Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಕರಾವಳಿ

ಚಿನ್ನ ತೊಳೆಯುವ ನೆಪದಲ್ಲಿ ವೃದ್ಧೆಗೆ ವಂಚನೆ: ಬಿಹಾರ ಮೂಲದ ಆರೋಪಿ ಬಂಧನ…!

Dhrishya News by Dhrishya News
02/03/2026
in ಕರಾವಳಿ, ಸುದ್ದಿಗಳು
0
ಚಿನ್ನ ತೊಳೆಯುವ ನೆಪದಲ್ಲಿ ವೃದ್ಧೆಗೆ ವಂಚನೆ: ಬಿಹಾರ ಮೂಲದ ಆರೋಪಿ ಬಂಧನ…!

Indian Traditional Gold Necklace shot in studio light.

0
SHARES
13
VIEWS
Share on FacebookShare on Twitter

ಬೆಳ್ತಂಗಡಿ,ಮಾ. 2: ಕಾಶಿಪಟ್ಟ ಗ್ರಾಮದ ಪಣಿಲಾಜೆಯಲ್ಲಿ ವೃದ್ಧೆಯೊಬ್ಬರನ್ನು ಗುರಿಯಾಗಿಸಿಕೊಂಡು ಚಿನ್ನಾಭರಣ ಸ್ವಚ್ಛಗೊಳಿಸುವ ನೆಪದಲ್ಲಿ ವಂಚನೆ ಎಸಗಿದ ಆರೋಪಿಯನ್ನು ವೇಣೂರು ಪೊಲೀಸರು ಬಂಧಿಸಿದ್ದಾರೆ.

ಬಂಧಿತನು ಬಿಹಾರ ರಾಜ್ಯದ ಸುಪೋಲ್ ಜಿಲ್ಲೆಯ ತ್ರಿವೇಣೆಗಂಜ್ ತಾಲೂಕಿನ ರಘುನಾಥಪುರ ನಿವಾಸಿ ಸೂರಜ್ ದೇವ್ ಮಂಡಲ್ ಅವರ ಪುತ್ರ ಚಂದನ್ ಕುಮಾರ್ (30) ಎಂದು ಗುರುತಿಸಲಾಗಿದೆ.

ಫೆ. 10ರಂದು ಬೆಳಗ್ಗೆ ಸುಮಾರು 11.15ರ ವೇಳೆಗೆ, 90 ವರ್ಷದ ರುಕ್ಕಿಣಿ ಶೆಟ್ಟಿಗಾರ್ ಅವರು ಮನೆಯಲ್ಲಿ ಒಬ್ಬರೇ ಇದ್ದ ಸಂದರ್ಭವನ್ನು ಬಳಸಿಕೊಂಡು ಆರೋಪಿಯು ಮನೆಗೆ ಭೇಟಿ ನೀಡಿದ್ದಾನೆ. ಚಿನ್ನಾಭರಣಗಳನ್ನು ಹೊಳಪುಗೊಳಿಸುವುದಾಗಿ ಹೇಳಿ ವಿಶ್ವಾಸ ಗಳಿಸಿದ ಬಳಿಕ, ಲಾಕರ್‌ನಲ್ಲಿದ್ದ ಲಕ್ಷ್ಮೀ ಪದಕ ಜೋಡಿಸಲಾದ ಎರಡು ಮುಕ್ಕಾಲು ಪವನ್ ತೂಕದ ಚಿನ್ನದ ಸರವನ್ನು ಪಡೆದಿದ್ದಾನೆ.

ಅಂಗಳದಲ್ಲಿದ್ದ ನಳ್ಳಿಯಿಂದ ನೀರು ತೆಗೆದು ಬ್ರಷ್ ಬಳಸಿ ತೊಳೆಯುವ ನಾಟಕವಾಡಿದ ಆರೋಪಿಯು, ಬಳಿಕ ಸರವನ್ನು ಕಾಗದದಲ್ಲಿ ಸುತ್ತಿ ಫ್ಯಾನ್ ಗಾಳಿಯಲ್ಲಿ ಒಣಗಿಸಬೇಕೆಂದು ಹೇಳಿ ಸ್ಥಳದಿಂದ ತೆರಳಿದ್ದಾನೆ. ಕೆಲವೇ ಕ್ಷಣಗಳಲ್ಲಿ ಕಾಗದ ತೆರೆದು ನೋಡಿದಾಗ ಚಿನ್ನದ ಸರವು ಕರಗಿದಂತಿದ್ದು, ಅರಿಶಿನದ ಪುಡಿ ಹೋಲುವ ದ್ರವ್ಯ, ಸಣ್ಣ ತುಂಡುಗಳಾಗಿ ಬದಲಾಗಿದ ಭಾಗಗಳು ಹಾಗೂ ತಾಮ್ರ ಬಣ್ಣಕ್ಕೆ ತಿರುಗಿದ ಲಕ್ಷ್ಮೀ ಪದಕ ಕಾಣಿಸಿಕೊಂಡಿದೆ.

ಈ ಕುರಿತು ದಾಖಲಾದ ದೂರಿನ ಮೇರೆಗೆ ತನಿಖೆ ಆರಂಭಿಸಿದ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಆರೋಪಿಯನ್ನು ಪತ್ತೆಹಚ್ಚಿದರು. ಬೆಳ್ತಂಗಡಿ ಡಿವೈಎಸ್ಪಿ ರೋಹಿಣಿ ಸಿ.ಕೆ. ಹಾಗೂ ಸರ್ಕಲ್ ಇನ್‌ಸ್ಪೆಕ್ಟರ್ ರವಿ ಬಿ.ಎಸ್. ಅವರ ಮಾರ್ಗದರ್ಶನದಲ್ಲಿ ಪಿಎಸ್‌ಐ ಅಕ್ಷಯ್ ಡವಗಿ, ಓಮನಾ ಎನ್. ನೇತೃತ್ವದ ತಂಡ ಫೆ. 28ರಂದು ಮೂಡುಬಿದಿರೆಯ ಗಂಟಾಲ್ಕಟ್ಟೆ ಪ್ರದೇಶದಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಯಿತು.

ತನಿಖೆ ಮುಂದುವರಿದಿದೆ.

Previous Post

ಅರೆಕಾಲಿಕ ಉದ್ಯೋಗ ಆಮಿಷ: ವಿದ್ಯಾರ್ಥಿಗಳಿಂದ ಲಕ್ಷಾಂತರ ವಸೂಲಿ, ವೆಕ್ಸಾನ್ ಸಂಸ್ಥೆ ವಿರುದ್ಧ ಪ್ರಕರಣ….!

Next Post

ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ಲಿವರ್ & ಟ್ರಾನ್ಸ್‌ಪ್ಲಾಂಟ್ ಕ್ಲಿನಿಕ್: ಮಾರ್ಚ್ 5ರಿಂದ ಪ್ರತಿ ತಿಂಗಳ ಮೊದಲ ಗುರುವಾರ

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ಲಿವರ್ & ಟ್ರಾನ್ಸ್‌ಪ್ಲಾಂಟ್ ಕ್ಲಿನಿಕ್: ಮಾರ್ಚ್ 5ರಿಂದ ಪ್ರತಿ ತಿಂಗಳ ಮೊದಲ ಗುರುವಾರ

ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ಲಿವರ್ & ಟ್ರಾನ್ಸ್‌ಪ್ಲಾಂಟ್ ಕ್ಲಿನಿಕ್: ಮಾರ್ಚ್ 5ರಿಂದ ಪ್ರತಿ ತಿಂಗಳ ಮೊದಲ ಗುರುವಾರ

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಸ್ವರ್ಗ ಆಶ್ರಮದಿಂದ ಪುರುಷೋತ್ತಮ ಶೆಟ್ಟಿ ವ್ಯಕ್ತಿ ನಾಪತ್ತೆ  : ಪತ್ತೆಗೆ ಮನವಿ..! 

ಸ್ವರ್ಗ ಆಶ್ರಮದಿಂದ ಪುರುಷೋತ್ತಮ ಶೆಟ್ಟಿ ವ್ಯಕ್ತಿ ನಾಪತ್ತೆ : ಪತ್ತೆಗೆ ಮನವಿ..! 

04/08/2026
ನಿಟ್ಟೆ : ಹೋಟೆಲ್‌ನಲ್ಲಿ ಇಸ್ಪೀಟು ಜುಗಾರಿ ಅಡ್ಡೆ ಮೇಲೆ ಪೊಲೀಸ್ ದಾಳಿ: 6 ಮಂದಿ ಬಂಧನ, ನಗದು ಸೇರಿದಂತೆ ವಸ್ತುಗಳ ವಶ..!

ನಿಟ್ಟೆ : ಹೋಟೆಲ್‌ನಲ್ಲಿ ಇಸ್ಪೀಟು ಜುಗಾರಿ ಅಡ್ಡೆ ಮೇಲೆ ಪೊಲೀಸ್ ದಾಳಿ: 6 ಮಂದಿ ಬಂಧನ, ನಗದು ಸೇರಿದಂತೆ ವಸ್ತುಗಳ ವಶ..!

04/08/2026
ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಕಾನೂನು ಅರಿವು ಕಾರ್ಯಕ್ರಮ

ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಕಾನೂನು ಅರಿವು ಕಾರ್ಯಕ್ರಮ

04/08/2026
ಮಾಹೆಯಲ್ಲಿ ಅಂತಾರಾಷ್ಟ್ರೀಯ ‘ನೇಚರ್ ಕಾನ್ಫರೆನ್ಸ್’ : ಸಾಂಕ್ರಾಮಿಕ ರೋಗಗಳ ಸವಾಲು ಎದುರಿಸುವ ಕುರಿತು ಚರ್ಚೆ 

ಮಾಹೆಯಲ್ಲಿ ಅಂತಾರಾಷ್ಟ್ರೀಯ ‘ನೇಚರ್ ಕಾನ್ಫರೆನ್ಸ್’ : ಸಾಂಕ್ರಾಮಿಕ ರೋಗಗಳ ಸವಾಲು ಎದುರಿಸುವ ಕುರಿತು ಚರ್ಚೆ 

04/08/2026

Recent News