ಮಂಗಳೂರು:ಜುಲೈ 04 :ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗವು ಜುಲೈ 3 ಬುಧವಾರದಿಂದ ಮಂಗಳೂರು-ಧರ್ಮಸ್ಥಳ ಮಾರ್ಗದಲ್ಲಿ ರಾಜಹಂಸ ಬಸ್ ಸೇವೆಯನ್ನು ಪ್ರಾರಂಭಿಸಿದೆ.
ದರ ಮತ್ತು ನಿಲುಗಡೆ ವಿವರಗಳು: ಬಿ.ಸಿ. ರಸ್ತೆ, ಬಂಟ್ವಾಳ, ಕಾರಿಂಜ ಕ್ರಾಸ್, ಪೂಂಜಾಲಕಟ್ಟೆ, ಮಡಂತ್ಯಾರು, ಗುರುವಾಯನಕರೆ, ಬೆಳ್ತಂಗಡಿ, ಉಜಿರೆ. ಒಟ್ಟು ದರ ರೂ.110.
ವೇಳಾಪಟ್ಟಿಯ ಪ್ರಕಾರ, ಮಂಗಳೂರಿನಿಂದ ಧರ್ಮಸ್ಥಳಕ್ಕೆ ಹೋಗುವ ಬಸ್‌ಗಳು ಬೆಳಿಗ್ಗೆ 6:30, 7:00, 8:30, 9:00, 11:15, ಮಧ್ಯಾಹ್ನ 12:15, 2:30, 3:30, 5:30 ಮತ್ತು ಸಂಜೆ 6:30 ಕ್ಕೆ ಹೊರಡುತ್ತವೆ.
ಸಾರ್ವಜನಿಕ ಪ್ರಯಾಣಿಕರು ಹೊಸ ಸಾರಿಗೆ ಸೌಲಭ್ಯದ ಲಾಭ ಪಡೆಯಬಹುದು ಎಂದು ಕೆ.ಎಸ್.ಆರ್.ಟಿ.ಸಿ. ಮಂಗಳೂರು ಹಿರಿಯ ವಿಭಾಗೀಯ ನಿಯಂತ್ರಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.