Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಮುಖಪುಟ

ಕುಖ್ಯಾತ ಅಂತಾರಾಜ್ಯ ಕಳ್ಳರ ಬಂಧನ..!!

Dhrishya News by Dhrishya News
26/09/2024
in ಮುಖಪುಟ
0
0
SHARES
29
VIEWS
Share on FacebookShare on Twitter

ಕಾರ್ಕಳ :ಸೆಪ್ಟೆಂಬರ್ 26:ದಿನಾಂಕ 16.09.2024ರಂದು ಸಂಜೆ ಬೊಂಡುಕುಮೇರಿ ನಿವಾಸಿ ಹೆನ್ರಿ ಡಿʼಸೋಜಾ ಇವರು ಅಜೆಕಾರು ಪೇಟೆಯಲ್ಲಿರುವ ಎಟಿಎಮ್‌ನಲ್ಲಿ ಹಣ ಡ್ರಾ ಮಾಡಲು ಬಂದಿರುವ ವೇಳೆ ಅಲ್ಲಿದ್ದ ಅಪರಿಚಿತರು ಅವರ ಗಮನವನ್ನು ಬೇರೆಡೆ ಸೆಳೆದು ಮೋಸದಿಂದ ಅವರ ಎಟಿಎಮ್‌ ಕಾರ್ಡನ್ನು ಬದಲಾವಣೆ ಮಾಡಿ ಅವರಿಗೆ ಬೇರೆ ಕಾರ್ಡ್‌ ಕೊಟ್ಟು, ಅವರ ಕಾರ್ಡ್‌ನಿಂದ ಕಾರ್ಕಳದ ಎಟಿಎಮ್‌ನಲ್ಲಿ 1 ಲಕ್ಷ ರೂಪಾಯಿಯನ್ನು ಡ್ರಾ ಮಾಡಿದ್ದು, ಈ ಬಗ್ಗೆ ಅಜೆಕಾರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 32/2024 ಕಲಂ: 316(2), 318(2), 111 ಜೊತೆಗೆ 3(5) BNS-2023 ರಂತೆ ಪ್ರಕರಣ ದಾಖಲಾಗಿರುತ್ತದೆ.

ಈ ಪ್ರಕರಣದಲ್ಲಿ ಆರೋಪಿಗಳ ಪತ್ತೆ ಬಗ್ಗೆ ಪಿಎಸ್‌ಐ ರವಿ ಬಿ.ಕೆ., ಪಿಎಸ್‌ಐ ಶುಭಕರ ಮತ್ತು ಸಿಬ್ಬಂದಿಯವರಾದ ಸತೀಶ ಬೆಳ್ಳೆ, ಪ್ರದೀಪ ಶೆಟ್ಟಿ, ನಾಗೇಶ, ಪ್ರವೀಣ ಕುಮಾರ್‌, ಬಸವರಾಜ ಭದ್ರಶೆಟ್ಟಿ, ಶಶಿಕಲಾ ಇವರ ತಂಡ ಆರೋಪಿಗಳ ಜಾಡು ಪತ್ತೆ ಹಚ್ಚಿ ದಿನಾಂಕ 24.09.2024 ರಂದು ಮರ್ಣೆ ಗ್ರಾಮದ ಕಾಡುಹೊಳೆ ಪೊಲೀಸ್‌ ಚೆಕ್‌ಪೋಸ್ಟ್‌ ಬಳಿ ಪ್ರಕರಣದಲ್ಲಿನ ಮೂವರು ಆರೋಪಿತರಾದ 1)ಶ್ರವಣ್‌ ಸತೀಶ ಮಿನಜಗಿ, (27), ಸೋಲಾಪುರ, ಮಹಾರಾಷ್ಟ್ರ 2)ಪ್ರದೀಪ ಮಾರುತಿ ಇಂಗ್ಲೆ (27), ಸೋಲಾಪುರ, ಮಹಾರಾಷ್ಟ್ರ, 3)ಕಿರಣ್‌ ಬಾಲು ಚೌಹಾನ್‌(28), ಪುಣೆ, ಮಹಾರಾಷ್ಟ್ರ ಎಂಬವರನ್ನು ದಸ್ತಗಿರಿ ಮಾಡಿದ್ದು, ಅವರಿಂದ  ಕೃತ್ಯಕ್ಕೆ ಬಳಸಿದ MH 12 SY 2163 ನಂಬ್ರದ ಸ್ವಿಫ್ಟ್‌ ಕಾರು (ಮೌಲ್ಯ ರೂ. 4,00,000/-), ನಗದು ರೂ 70,000/-, ಮೊಬೈಲ್‌ ಫೋನ್‌ಗಳು-3, ವಿವಿಧ ಬ್ಯಾಂಕ್‌ಗಳ ಎಟಿಎಮ್‌ ಕಾರ್ಡ್‌ಗಳು-52 ಇವುಗಳ ಒಟ್ಟು ಮೌಲ್ಯ ರೂ. 4,85,000/ನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. 

ಪ್ರಕರಣದಲ್ಲಿ 4 ಜನ ಆರೋಪಿತರು ಭಾಗಿಯಾಗಿದ್ದು, ತನಿಖೆಯ ಸಮಯ ಆರೋಪಿತರು ಕುಖ್ಯಾತ ಕಳ್ಳರಾಗಿದ್ದು, ಅಂತರರಾಜ್ಯ ವ್ಯಾಪ್ತಿಯಲ್ಲಿ ಸಂಚರಿಸುತ್ತ ಎಟಿಎಮ್‌ನಲ್ಲಿ ಹಣ ತೆಗೆಯಲು ಬಂದ ಜನರ ಗಮನವನ್ನು ಬೇರೆಡೆ ಸೆಳೆದು ಅವರ ಎಟಿಎಮ್‌ ಕಾರ್ಡನ್ನು ಬದಲಾವಣೆ ಮಾಡಿ ಅವರಿಗೆ ಬೇರೆ ಕಾರ್ಡ್‌ ನೀಡಿ ಎಟಿಎಮ್‌ನಲ್ಲಿ ಈವರೆಗೆ ಲಕ್ಷಾಂತರ ಹಣವನ್ನು ಡ್ರಾ ಮಾಡಿದ್ದು, ಅವರ ವಿರುದ್ಧ ಈ ತನಕ ಇದೇ ರೀತಿಯ ಸುಮಾರು 70ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿರುವುದು ಹಾಗೂ ಹಲವು ಪ್ರಕರಣದಲ್ಲಿ ಜೈಲು ಶಿಕ್ಷೆ ಆಗಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿರುತ್ತದೆ.

Previous Post

ಬೈಂದೂರು:ಕಸ್ತೂರಿ ರಂಗನ್ ವರದಿಯಿಂದ ಜನವಸತಿ ಪ್ರದೇಶಗಳನ್ನು ಕೈಬಿಡುವಂತೆ ಆಗ್ರಹಿಸಿ ಹಳ್ಳಿಹೊಳೆ ಗ್ರಾಮಸ್ಥರ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ..!!

Next Post

ಮಲ್ಪೆ ವೃತ್ತ ನಿರೀಕ್ಷಕರ ಕಚೇರಿಯಲ್ಲಿ ಉಡುಪಿ ನಗರ ವ್ಯಾಪ್ತಿಯಲ್ಲಿ ಸಂಚರಿಸುವ ಖಾಸಗಿ ಬಸ್ ಮಾಲಕರ ಸಭೆ :ಸಂಚಾರ ನಿಯಮ ಕಡ್ಡಾಯವಾಗಿ ಪಾಲಿಸುವಂತೆ ಸೂಚನೆ..!!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post

ಮಲ್ಪೆ ವೃತ್ತ ನಿರೀಕ್ಷಕರ ಕಚೇರಿಯಲ್ಲಿ ಉಡುಪಿ ನಗರ ವ್ಯಾಪ್ತಿಯಲ್ಲಿ ಸಂಚರಿಸುವ ಖಾಸಗಿ ಬಸ್ ಮಾಲಕರ ಸಭೆ :ಸಂಚಾರ ನಿಯಮ ಕಡ್ಡಾಯವಾಗಿ ಪಾಲಿಸುವಂತೆ ಸೂಚನೆ..!!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಗೀತೆಯನ್ನು ಓದುವುದಷ್ಟೇ ಅಲ್ಲ, ಜೀವನದಲ್ಲಿ ಅಳವಡಿಸಿಕೊಳ್ಳಬೇಕು: ಅಲೋಕ್ ಕುಮಾರ್‌ಜಿ

ಗೀತೆಯನ್ನು ಓದುವುದಷ್ಟೇ ಅಲ್ಲ, ಜೀವನದಲ್ಲಿ ಅಳವಡಿಸಿಕೊಳ್ಳಬೇಕು: ಅಲೋಕ್ ಕುಮಾರ್‌ಜಿ

07/08/2026
ಇಂಧನದ ಗುಣಮಟ್ಟ ಪತ್ತೆಗೆ ‘ಎಐ’ ಆಧಾರಿತ ತ್ವರಿತ ಮೇಲ್ವಿಚಾರಣಾ ವ್ಯವಸ್ಥೆ: ಜಿಹೆಚ್‌ಸಿಎಲ್ ಲಿ. ಜತೆ ಮಾಹೆ ಒಪ್ಪಂದ

ಇಂಧನದ ಗುಣಮಟ್ಟ ಪತ್ತೆಗೆ ‘ಎಐ’ ಆಧಾರಿತ ತ್ವರಿತ ಮೇಲ್ವಿಚಾರಣಾ ವ್ಯವಸ್ಥೆ: ಜಿಹೆಚ್‌ಸಿಎಲ್ ಲಿ. ಜತೆ ಮಾಹೆ ಒಪ್ಪಂದ

07/08/2026
ಈಶ್ವರ ನಗರದಲ್ಲಿ ನಗರಸಭೆ ಪಂಪ್‌ ಹೌಸ್‌ಗೆ ನುಗ್ಗಿದ ಆಟೋ; ತಾಯಿ–ಮಕ್ಕಳಿಗೆ ಗಾಯ

ಈಶ್ವರ ನಗರದಲ್ಲಿ ನಗರಸಭೆ ಪಂಪ್‌ ಹೌಸ್‌ಗೆ ನುಗ್ಗಿದ ಆಟೋ; ತಾಯಿ–ಮಕ್ಕಳಿಗೆ ಗಾಯ

07/08/2026
ಮಾಡೆಲಿಂಗ್ ಕ್ಷೇತ್ರದಲ್ಲಿ ಹೆಸರು ಮಾಡಿದ್ದ ಕೃತಿ ಬಂಗೇರಾ ಆತ್ಮಹತ್ಯೆ..!

ಮಾಡೆಲಿಂಗ್ ಕ್ಷೇತ್ರದಲ್ಲಿ ಹೆಸರು ಮಾಡಿದ್ದ ಕೃತಿ ಬಂಗೇರಾ ಆತ್ಮಹತ್ಯೆ..!

07/08/2026

Recent News