Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಕರಾವಳಿ

ಮಂಗಳೂರು–ಮಸ್ಕತ್ ನೇರ ವಿಮಾನ ಸೇವೆ ಮಾರ್ಚ್ 1ರಿಂದ ಮರುಪ್ರಾರಂಭ…!

Dhrishya News by Dhrishya News
28/02/2026
in ಕರಾವಳಿ, ಸುದ್ದಿಗಳು
0
ಮಂಗಳೂರು–ಮಸ್ಕತ್ ನೇರ ವಿಮಾನ ಸೇವೆ ಮಾರ್ಚ್ 1ರಿಂದ ಮರುಪ್ರಾರಂಭ…!
0
SHARES
20
VIEWS
Share on FacebookShare on Twitter

ಮಂಗಳೂರು, ಫೆ. 28: ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳೊಂದಿಗೆ ನೆರೆಯ ಕೇರಳದ ಪ್ರಯಾಣಿಕರು ಹಾಗೂ ಅನಿವಾಸಿ ಭಾರತೀಯರ ಬಹುಕಾಲದ ಬೇಡಿಕೆಗೆ ಸ್ಪಂದನೆ ದೊರೆತಿದ್ದು, ಮಂಗಳೂರು ಮತ್ತು ಮಸ್ಕತ್ ನಡುವೆ ನೇರ ವಿಮಾನ ಸೇವೆ ಮಾರ್ಚ್ 1ರಿಂದ ಪುನರಾರಂಭವಾಗಲಿದೆ.

ಈ ಕುರಿತು ಮಾಹಿತಿ ನೀಡಿದ ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಏರ್ ಇಂಡಿಯಾ ಎಕ್ಸ್‌ಪ್ರೆಸ್ ಈ ಸೇವೆಯನ್ನು ನಿರ್ವಹಿಸಲಿದೆ ಎಂದು ತಿಳಿಸಿದ್ದಾರೆ. ಕರಾವಳಿ ಭಾಗದ ಅನೇಕರು ಉದ್ಯೋಗ ಹಾಗೂ ವ್ಯಾಪಾರ ಕಾರಣಗಳಿಂದ ಮಸ್ಕತ್‌ಗೆ ತೆರಳುತ್ತಿರುವ ಹಿನ್ನಲೆಯಲ್ಲಿ ನೇರ ವಿಮಾನ ಸೇವೆಗೆ ಸಾಕಷ್ಟು ಬೇಡಿಕೆ ವ್ಯಕ್ತವಾಗಿತ್ತು. ಈ ವಿಷಯವಾಗಿ ಸಂಸದರು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಸೇವೆ ಮರುಾರಂಭಿಸುವಂತೆ ಮನವಿ ಸಲ್ಲಿಸಿದ್ದರು.

ಪ್ರಸ್ತುತ ವೇಳಾಪಟ್ಟಿಯಂತೆ ವಾರಕ್ಕೆ ಎರಡು ದಿನಗಳು — ಭಾನುವಾರ ಮತ್ತು ಮಂಗಳವಾರ — ಈ ವಿಮಾನ ಹಾರಾಟ ನಡೆಸಲಿದೆ. ನೇರ ಸಂಪರ್ಕದಿಂದ ಪ್ರಯಾಣದ ಅವಧಿ ಕಡಿಮೆಯಾಗುವುದರ ಜೊತೆಗೆ, ಎನ್‌ಆರ್‌ಐ ಪ್ರಯಾಣಿಕರಿಗೆ ತಮ್ಮ ಸ್ವಗ್ರಾಮಗಳಿಗೆ ಸುಲಭವಾಗಿ ತಲುಪುವ ಅವಕಾಶ ಸಿಗಲಿದೆ.

ಈ ಹಿಂದೆ ಮಂಗಳೂರು–ಮಸ್ಕತ್ ವಿಮಾನ ಸೇವೆ ಸ್ಥಗಿತಗೊಂಡಿದ್ದರಿಂದ ಪ್ರಯಾಣಿಕರು ದೆಹಲಿ, ಮುಂಬೈ ಅಥವಾ ಕಣ್ಣೂರು ಮೂಲಕ ಸಂಪರ್ಕ ವಿಮಾನಗಳನ್ನು ಬಳಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.

ವಿಮಾನ ಸೇವೆ ಪುನರಾರಂಭಕ್ಕೆ ಸಹಕಾರ ನೀಡಿದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಾಗೂ ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಕಿಂಜರಾಪು ಅವರಿಗೆ ಸಂಸದ ಬ್ರಿಜೇಶ್ ಚೌಟ ಕೃತಜ್ಞತೆ ಸಲ್ಲಿಸಿದ್ದಾರೆ. 

Previous Post

ಉಚ್ಚಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರದಲ್ಲಿ ಮಾರ್ಚ್ 1ರಂದು ಕುಲಗುರುಗಳ ಕಂಚಿನ ಪುತ್ಥಳಿ ನಿರ್ಮಾಣಕ್ಕೆ ಬೃಹತ್ ಸಮಾವೇಶ ಹಾಗೂ ಬೈಕ್ ರ‍್ಯಾಲಿ..!

Next Post

ಅಕ್ರಮ ಜಾನುವಾರು ಸಾಗಾಟ: ಕೊಳ್ನಾಡಿನಲ್ಲಿ ವಾಹನ ವಶಕ್ಕೆ…!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಅಕ್ರಮ ಜಾನುವಾರು ಸಾಗಾಟ: ಕೊಳ್ನಾಡಿನಲ್ಲಿ ವಾಹನ ವಶಕ್ಕೆ…!

ಅಕ್ರಮ ಜಾನುವಾರು ಸಾಗಾಟ: ಕೊಳ್ನಾಡಿನಲ್ಲಿ ವಾಹನ ವಶಕ್ಕೆ...!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 24k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಉಡುಪಿ ಶ್ರೀಕೃಷ್ಣ ಮಠಕ್ಕೆ ನಟಿ ರೋಜಾ ಸೆಲ್ವಮಣಿ ಭೇಟಿ..!

ಉಡುಪಿ ಶ್ರೀಕೃಷ್ಣ ಮಠಕ್ಕೆ ನಟಿ ರೋಜಾ ಸೆಲ್ವಮಣಿ ಭೇಟಿ..!

28/09/2026
ಕನಿಷ್ಠ ಕೂಲಿ ಸಮರ್ಪಕ ಜಾರಿಗೆ ಒತ್ತಾಯಿಸಿ ಸಿಐಟಿಯು ಮನವಿ..!

ಕನಿಷ್ಠ ಕೂಲಿ ಸಮರ್ಪಕ ಜಾರಿಗೆ ಒತ್ತಾಯಿಸಿ ಸಿಐಟಿಯು ಮನವಿ..!

28/09/2026
ಮಾಹೆಯಲ್ಲಿ ಮಣಿಪಾಲ ಸ್ಟಾರ್ಟ್‌ಅಪ್ ಎಕ್ಸ್‌ಪೋ-2026

ಮಾಹೆಯಲ್ಲಿ ಮಣಿಪಾಲ ಸ್ಟಾರ್ಟ್‌ಅಪ್ ಎಕ್ಸ್‌ಪೋ-2026

28/09/2026
ಹಾಲಿಡೇ ಪ್ಯಾಕೇಜ್ ಕ್ಷೇತ್ರಕ್ಕೆ ಕ್ಲಿಯರ್‌ಟ್ರಿಪ್ ಪ್ರವೇಶ: ಮೊದಲ ಬಾರಗಿಗೆ ಪ್ರವಾಸಿಗರೇ ತಮಗೆ ತಕ್ಕಂತೆ ಬದಲಾಯಿಸಿಕೊಳ್ಳಬಹುದಾದ ನೂತನ ಮಾದರಿ ಪರಿಚಯ

ಹಾಲಿಡೇ ಪ್ಯಾಕೇಜ್ ಕ್ಷೇತ್ರಕ್ಕೆ ಕ್ಲಿಯರ್‌ಟ್ರಿಪ್ ಪ್ರವೇಶ: ಮೊದಲ ಬಾರಗಿಗೆ ಪ್ರವಾಸಿಗರೇ ತಮಗೆ ತಕ್ಕಂತೆ ಬದಲಾಯಿಸಿಕೊಳ್ಳಬಹುದಾದ ನೂತನ ಮಾದರಿ ಪರಿಚಯ

28/09/2026

Recent News

imunify-bot-check