ಬೆಂಗಳೂರು, ಜ.29: ಅಮೃತಹಳ್ಳಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ 4 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡು, ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದ ಇಬ್ಬರು ಇಂಜಿನಿಯರ್, ಕಾನೂನು ವಿದ್ಯಾರ್ಥಿ, ಬೌನ್ಸರ್ ಸೇರಿ 10 ಮಂದಿಯನ್ನು ಬಂಧಿಸಿದ್ದಾರೆ.
ಕೋಗಿಲು ಲೇಔಟ್‌ನ ಎರೋನಾಟಿಕಲ್ ಇಂಜಿನಿಯರಿಂಗ್ ವಿದ್ಯಾರ್ಥಿ ಕುಶಾಲ್‌ಗೌಡ(231 ರಾಜಾನುಕುಂಟೆಯ ಕಾನೂನು ವಿದ್ಯಾರ್ಥಿ ಶಶಾಂಕ್(281 ಮರಳವಾಡಿಯ ಬೌನ್ಸರ್ ಸಾಗಲ್(29), ದೊಡ್ಡಕಮ್ಮನಹಳ್ಳಿಯ ಕ್ಯಾಬ್ ಚಾಲಕ ವಿಲ್ಸನ್.ಎನ್(48), ಅಕ್ಷಯನಗರದ ಅಶಿರ್ ಅಲಿ(36), ರಿಯಾಸ್ 38), ಬೇಗೂರಿನ ಸಜಾದ್ 34) ಎಲೆಕ್ಟ್ರಾನಿಕ್ ಸಿಟಿಯ ಶಿಹಾಬ್.ಕೆ.ಪಿ301 ದೊಡ್ಡಮ್ಮನಹಳ್ಳಿಯ ಅಬ್ದುಲ್ ನಾಸಿರ್ 281 ದೇವರಾಜ ಅರಸು ನಗರದ ಸಾಫ್ಟ್‌ವೇರ್ ಇಂಜಿನಿಯರ್ ಅಭಿನವ್ ಡಿ.21) ಬಂಧಿತ ಆರೋಪಿಗಳಾಗಿದ್ದಾರೆ.
ಬಂಧಿತ ಆರೋಪಿಗಳಿಂದ 36 ಸಾವಿರ ರೂ. ನಗದು, 3 ಕೆ.ಜಿ ಹೈಡೋ ಗಾಂಜಾ, 50 ಗ್ರಾಂ ಎಂಡಿಎಂಎ, 500 ಗ್ರಾಂ ಚರಸ್, 500 ಎಲ್‌ಎಸ್ ಡಿ ಸ್ಕ್ರಿಪ್ಟ್ ಗಳು, 10 ಕೆಜಿ ಗಾಂಜಾ. 2 ಕಾರುಗಳು, 14 ಮೊಬೈಲ್ ಗಳು ಸೇರಿ 4 ಕೋಟಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ಪೊಲೀಸರು






