Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಕರಾವಳಿ

‘ಘನತೆಯಿಂದ ಸಾಯುವ ಹಕ್ಕು’ ಕುರಿತು ಕಾನೂನು ಅರಿವು ಅಗತ್ಯ: ಡಾ. ರವೀಂದ್ರನಾಥ ಶಾನುಭಾಗ್…!

Dhrishya News by Dhrishya News
07/03/2026
in ಕರಾವಳಿ, ಸುದ್ದಿಗಳು
0
‘ಘನತೆಯಿಂದ ಸಾಯುವ ಹಕ್ಕು’ ಕುರಿತು ಕಾನೂನು ಅರಿವು ಅಗತ್ಯ: ಡಾ. ರವೀಂದ್ರನಾಥ ಶಾನುಭಾಗ್…!
0
SHARES
3
VIEWS
Share on FacebookShare on Twitter

ಉಡುಪಿ, ಮಾ. 07: ಪ್ರಾಕೃತಿಕ ವೈಪರೀತ್ಯಗಳು ಅಥವಾ ಅಪಘಾತಗಳಿಂದಾಗಿ ವ್ಯಕ್ತಿ ಜೀವ-ಮರಣದ ಅಸಹಾಯಕ ಸ್ಥಿತಿಗೆ ತಲುಪಿದಾಗ, ಯಾವುದೇ ಚಿಕಿತ್ಸೆಯಿಂದ ಹಿಂದಿನ ಆರೋಗ್ಯ ಸ್ಥಿತಿಗೆ ಮರಳುವ ಸಾಧ್ಯತೆ ಇಲ್ಲವೆಂದು ತಿಳಿದ ಸಂದರ್ಭದಲ್ಲಿ ಘನತೆಯಿಂದ ಮರಣವನ್ನು ಆಯ್ಕೆಮಾಡಲು ವ್ಯಕ್ತಿ ಮುಂಚಿತವಾಗಿ ನೀಡುವ ವೈದ್ಯಕೀಯ ಸೂಚನೆಯನ್ನು ‘ಲಿವಿಂಗ್ ವಿಲ್’ ಅಥವಾ ‘ಅಡ್ವಾನ್ಸ್ ಮೆಡಿಕಲ್ ಡೈರೆಕ್ಟಿವ್’ ಎಂದು ಕರೆಯಲಾಗುತ್ತದೆ ಎಂದು ಉಡುಪಿ ಮಾನವ ಹಕ್ಕುಗಳ ರಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ರವೀಂದ್ರನಾಥ ಶಾನುಭಾಗ್ ತಿಳಿಸಿದರು.

ಮಾನವ ಹಕ್ಕುಗಳ ರಕ್ಷಣ ಪ್ರತಿಷ್ಠಾನದಿಂದ ಸಾಮಾಜಿಕ ಜಾಗೃತಿಗಾಗಿ ಕುಂಜಿಬೆಟ್ಟು ವೈಕುಂಠ ಬಾಳಿಗ ಕಾನೂನು ಮಹಾವಿದ್ಯಾಲಯದಲ್ಲಿ ಗುರುವಾರ ಆಯೋಜಿಸಿದ್ದ ಹಿರಿಯ ನಾಗರಿಕರ ರಕ್ಷಣೆಗೆ ಸಂಬಂಧಿಸಿದ ಕಾನೂನು ಅರಿವು ಕಾರ್ಯಕ್ರಮದಲ್ಲಿ ‘ಘನತೆಯಿಂದ ಸಾಯುವ ಹಕ್ಕು – ಒಂದು ಮೂಲಭೂತ ಹಕ್ಕು’ ವಿಷಯದ ಕುರಿತು ಅವರು ಉಪನ್ಯಾಸ ನೀಡಿದರು.

ಲಿವಿಂಗ್ ವಿಲ್‌ಗೆ ಪ್ರತ್ಯೇಕ ಕಾನೂನು ಮಾನ್ಯತೆ ಇಲ್ಲದಿದ್ದರೂ, ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಆಧಾರದ ಮೇಲೆ ಇದನ್ನು ರೂಪಿಸಲಾಗಿದೆ ಎಂದು ಅವರು ವಿವರಿಸಿದರು.

ಕಾರ್ಯಕ್ರಮದಲ್ಲಿ ವಾರ್ಧಕ್ಯದಲ್ಲಿ ಆರೋಗ್ಯಕರ ಹಾಗೂ ಆರಾಮದಾಯಕ ಜೀವನ ನಡೆಸುವ ವಿಧಾನ, ಔಷಧಗಳ ಸರಿಯಾದ ಬಳಕೆ, ಕಾನೂನು ಅರಿವು ಮತ್ತು ಹಿರಿಯರು ಎದುರಿಸುವ ಸಮಸ್ಯೆಗಳ ಕುರಿತು ಮಾಹಿತಿ ನೀಡಲಾಯಿತು. ಜೀವನದ ಅಂತಿಮ ಹಂತದಲ್ಲಿ ಇರುವವರಿಗೆ ನಾವು ಏನು ನೆರವು ನೀಡಬಹುದು, ಘನತೆಯಿಂದ ಸಾಯುವ ಹಕ್ಕಿನ ಅರ್ಥವೇನು, ಬದುಕಿನ ಕೊನೆಯಲ್ಲಿ ಗೌರವಯುತ ಹಾಗೂ ನೋವಿಲ್ಲದ ಮರಣವನ್ನು ಪಡೆಯುವ ಮಾರ್ಗಗಳು ಯಾವುವು ಎಂಬ ವಿಷಯಗಳನ್ನೂ ಡಾ| ಶಾನುಭಾಗ್ ವಿವರಿಸಿದರು.

ಸ್ವಯಂ ಚಿಕಿತ್ಸೆ ಅಪರಾಧ

ವೈದ್ಯರ ಸಲಹೆ ಇಲ್ಲದೆ ಸ್ವಯಂ ಔಷಧ ಸೇವಿಸುವುದು ಅಪಾಯಕಾರಿಯಷ್ಟೇ ಅಲ್ಲ, ಅದು ಕಾನೂನುಬದ್ಧವಾಗಿಯೂ ತಪ್ಪಾಗಿದೆ. ಈ ಕುರಿತು ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಬೇಕಿದೆ. ಇತರರ ನಿರ್ಲಕ್ಷ್ಯ ಅಥವಾ ತಪ್ಪುಗಳಿಂದ ಆರೋಗ್ಯ ಸಮಸ್ಯೆಗಳು ಉಂಟಾದರೆ ಅದು ಮಾನವ ನಿರ್ಮಿತ ಅಪರಾಧವಾಗುತ್ತದೆ. ಎಂಡೋಸಲ್ಫಾನ್ ದುರಂತದ ಪ್ರಕರಣದಲ್ಲಿ ಸಂತ್ರಸ್ತರ ಪರವಾಗಿ ನ್ಯಾಯಾಲಯದ ಮೆಟ್ಟಿಲೇರಿದ ಪರಿಣಾಮ ಅವರಿಗೆ ಈಗ ಸಹಾಯಧನ ದೊರೆಯುತ್ತಿದೆ ಎಂದು ಹೇಳಿದರು.

ಶಸ್ತ್ರಚಿಕಿತ್ಸೆಯಲ್ಲಿ ರೋಗಿಗಳ ಹಕ್ಕುಗಳು

ತಮಗೆ ಬಂದಿರುವ ರೋಗದ ಕುರಿತು ಸ್ಪಷ್ಟ ಮಾಹಿತಿ ಪಡೆಯುವುದು, ಲಭ್ಯವಿರುವ ಚಿಕಿತ್ಸೆಗಳ ಬಗ್ಗೆ ತಿಳಿದುಕೊಳ್ಳುವುದು, ಚಿಕಿತ್ಸೆ ಆಯ್ಕೆಮಾಡುವ ಹಕ್ಕು, ಚಿಕಿತ್ಸೆ ದೇಹದ ಮೇಲೆ ಬೀರುವ ಪರಿಣಾಮಗಳನ್ನು ಅರಿಯುವುದು ಹಾಗೂ ಬೇಕಾದರೆ ಚಿಕಿತ್ಸೆ ನಿರಾಕರಿಸುವ ಹಕ್ಕು ರೋಗಿಗಳಿಗೆ ಇದೆ. ಈ ವಿಷಯಗಳನ್ನು ವೈದ್ಯರು ತಿಳಿಸದಿದ್ದರೆ ರೋಗಿಗಳು ನ್ಯಾಯಾಲಯದ ಮೊರೆ ಹೋಗಬಹುದು ಎಂದು ಅವರು ತಿಳಿಸಿದರು.

Previous Post

ಬಜೆಟ್‌ನಲ್ಲಿ ಅನಿವಾಸಿ ಕನ್ನಡಿಗರ ಕಲ್ಯಾಣಕ್ಕೆ ಆದ್ಯತೆ ಇಲ್ಲ: ಪ್ರವಾಸಿ ಕೂಟ ವಿಟ್ಲ ಅಸಮಾಧಾನ….!

Next Post

ಮಂಗಳೂರು ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ: ತಿರುನಲ್ವೇಲಿ ಎಕ್ಸ್‌ಪ್ರೆಸ್ ಆರಂಭ…!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಮಂಗಳೂರು ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ: ತಿರುನಲ್ವೇಲಿ ಎಕ್ಸ್‌ಪ್ರೆಸ್ ಆರಂಭ…!

ಮಂಗಳೂರು ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ: ತಿರುನಲ್ವೇಲಿ ಎಕ್ಸ್‌ಪ್ರೆಸ್ ಆರಂಭ...!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಬಲ ಮುಂಗೈ ಇಲ್ಲದಿದ್ದರೂ ದಿಟ್ಟ ಸಾಧನೆ: UPSC ನಲ್ಲಿ ಕಾಜಲ್‌ಗೆ 167ನೇ ರ‍್ಯಾಂಕ್…!

ಬಲ ಮುಂಗೈ ಇಲ್ಲದಿದ್ದರೂ ದಿಟ್ಟ ಸಾಧನೆ: UPSC ನಲ್ಲಿ ಕಾಜಲ್‌ಗೆ 167ನೇ ರ‍್ಯಾಂಕ್…!

07/03/2026
ಇರಾನ್–ಇಸ್ರೇಲ್ ಸಂಘರ್ಷ ಪರಿಣಾಮ: ಮಂಗಳೂರು ವಿಮಾನ ನಿಲ್ದಾಣದಿಂದ ಅಂತರರಾಷ್ಟ್ರೀಯ ವಿಮಾನಗಳು ರದ್ದು…!

ಇರಾನ್–ಇಸ್ರೇಲ್ ಸಂಘರ್ಷ ಪರಿಣಾಮ: ಮಂಗಳೂರು ವಿಮಾನ ನಿಲ್ದಾಣದಿಂದ ಅಂತರರಾಷ್ಟ್ರೀಯ ವಿಮಾನಗಳು ರದ್ದು…!

07/03/2026
ಕರಾವಳಿಗೆ ನಿರ್ಲಕ್ಷ್ಯ ತೋರಿದ ರಾಜ್ಯ ಬಜೆಟ್: ಬ್ರಿಜೇಶ್ ಚೌಟ ಆಕ್ರೋಶ…!

ಕರಾವಳಿಗೆ ನಿರ್ಲಕ್ಷ್ಯ ತೋರಿದ ರಾಜ್ಯ ಬಜೆಟ್: ಬ್ರಿಜೇಶ್ ಚೌಟ ಆಕ್ರೋಶ…!

07/03/2026
ಅಕ್ರಮ ಸುಡುಮದ್ದು ತಯಾರಿ ಘಟಕದಲ್ಲಿ ಸ್ಫೋಟ, ಓರ್ವನ ಬಂಧನ…!

ಅಕ್ರಮ ಸುಡುಮದ್ದು ತಯಾರಿ ಘಟಕದಲ್ಲಿ ಸ್ಫೋಟ, ಓರ್ವನ ಬಂಧನ…!

07/03/2026

Recent News

ಬಲ ಮುಂಗೈ ಇಲ್ಲದಿದ್ದರೂ ದಿಟ್ಟ ಸಾಧನೆ: UPSC ನಲ್ಲಿ ಕಾಜಲ್‌ಗೆ 167ನೇ ರ‍್ಯಾಂಕ್…!

ಬಲ ಮುಂಗೈ ಇಲ್ಲದಿದ್ದರೂ ದಿಟ್ಟ ಸಾಧನೆ: UPSC ನಲ್ಲಿ ಕಾಜಲ್‌ಗೆ 167ನೇ ರ‍್ಯಾಂಕ್…!

07/03/2026
ಇರಾನ್–ಇಸ್ರೇಲ್ ಸಂಘರ್ಷ ಪರಿಣಾಮ: ಮಂಗಳೂರು ವಿಮಾನ ನಿಲ್ದಾಣದಿಂದ ಅಂತರರಾಷ್ಟ್ರೀಯ ವಿಮಾನಗಳು ರದ್ದು…!

ಇರಾನ್–ಇಸ್ರೇಲ್ ಸಂಘರ್ಷ ಪರಿಣಾಮ: ಮಂಗಳೂರು ವಿಮಾನ ನಿಲ್ದಾಣದಿಂದ ಅಂತರರಾಷ್ಟ್ರೀಯ ವಿಮಾನಗಳು ರದ್ದು…!

07/03/2026
ಕರಾವಳಿಗೆ ನಿರ್ಲಕ್ಷ್ಯ ತೋರಿದ ರಾಜ್ಯ ಬಜೆಟ್: ಬ್ರಿಜೇಶ್ ಚೌಟ ಆಕ್ರೋಶ…!

ಕರಾವಳಿಗೆ ನಿರ್ಲಕ್ಷ್ಯ ತೋರಿದ ರಾಜ್ಯ ಬಜೆಟ್: ಬ್ರಿಜೇಶ್ ಚೌಟ ಆಕ್ರೋಶ…!

07/03/2026
ಅಕ್ರಮ ಸುಡುಮದ್ದು ತಯಾರಿ ಘಟಕದಲ್ಲಿ ಸ್ಫೋಟ, ಓರ್ವನ ಬಂಧನ…!

ಅಕ್ರಮ ಸುಡುಮದ್ದು ತಯಾರಿ ಘಟಕದಲ್ಲಿ ಸ್ಫೋಟ, ಓರ್ವನ ಬಂಧನ…!

07/03/2026
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved