ಉಡುಪಿ :ಶ್ರೀ ಬಬ್ಬುಸ್ವಾಮಿ ದೇವಸ್ಥಾನ (ಪಡುಪಾಲು) ಅಂಬಲಪಾಡಿ ಇದರ ನೇಮೋತ್ಸವ ಸಮಿತಿಯ ವತಿಯಿಂದ ದೈವಸ್ಥಾನದ ಪ್ರಾಂಗಣದಲ್ಲಿ ನಿರ್ಮಿಸಲ್ಪಟ್ಟ ವಿಸ್ತ್ರತ ಶಾಶ್ವತ ತಗಡು ಚಪ್ಪರವನ್ನು ಅಂಬಲಪಾಡಿ ಶ್ರೀ ಜನಾರ್ಧನ ಮತ್ತು ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ಡಾ! ನಿ.ಬೀ. ವಿಜಯ ಬಲ್ಲಾಳ್ ಅವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ವೇದಮೂರ್ತಿ ಪುತ್ತೂರು ಉದಯ ತಂತ್ರಿ, ನೇಮೋತ್ಸವ ಸಮಿತಿಯ ಉಪಾಧ್ಯಕ್ಷರಾದ ಪಠೇಲರ ಮನೆ ಭರತ್ ಶೆಟ್ಟಿ ಅಂಬಲಪಾಡಿ, ಕೆ.ಮಂಜಪ್ಪ ಸುವರ್ಣ, ಗೌರವ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಅಂಬಲಪಾಡಿ, ಪ್ರಧಾನ ಕಾರ್ಯದರ್ಶಿಗಳಾದ ಯೋಗೀಶ್ ಶೆಟ್ಟಿ, ಸುನಿಲ್ ಕುಮಾರ್, ಗೌರವ ಕೋಶಾಧಿಕಾರಿ ಭರತ್ ರಾಜ್ ಕೆ.ಎನ್., ಜತೆ ಕಾರ್ಯದರ್ಶಿಗಳಾದ ಕೃಷ್ಣ ಅಂಬಲಪಾಡಿ, ಲಕ್ಷ್ಮಣ ಪೂಜಾರಿ, ಕೋಶಾಧಿಕಾರಿಗಳಾದ ಕೇಳು ನಾರಾಯಣ, ಪಠೇಲರ ಮನೆ ಶರತ್ ಶೆಟ್ಟಿ, ಹತ್ತು ಸಮಸ್ತರ ಗುರಿಕಾರ ದೇವದಾಸ್, ಪ್ರಧಾನ ಅರ್ಚಕ ವಿಠಲ, ಪ್ರಮುಖರಾದ ಜಯರಾಮ್ ಶೆಟ್ಟಿ ಅಂಬಲಪಾಡಿ, ಶಿವಾನಂದ, ಹೊನ್ನಯ್ಯ, ಸದಾನಂದ, ರಮೇಶ್, ಕರುಣಾಕರ ಸಹಿತ ನೇಮೋತ್ಸವ ಸಮಿತಿ ಸದಸ್ಯರು, ಹತ್ತು ಸಮಸ್ತರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.







