Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

ಕೋಕಾ-ಕೋಲಾದ ವಿನೂತನ ಹಾಫ್‌ ಟೈಮ್ ಮೊಮೆಂಟ್ಸ್ ಪ್ರಚಾರ ಅಭಿಯಾನ ಬಿಡುಗಡೆ; ದಿಲ್ಜಿತ್ ದೋಸಾಂಜ್ ಮತ್ತು ಜಾನ್ವಿ ಕಪೂರ್ ರಾಯಭಾರಿಗಳಾಗಿ ನೇಮಕ..!

Dhrishya News by Dhrishya News
16/04/2026
in ಸುದ್ದಿಗಳು
0
ಕೋಕಾ-ಕೋಲಾದ ವಿನೂತನ ಹಾಫ್‌ ಟೈಮ್ ಮೊಮೆಂಟ್ಸ್ ಪ್ರಚಾರ ಅಭಿಯಾನ ಬಿಡುಗಡೆ; ದಿಲ್ಜಿತ್ ದೋಸಾಂಜ್ ಮತ್ತು ಜಾನ್ವಿ ಕಪೂರ್ ರಾಯಭಾರಿಗಳಾಗಿ ನೇಮಕ..!
0
SHARES
13
VIEWS
Share on FacebookShare on Twitter

ರಾಷ್ಟ್ರೀಯ, 16 ಏಪ್ರಿಲ್ 2026: ಕೋಕಾ-ಕೋಲಾ ಇಂಡಿಯಾ ಸಂಸ್ಥೆಯು ‘ಕೋಕಾ ಕೋಲ ಹಾಫ್‌ ಟೈಮ್’ ಪ್ರಚಾರ ಅಭಿಯಾನ ಬಿಡುಗಡೆ ಮಾಡಿದ್ದು, ಈ ಅಭಿಯಾನಕ್ಕೆ ಜನಪ್ರಿಯ ಗಾಯಕ-ನಟ ದಿಲ್ಜಿತ್ ದೋಸಾಂಜ್ ಮತ್ತು ಬಾಲಿವುಡ್ ನಟಿ ಜಾನ್ವಿ ಕಪೂರ್ ಅವರನ್ನು ಕಂಪನಿಯು ರಾಯಭಾರಿಗಳನ್ನಾಗಿ ನೇಮಕ ಮಾಡಿದೆ. ದೈನಂದಿನ ಜೀವನದ ಬಿಡುವಿನ ಕ್ಷಣಗಳನ್ನು ಅಥವಾ ಹಾಫ್ ಟೈಮ್ ಅನ್ನು ಸಂಭ್ರಮಿಸುವ ಉದ್ದೇಶದಿಂದ ಈ ಅಭಿಯಾನ ರೂಪಿತಗೊಂಡಿದೆ.

ಒಂದು ‘ಹಾಫ್‌ಟೈಮ್’ ಅಥವಾ ಬಿಡುವಿನ ಸಮಯವು ಕೇವಲ ಆ ದಿನದ ಚಟುವಟಿಕೆಗಳಿಗೆ ವಿರಾಮ ನೀಡುವುದಷ್ಟೇ ಆಗಿರಬಾರದು, ಬದಲಿಗೆ ಅದು ನಿಮ್ಮನ್ನು ಮತ್ತಷ್ಟು ಉತ್ಸಾಹದಿಂದ ಕೆಲಸದಲ್ಲಿ ತೊಡಗಿಸಿಕೊಳ್ಳುವಂತೆ ಮಾಡಬೇಕು ಎಂಬ ನಂಬಿಕೆಯ ಮೇಲೆ ಈ ಅಭಿಯಾನ ನಿರ್ಮಿತವಾಗಿದೆ. ಕೋಕಾ-ಕೋಲಾ ತನ್ನ ರುಚಿಕರ ಮತ್ತು ಉಲ್ಲಾಸದಾಯಕ ಸ್ವಾದದೊಂದಿಗೆ, ಒಂದು ಆಹ್ಲಾದಕರ ವಿರಾಮದ ಪಾತ್ರವನ್ನು ಕೂಡ ನಿರ್ವಹಿಸುತ್ತದೆ. ದೈನಂದಿನ ಕ್ಷಣಗಳಲ್ಲಿ ಆತ್ಮೀಯತೆ ಮತ್ತು ಬಾಂಧವ್ಯದ ಭಾವನೆಯನ್ನು ಉಂಟುಮಾಡುತ್ತದೆ. ಕೋಕಾಕೋಲಾ ಸರಳ ಹಾಗೂ ಸುಲಭವಾಗಿ ಲಭ್ಯವಿರುವ ಒಂದು ಸಂಪ್ರದಾಯದಂತಾಗಿದ್ದು, ಜನರು ಪ್ರಸ್ತುತ ಕ್ಷಣವನ್ನು ಆನಂದಿಸಲು, ತಮ್ಮ ಸುತ್ತಮುತ್ತಲಿನವರೊಂದಿಗೆ ಹೆಚ್ಚು ಸಂತೋಷವಾಗಿರಲು ಮತ್ತು ಪರಿಸರದೊಂದಿಗೆ ಹುಮ್ಮಸ್ಸಿನಿಂದಿರಲು ಸಣ್ಣದಾದರೂ ಶಕ್ತಿಯುತವಾದ ‘ಹಾಫ್‌ ಟೈಮ್’ ಕಳೆಯಲು ಅನುವು ಮಾಡಿಕೊಡುತ್ತದೆ.

ಕೋಕಾ-ಕೋಲಾ ಇಂಡಿಯಾ ಮತ್ತು ನೈರುತ್ಯ ಏಷ್ಯಾದ ಮಾರ್ಕೆಟಿಂಗ್ ವಿಭಾಗದ ಸೀನಿಯರ್ ಡೈರೆಕ್ಟರ್ ಕಾರ್ತಿಕ್ ಸುಬ್ರಮಣಿಯನ್* ಅವರು ಮಾತನಾಡಿ, “ಇಂದಿನ ಗ್ರಾಹಕರು ಹಿಂದೆಂದಿಗಿಂತಲೂ ಹೆಚ್ಚು ಕಾರ್ಯನಿರತ ಮತ್ತು ವೇಗದ ಜೀವನಶೈಲಿಯನ್ನು ಹೊಂದಿದ್ದಾರೆ. ಆದರೂ, ಅವರು ಪ್ರಸ್ತುತ ಕ್ಷಣದಲ್ಲಿ ನೆಮ್ಮದಿಯಿಂದ ಇರಲು ಸಹಾಯ ಮಾಡುವ ಸಣ್ಣ ಮತ್ತು ಅರ್ಥಪೂರ್ಣ ವಿರಾಮಗಳಿಗೆ ಹೆಚ್ಚಿನ ಗಮನ ನೀಡುತ್ತಾರೆ. ತನ್ನ ವಿಶಿಷ್ಟ ರುಚಿಗೆ ಹೆಸರಾದ ಕೋಕಾ-ಕೋಲಾ, ದೀರ್ಘಕಾಲದವರೆಗೆ ಇಂತಹ ದೈನಂದಿನ ಸಂಭ್ರಮಾಚರಣೆಗಳ ಭಾಗವಾಗಿದೆ. ಒಂದು ಸರಳವಾದ ‘ಹಾಫ್ ಟೈಮ್’ (ವಿರಾಮ) ಜನರನ್ನು ಅವರ ಸುತ್ತಲಿನ ಪ್ರಮುಖ ವಿಷಯಗಳಿಗೆ ಹೇಗೆ ಹತ್ತಿರ ತರುತ್ತದೆ ಎಂಬುದನ್ನು ಈ ಅಭಿಯಾನವು ಸಾರುತ್ತದೆ” ಎಂದು ಹೇಳಿದರು.

ವಿಎಂಎಲ್ ನೇತೃತ್ವದ ‘ಡಬ್ಲ್ಯೂಪಿಪಿ ಓಪನ್ ಎಕ್ಸ್’ ರೂಪಿಸಿರುವ ಈ ಜಾಹೀರಾತು ಚಿತ್ರಗಳು, ನಾವು ದೈಹಿಕವಾಗಿ ಇರುವೆಡೆ ಮಾನಸಿಕವಾಗಿ ಇರದ ಆ ‘ಆಟೋಪೈಲಟ್’ ಕ್ಷಣಗಳ ನಡುವಿನ ಸೌಂದರ್ಯವನ್ನು ಸಾರುತ್ತವೆ. ರಿಹರ್ಸಲ್‌ ನ ಲಯದಲ್ಲಿ ಕಳೆದುಹೋದ ದಿಲ್ಜಿತ್ ದೋಸಾಂಜ್ ಇರಲಿ ಅಥವಾ ಸ್ನೇಹಿತರೊಂದಿಗೆ ಹರಟೆ ಹೊಡೆಯುವಾಗ ಆಲೋಚನೆಗಳಲ್ಲಿ ಮುಳುಗಿರುವ ಜಾನ್ವಿ ಕಪೂರ್ ಇರಲಿ, ಕೋಕಾ-ಕೋಲಾ ಇಲ್ಲಿ ಒಂದು ಚೇತೋಹಾರಿ ಕಿಡಿಯಂತೆ ಕೆಲಸ ಮಾಡುತ್ತದೆ. ಇದರ ಒಂದು ಸಿಪ್ ನಾವು ಮತ್ತೆ ಇಹಲೋಕಕ್ಕೆ ಮರಳುವಂತೆ ತರುತ್ತದೆ ಮತ್ತು ಪ್ರಸ್ತುತ ಕ್ಷಣದಲ್ಲಿ ನಮ್ಮನ್ನು ನೆಲೆಗೊಳಿಸುವ ಒಂದು ಉತ್ಸಾಹಭರಿತ ಅನುಭವವಾಗಿ ಬದಲಾಯಿಸುತ್ತದೆ.

*ಈ ಚಿತ್ರದ ಬಗ್ಗೆ ಮಾತನಾಡುತ್ತಾ, ವಿಎಂಎಲ್‌ ನ ಎಕ್ಸಿಕ್ಯೂಟಿವ್ ಕ್ರಿಯೇಟಿವ್ ಡೈರೆಕ್ಟರ್‌ ಗಳಾದ ನಕುಲ್ ಶರ್ಮಾ ಮತ್ತು ತೀರ್ಥ ಘೋಷ್* ಅವರು, “ನಮಗೆ ಈ ಪ್ರಚಾರ ಅಭಿಯಾನವು ಸಾರ್ವತ್ರಿಕ ಮಾನವ ಸತ್ಯವನ್ನು ಸಾರುವ ಪ್ರಯತ್ನವಾಗಿತ್ತು. ನಾವೆಲ್ಲರೂ ಆ ಕ್ಷಣದಲ್ಲಿ ಇರಲು ಬಯಸುತ್ತೇವೆ, ಆದರೆ ಆಧುನಿಕ ಜೀವನವು ನಮ್ಮನ್ನು ಆ ಕ್ಷಣವನ್ನು ಸವಿಯಲು ಬಿಡದೆ ನಿರಂತರವಾಗಿ ಬೇರೆಡೆಗೆ ಸೆಳೆಯುತ್ತದೆ. ಕೋಕಾ-ಕೋಲಾ ಕೇವಲ ಒಂದು ಪಾನೀಯವಲ್ಲ, ಅದು ನಮ್ಮನ್ನು ಇಹಲೋಕಕ್ಕೆ ಮರುಸಂಪರ್ಕಿಸುವ ಒಂದು ಪುಟ್ಟ ಕ್ಷಣ ಎಂದು ತೋರಿಸಲು ನಾವು ಬಯಸಿದ್ದೇವೆ. ನೀವು ಬೇರೆ ಆಲೋಚನೆಗಳಲ್ಲಿ ಕಳೆದುಹೋದ ಕ್ಷಣಗಳಿಂದ ಪ್ರಸ್ತುತಕ್ಕೆ ಮರಳಲು ಸಹಾಯ ಮಾಡುವ ಸರಳ ಮತ್ತು ಉತ್ಸಾಹದಾಯಕ ಮಾರ್ಗವಿದು. ಇದು ಆ ಕ್ಷಣವನ್ನು ಸವಿಯಲು ಪ್ರೇರೇಪಿಸುವ ಪ್ರಯತ್ನವಾಗಿದೆ” ಎಂದರು.

ಈ ಬೃಹತ್ ಪ್ರಚಾರ ಅಭಿಯಾನವು ಕರ್ನಾಟಕ, ದೆಹಲಿ, ಪಂಜಾಬ್, ಉತ್ತರ ಪ್ರದೇಶ, ಮಹಾರಾಷ್ಟ್ರ, ತಮಿಳುನಾಡು ಸೇರಿದಂತೆ ದೇಶದ ಪ್ರಮುಖ ಮಾರುಕಟ್ಟೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ. ಟೆಲಿವಿಷನ್, ಡಿಜಿಟಲ್ ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಈ ಅಭಿಯಾನವು ಜನರನ್ನು ತಲುಪಲಿದೆ. ಪ್ರಾದೇಶಿಕ ಸೊಗಡನ್ನು ಉಳಿಸಿಕೊಳ್ಳಲು ಸ್ಥಳೀಯ ಭಾಷೆಗಳಲ್ಲಿ ಕಥೆಯನ್ನು ಹೆಣೆಯಲಾಗಿದ್ದು, ದೆಹಲಿ, ಪಂಜಾಬ್, ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರಗಳಲ್ಲಿ ದಿಲ್ಜಿತ್ ದೋಸಾಂಜ್ ಅವರ ಚಿತ್ರಗಳು ಬಿಡುಗಡೆಯಾಗಲಿವೆ. ಇನ್ನು ತಮಿಳು ಆವೃತ್ತಿಯಲ್ಲಿ ಜಾನ್ವಿ ಕಪೂರ್ ಕಾಣಿಸಿಕೊಂಡಿದ್ದು, ವಿಶೇಷವಾಗಿ ಕನ್ನಡಕ್ಕಾಗಿಯೇ ಪ್ರತ್ಯೇಕ ಕಿರುಚಿತ್ರವನ್ನು ಸಿದ್ಧಪಡಿಸಲಾಗಿದೆ.

ಡಾನ್ ಭಟ್ ಅವರ ಮೂಲ ಸಂಗೀತ ಸಂಯೋಜನೆ, ವಿವೇಕ್ ಹರಿಹರನ್ ಮತ್ತು ಆರಿಫಾ ರೆಬೆಲ್ಲೊ ಅವರ ಗಾಯನ ಈ ಅಭಿಯಾನಕ್ಕೊಂದು ವಿಶಿಷ್ಟವಾದ ‘ರೆಟ್ರೋ’ ಸ್ಪರ್ಶ ನೀಡಿದೆ. ಇಂತಹ ಸ್ಥಳೀಯ ಕಥೆಗಳ ಮೂಲಕ ಕೋಕಾ-ಕೋಲಾ ಗ್ರಾಹಕರೊಂದಿಗೆ ತನ್ನ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುತ್ತಿದೆ ಮತ್ತು ಒಂದು ಸರಳ ‘ಕೋಕಾ-ಕೋಲಾ ಹಾಫ್‌ ಟೈಮ್’ನ ಶಕ್ತಿಯನ್ನು ಸಂಭ್ರಮಿಸುತ್ತಿದೆ.

Previous Post

ಭಾರತದ ಹೊಸ ಪದವೀಧರರಿಗೆ ಎಐ ಸ್ಪೆಷಲಿಸ್ಟ್ ಮತ್ತು ಕಂಟೆಂಟ್ ಕ್ರಿಯೇಟರ್ ಅತ್ಯಂತ ವೇಗದ ಬೆಳವಣಿಗೆ ಇರುವ ಹುದ್ದೆಗಳು: ಲಿಂಕ್ಡ್‌ ಇನ್

Next Post

ಏ.18-19 : ಅಂಬಲಪಾಡಿ ಪಡುಪಾಲು ಶ್ರೀ ಬಬ್ಬುಸ್ವಾಮಿ ಹಾಗೂ ಪರಿವಾರ ದೈವಗಳ ನೇಮೋತ್ಸವ

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಏ.18-19 : ಅಂಬಲಪಾಡಿ ಪಡುಪಾಲು ಶ್ರೀ ಬಬ್ಬುಸ್ವಾಮಿ ಹಾಗೂ ಪರಿವಾರ ದೈವಗಳ ನೇಮೋತ್ಸವ

ಏ.18-19 : ಅಂಬಲಪಾಡಿ ಪಡುಪಾಲು ಶ್ರೀ ಬಬ್ಬುಸ್ವಾಮಿ ಹಾಗೂ ಪರಿವಾರ ದೈವಗಳ ನೇಮೋತ್ಸವ

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ಪ್ರಾಯೋಜಕತ್ವದಲ್ಲಿ  – BOTTLE BOOTH ಕೊಡುಗೆ

ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ಪ್ರಾಯೋಜಕತ್ವದಲ್ಲಿ  – BOTTLE BOOTH ಕೊಡುಗೆ

13/08/2026
ಬ್ರಹ್ಮಾವರದ ವೃದ್ಧಾಶ್ರಮದಿಂದ ಯುವಕ ನಾಪತ್ತೆ..!

ಬ್ರಹ್ಮಾವರದ ವೃದ್ಧಾಶ್ರಮದಿಂದ ಯುವಕ ನಾಪತ್ತೆ..!

13/08/2026
ಇನ್ನಾ ಶ್ರೀ ವ್ಯಾಘ್ರ ಚಾಮುಂಡೇಶ್ವರಿ ದೈವಸ್ಥಾನದಲ್ಲಿ ಕಳ್ಳತನ: ₹1.20 ಲಕ್ಷ ನಗದು ಕಳವು..!

ಇನ್ನಾ ಶ್ರೀ ವ್ಯಾಘ್ರ ಚಾಮುಂಡೇಶ್ವರಿ ದೈವಸ್ಥಾನದಲ್ಲಿ ಕಳ್ಳತನ: ₹1.20 ಲಕ್ಷ ನಗದು ಕಳವು..!

13/08/2026
ಸುಮೇಧಾ ಫ್ಯಾಷನ್ ನಲ್ಲಿ ಮಹಿಳೆಯರಿಗಾಗಿ ಕಾನೂನು ಮಾಹಿತಿ ಕಾರ್ಯಕ್ರಮ

ಸುಮೇಧಾ ಫ್ಯಾಷನ್ ನಲ್ಲಿ ಮಹಿಳೆಯರಿಗಾಗಿ ಕಾನೂನು ಮಾಹಿತಿ ಕಾರ್ಯಕ್ರಮ

13/08/2026

Recent News