Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಕರಾವಳಿ

EC-06 ಬಿಡುಗಡೆ ಮಾಡುವ ಮೂಲಕ ಭಾರತದ ಇವಿ ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಟ್ಟ ಯಮಹಾ; ಬೆಲೆ Rs. 1,67,600

Dhrishya News by Dhrishya News
03/02/2026
in ಕರಾವಳಿ, ಸುದ್ದಿಗಳು
0
EC-06 ಬಿಡುಗಡೆ ಮಾಡುವ ಮೂಲಕ ಭಾರತದ ಇವಿ ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಟ್ಟ ಯಮಹಾ; ಬೆಲೆ Rs. 1,67,600
0
SHARES
1
VIEWS
Share on FacebookShare on Twitter

ಬೆಂಗಳೂರು, ಫೆ. 03: ಇಂಡಿಯಾ ಯಮಹಾ ಮೋಟಾರ್ (ಐವೈಎಂ) ಪ್ರೈವೇಟ್ ಲಿಮಿಟೆಡ್ ಇಂದು ತನ್ನ ಚೊಚ್ಚಲ ಎಲೆಕ್ಟ್ರಿಕ್ ಸ್ಕೂಟರ್ EC-06 ನ ಬೆಲೆಯನ್ನು ಘೋಷಿಸಿದ್ದು, ಇದರ ಬೆಲೆ Rs. 1,67,600 (ಎಕ್ಸ್ ಶೋರೂಮ್, ದೆಹಲಿ) ಆಗಿರಲಿದೆ. ‘ಬ್ಲೂಯಿಷ್ ವೈಟ್’ ಬಣ್ಣದಲ್ಲಿ ಲಭ್ಯವಿರುವ ಈ ಸ್ಕೂಟರ್, ಆರಂಭಿಕ ಹಂತದಲ್ಲಿ ಯಮಹಾದ ಪ್ರೀಮಿಯಂ ‘ಬ್ಲೂ ಸ್ಕ್ವೇರ್’ ಶೋರೂಮ್‌ ಗಳಲ್ಲಿ ಆಯ್ದ ನಗರಗಳಲ್ಲಿ ಮಾರಾಟವಾಗಲಿದೆ.

169 ಕಿಲೋಮೀಟರ್ ಪ್ರಮಾಣೀಕೃತ ರೇಂಜ್ ಹೊಂದಿರುವ ಸ್ಟೈಲಿಶ್ ಎಲೆಕ್ಟ್ರಿಕ್ ಸ್ಕೂಟರ್ ‘EC-06’, ಆರಂಭದಲ್ಲಿ ಆಯ್ದ ನಗರಗಳ ‘ಬ್ಲೂ ಸ್ಕ್ವೇರ್’ ಶೋರೂಮ್‌ ಗಳಲ್ಲಿ ಮಾತ್ರ ಲಭ್ಯವಿರಲಿದೆ.

EC-06 ಬಿಡುಗಡೆ ಮಾಡುವ ಮೂಲಕ ಯಮಹಾ ಸಂಸ್ಥೆಯು ಎಲೆಕ್ಟ್ರಿಕ್ ವಾಹನ ವಲಯಕ್ಕೆ ಅದ್ದೂರಿಯಾಗಿ ಪ್ರವೇಶ ಮಾಡಿದೆ ಮತ್ತು ಪರಿಸರ ಸುಸ್ಥಿರತೆಯ ಬಗೆಗಿನ ಕಂಪನಿಯ ಬದ್ಧತೆಯನ್ನು ಸಾರಿದೆ. ಈ ವಾಹನ ಬಿಡುಗಡೆಯು ಭಾರತ ಸರ್ಕಾರದ ‘ನ್ಯಾಷನಲ್ ಮಿಷನ್ ಆನ್ ಟ್ರಾನ್ಸ್‌ಫಾರ್ಮೇಟಿವ್ ಮೊಬಿಲಿಟಿ’ ಪರಿಕಲ್ಪನೆಗೆ ನೀಡಿದ ನೇರ ಕೊಡುಗೆಯಾಗಿದ್ದು, 2070 ರ ವೇಳೆಗೆ ‘ನೆಟ್-ಝೀರೋ’ ಇಂಗಾಲ ಹೊರಸೂಸುವಿಕೆಯನ್ನು ಸಾಧಿಸುವ ರಾಷ್ಟ್ರದ ಮಹತ್ವಾಕಾಂಕ್ಷೆಯ ಗುರಿಗೆ ಪೂರಕವಾಗಿ ಮೂಡಿಬಂದಿದೆ.

EC-06 ಅನ್ನು ಪರಿಚಯಿಸುವ ಮೂಲಕ, ಯಮಹಾ ಭಾರತೀಯ ಹೊರಸೂಸುವಿಕೆ ಮಾನದಂಡಗಳು ಮತ್ತು ಹಸಿರು ಹಾಗೂ ಆತ್ಮನಿರ್ಭರ ಭಾರತದ ದೃಷ್ಟಿಕೋನಕ್ಕೆ ಅನುಗುಣವಾಗಿ ತನ್ನ ಇಂಗಾಲ ತಟಸ್ಥ ಗುರಿಗಳನ್ನು ಬಲಪಡಿಸುತ್ತಿದೆ.

ಆಧುನಿಕ, ಸ್ಟೈಲಿಶ್ ಮತ್ತು ಸುಸಜ್ಜಿತ ಪ್ರಯಾಣದ ಆಯ್ಕೆಯನ್ನು ಬಯಸುವ ಸವಾರರನ್ನು ಗುರಿಯಾಗಿಸಿಕೊಂಡು ರೂಪಿಸಲಾದ EC-06, 169 ಕಿಲೋಮೀಟರ್‌ ಗಳ ಪ್ರಮಾಣೀಕೃತ ರೇಂಜ್ ಹೊಂದಿದ್ದು, ಪ್ರತಿಯೊಬ್ಬರ ದೈನಂದಿನ ಸಂಚಾರಕ್ಕೆ ಅತ್ಯುತ್ತಮ ಆಯ್ಕೆಯಾಗಿದೆ. ಯಮಹಾದ ಮೂಲ ಡಿಎನ್ಎ ಮತ್ತು ಇಂದಿನ ಕಾಲದ ಸೌಂದರ್ಯ ಪ್ರಜ್ಞೆಯನ್ನು ಒಳಗೊಂಡಿರುವ ಈ ವಿನ್ಯಾಸವು, ಸೊಗಸಾದ ನಿಲುವು ಮತ್ತು ಸೊಬಗಿನ ದೇಹ ಹೊಂದಿದ್ದು, ಟ್ರಾಫಿಕ್‌ ನಲ್ಲಿ ಸುಲಭವಾಗಿ ವಾಹನ ಚಲಾಯಿಸಲು ನೆರವಾಗುವಂತೆ ಮೂಡಿಬಂದಿದೆ. ಇದರ ಸಮತಲ ವಿನ್ಯಾಸವು ಉತ್ತಮ ಸಮತೋಲನ ಮತ್ತು ನಿಖರತೆಗೆ ಒತ್ತು ನೀಡಿದರೆ, ಸ್ಫುಟವಾದ ಬಾಡಿ ಲೈನ್‌ ಗಳು ವಿಭಿನ್ನ ಹಾಗೂ ಪ್ರಾಯೋಗಿಕ ಸವಾರಿಯನ್ನು ಬಯಸುವ ಯುವ ಗ್ರಾಹಕರನ್ನು ಆಕರ್ಷಿಸುತ್ತವೆ.

ಜಾಗತಿಕ ದೃಷ್ಟಿಕೋನ ಇಟ್ಟುಕೊಂಡು ಭಾರತದಲ್ಲೇ ಅಭಿವೃದ್ಧಿಪಡಿಸಲಾದ EC-06, ಶಕ್ತಿಯುತವಾದ ಐಪಿಎಂಎಸ್ಎಂ (ಇಂಟೀರಿಯರ್ ಪರ್ಮನೆಂಟ್ ಮ್ಯಾಗ್ನೆಟ್ ಸಿಂಕ್ರೋನಸ್ ಮೇಟಾರ್) ಮೋಟಾರ್ ಮತ್ತು 4 kWh ಫಿಕ್ಸ್ಡ್ ಬ್ಯಾಟರಿಯನ್ನು ಹೊಂದಿದೆ. ಇದು ಗಂಟೆಗೆ 79 ಕಿ.ಮೀ ಗರಿಷ್ಠ ವೇಗ, 26 ಎನ್ಎಂ ಗರಿಷ್ಠ ಟಾರ್ಕ್ ಮತ್ತು 6.7 ಕೆಡಬ್ಲ್ಯೂ ಪೀಕ್ ಪವರ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದ್ದು, ಈ ಮೂಲಕ ದೈನಂದಿನ ಬಳಕೆಗೆ ಸುಸ್ಥಿರ ಕಾರ್ಯಕ್ಷಮತೆಯನ್ನು ಒದಗಿಸುತ್ತದೆ. ಬ್ಯಾಟರಿಗೆ 3 ವರ್ಷಗಳು ಅಥವಾ 30,000 ಕಿ.ಮೀ ವಾರಂಟಿ ನೀಡಲಾಗಿದ್ದು, ಹೋಮ್ ಪ್ಲಗ್- ಇನ್ ಮೂಲಕ ಸುಲಭವಾಗಿ ಚಾರ್ಜ್ ಮಾಡಬಹುದಾಗಿದೆ. ಸಂಪೂರ್ಣ ಚಾರ್ಜ್ ಆಗಲು ಸುಮಾರು ಎಂಟು ಗಂಟೆಗಳ ಸಮಯ ತೆಗೆದುಕೊಳ್ಳಲಿದ್ದು, ಗ್ರಾಹಕರಿಗೆ ಸುಲಭವಾಗಿ ಸವಾರಿ ಮಾಡಲು ಅನುವು ಮಾಡಿಕೊಡುತ್ತದೆ. ಹೆಚ್ಚಿನ ಸುರಕ್ಷತೆಗಾಗಿ, ಇದರ ಮೋಟಾರ್ ಮತ್ತು ಬ್ಯಾಟರಿಗೆ ಐಪಿ 67 ಪ್ರಮಾಣೀಕರಣ ಹಾಗೂ ಇತರ ಎಲೆಕ್ಟ್ರಾನಿಕ್ ಭಾಗಗಳಿಗೆ ಐಪಿ 65 ಪ್ರಮಾಣೀಕರಣ ನೀಡಲಾಗಿದ್ದು, ನೀರು ಮತ್ತು ಧೂಳಿನ ವಿರುದ್ಧ ಅತ್ಯುತ್ತಮ ರಕ್ಷಣೆ ನೀಡುತ್ತದೆ.

ವಿವಿಧ ರೀತಿಯ ರೈಡಿಂಗ್ ಆದ್ಯತೆಗಳಿಗೆ ತಕ್ಕಂತೆ EC-06 ವಾಹನವು ಇಕೋ, ಸ್ಟ್ಯಾಂಡರ್ಡ್ ಮತ್ತು ಪವರ್ ಎಂಬ ಮೂರು ರೈಡಿಂಗ್ ಮೋಡ್‌ ಗಳನ್ನು ಹೊಂದಿದೆ. ಈ ಮೋಡ್ ಗಳು ಸವಾರರಿಗೆ ಅವರ ಅಗತ್ಯಕ್ಕೆ ಅನುಗುಣವಾಗಿ ದಕ್ಷತೆ, ಕಾರ್ಯಕ್ಷಮತೆ ಅಥವಾ ಆಕ್ಸಲರೇಷನ್ ಅನ್ನು ಉತ್ತಮಗೊಳಿಸಲು ಅನುವು ಮಾಡಿಕೊಡುತ್ತದೆ. ಇದರ ಮತ್ತೊಂದು ಅನುಕೂಲಕರವಾದ ಅಂಶವೆಂದರೆ ‘ರಿವರ್ಸ್ ಮೋಡ್’, ಈ ಮೋಡ್ ಇಕ್ಕಟ್ಟಾದ ಸ್ಥಳಗಳಲ್ಲಿ ವಾಹನವನ್ನು ಹಿಂದಕ್ಕೆ ಚಲಿಸುವುದನ್ನು ಸುಲಭಗೊಳಿಸುತ್ತದೆ. ಇನ್ನು ಹೈಡ್ರಾಲಿಕ್ ಡ್ಯಾಂಪರ್‌ ಗಳಿರುವ ಟೆಲಿಸ್ಕೋಪಿಕ್ ಫ್ರಂಟ್ ಸಸ್ಪೆನ್ಷನ್ ಮತ್ತು ಹಿಂಭಾಗದಲ್ಲಿರುವ ಕಾಯಿಲ್ ಸ್ಪ್ರಿಂಗ್ ಸಸ್ಪೆನ್ಷನ್ ನಗರ ಪ್ರದೇಶದ ರಸ್ತೆಗಳಲ್ಲಿ ಸುಗಮವಾಗಿ ಸವಾರಿ ಮಾಡಲು ಅನುವು ಮಾಡಿಕೊಡುತ್ತದೆ.

200 ಎಂಎಂ ಮುಂಭಾಗದ ಮತ್ತು ಹಿಂಭಾಗದ ಡಿಸ್ಕ್ ಬ್ರೇಕ್‌ ಗಳು ಹಾಗೂ ಕಾಂಬಿ ಬ್ರೇಕ್ ಸಿಸ್ಟಮ್ (ಸಿಬಿಎಸ್) ಅನ್ನು ಹೊಂದಿರುವ EC-06, ಸವಾರರಿಗೆ ನಿಖರ ಬ್ರೇಕಿಂಗ್ ಮತ್ತು ಹೆಚ್ಚಿನ ಸ್ಥಿರತೆಯನ್ನು ನೀಡುತ್ತದೆ. ಇದರಲ್ಲಿರುವ ಆಕರ್ಷಕ ಕಲರ್ ಎಲ್‌ಸಿಡಿ ಡಿಸ್ಪ್ಲೇಯು ವೇಗ, ಬ್ಯಾಟರಿ ಸ್ಟೇಟಸ್, ರೈಡಿಂಗ್ ಮೋಡ್‌ ಗಳು ಮತ್ತು ಕನೆಕ್ಟಿವಿಟಿ ಫೀಚರ್‌ಗಳ ಬಗ್ಗೆ ಆಯಾ ಸಮಯದ ಮಾಹಿತಿಯನ್ನು ನೀಡುವ ಮೂಲಕ ಪ್ರತಿ ಪ್ರಯಾಣವನ್ನು ಸುಲಭ ಮತ್ತು ಸ್ಮಾರ್ಟ್ ಆಗಿಸುತ್ತದೆ. ಇದರೊಂದಿಗೆ ಎಲ್‌ಇಡಿ ಹೆಡ್‌ ಲೈಟ್‌ ಗಳು ಮತ್ತು ಟೈಲ್‌ ಲೈಟ್‌ ಗಳು ರಾತ್ರಿಯ ಸಮಯ ಸವಾರಿ ಮಾಡುವಾಗ ಉತ್ತಮ ಗೋಚರತೆಯನ್ನು ಒದಗಿಸುವುದಲ್ಲದೆ, ಸ್ಕೂಟರ್‌ ನ ವಿನ್ಯಾಸಕ್ಕೆ ಆಧುನಿಕ ಮೆರುಗನ್ನು ನೀಡುತ್ತವೆ.

ಸಂಪರ್ಕ ವ್ಯವಸ್ಥೆಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವ ಸಲುವಾಗಿ, ಈ ಹೊಸ ಇವಿ ಸ್ಕೂಟರ್ “ಯಮಹಾ ಮೋಟಾರ್ ಕನೆಕ್ಟ್ ಆರ್” ಆಪ್ ಅನ್ನು ಹೊಂದಿದ್ದು, ಇದು ಆಯಾ ಸಮಯದ ಮಾಹಿತಿ ಮತ್ತು ಸ್ಮಾರ್ಟ್ ಫೀಚರ್‌ಗಳ ಮೂಲಕ ಸವಾರರಿಗೆ ಅತ್ಯುತ್ತಮ ಕನೆಕ್ಟಿವಿಟಿ ಅನುಭವವನ್ನು ನೀಡುತ್ತದೆ. ಸೀಟಿನ ಅಡಿಯಲ್ಲಿ 24.5 ಲೀಟರ್‌ಗಳಷ್ಟು ವಿಶಾಲವಾದ ಸ್ಟೋರೇಜ್ ಸ್ಥಳವಿದ್ದು, ಹೆಲ್ಮೆಟ್, ಬ್ಯಾಗ್‌ ಗಳು ಅಥವಾ ದೈನಂದಿನ ಅಗತ್ಯ ವಸ್ತುಗಳನ್ನು ಇರಿಸಲು ಸಾಕಷ್ಟು ಜಾಗವಿದೆ. ಈ ಮೂಲಕ EC-06 ನಗರ ಜೀವನಶೈಲಿಗೆ ಪರಿಪೂರ್ಣ ಸಂಗಾತಿಯಾಗಿದೆ.   

ಈ ಕುರಿತು ಮಾತನಾಡಿದ ಯಮಹಾ ಮೋಟಾರ್ ಇಂಡಿಯಾ ಗ್ರೂಪ್‌ ನ ಅಧ್ಯಕ್ಷರಾದ ಶ್ರೀ ಹಜಿಮೆ ಅಹೊಟಾ ಅವರು,* “ಸುಸ್ಥಿರ ನಗರ ಸಂಚಾರದ ಕಡೆಗಿನ ಯಮಹಾದ ಪ್ರಯಾಣದಲ್ಲಿ EC-06 ಒಂದು ಪ್ರಮುಖ ಹೆಜ್ಜೆಯಾಗಿದೆ. ಭಾರತವು ಸರ್ಕಾರದ ದೂರದೃಷ್ಟಿಯ ನಾಯಕತ್ವದ ಕಾರಣ ದೇಶವು ಇಂಗಾಲ ತಟಸ್ಥ ಭವಿಷ್ಯದತ್ತ ವೇಗವಾಗಿ ಸಾಗುತ್ತಿದೆ. ಉತ್ತಮ ಗುಣಮಟ್ಟದ ಎಲೆಕ್ಟ್ರಿಕ್ ಆವಿಷ್ಕಾರಗಳ ಮೂಲಕ ಈ ರಾಷ್ಟ್ರೀಯ ಕಾರ್ಯಸೂಚಿಯನ್ನು ಬೆಂಬಲಿಸಲು ಯಮಹಾ ಹೆಮ್ಮೆಪಡುತ್ತದೆ. ದೈನಂದಿನ ಸಂಚಾರಕ್ಕಾಗಿ ವಿನ್ಯಾಸಗೊಳಿಸಲಾದ ಈ ಸ್ಕೂಟರ್, ದಕ್ಷತೆ ಮತ್ತು ಕಾರ್ಯಕ್ಷಮತೆಯ ನಡುವೆ ಅದ್ಭುತ ಸಮತೋಲನವನ್ನು ಕಾಯ್ದುಕೊಂಡಿದೆ. ಯಮಹಾದಿಂದ ಬಿಡುಗಡೆಯಾಗುತ್ತಿರುವ ಈ ಮಾದರಿಯ ಮೊದಲ ವಾಹನ ಇದಾಗಿದ್ದು, ಸುಸ್ಥಿರತೆ ಮತ್ತು ಸವಾರಿಯ ಹುಮ್ಮಸ್ಸು ಹೇಗೆ ಒಟ್ಟಿಗೆ ಇರಬಲ್ಲವು ಎಂಬುದನ್ನು ಇದು ತೋರಿಸಿಕೊಡಲಿದೆ. ಇದು ನಮ್ಮ ಬ್ರ್ಯಾಂಡ್ ತತ್ವಕ್ಕೆ ಮತ್ತು ಭಾರತದ ಹಸಿರು ಆರ್ಥಿಕತೆಯ ಭವಿಷ್ಯದ ಬಗ್ಗೆ ನಮಗಿರುವ ಜವಾಬ್ದಾರಿಗೆ ಸಾಕ್ಷಿಯಾಗಿದೆ” ಎಂದು ತಿಳಿಸಿದರು.

ಯಮಹಾದ ಈ ಬದ್ಧತೆಯು ಕೇವಲ ಉತ್ಪನ್ನವನ್ನು ತಲುಪಿಸುವುದಕ್ಕಷ್ಟೇ ಸೀಮಿತವಾಗಿಲ್ಲ. ಭಾರತದಲ್ಲಿ ವಿಕಸನಗೊಳ್ಳುತ್ತಿರುವ ಎಲೆಕ್ಟ್ರಿಕ್ ವಾಹನಗಳ ಪರಿಸರ ವ್ಯವಸ್ಥೆ, ‘ಉತ್ಪಾದನೆ ಆಧಾರಿತ ಪ್ರೋತ್ಸಾಹಕ’ (ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್- ಪಿಎಲ್ಐ) ಯೋಜನೆ ಮತ್ತು ಚಾರ್ಜಿಂಗ್ ಮೂಲಸೌಕರ್ಯಗಳ ವಿಸ್ತರಣೆಯಂತಹ ಯೋಜನೆಗಳಿಗೆ ಪೂರಕವಾಗಿ EC-06 ಅನ್ನು ಪರಿಚಯಿಸಲಾಗಿದೆ. ಅಭಿವೃದ್ಧಿಯನ್ನು ಪ್ರಾದೇಶೀಕರಿಸುವ ಮೂಲಕ ಮತ್ತು ‘ಮೇಕ್ ಇನ್ ಇಂಡಿಯಾ’ ಆಶಯಕ್ಕೆ ಅನುಗುಣವಾಗಿ ಕಾರ್ಯನಿರ್ವಹಿಸುವ ಮೂಲಕ ಯಮಹಾ ಸಂಸ್ಥೆಯು ಫಾಸಿಲ್ ಇಂಧನಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಮತ್ತು ದ್ವಿಚಕ್ರ ವಾಹನ ಉದ್ಯಮದ ಕಾರ್ಬನ್ ಫುಟ್‌ಪ್ರಿಂಟ್ ಅನ್ನು ತಗ್ಗಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಗುರಿಯನ್ನು ಹೊಂದಿದೆ.

ತಮ್ಮ ವ್ಯಕ್ತಿತ್ವ ಮತ್ತು ಪರಿಸರ ಪ್ರಜ್ಞೆಯನ್ನು ಪ್ರತಿಬಿಂಬಿಸುವಂತಹ ಸ್ಮಾರ್ಟ್, ವಿಶ್ವಾಸಾರ್ಹ ಮತ್ತು ವಿಭಿನ್ನವಾದ ಸಾರಿಗೆ ಆಯ್ಕೆಗಳನ್ನು ಬಯಸುವ ಇಂದಿನ ಟೆಕ್ ಸ್ಯಾವಿ ಯುವ ಪೀಳಿಗೆಯನ್ನು ಗಮನದಲ್ಲಿಟ್ಟುಕೊಂಡು EC-06 ಅನ್ನು ರೂಪಿಸಲಾಗಿದ್ದು, ಇದು ಹೊಸ ಆವಿಷ್ಕಾರ, ಶೈಲಿ ಮತ್ತು ಸುಸ್ಥಿರತೆಯನ್ನು ಗೌರವಿಸುವ ಸವಾರರ ಮನಗೆಲ್ಲಲಿದೆ.

Previous Post

ಫೆಬ್ರವರಿ 8ಕ್ಕೆ ‘ಮಣಿಪಾಲ ಮ್ಯಾರಥಾನ್’ 8ನೇ ಆವೃತ್ತಿ: 20 ಸಾವಿರಕ್ಕೂ ಹೆಚ್ಚು ಓಟಗಾರರು ಭಾಗವಹಿಸುವ ನಿರೀಕ್ಷೆ…!

Next Post

ದನದ ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ: 15 ಸಾವಿರ ಒಣ ಹುಲ್ಲು ಭಸ್ಮ, ಜಾನುವಾರುಗಳು ಪಾರು….!!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ದನದ ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ: 15 ಸಾವಿರ ಒಣ ಹುಲ್ಲು ಭಸ್ಮ, ಜಾನುವಾರುಗಳು ಪಾರು….!!

ದನದ ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ: 15 ಸಾವಿರ ಒಣ ಹುಲ್ಲು ಭಸ್ಮ, ಜಾನುವಾರುಗಳು ಪಾರು....!!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿ: ಮಳೆ ಕಡಿಮೆ ಇರುವುದರಿಂದ ಉಡುಪಿ ಜಿಲ್ಲೆ ಶಾಲಾ ಕಾಲೇಜುಗಳಿಗೆ ಗುರುವಾರ ರಜೆ ಇರುವುದಿಲ್ಲ : ಜಿಲ್ಲಾಧಿಕಾರಿ ಮಾಹಿತಿ…!!

26/06/2024

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಭಾರತ–ಅಮೆರಿಕ ಒಪ್ಪಂದ ಘೋಷಣೆ ಬೆನ್ನಲ್ಲೇ ಷೇರುಪೇಟೆಯಲ್ಲಿ ಭಾರೀ ಜಿಗಿತ…!

ಭಾರತ–ಅಮೆರಿಕ ಒಪ್ಪಂದ ಘೋಷಣೆ ಬೆನ್ನಲ್ಲೇ ಷೇರುಪೇಟೆಯಲ್ಲಿ ಭಾರೀ ಜಿಗಿತ…!

03/02/2026
ಕುಂಜತ್ತೂರು ತೂಮಿನಕಾಡು ಹಿಲ್ ಟಾಪ್‌ನಲ್ಲಿ ಮಾದಕ ವ್ಯಸನಿ ತಂದೆಯಿಂದ ಮಗಳ ಕೊಲೆ…!

ಕುಂಜತ್ತೂರು ತೂಮಿನಕಾಡು ಹಿಲ್ ಟಾಪ್‌ನಲ್ಲಿ ಮಾದಕ ವ್ಯಸನಿ ತಂದೆಯಿಂದ ಮಗಳ ಕೊಲೆ…!

03/02/2026
ದನದ ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ: 15 ಸಾವಿರ ಒಣ ಹುಲ್ಲು ಭಸ್ಮ, ಜಾನುವಾರುಗಳು ಪಾರು….!!

ದನದ ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ: 15 ಸಾವಿರ ಒಣ ಹುಲ್ಲು ಭಸ್ಮ, ಜಾನುವಾರುಗಳು ಪಾರು….!!

03/02/2026
EC-06 ಬಿಡುಗಡೆ ಮಾಡುವ ಮೂಲಕ ಭಾರತದ ಇವಿ ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಟ್ಟ ಯಮಹಾ; ಬೆಲೆ Rs. 1,67,600

EC-06 ಬಿಡುಗಡೆ ಮಾಡುವ ಮೂಲಕ ಭಾರತದ ಇವಿ ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಟ್ಟ ಯಮಹಾ; ಬೆಲೆ Rs. 1,67,600

03/02/2026

Recent News

ಭಾರತ–ಅಮೆರಿಕ ಒಪ್ಪಂದ ಘೋಷಣೆ ಬೆನ್ನಲ್ಲೇ ಷೇರುಪೇಟೆಯಲ್ಲಿ ಭಾರೀ ಜಿಗಿತ…!

ಭಾರತ–ಅಮೆರಿಕ ಒಪ್ಪಂದ ಘೋಷಣೆ ಬೆನ್ನಲ್ಲೇ ಷೇರುಪೇಟೆಯಲ್ಲಿ ಭಾರೀ ಜಿಗಿತ…!

03/02/2026
ಕುಂಜತ್ತೂರು ತೂಮಿನಕಾಡು ಹಿಲ್ ಟಾಪ್‌ನಲ್ಲಿ ಮಾದಕ ವ್ಯಸನಿ ತಂದೆಯಿಂದ ಮಗಳ ಕೊಲೆ…!

ಕುಂಜತ್ತೂರು ತೂಮಿನಕಾಡು ಹಿಲ್ ಟಾಪ್‌ನಲ್ಲಿ ಮಾದಕ ವ್ಯಸನಿ ತಂದೆಯಿಂದ ಮಗಳ ಕೊಲೆ…!

03/02/2026
ದನದ ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ: 15 ಸಾವಿರ ಒಣ ಹುಲ್ಲು ಭಸ್ಮ, ಜಾನುವಾರುಗಳು ಪಾರು….!!

ದನದ ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ: 15 ಸಾವಿರ ಒಣ ಹುಲ್ಲು ಭಸ್ಮ, ಜಾನುವಾರುಗಳು ಪಾರು….!!

03/02/2026
EC-06 ಬಿಡುಗಡೆ ಮಾಡುವ ಮೂಲಕ ಭಾರತದ ಇವಿ ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಟ್ಟ ಯಮಹಾ; ಬೆಲೆ Rs. 1,67,600

EC-06 ಬಿಡುಗಡೆ ಮಾಡುವ ಮೂಲಕ ಭಾರತದ ಇವಿ ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಟ್ಟ ಯಮಹಾ; ಬೆಲೆ Rs. 1,67,600

03/02/2026
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved