ಸಿಕ್ಕಸಿಕ್ಕ ಎಲ್ಲಾ ಕೆಲಸಗಳಿಗೂ ಅರ್ಜಿ ಸಲ್ಲಿಸುವ ಬದಲು, ನಿಮ್ಮ ಕೌಶಲಗಳಿಗೆ ಉತ್ತಮವಾಗಿ ಹೊಂದಿಕೆಯಾಗುವ ಉದ್ಯೋಗಗಳಿಗೆ ಆದ್ಯತೆ ನೀಡಿ. ಲಿಂಕ್ಡ್‌ ಇನ್‌ ನ ‘ಜಾಬ್ ಮ್ಯಾಚ್’ ನಂತಹ ಟೂಲ್ ಗಳು ನೀವು ಯಾವ ಉದ್ಯೋಗಕ್ಕೆ ಹೆಚ್ಚು ಸೂಕ್ತ ಎಂಬುದನ್ನು ತ್ವರಿತವಾಗಿ ಗುರುತಿಸಲು ಸಹಾಯ ಮಾಡುತ್ತವೆ. ಇದರಿಂದ ನೀವು ಹೆಚ್ಚು ಅವಕಾಶವಿರುವ ಅರ್ಜಿಗಳ ಮೇಲೆ ಹೆಚ್ಚಿನ ಸಮಯ ಕಳೆಯಬಹುದು.

● ಕೇವಲ ಸಾಮರ್ಥ್ಯವಲ್ಲ, ಪುರಾವೆಯನ್ನು ತೋರಿಸಿ: ನಿಮಗೆ ವರ್ಷಗಳ ಅನುಭವ ಇಲ್ಲದಿದ್ದರೂ ಪರವಾಗಿಲ್ಲ. ನೀವು ಏನು ಮಾಡಬಲ್ಲಿರಿ ಎಂಬುದನ್ನು ತೋರಿಸುವುದು ಇಲ್ಲಿ ಮುಖ್ಯ. ನೀವು ಮಾಡಿದ ಪ್ರಾಜೆಕ್ಟ್‌ ಗಳು, ಕೆಲಸದ ಉದಾಹರಣೆಗಳು ಮತ್ತು ನೀವು ಬೆಳೆಸಿಕೊಂಡ ಕೌಶಲಗಳನ್ನು ಹಂಚಿಕೊಳ್ಳಿ. ನೀವು ಬಳಸುವ Loveable ಅಥವಾ Replit ನಂತಹ ಎಐ ಟೂಲ್ ಗಳ ಮೂಲಕ ಕೌಶಲಗಳನ್ನು ದೃಢೀಕರಿಸುವುದರಿಂದ ಅಥವಾ ವೆರಿಫೈ ಮಾಡುವುದರಿಂದ ಉದ್ಯೋಗದಾತರು ನಿಮ್ಮ ಸಾಮರ್ಥ್ಯವನ್ನು ಬೇಗನೆ ಗುರುತಿಸಲು ಸಹಾಯ ಮಾಡುತ್ತದೆ.

● ಸಂಘಟಿತರಾಗಿರಿ ಮತ್ತು ಉತ್ಸಾಹ ಕಳೆದುಕೊಳ್ಳಬೇಡಿ:* ಅರ್ಜಿ ಸಲ್ಲಿಸಿದ ನಂತರ ಮುಂದೇನು ಎಂಬ ಗೊಂದಲ ಸಹಜ. ನಿಮ್ಮ ಅರ್ಜಿಯ ಸ್ಥಿತಿ ಮತ್ತು ಫಾಲೋ- ಅಪ್‌ ಗಳನ್ನು ಟ್ರ್ಯಾಕ್ ಮಾಡಲು ಲಿಂಕ್ಡ್‌ ಇನ್‌ ನ ‘ಜಾಬ್ ಟ್ರ್ಯಾಕರ್’ ಬಳಸಿ. ಅಲ್ಲದೆ, ನಿಮ್ಮ ನೆಟ್‌ ವರ್ಕ್‌ ನಲ್ಲಿ ಯಾರು ನಿಮಗೆ ಸಹಾಯ ಮಾಡಬಲ್ಲರು ಎಂಬುದನ್ನು ಗುರುತಿಸಿ.

● ಕಲಿಯಲು ‘ಫಾಲೋ’ ಮಾಡಿ:* ನಿಮಗೆ ಪರಿಚಯವಿರುವ ಮತ್ತು ನಂಬಿಕಸ್ತ ವ್ಯಕ್ತಿಗಳೊಂದಿಗೆ ಮಾತ್ರ ಕನೆಕ್ಟ್ ಆಗಿ. ಉಳಿದವರಿಗೆ ಕೇವಲ “ಫಾಲೋ” ಬಟನ್ ಒತ್ತಿ. ಇದರಿಂದ ಅವರ ಪೋಸ್ಟ್‌ ಗಳನ್ನು ನೋಡಲು ಮತ್ತು ಅವರ ವಿಷಯಗಳ ಬಗ್ಗೆ ಚರ್ಚಿಸಲು ನಿಮಗೆ ಸಾಧ್ಯವಾಗುತ್ತದೆ. ಲಿಂಕ್ಡ್‌ ಇನ್‌ ನ ಹೊಸ ‘ಪೀಪಲ್ ಸರ್ಚ್’ ಮೂಲಕ ನಿಮಗೆ ಸ್ಫೂರ್ತಿ ನೀಡುವ ವೃತ್ತಿಪರರನ್ನು ಹುಡುಕುವುದು ಮತ್ತು ಸಂಪರ್ಕಿಸುವುದು ಈಗ ಸುಲಭವಾಗಿದೆ (ಪ್ರಸ್ತುತ ಅಮೆರಿಕದಲ್ಲಿ ಮಾತ್ರ ಲಭ್ಯ).

Previous Post

ಶ್ರೀ ಬಬ್ಬುಸ್ವಾಮಿ ದೇವಸ್ಥಾನ (ಪಡುಪಾಲು) ಅಂಬಲಪಾಡಿ : ನೂತನ ಶಾಶ್ವತ ತಗಡು ಚಪ್ಪರ ಉದ್ಘಾಟನೆ..!!

Next Post

ಕೋಕಾ-ಕೋಲಾದ ವಿನೂತನ ಹಾಫ್‌ ಟೈಮ್ ಮೊಮೆಂಟ್ಸ್ ಪ್ರಚಾರ ಅಭಿಯಾನ ಬಿಡುಗಡೆ; ದಿಲ್ಜಿತ್ ದೋಸಾಂಜ್ ಮತ್ತು ಜಾನ್ವಿ ಕಪೂರ್ ರಾಯಭಾರಿಗಳಾಗಿ ನೇಮಕ..!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಕೋಕಾ-ಕೋಲಾದ ವಿನೂತನ ಹಾಫ್‌ ಟೈಮ್ ಮೊಮೆಂಟ್ಸ್ ಪ್ರಚಾರ ಅಭಿಯಾನ ಬಿಡುಗಡೆ; ದಿಲ್ಜಿತ್ ದೋಸಾಂಜ್ ಮತ್ತು ಜಾನ್ವಿ ಕಪೂರ್ ರಾಯಭಾರಿಗಳಾಗಿ ನೇಮಕ..!

ಕೋಕಾ-ಕೋಲಾದ ವಿನೂತನ ಹಾಫ್‌ ಟೈಮ್ ಮೊಮೆಂಟ್ಸ್ ಪ್ರಚಾರ ಅಭಿಯಾನ ಬಿಡುಗಡೆ; ದಿಲ್ಜಿತ್ ದೋಸಾಂಜ್ ಮತ್ತು ಜಾನ್ವಿ ಕಪೂರ್ ರಾಯಭಾರಿಗಳಾಗಿ ನೇಮಕ..!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಹೊಸ ವಿನ್ಯಾಸದ ನವೀಕರಣದೊಂದಿಗೆ ಯಮಹಾ ಫ್ಯಾಸಿನೊ ಶೈಲಿಯನ್ನು ಬದಲಾಯಿಸುತ್ತದೆ

ಹೊಸ ವಿನ್ಯಾಸದ ನವೀಕರಣದೊಂದಿಗೆ ಯಮಹಾ ಫ್ಯಾಸಿನೊ ಶೈಲಿಯನ್ನು ಬದಲಾಯಿಸುತ್ತದೆ

16/04/2026
ಇಂದಿನ ದ್ವಾದಶ ರಾಶಿಗಳ ದಿನ ಭವಿಷ್ಯ(ಏಪ್ರಿಲ್ 17 ಶುಕ್ರವಾರ )

ಇಂದಿನ ದ್ವಾದಶ ರಾಶಿಗಳ ದಿನ ಭವಿಷ್ಯ(ಏಪ್ರಿಲ್ 17 ಶುಕ್ರವಾರ )

16/04/2026
ಜಾಗತಿಕ ಮಟ್ಟದಲ್ಲಿ ‘ಮಾಹೆ’ ಶಿಕ್ಷಣದ ಹಿರಿಮೆ : ಐವಿಎಫ್‌ ಚಿಕಿತ್ಸೆಯಲ್ಲಿ ಆಫ್ರಿಕಾ ವೈದ್ಯನ ಅಪೂರ್ವ ಸಾಧನೆ ..!

ಜಾಗತಿಕ ಮಟ್ಟದಲ್ಲಿ ‘ಮಾಹೆ’ ಶಿಕ್ಷಣದ ಹಿರಿಮೆ : ಐವಿಎಫ್‌ ಚಿಕಿತ್ಸೆಯಲ್ಲಿ ಆಫ್ರಿಕಾ ವೈದ್ಯನ ಅಪೂರ್ವ ಸಾಧನೆ ..!

16/04/2026
ವಿಕಾಸ ಜನಸೇವಾ ಕಛೇರಿಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿ ಆಚರಣೆ

ವಿಕಾಸ ಜನಸೇವಾ ಕಛೇರಿಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿ ಆಚರಣೆ

16/04/2026

Recent News

ಹೊಸ ವಿನ್ಯಾಸದ ನವೀಕರಣದೊಂದಿಗೆ ಯಮಹಾ ಫ್ಯಾಸಿನೊ ಶೈಲಿಯನ್ನು ಬದಲಾಯಿಸುತ್ತದೆ

ಹೊಸ ವಿನ್ಯಾಸದ ನವೀಕರಣದೊಂದಿಗೆ ಯಮಹಾ ಫ್ಯಾಸಿನೊ ಶೈಲಿಯನ್ನು ಬದಲಾಯಿಸುತ್ತದೆ

16/04/2026
ಇಂದಿನ ದ್ವಾದಶ ರಾಶಿಗಳ ದಿನ ಭವಿಷ್ಯ(ಏಪ್ರಿಲ್ 17 ಶುಕ್ರವಾರ )

ಇಂದಿನ ದ್ವಾದಶ ರಾಶಿಗಳ ದಿನ ಭವಿಷ್ಯ(ಏಪ್ರಿಲ್ 17 ಶುಕ್ರವಾರ )

16/04/2026
ಜಾಗತಿಕ ಮಟ್ಟದಲ್ಲಿ ‘ಮಾಹೆ’ ಶಿಕ್ಷಣದ ಹಿರಿಮೆ : ಐವಿಎಫ್‌ ಚಿಕಿತ್ಸೆಯಲ್ಲಿ ಆಫ್ರಿಕಾ ವೈದ್ಯನ ಅಪೂರ್ವ ಸಾಧನೆ ..!

ಜಾಗತಿಕ ಮಟ್ಟದಲ್ಲಿ ‘ಮಾಹೆ’ ಶಿಕ್ಷಣದ ಹಿರಿಮೆ : ಐವಿಎಫ್‌ ಚಿಕಿತ್ಸೆಯಲ್ಲಿ ಆಫ್ರಿಕಾ ವೈದ್ಯನ ಅಪೂರ್ವ ಸಾಧನೆ ..!

16/04/2026
ವಿಕಾಸ ಜನಸೇವಾ ಕಛೇರಿಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿ ಆಚರಣೆ

ವಿಕಾಸ ಜನಸೇವಾ ಕಛೇರಿಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿ ಆಚರಣೆ

16/04/2026
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved