Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

ಭೀಮ ಸಾರಥಿ ಪ್ರಶಸ್ತಿಗೆ ಅಶೋಕ್ ಕುಮಾರ್ ಶೆಟ್ಟಿ ಆಯ್ಕೆ..!!

Dhrishya News by Dhrishya News
09/04/2025
in ಸುದ್ದಿಗಳು
0
0
SHARES
15
VIEWS
Share on FacebookShare on Twitter

ಉಡುಪಿ, ಏಪ್ರಿಲ್.09: ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಉಡುಪಿ ಜಿಲ್ಲಾ ಸಮಿತಿ ನೀಡುವ 2025ನೇ ಸಾಲಿನ ಭೀಮ ಸಾರಥಿ ಪ್ರಶಸ್ತಿಗೆ ಶಿರ್ವ ಪೆರ್ನಾಲು ಸಮಗ್ರ ಗ್ರಾಮೀಣ ಆಶ್ರಮದ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ(61) ಆಯ್ಕೆಯಾಗಿದ್ದಾರೆ.

ಅರ್ಥ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು, ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜು ಹಾಗೂ ಬೈಂದೂರು ಪ್ರಥಮ ದರ್ಜೆ ಕಾಲೇಜಿನಲ್ಲಿ ಮೂರು ವರ್ಷಗಳ ಅವಧಿಗೆ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿದ್ದರು. 1991 ರಿಂದ ಕಳೆದ 32 ವರ್ಷಗಳಿಂದ ಸಮಗ್ರ ಗ್ರಾಮೀಣ ಆಶ್ರಮ ಸ್ವಯಂ ಸೇವಾ ಸಂಸ್ಥೆಯ ಮೂಲಕ ಕರ್ನಾಟಕ ರಾಜ್ಯದ ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಮೈಸೂರು ಜಿಲ್ಲೆಗಳ ಆದಿವಾಸಿ ಬುಡಕಟ್ಟು ಜನಾಂಗದವರಾದ ಕೊರಗ, ಜೇನು ಕುರುಬ, ಬೆಟ್ಟ ಕುರುಬ, ಯರವ, ಸೋಲಿಗೆ, ಮಲೆಕುಡಿಯ, ಹಸಲರು, ಗೊಂಡ, ಹಕ್ಕಿ ಪಿಕ್ಕಿ ಸಮುದಾಯಗಳನ್ನು ಸಂಘಟಿಸಿ ಅವರ ಸಬಲೀಕರಣಕ್ಕೆ ಶ್ರಮಿಸುತ್ತಿದ್ದಾರೆ.

ಮಂಗಳೂರು ವಿಶ್ವವಿದ್ಯಾಲಯ, ಹಂಪಿ ಕನ್ನಡ ವಿಶ್ವವಿದ್ಯಾಲಯ, ಜಾನಪದ ವಿಶ್ವವಿದ್ಯಾಲಯ ಹಾವೇರಿ, ನ್ಯಾಶನಲ್ ಲಾ ಸ್ಕೂಲ್ ಯುನಿವರ್ಸಿಟಿ ಬೆಂಗಳೂರು ಇವರ ಸಂಯೋಜನೆಯಲ್ಲಿ ಈ ಸಮುದಾಯಗಳ ಅಸ್ತಿತ್ವ, ಅಸ್ಮಿತೆ, ಅನನ್ಯತೆ, ಸಾಂಸ್ಕೃತಿಕ ಅಭಿವ್ಯಕ್ತಿಗಳನ್ನು ಉಳಿಸಿಕೊಂಡು ಸಮಗ್ರ ಅಭಿವೃದ್ಧಿ ಮಾದರಿ ಕಂಡುಕೊಳ್ಳಲು ಹಲವಾರು ಅಧ್ಯಯನಗಳಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗಿದೆ. ಬಹಳ ಮುಖ್ಯವಾಗಿ ಕೊರಗರ ಅಜಲು ನಿಷೇಧ ಕಾಯ್ದೆ, ಕೊರಗರ ಭೂಮಿ ಹೋರಾಟ, ಪಶ್ಚಿಮ ಘಟ್ಟ ವ್ಯಾಪ್ತಿಯ ಎಲ್ಲಾ ಸಮುದಾಯಗಳ ಅರಣ್ಯ ಹಕ್ಕು ಕಾಯ್ದೆ 2006ರ ಅನುಷ್ಠಾನಕ್ಕೆ ಹೋರಾಟ, ಪೌಷ್ಟಿಕ ಆಹಾರ ಅಭಿಯಾನ, ಶಾಲೆಗಳು, ಆಶ್ರಮ ಶಾಲೆಗಳಲ್ಲಿ ಶಿಕ್ಷಣ ಗುಣಮಟ್ಟದ ಅಭಿಯಾನ, ಆರೋಗ್ಯ, ಉದ್ಯೋಗ ಖಾತ್ರಿ ಹೋರಾಟದಲ್ಲಿ ಅವರು ತೊಡಗಿಸಿಕೊಂಡಿದ್ದಾರೆ.

2006ನೇ ಸಾಲಿನ ಕರ್ನಾಟಕ ಸರಕಾರ ನೀಡುವ ಬಾಬೂ ಜಗಜ್ಜೀವನ್ ರಾಂ ಪ್ರಶಸ್ತಿ, 2019ರ ಸಾಲಿನ ವಿಶ್ವ ಸಂಸ್ಥೆಯು ಪ್ರತೀ ವರ್ಷ ನೀಡುವ ಯು ಎನ್ ಹ್ಯಾಬಿಟ್ಯಾಟ್ ಗೋಲ್ಡನ್ ಅವಾರ್ಡ್‌ಗೆ ಇವರು ಭಾಜನರಾಗಿದ್ದಾರೆ.

ಈ ಪ್ರಶಸ್ತಿಯನ್ನು ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್‌ರ 134ನೇ ಜನ್ಮ ದಿನಾಚರಣೆ ಪ್ರಯುಕ್ತ ಎ.14ರಂದು ಕುಂದಾಪುರ ಲಯನ್ಸ್ ಸ್ಕ್ವೇರ್‌ನಲ್ಲಿ ನಡೆಯುವ ಭೀಮೋತ್ಸವ ಕಾರ್ಯಕ್ರಮದಲ್ಲಿ ಪ್ರಧಾನ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದ್ದಾರೆ .

Previous Post

ಮಂಗಳೂರು : ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಜಿಲ್ಲಾಧಿಕಾರಿ ಯವರಿಂದ ಸನ್ಮಾನ..!!

Next Post

ರೆಪೋ ದರವನ್ನು ಶೇ.6ರಷ್ಟು ಕಡಿತಗೊಳಿಸಿದ ಭಾರತೀಯ ರಿಸರ್ವ್ ಬ್ಯಾಂಕ್..!!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post

ರೆಪೋ ದರವನ್ನು ಶೇ.6ರಷ್ಟು ಕಡಿತಗೊಳಿಸಿದ ಭಾರತೀಯ ರಿಸರ್ವ್ ಬ್ಯಾಂಕ್..!!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 24k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಪೊಲೀಸ್ ಇಲಾಖೆಗೆ ಅರ್ಜಿ ಸಲ್ಲಿಸುವ ಮತ್ತು ಪರೀಕ್ಷಾ ವಿಧಾನದ ಬಗ್ಗೆ ಮಾಹಿತಿ ಕಾರ್ಯಾಗಾರ

ಪೊಲೀಸ್ ಇಲಾಖೆಗೆ ಅರ್ಜಿ ಸಲ್ಲಿಸುವ ಮತ್ತು ಪರೀಕ್ಷಾ ವಿಧಾನದ ಬಗ್ಗೆ ಮಾಹಿತಿ ಕಾರ್ಯಾಗಾರ

29/06/2026
ಆಯುಷ್ಮಾನ್ ಯೋಜನೆ ಅಸಮರ್ಪಕತೆ ಖಂಡಿಸಿ ಜಿಲ್ಲಾಧಿಕಾರಿಗೆ ಬಿಜೆಪಿ ಯುವಮೋರ್ಚಾದಿಂದ ಮನವಿ..!

ಆಯುಷ್ಮಾನ್ ಯೋಜನೆ ಅಸಮರ್ಪಕತೆ ಖಂಡಿಸಿ ಜಿಲ್ಲಾಧಿಕಾರಿಗೆ ಬಿಜೆಪಿ ಯುವಮೋರ್ಚಾದಿಂದ ಮನವಿ..!

29/06/2026
ಲಯನ್ಸ್ ಎಂದರೆ ಸೇವೆ ಮಾತ್ರವಲ್ಲ, ಅದು ವ್ಯಕ್ತಿತ್ವ ಬೆಳವಣಿಗೆ : ಲ. ಹರಿಪ್ರಸಾದ್ ರೈ

ಲಯನ್ಸ್ ಎಂದರೆ ಸೇವೆ ಮಾತ್ರವಲ್ಲ, ಅದು ವ್ಯಕ್ತಿತ್ವ ಬೆಳವಣಿಗೆ : ಲ. ಹರಿಪ್ರಸಾದ್ ರೈ

29/06/2026
‘Sparkle Like No Other’, (ಬೇರೆಲ್ಲೂ ಕಾಣದ ಹೊಳಪು) ಪ್ರಚಾರ ಬಿಡುಗಡೆಯ ಮೂಲಕ ಆದಿತ್ಯ ಬಿರ್ಲಾ ಜ್ಯುವೆಲ್ಲರಿ ಅವರ ಇಂದ್ರಿಯ ವಜ್ರದ ಹೊಳಪನ್ನು ಮುನ್ನೆಲೆಗೆ ತಂದಿದೆ

‘Sparkle Like No Other’, (ಬೇರೆಲ್ಲೂ ಕಾಣದ ಹೊಳಪು) ಪ್ರಚಾರ ಬಿಡುಗಡೆಯ ಮೂಲಕ ಆದಿತ್ಯ ಬಿರ್ಲಾ ಜ್ಯುವೆಲ್ಲರಿ ಅವರ ಇಂದ್ರಿಯ ವಜ್ರದ ಹೊಳಪನ್ನು ಮುನ್ನೆಲೆಗೆ ತಂದಿದೆ

29/06/2026

Recent News

ಪೊಲೀಸ್ ಇಲಾಖೆಗೆ ಅರ್ಜಿ ಸಲ್ಲಿಸುವ ಮತ್ತು ಪರೀಕ್ಷಾ ವಿಧಾನದ ಬಗ್ಗೆ ಮಾಹಿತಿ ಕಾರ್ಯಾಗಾರ

ಪೊಲೀಸ್ ಇಲಾಖೆಗೆ ಅರ್ಜಿ ಸಲ್ಲಿಸುವ ಮತ್ತು ಪರೀಕ್ಷಾ ವಿಧಾನದ ಬಗ್ಗೆ ಮಾಹಿತಿ ಕಾರ್ಯಾಗಾರ

29/06/2026
ಆಯುಷ್ಮಾನ್ ಯೋಜನೆ ಅಸಮರ್ಪಕತೆ ಖಂಡಿಸಿ ಜಿಲ್ಲಾಧಿಕಾರಿಗೆ ಬಿಜೆಪಿ ಯುವಮೋರ್ಚಾದಿಂದ ಮನವಿ..!

ಆಯುಷ್ಮಾನ್ ಯೋಜನೆ ಅಸಮರ್ಪಕತೆ ಖಂಡಿಸಿ ಜಿಲ್ಲಾಧಿಕಾರಿಗೆ ಬಿಜೆಪಿ ಯುವಮೋರ್ಚಾದಿಂದ ಮನವಿ..!

29/06/2026
ಲಯನ್ಸ್ ಎಂದರೆ ಸೇವೆ ಮಾತ್ರವಲ್ಲ, ಅದು ವ್ಯಕ್ತಿತ್ವ ಬೆಳವಣಿಗೆ : ಲ. ಹರಿಪ್ರಸಾದ್ ರೈ

ಲಯನ್ಸ್ ಎಂದರೆ ಸೇವೆ ಮಾತ್ರವಲ್ಲ, ಅದು ವ್ಯಕ್ತಿತ್ವ ಬೆಳವಣಿಗೆ : ಲ. ಹರಿಪ್ರಸಾದ್ ರೈ

29/06/2026
‘Sparkle Like No Other’, (ಬೇರೆಲ್ಲೂ ಕಾಣದ ಹೊಳಪು) ಪ್ರಚಾರ ಬಿಡುಗಡೆಯ ಮೂಲಕ ಆದಿತ್ಯ ಬಿರ್ಲಾ ಜ್ಯುವೆಲ್ಲರಿ ಅವರ ಇಂದ್ರಿಯ ವಜ್ರದ ಹೊಳಪನ್ನು ಮುನ್ನೆಲೆಗೆ ತಂದಿದೆ

‘Sparkle Like No Other’, (ಬೇರೆಲ್ಲೂ ಕಾಣದ ಹೊಳಪು) ಪ್ರಚಾರ ಬಿಡುಗಡೆಯ ಮೂಲಕ ಆದಿತ್ಯ ಬಿರ್ಲಾ ಜ್ಯುವೆಲ್ಲರಿ ಅವರ ಇಂದ್ರಿಯ ವಜ್ರದ ಹೊಳಪನ್ನು ಮುನ್ನೆಲೆಗೆ ತಂದಿದೆ

29/06/2026
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved