ಬ್ರಹ್ಮಾವರ: ತಾಲೂಕಿನ ಹೇರೂರು ಗ್ರಾಮದ ಸ್ನೇಹಾಲಯ ವೃದ್ಧಾಶ್ರಮದಿಂದ ಸುಮಾರು 18ರಿಂದ 19 ವರ್ಷ ಪ್ರಾಯದ ಕಿವುಡ ಹಾಗೂ ಮೂಗ ಯುವಕನೊಬ್ಬ ನಾಪತ್ತೆಯಾಗಿರುವ ಘಟನೆ ಆ.12ರಂದು ನಡೆದಿದೆ.
ಪಶ್ಚಿಮ ಬಂಗಾಳ ಮೂಲದ ಬೈಬೆಕ್ ಯೆಲ್ಲೋ (27) ಅವರು ಕಳೆದ ಮೂರು ವರ್ಷಗಳಿಂದ ಹೇರೂರು ಗ್ರಾಮದ ಸ್ನೇಹಾಲಯ ವೃದ್ಧಾಶ್ರಮದಲ್ಲಿ ಕೆಲಸ ಮಾಡುತ್ತಿದ್ದಾರೆ. 2025ರ ಮೇ 28ರಂದು ಸಾಮಾಜಿಕ ಕಾರ್ಯಕರ್ತೆ ವೆರುನಿಕಾ ಎಂಬವರು ಹೆಸರು ತಿಳಿಯದ ಕಿವುಡ ಹಾಗೂ ಮೂಗ ಯುವಕನನ್ನು ವೃದ್ಧಾಶ್ರಮಕ್ಕೆ ಕರೆತಂದು ಸೇರಿಸಿದ್ದರು ಎನ್ನಲಾಗಿದೆ .
ಆ.12ರಂದು ಬೆಳಿಗ್ಗೆ ಸುಮಾರು 8 ಗಂಟೆಗೆ ವೃದ್ಧಾಶ್ರಮದಲ್ಲಿದ್ದ ಯುವಕ ಕಾಣೆಯಾಗಿರುವುದು ಗಮನಕ್ಕೆ ಬಂದಿದೆ.
ಬಳಿಕ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹುಡುಕಾಟ ನಡೆಸಿದರೂ ಈವರೆಗೆ ಯುವಕ ಪತ್ತೆಯಾಗಿಲ್ಲ.
ಈ ಕುರಿತು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ.







