ಮಂಗಳೂರು: ಜಜೀರಾ ಏರ್‌ವೇಸ್ ಎಪ್ರಿಲ್ 8ರಿಂದ ಕುವೈಟ್ ಮತ್ತು ಮಂಗಳೂರು ನಡುವೆ ದಮ್ಮಾಮ್ ಮೂಲಕ ವಾರಕ್ಕೆ ಎರಡು ಬಾರಿ ವಿಶೇಷ ಚಾರ್ಟರ್ ವಿಮಾನ ಸೇವೆ ಆರಂಭಿಸಲು ಮುಂದಾಗಿದೆ. ಈ ಸೇವೆಗಳು ಪ್ರತಿ ಬುಧವಾರ ಮತ್ತು ರವಿವಾರ ಸಂಚರಿಸಲಿವೆ.
ಜೆ9 3417 ವಿಮಾನವು ಕುವೈಟ್‌ನಿಂದ ಬೆಳಗ್ಗೆ 8.40ಕ್ಕೆ ಹೊರಟು, ಸಂಜೆ 4.10ಕ್ಕೆ ಮಂಗಳೂರು ತಲುಪಲಿದೆ. ಜೆ9 3418 ವಿಮಾನವು ಮಂಗಳೂರಿನಿಂದ ಸಂಜೆ 4.55ಕ್ಕೆ ಹೊರಟು, ಕುವೈಟ್‌ಗೆ ರಾತ್ರಿ 7.40ಕ್ಕೆ ತಲುಪಲಿದೆ.
ಕೋವಿಡ್ ಅವಧಿಯಲ್ಲಿ ಇದೇ ಸಂಸ್ಥೆ ಮಂಗಳೂರಿಗೆ ಚಾರ್ಟರ್ ವಿಮಾನ ಸೇವೆ ನಡೆಸಿದ್ದ ಅನುಭವ ಹೊಂದಿದೆ. ಪ್ರಸ್ತುತ ಈ ಸೇವೆಗಳು ಡಿಜಿಸಿಎ ವಿಶೇಷ ಅನುಮತಿಯಡಿ ನಡೆಯಲಿದ್ದು, ಭವಿಷ್ಯದಲ್ಲಿ ಬೇಡಿಕೆ ಹೆಚ್ಚಿದರೆ ವಾರಕ್ಕೆ ನಾಲ್ಕು ವಿಮಾನಗಳವರೆಗೆ ಹೆಚ್ಚಿಸುವ ಯೋಜನೆಯೂ ಇದೆ ಎಂದು ಮೂಲಗಳು ತಿಳಿಸಿವೆ







