Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಕರಾವಳಿ

ಮಂಗಳೂರು–ಮುಂಬಯಿ ರೈಲುಗಳಿಗೆ ನಿರಂತರ ವಿಳಂಬ;ಪ್ರಯಾಣಿಕರ ಆಕ್ರೋಶ…..!

Dhrishya News by Dhrishya News
20/02/2026
in ಕರಾವಳಿ, ಸುದ್ದಿಗಳು
0
ಮಂಗಳೂರು–ಮುಂಬಯಿ ರೈಲುಗಳಿಗೆ ನಿರಂತರ ವಿಳಂಬ;ಪ್ರಯಾಣಿಕರ ಆಕ್ರೋಶ…..!

Kochi, Kerala, India -March 2, 2021 a train moving with electric support through the indian railway track

0
SHARES
11
VIEWS
Share on FacebookShare on Twitter

ಮಂಗಳೂರು, ಫೆ.20: ಮಂಗಳೂರು–ಮುಂಬಯಿ ಮಾರ್ಗದಲ್ಲಿ ಸಂಚರಿಸುವ ಮತ್ಸ್ಯಗಂಧ ಎಕ್ಸ್‌ಪ್ರೆಸ್ ಹಾಗೂ ಮಂಗಳೂರು ಜಂಕ್ಷನ್–ಮುಂಬಯಿ ಸಿಎಸ್‌ಎಂಟಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲುಗಳು ಕಳೆದ ಕೆಲ ತಿಂಗಳಿಂದ ನಿರಂತರ ವಿಳಂಬವಾಗಿ ಸಂಚರಿಸುತ್ತಿದ್ದು, ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.

ಮಂಗಳೂರಿನಿಂದ ಮುಂಬಯಿ ಎಲ್‌ಟಿಟಿ ಕಡೆಗೆ ಹೊರಡುವ ಮತ್ಸ್ಯಗಂಧ ಎಕ್ಸ್‌ಪ್ರೆಸ್‌ (12620) ನಿಗದಿತ ವೇಳೆಗೆ ಬೆಳಗ್ಗೆ 5.57ಕ್ಕೆ ಥಾಣೆ ತಲುಪಬೇಕಿದ್ದರೂ, ಫೆ.14ರಂದು 6.41ಕ್ಕೆ, ಫೆ.15ರಂದು ಮಧ್ಯಾಹ್ನ 12.27ಕ್ಕೆ ಹಾಗೂ ಫೆ.16ರಂದು ಬೆಳಗ್ಗೆ 7.05ಕ್ಕೆ ತಲುಪಿದೆ. ಕಳೆದ ವಾರದಲ್ಲಿ ಈ ರೈಲು ಸರಾಸರಿ 1 ಗಂಟೆ 36 ನಿಮಿಷಗಳ ವಿಳಂಬವಾಗಿ ಥಾಣೆ ತಲುಪಿರುವುದು ದಾಖಲಾಗಿದೆ.

ಅದೇ ರೀತಿ, ಎಲ್‌ಟಿಟಿಯಿಂದ ಮಂಗಳೂರಿಗೆ ಸಂಚರಿಸುವ ಮತ್ಸ್ಯಗಂಧ ಎಕ್ಸ್‌ಪ್ರೆಸ್‌ (12619) ಬೆಳಗ್ಗೆ 5.18ಕ್ಕೆ ಉಡುಪಿ ತಲುಪಬೇಕಾಗಿದ್ದರೂ, ಫೆ.14ರಂದು 7.24ಕ್ಕೆ, ಫೆ.15ರಂದು 7.56ಕ್ಕೆ ಹಾಗೂ ಫೆ.16ರಂದು 7.33ಕ್ಕೆ ಆಗಮಿಸಿದೆ. ಒಂದು ವಾರದ ಅವಧಿಯಲ್ಲಿ ಈ ರೈಲು ಉಡುಪಿಗೆ ಸರಾಸರಿ 2 ಗಂಟೆ 30 ನಿಮಿಷ ಹಾಗೂ ಮಂಗಳೂರಿಗೆ 1 ಗಂಟೆ 43 ನಿಮಿಷಗಳ ವಿಳಂಬವಾಗಿ ತಲುಪಿದೆ.

8 ಗಂಟೆಗಳಿಗೂ ಹೆಚ್ಚು ವಿಳಂಬ

ಮಂಗಳೂರು ಜಂಕ್ಷನ್–ಸಿಎಸ್‌ಎಂಟಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್‌ (12134) ಮುಂಜಾನೆ 3.48ಕ್ಕೆ ಥಾಣೆ ತಲುಪಬೇಕಿದ್ದರೂ, ಫೆ.14ರಂದು ಮಧ್ಯಾಹ್ನ 12.22ಕ್ಕೆ ತಲುಪಿದ್ದು, 8 ಗಂಟೆಗಳಿಗಿಂತ ಹೆಚ್ಚು ವಿಳಂಬವಾಗಿದೆ. ಫೆ.15ರಂದು ಬೆಳಗ್ಗೆ 7.50ಕ್ಕೆ ಹಾಗೂ ಫೆ.16ರಂದು 11.14ಕ್ಕೆ ತಲುಪಿದೆ. ವಾರದ ಸರಾಸರಿ ಲೆಕ್ಕದಲ್ಲಿ ಈ ರೈಲು ಮಂಗಳೂರು ಜಂಕ್ಷನ್‌ನಿಂದ 1 ಗಂಟೆ 28 ನಿಮಿಷ ವಿಳಂಬವಾಗಿ ಹೊರಟು, ಥಾಣೆಗೆ 6 ಗಂಟೆ 4 ನಿಮಿಷಗಳ ವಿಳಂಬವಾಗಿ ತಲುಪಿದೆ.

ಇದೇ ಮಾರ್ಗದ ಸೀಸ್‌ಎಂಟಿ–ಮಂಗಳೂರು ಜಂಕ್ಷನ್ ಎಕ್ಸ್‌ಪ್ರೆಸ್‌ (12133) ಬೆಳಗ್ಗೆ 11.26ಕ್ಕೆ ಉಡುಪಿ ತಲುಪಬೇಕಿದ್ದರೂ, ಫೆ.14ರಂದು 12.36ಕ್ಕೆ, ಫೆ.15ರಂದು ಅಪರಾಹ್ನ 3.06ಕ್ಕೆ ಹಾಗೂ ಫೆ.16ರಂದು 2.17ಕ್ಕೆ ತಲುಪಿದೆ. ವಾರದ ಅವಧಿಯಲ್ಲಿ ಉಡುಪಿ ನಿಲ್ದಾಣಕ್ಕೆ ಸರಾಸರಿ 2 ಗಂಟೆ 10 ನಿಮಿಷ ಹಾಗೂ ಮಂಗಳೂರು ಜಂಕ್ಷನ್‌ಗೆ 1 ಗಂಟೆ 42 ನಿಮಿಷಗಳ ವಿಳಂಬವಾಗಿದೆ.

ಪ್ರಯಾಣಿಕರ ಅಸಮಾಧಾನ

ರೈಲುಗಳ ನಿರಂತರ ವಿಳಂಬದಿಂದ ಪ್ರಯಾಣಿಕರು ಪ್ರತಿದಿನ ದೂರುಗಳನ್ನು ವ್ಯಕ್ತಪಡಿಸುತ್ತಿದ್ದಾರೆ. “ಸಮಸ್ಯೆಗೆ ತಕ್ಷಣ ಪರಿಹಾರ ಕಂಡುಕೊಳ್ಳದಿದ್ದರೆ ಇನ್ನಷ್ಟು ಸಂಕಷ್ಟ ಎದುರಾಗಲಿದೆ,” ಎಂದು ಮಂಗಳೂರಿನ ಟ್ರಾವೆಲ್ ಏಜೆನ್ಸಿಯ ಕಿಶೋರ್ ಮರೋಳಿ ತಿಳಿಸಿದ್ದಾರೆ.

ಕಳೆದ ಆರು ತಿಂಗಳಿಂದ ಈ ಸಮಸ್ಯೆ ಮುಂದುವರಿದಿದ್ದು, ಲಕ್ಷಾಂತರ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ. ಈ ಕುರಿತು ಕೊಂಕಣ ರೈಲ್ವೇ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ ಎಂದು ರೈಲು ಯಾತ್ರಿ ಸಂಘದ ಕಾರ್ಯಕಾರಿ ಕಾರ್ಯದರ್ಶಿ ಒಲಿವರ್ ಡಿ’ಸೋಜಾ ತಿಳಿಸಿದ್ದಾರೆ.

ಹಳಿ ನಿರ್ವಹಣೆಯೇ ಕಾರಣ

ರತ್ನಗಿರಿ ಹಾಗೂ ಕಾರವಾರ ವಿಭಾಗಗಳಲ್ಲಿ ಹಳಿ ನಿರ್ವಹಣಾ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ರೈಲುಗಳ ಸಂಚಾರ ವಿಳಂಬವಾಗುತ್ತಿದೆ ಎಂದು ಕೊಂಕಣ ರೈಲ್ವೇ ನಿಗಮದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಸುನಿಲ್ ನರ್ಕರ್ ಸ್ಪಷ್ಟಪಡಿಸಿದ್ದಾರೆ.

Previous Post

ಮಂತ್ರಾಲಯದಲ್ಲಿ ಶ್ರೀ ರಾಘವೇಂದ್ರ ಗುರು ವೈಭವೋತ್ಸವಕ್ಕೆ ಭವ್ಯ ಚಾಲನೆ….!

Next Post

ಮಾರಿಕಾಂಬಾ ಜಾತ್ರೆ ನೆಪದಲ್ಲಿ ಹಣ ವಸೂಲಿ: ಸಾಮಾಜಿಕ ಜಾಲತಾಣ ವಂಚನೆಗೆ ದೇವಸ್ಥಾನದ ಎಚ್ಚರಿಕೆ….!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಮಾರಿಕಾಂಬಾ ಜಾತ್ರೆ ನೆಪದಲ್ಲಿ ಹಣ ವಸೂಲಿ: ಸಾಮಾಜಿಕ ಜಾಲತಾಣ ವಂಚನೆಗೆ ದೇವಸ್ಥಾನದ ಎಚ್ಚರಿಕೆ….!

ಮಾರಿಕಾಂಬಾ ಜಾತ್ರೆ ನೆಪದಲ್ಲಿ ಹಣ ವಸೂಲಿ: ಸಾಮಾಜಿಕ ಜಾಲತಾಣ ವಂಚನೆಗೆ ದೇವಸ್ಥಾನದ ಎಚ್ಚರಿಕೆ....!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಕಾರ್ಕಳ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸರ್ವಜ್ಞ ಜಯಂತಿ ಆಚರಣೆ

ಕಾರ್ಕಳ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸರ್ವಜ್ಞ ಜಯಂತಿ ಆಚರಣೆ

20/02/2026
ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲು ತೂರಾಟ: 8 ಮಂದಿ ಬಂಧನ, ನಿಷೇಧಾಜ್ಞೆ ಜಾರಿ

ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲು ತೂರಾಟ: 8 ಮಂದಿ ಬಂಧನ, ನಿಷೇಧಾಜ್ಞೆ ಜಾರಿ

20/02/2026
ನವಮಂಗಳೂರು ಬಂದರಿಗೆ ‘ಎಂ.ಎಸ್. ಐಲ್ಯಾಂಡ್ ಸ್ಕೈ’ ಕ್ರೂಸ್ ಹಡಗು ಆಗಮನ…!

ನವಮಂಗಳೂರು ಬಂದರಿಗೆ ‘ಎಂ.ಎಸ್. ಐಲ್ಯಾಂಡ್ ಸ್ಕೈ’ ಕ್ರೂಸ್ ಹಡಗು ಆಗಮನ…!

20/02/2026
ಮಾರಿಕಾಂಬಾ ಜಾತ್ರೆ ನೆಪದಲ್ಲಿ ಹಣ ವಸೂಲಿ: ಸಾಮಾಜಿಕ ಜಾಲತಾಣ ವಂಚನೆಗೆ ದೇವಸ್ಥಾನದ ಎಚ್ಚರಿಕೆ….!

ಮಾರಿಕಾಂಬಾ ಜಾತ್ರೆ ನೆಪದಲ್ಲಿ ಹಣ ವಸೂಲಿ: ಸಾಮಾಜಿಕ ಜಾಲತಾಣ ವಂಚನೆಗೆ ದೇವಸ್ಥಾನದ ಎಚ್ಚರಿಕೆ….!

20/02/2026

Recent News

ಕಾರ್ಕಳ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸರ್ವಜ್ಞ ಜಯಂತಿ ಆಚರಣೆ

ಕಾರ್ಕಳ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸರ್ವಜ್ಞ ಜಯಂತಿ ಆಚರಣೆ

20/02/2026
ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲು ತೂರಾಟ: 8 ಮಂದಿ ಬಂಧನ, ನಿಷೇಧಾಜ್ಞೆ ಜಾರಿ

ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲು ತೂರಾಟ: 8 ಮಂದಿ ಬಂಧನ, ನಿಷೇಧಾಜ್ಞೆ ಜಾರಿ

20/02/2026
ನವಮಂಗಳೂರು ಬಂದರಿಗೆ ‘ಎಂ.ಎಸ್. ಐಲ್ಯಾಂಡ್ ಸ್ಕೈ’ ಕ್ರೂಸ್ ಹಡಗು ಆಗಮನ…!

ನವಮಂಗಳೂರು ಬಂದರಿಗೆ ‘ಎಂ.ಎಸ್. ಐಲ್ಯಾಂಡ್ ಸ್ಕೈ’ ಕ್ರೂಸ್ ಹಡಗು ಆಗಮನ…!

20/02/2026
ಮಾರಿಕಾಂಬಾ ಜಾತ್ರೆ ನೆಪದಲ್ಲಿ ಹಣ ವಸೂಲಿ: ಸಾಮಾಜಿಕ ಜಾಲತಾಣ ವಂಚನೆಗೆ ದೇವಸ್ಥಾನದ ಎಚ್ಚರಿಕೆ….!

ಮಾರಿಕಾಂಬಾ ಜಾತ್ರೆ ನೆಪದಲ್ಲಿ ಹಣ ವಸೂಲಿ: ಸಾಮಾಜಿಕ ಜಾಲತಾಣ ವಂಚನೆಗೆ ದೇವಸ್ಥಾನದ ಎಚ್ಚರಿಕೆ….!

20/02/2026
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved