Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಕರಾವಳಿ

ಕುಳಾಯಿ ಮೀನುಗಾರಿಕಾ ಬಂದರು ಕಾಮಗಾರಿ ಪುನರಾರಂಭ….!

Dhrishya News by Dhrishya News
04/03/2026
in ಕರಾವಳಿ, ಸುದ್ದಿಗಳು
0
ಕುಳಾಯಿ ಮೀನುಗಾರಿಕಾ ಬಂದರು ಕಾಮಗಾರಿ ಪುನರಾರಂಭ….!
0
SHARES
1
VIEWS
Share on FacebookShare on Twitter

ಮಂಗಳೂರು, ಮಾ. 4: ನವಮಂಗಳೂರು ಬಂದರು ಪ್ರಾಧಿಕಾರ (ಎನ್‌ಎಂಪಿಎ) ವತಿಯಿಂದ ಕುಳಾಯಿಯಲ್ಲಿ ನಿರ್ಮಾಣವಾಗುತ್ತಿರುವ ಮೀನುಗಾರಿಕಾ ಬಂದರಿನ ಕಾಮಗಾರಿ ವರ್ಷಕ್ಕಿಂತ ಹೆಚ್ಚು ಅವಧಿಗೆ ಸ್ಥಗಿತಗೊಂಡಿದ್ದ ಬಳಿಕ ಇತ್ತೀಚೆಗೆ ಮರುಪ್ರಾರಂಭಗೊಂಡಿದೆ. ಪ್ರಸ್ತುತ ಬ್ರೇಕ್‌ವಾಟರ್ ಭಾಗದಲ್ಲಿ ಟೆಟ್ರಾಪಾಡ್ ಅಳವಡಿಸುವ ಕೆಲಸ ನಡೆಯುತ್ತಿದೆ.

ಆದರೆ ತಮ್ಮ ಆಗ್ರಹದಂತೆ ಬ್ರೇಕ್‌ವಾಟರ್ ಉದ್ದವನ್ನು ವಿಸ್ತರಿಸುವ ಪ್ರಸ್ತಾಪಕ್ಕೆ ಸ್ಪಂದನೆ ಸಿಗದಿರುವುದು ಸ್ಥಳೀಯ ಮೀನುಗಾರರಲ್ಲಿ ಅಸಮಾಧಾನ ಹುಟ್ಟಿಸಿದೆ.

ನವಮಂಗಳೂರು ಬಂದರು ನಿರ್ಮಾಣದ ಸಂದರ್ಭದಲ್ಲಿ ಭೂಸ್ವಾಧೀನದಿಂದ ಅನೇಕ ನಾಡದೋಣಿ ಮೀನುಗಾರರು ಜೀವನೋಪಾಯ ಕಳೆದುಕೊಂಡಿದ್ದರು. ಅವರಿಗೆ ಪರ್ಯಾಯವಾಗಿ ಕುಳಾಯಿಯಲ್ಲಿ ಸರ್ವಋತು ಮೀನುಗಾರಿಕಾ ಬಂದರು ನಿರ್ಮಿಸಬೇಕು ಎಂಬುದು ದೀರ್ಘಕಾಲದ ಬೇಡಿಕೆಯಾಗಿತ್ತು. ₹196.51 ಕೋಟಿ ವೆಚ್ಚದ ಯೋಜನೆಯನ್ನು ಎನ್‌ಎಂಪಿಎ ಕೈಗೆತ್ತಿಕೊಂಡಾಗ ಮೀನುಗಾರರಲ್ಲಿ ನಿರೀಕ್ಷೆ ಮೂಡಿತ್ತು. ಆದರೆ ಮೂಲ ವಿನ್ಯಾಸ ಹೊರಬಿದ್ದ ಬಳಿಕ ಆ ನಿರೀಕ್ಷೆ ಕ್ಷೀಣಿಸಿತು.

ಮೇದಿಂದ ಸೆಪ್ಟೆಂಬರ್‌ವರೆಗೆ ಕುಳಾಯಿ ಸಮುದ್ರತೀರದಲ್ಲಿ ಅಲೆಗಳ ತೀವ್ರತೆ 800 ಮೀಟರ್ ದೂರದವರೆಗೂ ವ್ಯಾಪಿಸುತ್ತಿರುವುದರಿಂದ ಪ್ರಸ್ತುತ ವಿನ್ಯಾಸದ ಬ್ರೇಕ್‌ವಾಟರ್ ಸಮರ್ಪಕವಾಗುವುದಿಲ್ಲ ಎನ್ನುವುದು ಮೀನುಗಾರರ ವಾದ. ಉತ್ತರ ಭಾಗದ ಬ್ರೇಕ್‌ವಾಟರ್ ಉದ್ದವನ್ನು 831 ಮೀಟರ್‌ನಿಂದ 1,081 ಮೀಟರ್‌ಗೆ ಹಾಗೂ ದಕ್ಷಿಣ ಭಾಗದ ಉದ್ದವನ್ನು 262 ಮೀಟರ್‌ನಿಂದ 981 ಮೀಟರ್‌ಗೆ ಹೆಚ್ಚಿಸಬೇಕು ಎಂದು ಅವರು ಆಗ್ರಹಿಸಿದ್ದರು. ಈ ಸಂಬಂಧ ಹಲವು ಬಾರಿ ಪ್ರತಿಭಟನೆ ನಡೆಸಲಾಗಿತ್ತು. ಇದರಿಂದ ಕಾಮಗಾರಿ ತಾತ್ಕಾಲಿಕವಾಗಿ ನಿಲ್ಲಿಸಲಾಗಿತ್ತು.

ಮೀನುಗಾರಿಕಾ ಸಚಿವರು, ಸಂಸದರು ಹಾಗೂ ಸ್ಥಳೀಯ ಶಾಸಕರ ಸಮ್ಮುಖದಲ್ಲಿ ಸಭೆಗಳು ನಡೆದರೂ ಅಂತಿಮ ನಿರ್ಧಾರವಾಗಿಲ್ಲವೆಂದು ದಕ್ಷಿಣ ಕನ್ನಡ ಕರಾವಳಿ ಮೂಲ ಮೀನುಗಾರರ ಸಂಘದ ಅಧ್ಯಕ್ಷ ಅಶ್ವತ್ಥ ಕಾಂಚನ್ ತಿಳಿಸಿದ್ದಾರೆ. “ದೀರ್ಘ ಹೋರಾಟದ ಬಳಿಕ ನಾವು ನಿರಾಶರಾಗಿದ್ದೇವೆ. ನಮ್ಮ ಬೇಡಿಕೆಗಳಿಗೆ ಸ್ಪಂದನೆ ಸಿಗದೆ ಕೈಚೆಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ,” ಎಂದು ಅವರು ಹೇಳಿದ್ದಾರೆ.

ಸ್ಥಳೀಯ ಮೀನುಗಾರ ಶರತ್ ಬಂಗೇರ ಮಾತನಾಡಿ, “ಮೂಲ ವಿನ್ಯಾಸದಲ್ಲೇ ಕಾಮಗಾರಿ ಮುಂದುವರಿಯುತ್ತಿದೆ. ಇದರಿಂದ ಇದು ನಿಜಾರ್ಥದಲ್ಲಿ ಸರ್ವಋತು ಬಂದರಾಗುವುದಿಲ್ಲ,” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಇನ್ನೊಂದೆಡೆ, ಬ್ರೇಕ್‌ವಾಟರ್ ಕಾಮಗಾರಿ ದೀರ್ಘಕಾಲ ನಿಲ್ಲಿಸಿದರೆ ಅದರ ಕೋರ್ ಲೇಯರ್ ದುರ್ಬಲಗೊಳ್ಳುವ ಸಾಧ್ಯತೆ ಇದೆ ಎಂದು ಎನ್‌ಎಂಪಿಎ ವಲಯ ತಿಳಿಸಿದೆ. ಈಗಾಗಲೇ ಉತ್ತರ ಭಾಗದಲ್ಲಿ 560 ಮೀಟರ್ ಕಾಮಗಾರಿ ಪೂರ್ಣಗೊಂಡಿದ್ದು, ಅದರಲ್ಲಿ 300 ಮೀಟರ್ ಭಾಗಕ್ಕೆ ಟೆಟ್ರಾಪಾಡ್ ಅಳವಡಿಸಲಾಗಿದೆ. ದಕ್ಷಿಣ ಭಾಗದ 262 ಮೀಟರ್ ಕಾಮಗಾರಿ ಬಹುತೇಕ ಮುಕ್ತಾಯಗೊಂಡಿದೆ. ಈ ಹಂತದಲ್ಲಿ ವಿನ್ಯಾಸ ಬದಲಾವಣೆ ಮಾಡಲು ಹೆಚ್ಚಿನ ಅನುದಾನ ಅಗತ್ಯವಿದೆ ಎನ್ನುವುದು ಪ್ರಾಧಿಕಾರದ ವಾದ.

ಕಾಮಗಾರಿ ಮರುಪ್ರಾರಂಭದ ಕುರಿತು ಮೀನುಗಾರರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಾಗಿಲ್ಲ ಎಂಬ ಆರೋಪ ಕೇಳಿಬಂದಿದೆ. ಯೋಜನೆಗೆ ತಾಂತ್ರಿಕ ಸಲಹೆ ನೀಡುತ್ತಿರುವುದು ಸುರತ್ಕಲ್ ಎನ್‌ಐಟಿಕೆ ಆಗಿದ್ದು, ಗುತ್ತಿಗೆ ಕಾರ್ಯವನ್ನು ಎಸ್ಎಪಿಎಲ್-ಜಿಸಿಸಿ ಜಾಯಿಂಟ್ ವೆಂಚರ್ ಸಂಸ್ಥೆ ನಿರ್ವಹಿಸುತ್ತಿದೆ.

ಬಂದರಿನ ವಿನ್ಯಾಸದಲ್ಲಿ ತಿದ್ದುಪಡಿ ಮಾಡುವ ಸಾಧ್ಯತೆ ಕುರಿತು ಕೇಳಿದ ಪ್ರಶ್ನೆಗೆ ಸಂಬಂಧಿಸಿದ ಎನ್‌ಎಂಪಿಎ ಅಧಿಕಾರಿಗಳು ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.

Previous Post

ತೀರಾ ಸಮೀಪವಾಗಿ ಹಾರಿದ ವಿಮಾನ – ಪುತ್ತೂರಿನ ಜನರಲ್ಲಿ ಕುತೂಹಲ ಹಾಗೂ ಆತಂಕ….!

Next Post

ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ: ಯುವಕನ ದಾರುಣ ಅಂತ್ಯ…!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ: ಯುವಕನ ದಾರುಣ ಅಂತ್ಯ…!

ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ: ಯುವಕನ ದಾರುಣ ಅಂತ್ಯ...!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಇಂದಿನ ದ್ವಾದಶ ರಾಶಿಗಳ ದಿನ ಭವಿಷ್ಯ(ಮೇ 05 ಮಂಗಳವಾರ )

ಇಂದಿನ ದ್ವಾದಶ ರಾಶಿಗಳ ದಿನ ಭವಿಷ್ಯ(ಮೇ 05 ಮಂಗಳವಾರ )

05/05/2026
ಯಕ್ಷಗಾನ ಸಾಧಕರಿಗೆ ರಾಜ್ಯ ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪ್ರದಾನ

ಯಕ್ಷಗಾನ ಸಾಧಕರಿಗೆ ರಾಜ್ಯ ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪ್ರದಾನ

04/05/2026
ಓಕ್ಲೆ ಮೆಟಾ ಪರ್ಫಾರ್ಮೆನ್ಸ್ AI ಗ್ಲಾಸ್‌ಗಳೊಂದಿಗೆ ಕ್ರೀಸ್‌ಗೆ ಸ್ಮಾರ್ಟ್ ಅಥ್ಲೆಟಿಕ್ ಒಳನೋಟ ನೀಡಲಿರುವ ವಿರಾಟ್ ಕೊಹ್ಲಿ

ಓಕ್ಲೆ ಮೆಟಾ ಪರ್ಫಾರ್ಮೆನ್ಸ್ AI ಗ್ಲಾಸ್‌ಗಳೊಂದಿಗೆ ಕ್ರೀಸ್‌ಗೆ ಸ್ಮಾರ್ಟ್ ಅಥ್ಲೆಟಿಕ್ ಒಳನೋಟ ನೀಡಲಿರುವ ವಿರಾಟ್ ಕೊಹ್ಲಿ

04/05/2026
ಅನಿಲ-ಇಂಧನ ಕೊರತೆ ದೇಶದ ಆರ್ಥಿಕತೆಗೆ ಹೊಡೆತ: ಸ್ವಾವಲಂಬನೆಗೆ ಸಾಮಾಜಿಕ ಚಿಂತಕರ ಒತ್ತಾಯ..!

ಅನಿಲ-ಇಂಧನ ಕೊರತೆ ದೇಶದ ಆರ್ಥಿಕತೆಗೆ ಹೊಡೆತ: ಸ್ವಾವಲಂಬನೆಗೆ ಸಾಮಾಜಿಕ ಚಿಂತಕರ ಒತ್ತಾಯ..!

04/05/2026

Recent News

ಇಂದಿನ ದ್ವಾದಶ ರಾಶಿಗಳ ದಿನ ಭವಿಷ್ಯ(ಮೇ 05 ಮಂಗಳವಾರ )

ಇಂದಿನ ದ್ವಾದಶ ರಾಶಿಗಳ ದಿನ ಭವಿಷ್ಯ(ಮೇ 05 ಮಂಗಳವಾರ )

05/05/2026
ಯಕ್ಷಗಾನ ಸಾಧಕರಿಗೆ ರಾಜ್ಯ ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪ್ರದಾನ

ಯಕ್ಷಗಾನ ಸಾಧಕರಿಗೆ ರಾಜ್ಯ ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪ್ರದಾನ

04/05/2026
ಓಕ್ಲೆ ಮೆಟಾ ಪರ್ಫಾರ್ಮೆನ್ಸ್ AI ಗ್ಲಾಸ್‌ಗಳೊಂದಿಗೆ ಕ್ರೀಸ್‌ಗೆ ಸ್ಮಾರ್ಟ್ ಅಥ್ಲೆಟಿಕ್ ಒಳನೋಟ ನೀಡಲಿರುವ ವಿರಾಟ್ ಕೊಹ್ಲಿ

ಓಕ್ಲೆ ಮೆಟಾ ಪರ್ಫಾರ್ಮೆನ್ಸ್ AI ಗ್ಲಾಸ್‌ಗಳೊಂದಿಗೆ ಕ್ರೀಸ್‌ಗೆ ಸ್ಮಾರ್ಟ್ ಅಥ್ಲೆಟಿಕ್ ಒಳನೋಟ ನೀಡಲಿರುವ ವಿರಾಟ್ ಕೊಹ್ಲಿ

04/05/2026
ಅನಿಲ-ಇಂಧನ ಕೊರತೆ ದೇಶದ ಆರ್ಥಿಕತೆಗೆ ಹೊಡೆತ: ಸ್ವಾವಲಂಬನೆಗೆ ಸಾಮಾಜಿಕ ಚಿಂತಕರ ಒತ್ತಾಯ..!

ಅನಿಲ-ಇಂಧನ ಕೊರತೆ ದೇಶದ ಆರ್ಥಿಕತೆಗೆ ಹೊಡೆತ: ಸ್ವಾವಲಂಬನೆಗೆ ಸಾಮಾಜಿಕ ಚಿಂತಕರ ಒತ್ತಾಯ..!

04/05/2026
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved