Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

ಫೆಬ್ರವರಿ 8ಕ್ಕೆ ‘ಮಣಿಪಾಲ ಮ್ಯಾರಥಾನ್’ 8ನೇ ಆವೃತ್ತಿ: 20 ಸಾವಿರಕ್ಕೂ ಹೆಚ್ಚು ಓಟಗಾರರು ಭಾಗವಹಿಸುವ ನಿರೀಕ್ಷೆ…!

Dhrishya News by Dhrishya News
03/02/2026
in ಸುದ್ದಿಗಳು
0
ಫೆಬ್ರವರಿ 8ಕ್ಕೆ ‘ಮಣಿಪಾಲ ಮ್ಯಾರಥಾನ್’ 8ನೇ ಆವೃತ್ತಿ: 20 ಸಾವಿರಕ್ಕೂ ಹೆಚ್ಚು ಓಟಗಾರರು ಭಾಗವಹಿಸುವ ನಿರೀಕ್ಷೆ…!
0
SHARES
5
VIEWS
Share on FacebookShare on Twitter

ಮಣಿಪಾಲ, ಫೆ. 03 : ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ (ಮಾಹೆ), ವಿಶ್ವವಿದ್ಯಾಲಯ ಎಂದು ಪರಿಗಣಿತವಾದ ಉತ್ಕೃಷ್ಟ ಸಂಸ್ಥೆಯ ವತಿಯಿಂದ ಆಯೋಜಿಸಿರುವ 8ನೇ ಆವೃತ್ತಿಯ ‘ಮಣಿಪಾಲ ಮ್ಯಾರಥಾನ್’, ಫೆಬ್ರವರಿ 08, 2026ರ ಭಾನುವಾರದಂದು ನಡೆಯಲಿದ್ದು, ಬೆಳಿಗ್ಗೆ 5:00 ಗಂಟೆಗೆ ಮಣಿಪಾಲದ ಕೆ.ಎಂ.ಸಿ ಗ್ರೀನ್ಸ್ ಮೈದಾನದಲ್ಲಿ ಈ ಬೃಹತ್ ಓಟದ ಸ್ಪರ್ಧೆಗೆ ಚಾಲನೆ ಸಿಗಲಿದೆ. 

ವಿದ್ಯಾರ್ಥಿ ಆಯೋಜಿತ ದೇಶದ ಅತಿದೊಡ್ಡ ಫಿಟ್ನೆಸ್ ಕಾರ್ಯಕ್ರಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ಮ್ಯಾರಥಾನ್‌ನಲ್ಲಿ ಈ ಬಾರಿ 20,000ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸುವ ನಿರೀಕ್ಷೆಯಿದೆ. ಇವರಲ್ಲಿ 100ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಕ್ರೀಡಾಳುಗಳು ಪಾಲ್ಗೊಳ್ಳುತ್ತಿರುವುದು ವಿಶೇಷ. ₹25 ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ಬಹುಮಾನ ನೀಡಲಾಗುತ್ತಿದೆ.

ʼಹಸಿರು ಹಾಗೂ ಸುಸ್ಥಿರ ಭವಿಷ್ಯಕ್ಕಾಗಿ ಓಟʼ ಎಂಬ ಸಂದೇಶದಡಿ ಈ ವರ್ಷದ ಮಣಿಪಾಲ ಮ್ಯಾರಥಾನ್ನ್ನು ಆಯೋಜಿಸಲಾಗಿದೆ. ಇದರ ಮೂಲಕ ಪರಿಸರ ಸಂರಕ್ಷಣೆ, ಆರೋಗ್ಯ ಕಾಳಜಿ ಮತ್ತು ಸಮುದಾಯದ ಒಳಿತಿಗಾಗಿ ಮಾಹೆ ಹೊಂದಿರುವ ಬದ್ಧತೆಯನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದೆ. ಮರ ನೆಡುವಿಕೆ, ಸೌರಶಕ್ತಿ ಬಳಕೆ, ತ್ಯಾಜ್ಯ ನಿರ್ವಹಣೆ, ಮಳೆನೀರು ಸಂಗ್ರಹಣೆ ಸೇರಿದಂತೆ ಮಾಹೆ ಕೈಗೊಂಡಿರುವ ಪರಿಸರಪ್ರೇಮಿ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಈ ಮ್ಯಾರಥಾನ್ ಬೆಂಬಲ ನೀಡಲಿದ್ದು, ಇದರ ಪ್ರಯೋಜನವು ಕೇವಲ ಕ್ಯಾಂಪಸ್‌ಗೆ ಸೀಮಿತವಾಗದೇ, ಸುತ್ತಮುತ್ತಲಿನ ಸಮುದಾಯಕ್ಕೂ ಪ್ರೇರಣೆ ನೀಡುವುದೆಂದು ಆಶಿಸಲಾಗಿದೆ.

ಈ ಮ್ಯಾರಥಾನ್‌ನಲ್ಲಿ 42 ಕಿ.ಮೀ. ಪೂರ್ಣ ಮ್ಯಾರಥಾನ್, 21 ಕಿ.ಮೀ. ಅರ್ಧ ಮ್ಯಾರಥಾನ್, 10 ಕಿ.ಮೀ., 5 ಕಿ.ಮೀ. ಹಾಗೂ 3 ಕಿ.ಮೀ. ಫನ್ ರನ್ ಸೇರಿ ಐದು ವಿಭಾಗಗಳಲ್ಲಿ ಓಟವನ್ನು ಆಯೋಜಿಸಲಾಗಿದೆ. ವೃತ್ತಿಪರ ಓಟಗಾರರು, ಸಾಮಾನ್ಯರು, ವಿದ್ಯಾರ್ಥಿಗಳು ಹಾಗೂ ಎಲ್ಲ ವಯೋಮಾನದ ಫಿಟ್‌ನೆಸ್ ಆಸಕ್ತರು ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ದುಬೈ, ಇಂಗ್ಲೆಂಡ್, ಇಥಿಯೋಪಿಯಾ, ಜರ್ಮನಿ, ಜಪಾನ್, ಕೀನ್ಯಾ, ಮಲೇಶಿಯಾ, ನೇಪಾಳ, ಶ್ರೀಲಂಕಾ, ಅಮೆರಿಕ ಸೇರಿದಂತೆ ಅಂತರರಾಷ್ಟ್ರೀಯ ಕ್ರೀಡಾಳುಗಳ ಜೊತೆಗೆ ದೇಶದ ವಿವಿಧ ಭಾಗಗಳಿಂದ ಓಟಗಾರರು ಭಾಗವಹಿಸುವ ನಿರೀಕ್ಷೆಯಿದೆ. ಇದರಿಂದ ಮಣಿಪಾಲ ಮ್ಯಾರಥಾನ್‌ಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಇನ್ನಷ್ಟು ಮನ್ನಣೆ ಸಿಗಲಿದೆ.

42 ಕಿಮೀ ಪೂರ್ಣ ಮ್ಯಾರಥಾನ್‌ ಬೆಳಿಗ್ಗೆ 5.00 ಗಂಟೆಗೆ ಆರಂಭವಾಗಲಿದ್ದು, ನಂತರ ಬೆಳಿಗ್ಗೆ 5.30ಕ್ಕೆ 21 ಕಿಮೀ ಅರ್ಧ ಮ್ಯಾರಥಾನ್, 6.00ಕ್ಕೆ 10 ಕಿ.ಮೀ. ಓಟ, 6.20ಕ್ಕೆ 5 ಕಿ.ಮೀ. ಓಟ ಮತ್ತು 3 ಕಿ.ಮೀ. ಫನ್ ರನ್ ಬೆಳಿಗ್ಗೆ 7.30 ಗಂಟೆಗೆ ಪ್ರಾರಂಭವಾಗಲಿದೆ. ವಿಶೇಷಚೇತನರಿಗಾಗಿ ಹಮ್ಮಿಕೊಂಡಿರುವ ವಿಶೇಷ ಓಟವು ಬೆಳಿಗ್ಗೆ 8.30ಕ್ಕೆ ಶುರುವಾಗಲಿದೆ.

ಓಟಗಾರರ ಉತ್ಸಾಹಕ್ಕೆ ಇನ್ನಷ್ಟು ಉತ್ತೇಜನ ನೀಡುವಂತೆ, ಮಣಿಪಾಲ ಮ್ಯಾರಥಾನ್ 2026ರಲ್ಲಿ ವಿವಿಧ ವಿಭಾಗಗಳ ವಿಜೇತರಿಗೆ ಆಕರ್ಷಕ ನಗದು ಬಹುಮಾನಗಳನ್ನು ನೀಡಲಾಗುವುದು. ಪುರುಷರು ಹಾಗೂ ಮಹಿಳಾ ವಿಭಾಗದ 42 ಕಿ.ಮೀ. ಪೂರ್ಣ ಮ್ಯಾರಥಾನ್‌ನಲ್ಲಿ ಪ್ರಥಮ ಸ್ಥಾನ ಗಳಿಸಿದವರಿಗೆ ₹1,00,000, ದ್ವಿತೀಯ ಸ್ಥಾನಕ್ಕೆ ₹75,000 ಹಾಗೂ ತೃತೀಯ ಸ್ಥಾನಕ್ಕೆ ₹50,000 ಬಹುಮಾನ ನೀಡಲಾಗುವುದು. 21 ಕಿ.ಮೀ. ಅರ್ಧ ಮ್ಯಾರಥಾನ್‌ನಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದವರಿಗೆ ಕ್ರಮವಾಗಿ ₹50,000, ₹30,000 ಮತ್ತು ₹20,000 ಬಹುಮಾನ ದೊರೆಯಲಿದೆ. 10 ಕಿ.ಮೀ. ಓಟದಲ್ಲಿ ವಿಜೇತರಿಗೆ ₹20,000, ಎರಡನೇ ಸ್ಥಾನಕ್ಕೆ ₹15,000 ಮತ್ತು ಮೂರನೇ ಸ್ಥಾನಕ್ಕೆ ₹10,000 ನೀಡಲಾಗುವುದು. 5 ಕಿ.ಮೀ. ಓಟದಲ್ಲಿ ಮೊದಲ ಮೂರು ಸ್ಥಾನಗಳಿಗೆ ಕ್ರಮವಾಗಿ ₹10,000, ₹7,000 ಮತ್ತು ₹5,000 ಬಹುಮಾನ ನೀಡಲಾಗುವುದು.  

ಮಣಿಪಾಲ ಮ್ಯಾರಥಾನ್‌ನ ವಿಶಿಷ್ಟ ಆಕರ್ಷಣೆಯಾಗಿರುವ 42 ಕಿ.ಮೀ. ಓಟಕ್ಕೆ ಕಡಲತೀರದ ಮಾರ್ಗ ಈ ವರ್ಷವೂ ಮುಂದುವರಿಯಲಿದೆ. ಪ್ರಕೃತಿ ಸೌಂದರ್ಯದ ನಡುವೆ ನಡೆಯುವ ಈ ಓಟವು, ಓಟಗಾರರಿಗೆ ವಿಶಿಷ್ಟ ಅನುಭವ ನೀಡಲಿದೆ. 10 ಕಿ.ಮೀ. ಓಟದ ಮಾರ್ಗವನ್ನು ಈ ಬಾರಿ ಹೊಸದಾಗಿ ರೂಪಿಸಲಾಗಿದ್ದು, ಮಣಿಪಾಲ ಹಾಸ್ಪಿಸ್ ರೆಸ್ಪೈಟ್ ಸೆಂಟರ್ (ಎಂಎಚ್‌ಆರ್‌ಸಿ), ಸುತ್ತ ಈ ಮಾರ್ಗ ಇರಲಿದೆ, ಇದು ಈ ಮ್ಯಾರಥಾನ್‌ ಸಾಮಾಜಿಕ ಜಾಗೃತಿ ಹಾಗೂ ಸಮುದಾಯದ ಒಳಿತಿಗೆ ನೀಡುತ್ತಿರುವ ಮಹತ್ವವನ್ನು ಮತ್ತಷ್ಟು ಸ್ಪಷ್ಟಪಡಿಸುತ್ತದೆ. 

ಎಂಎಚ್‌ಆರ್‌ಸಿಯು ಒಂದು ವಿಶಿಷ್ಟ ಯೋಜನೆಯಾಗಿದ್ದು, ಉನ್ನತ ಮಟ್ಟದ ಪ್ಯಾಲಿಯೇಟಿವ್ ಕೇರ್ ಸೇವೆಯನ್ನು ಶಿಕ್ಷಣ ಮತ್ತು ಸಂಶೋಧನೆಯೊಂದಿಗೆ ಒಗ್ಗೂಡಿಸುತ್ತಿದೆ. ವೈದ್ಯಕೀಯ ಕಾಲೇಜು ಮತ್ತು ಉನ್ನತ ಚಿಕಿತ್ಸಾ ಆಸ್ಪತ್ರೆ ಜತೆ ಸಂಪರ್ಕ ಹೊಂದಿರುವ ಭಾರತದ ಏಕೈಕ ಹಾಸ್ಪಿಸ್ ಎಂಬ ಹೆಗ್ಗಳಿಕೆ ಹೊಂದಿದೆ. ಕೊನೆಯ ಹಂತದ ಕ್ಯಾನ್ಸರ್ ಹಾಗೂ ಇತರ ರೋಗಗಳಿಂದ ಬಳಲುತ್ತಿರುವ ರೋಗಿಗಳಿಗೆ ಸೇವೆ ನೀಡುವ ಜತೆಗೆ, ಭವಿಷ್ಯದ ಪ್ಯಾಲಿಯೇಟಿವ್ ಕೇರ್ ತಜ್ಞರನ್ನು ತರಬೇತಿಗೊಳಿಸುವ ಕಾರ್ಯವೂ ಇಲ್ಲಿ ನಡೆಯುತ್ತಿದೆ. ಹೀಗಾಗಿ ಮ್ಯಾರಥಾನ್ ಮಾರ್ಗಕ್ಕೆ ಎಂಎಚ್‌ಆರ್‌ಸಿಯನ್ನು ಸೇರಿಸಿರುವುದು ಅರ್ಥಪೂರ್ಣ ಹಾಗೂ ಮಹತ್ವದ ಹೆಜ್ಜೆಯಾಗಿದೆ.

ಎಲ್ಲರ ಭಾಗವಹಿಸುವಿಕೆಗೆ ಆದ್ಯತೆ ನೀಡಿರುವ ಮಾಹೆ, ಮಣಿಪಾಲ ಮ್ಯಾರಥಾನ್ 2026ರಲ್ಲಿ ವಿಶೇಷ ಚೇತನರಿಗೆ ಪ್ರತ್ಯೇಕ ವಿಭಾಗವನ್ನು ರೂಪಿಸಲಾಗಿದೆ. ಜೊತೆಗೆ ಎಲ್ಲ ವಯೋಮಾನದವರಿಗೂ ಸ್ಪರ್ಧೆಯಲ್ಲಿ ಭಾಗವಹಿಸಲು ಪ್ರೇರೇಪಿಸುವ ಸಲುವಾಗಿ ವಯೋಮಾನದ ಆಧಾರದ ಮೇಲೂ ವಿವಿಧ ವಿಭಾಗಗಳ ವ್ಯವಸ್ಥೆ ಮಾಡಲಾಗಿದೆ. ಓಟದ ಮಾರ್ಗದಾದ್ಯಂತ ಓಟಗಾರರ ಸುರಕ್ಷತೆಗಾಗಿ ಸ್ವಯಂಸೇವಕರ ತಂಡಗಳು ಮತ್ತು ವೈದ್ಯಕೀಯ ಸಿಬ್ಬಂದಿಯನ್ನು ನಿಯೋಜಿಸಲಾಗುವುದು.

ಮ್ಯಾರಥಾನ್ ಪೂರ್ಣಗೊಂಡ ನಂತರ ಕೆಎಂಸಿ ಗ್ರೀನ್ಸ್‌ನಲ್ಲಿ ಆಕರ್ಷಕ ಕಾರ್ಯಕ್ರಮಗಳು ನಡೆಯಲಿದೆ. ಫಿಟ್‌ನೆಸ್ ಚಟುವಟಿಕೆಗಳಿಗಾಗಿ ವಿಶೇಷ ವಲಯಗಳು, ಮನೋರಂಜನಾ ಕಾರ್ಯಕ್ರಮಗಳು, ಆಹಾರ ಮಳಿಗೆಗಳು ಇರಲಿವೆ. ಓಟಗಾರರು ಮತ್ತು ಅವರ ಕುಟುಂಬ ಸದಸ್ಯರು ಮತ್ತು ಪ್ರೇಕ್ಷಕರು ಒಟ್ಟಾಗಿ ಹಬ್ಬದ ವಾತಾವರಣವನ್ನು ಆನಂದಿಸಬಹುದಾಗಿದೆ.

ಈ ಮಹತ್ವದ ಕಾರ್ಯಕ್ರಮಕ್ಕೆ ಸಹಕರಿಸುತ್ತಿರುವ ಜಿಲ್ಲಾಡಳಿತಕ್ಕೆ ಮಾಹೆ ಮಣಿಪಾಲ್‌ ತಂಡ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದೆ. ‘ಜಿಲ್ಲಾ ಉಪ ಆಯುಕ್ತರು, ಪೊಲೀಸ್ ವರಿಷ್ಠಾಧಿಕಾರಿ, ನಗರಸಭೆ ಹಾಗೂ ಪಂಚಾಯತ್ ಆಡಳಿತದಿಂದ ದೊರೆಯುತ್ತಿರುವ ಉತ್ತಮ ಸಹಕಾರ ಮತ್ತು ಸಮನ್ವಯ, ಈ ಬೃಹತ್ ಕಾರ್ಯಕ್ರಮದ ಸುಗಮ ಹಾಗೂ ಯಶಸ್ವಿ ಆಯೋಜನೆಗೆ ಪ್ರಮುಖ ಕಾರಣʼ ಎಂದು ಮಾಹೆ ತಿಳಿಸಿದೆ.

 ಪ್ರಾಯೋಜಕರು ಮತ್ತು ಪಾಲುದಾರರು: ಮಣಿಪಾಲ ಮ್ಯಾರಥಾನ್ 2026ಕ್ಕೆ ಐಸಿಐಸಿಐ ಬ್ಯಾಂಕ್ ಪ್ರಮುಖ ಪ್ರಾಯೋಜಕರಾಗಿ ಬೆಂಬಲಿಸಿದೆ. ಯುನೆಕ್ಸ್ಟ್, ಡೆಲಾಯ್ಟ್ ಹಾಗೂ ಬ್ಯಾಂಕ್ ಆಫ್ ಬರೋಡಾ (ಕ್ರೆಡಿಟ್ ಕಾರ್ಡ್ ವಿಭಾಗ) ಸಂಸ್ಥೆಗಳು ಸಹಪಾಲುದಾರರಾಗಿ ಕೈಜೋಡಿಸಿವೆ. 

ಬಿಬ್ ಎಕ್ಸ್‌ಪೋ ವಿವರಗಳು: ಮ್ಯಾರಥಾನ್‌ನಲ್ಲಿ ಭಾಗವಹಿಸುವವರು ತಮ್ಮ ರೇಸ್ ಬಿಬ್‌ಗಳು ಹಾಗೂ ಕಿಟ್‌ಗಳನ್ನು ಫೆಬ್ರವರಿ 06 ಮತ್ತು 07, 2026ರಂದು ಬೆಳಿಗ್ಗೆ 9.30ರಿಂದ ಸಂಜೆ 5.30ರವರೆಗೆ ಮಣಿಪಾಲದ ಕೆಎಂಸಿ ಗ್ರೀನ್ಸ್‌ನಲ್ಲಿ ನಡೆಯುವ ಬಿಬ್ ಎಕ್ಸ್‌ಪೋದಲ್ಲಿ ಪಡೆಯಬಹುದು. ಇಲ್ಲಿ ಪಾಲುದಾರ ಸಂಸ್ಥೆಗಳ ಪ್ರದರ್ಶನಗಳ ಜೊತೆಗೆ, ಓಟದ ದಿನಕ್ಕೆ ಅಗತ್ಯವಾದ ಪ್ರಮುಖ ಮಾಹಿತಿಯೂ ಲಭ್ಯವಿರಲಿದೆ.

Previous Post

ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯು ಟೈಪ್ 1 ಮಧುಮೇಹ ಹೊಂದಿರುವ ಮಕ್ಕಳಿಗಾಗಿ ಕುಟುಂಬ ಸಂವಾದ ಕಾರ್ಯಕ್ರಮ…!!

Next Post

EC-06 ಬಿಡುಗಡೆ ಮಾಡುವ ಮೂಲಕ ಭಾರತದ ಇವಿ ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಟ್ಟ ಯಮಹಾ; ಬೆಲೆ Rs. 1,67,600

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
EC-06 ಬಿಡುಗಡೆ ಮಾಡುವ ಮೂಲಕ ಭಾರತದ ಇವಿ ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಟ್ಟ ಯಮಹಾ; ಬೆಲೆ Rs. 1,67,600

EC-06 ಬಿಡುಗಡೆ ಮಾಡುವ ಮೂಲಕ ಭಾರತದ ಇವಿ ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಟ್ಟ ಯಮಹಾ; ಬೆಲೆ Rs. 1,67,600

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿ: ಮಳೆ ಕಡಿಮೆ ಇರುವುದರಿಂದ ಉಡುಪಿ ಜಿಲ್ಲೆ ಶಾಲಾ ಕಾಲೇಜುಗಳಿಗೆ ಗುರುವಾರ ರಜೆ ಇರುವುದಿಲ್ಲ : ಜಿಲ್ಲಾಧಿಕಾರಿ ಮಾಹಿತಿ…!!

26/06/2024

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಭಾರತ–ಅಮೆರಿಕ ಒಪ್ಪಂದ ಘೋಷಣೆ ಬೆನ್ನಲ್ಲೇ ಷೇರುಪೇಟೆಯಲ್ಲಿ ಭಾರೀ ಜಿಗಿತ…!

ಭಾರತ–ಅಮೆರಿಕ ಒಪ್ಪಂದ ಘೋಷಣೆ ಬೆನ್ನಲ್ಲೇ ಷೇರುಪೇಟೆಯಲ್ಲಿ ಭಾರೀ ಜಿಗಿತ…!

03/02/2026
ಕುಂಜತ್ತೂರು ತೂಮಿನಕಾಡು ಹಿಲ್ ಟಾಪ್‌ನಲ್ಲಿ ಮಾದಕ ವ್ಯಸನಿ ತಂದೆಯಿಂದ ಮಗಳ ಕೊಲೆ…!

ಕುಂಜತ್ತೂರು ತೂಮಿನಕಾಡು ಹಿಲ್ ಟಾಪ್‌ನಲ್ಲಿ ಮಾದಕ ವ್ಯಸನಿ ತಂದೆಯಿಂದ ಮಗಳ ಕೊಲೆ…!

03/02/2026
ದನದ ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ: 15 ಸಾವಿರ ಒಣ ಹುಲ್ಲು ಭಸ್ಮ, ಜಾನುವಾರುಗಳು ಪಾರು….!!

ದನದ ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ: 15 ಸಾವಿರ ಒಣ ಹುಲ್ಲು ಭಸ್ಮ, ಜಾನುವಾರುಗಳು ಪಾರು….!!

03/02/2026
EC-06 ಬಿಡುಗಡೆ ಮಾಡುವ ಮೂಲಕ ಭಾರತದ ಇವಿ ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಟ್ಟ ಯಮಹಾ; ಬೆಲೆ Rs. 1,67,600

EC-06 ಬಿಡುಗಡೆ ಮಾಡುವ ಮೂಲಕ ಭಾರತದ ಇವಿ ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಟ್ಟ ಯಮಹಾ; ಬೆಲೆ Rs. 1,67,600

03/02/2026

Recent News

ಭಾರತ–ಅಮೆರಿಕ ಒಪ್ಪಂದ ಘೋಷಣೆ ಬೆನ್ನಲ್ಲೇ ಷೇರುಪೇಟೆಯಲ್ಲಿ ಭಾರೀ ಜಿಗಿತ…!

ಭಾರತ–ಅಮೆರಿಕ ಒಪ್ಪಂದ ಘೋಷಣೆ ಬೆನ್ನಲ್ಲೇ ಷೇರುಪೇಟೆಯಲ್ಲಿ ಭಾರೀ ಜಿಗಿತ…!

03/02/2026
ಕುಂಜತ್ತೂರು ತೂಮಿನಕಾಡು ಹಿಲ್ ಟಾಪ್‌ನಲ್ಲಿ ಮಾದಕ ವ್ಯಸನಿ ತಂದೆಯಿಂದ ಮಗಳ ಕೊಲೆ…!

ಕುಂಜತ್ತೂರು ತೂಮಿನಕಾಡು ಹಿಲ್ ಟಾಪ್‌ನಲ್ಲಿ ಮಾದಕ ವ್ಯಸನಿ ತಂದೆಯಿಂದ ಮಗಳ ಕೊಲೆ…!

03/02/2026
ದನದ ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ: 15 ಸಾವಿರ ಒಣ ಹುಲ್ಲು ಭಸ್ಮ, ಜಾನುವಾರುಗಳು ಪಾರು….!!

ದನದ ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ: 15 ಸಾವಿರ ಒಣ ಹುಲ್ಲು ಭಸ್ಮ, ಜಾನುವಾರುಗಳು ಪಾರು….!!

03/02/2026
EC-06 ಬಿಡುಗಡೆ ಮಾಡುವ ಮೂಲಕ ಭಾರತದ ಇವಿ ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಟ್ಟ ಯಮಹಾ; ಬೆಲೆ Rs. 1,67,600

EC-06 ಬಿಡುಗಡೆ ಮಾಡುವ ಮೂಲಕ ಭಾರತದ ಇವಿ ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಟ್ಟ ಯಮಹಾ; ಬೆಲೆ Rs. 1,67,600

03/02/2026
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved