Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಮುಖಪುಟ

ಬೈಂದೂರು:ಕಸ್ತೂರಿ ರಂಗನ್ ವರದಿಯಿಂದ ಜನವಸತಿ ಪ್ರದೇಶಗಳನ್ನು ಕೈಬಿಡುವಂತೆ ಆಗ್ರಹಿಸಿ ಹಳ್ಳಿಹೊಳೆ ಗ್ರಾಮಸ್ಥರ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ..!!

Dhrishya News by Dhrishya News
25/09/2024
in ಮುಖಪುಟ
0
0
SHARES
22
VIEWS
Share on FacebookShare on Twitter

ಬೈಂದೂರು ಸೆಪ್ಟೆಂಬರ್ .25 : ಕಸ್ತೂರಿ ರಂಗನ್ ವರದಿಯಿಂದ ಜನವಸತಿ ಪ್ರದೇಶಗಳನ್ನು ಕೈಬಿಡುವಂತೆ ಆಗ್ರಹಿಸಿ ಬೈಂದೂರು ತಾಲೂಕಿನ ಹಳ್ಳಿಹೊಳೆ ಗ್ರಾಮಸ್ಥರ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಬುಧವಾರ ಸುನಂದಾ ಗೇರು ಬೀಜ ಕಾರ್ಖಾನೆ ಸುಳುಗೋಡು ಚಕ್ರ ಮೈದಾನದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.

ವೈಜ್ಞಾನಿಕ ಕಸ್ತೂರಿ ರಂಗನ್ ವರದಿ ವಿರೋಧಿಸಿ, ಪ್ರತಿಭಟನೆಯನ್ನುದ್ದೇಶಿಸಿ ಮಾತಾಡಿದ ಹೋರಾಟಗಾರ ಬೆಳ್ತಂಗಡಿಯ ಫಾ| ಡಾ| ಸಲೀನ್ ಜೋಸೆಫ್‌ಪರಿಸರ ಸಂರಕ್ಷಣೆ ಉದ್ದೇಶದಿಂದ ಸುಪ್ರೀಂ ನಿರ್ದೇಶನದಂತೆ ಕಸ್ತೂರಿ ರಂಗನ್ ವರದಿ ಜಾರಿ ಸೂಚನೆಗಳು ಬಂದಿವೆ. ಈ ವರದಿಯಲ್ಲಿ ಜನ ವಸತಿ ಪ್ರದೇಶಗಳನ್ನು ಸಹ ಪರಿಸರ ಸೂಕ್ಷ್ಮ ವಲಯ ಎಂದು ಸೇರಿಸಿರುವುದು ದುರಂತ. ಇದರ ವಿರುದ್ಧ ಇನ್ನು ಜನರೇ ಧ್ವನಿ ಎತ್ತಬೇಕಿದೆ. ಉಡುಪಿ ಜಿಲ್ಲೆಯ ಸುಮಾರು 35 ಗ್ರಾಮಗಳ ಗ್ರಾಮಸ್ಥರು ಸಹ ಒಗ್ಗೂಡಿ ಹೋರಾಡದಿದ್ದರೆ ಕಾಡಂಚಿನಲ್ಲಿ ವಾಸಿಸುತ್ತರುವವರ ಬದುಕು ಶೋಚನೀಯವಾಗಲಿದೆ ಎಂದು ಎಚ್ಚರಿಸಿದರು.

ಬೈಂದೂರು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಅವರು ಮಾತನಾಡಿ, ಜನರ ಉಳಿವಿಗಾಗಿ ಹೋರಾಡಲು ಸಿದ್ಧ. ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೇಗೆ ಹೋರಾಡಬೇಕು ಅನ್ನುವ ಬಗ್ಗೆ ಆದಷ್ಟು ಬೇಗ ಸಂಘಟಿತರಾಗಬೇಕಿದೆ. ಅರಣ್ಯ, ಪರಿಸರ ಸಂರಕ್ಷಣೆಗೆ ನಮ್ಮ ಬೆಂಬಲವಿದೆ. ಹಾಗಂತ ಈಗ ಬದುಕು ಕಟ್ಟಿಕೊಂಡಿರುವವರಿಗೆ ತೊಂದರೆ ಕೊಡುವುದು ಸರಿಯಲ್ಲ. ಈ ನೆಲೆಯಲ್ಲಿ ಪಕ್ಷಾತೀತ ಬೆಂಬಲವಿದೆ. ಕೇರಳದಲ್ಲಿ ಮನುಷ್ಯರೇ(ಫಿಸಿಕಲ್) ಸರ್ವೇ ನಡೆಸಿದ್ದಾರೆ. ಆದರೆ ಇಲ್ಲಿ ಸ್ಯಾಟಲೈಟ್ ಸರ್ವೇಯಿಂದ ಜನ ವಸತಿ ಪ್ರದೇಶಗಳು ಸೇರಿಕೊಂಡಿವೆ. ಇಲ್ಲಿಯೂ ಫಿಸಿಕಲ್ ಸರ್ವೇ ಆಗಲಿ ಎಂದು ಒತ್ತಾಯಿಸಿದರು.

ಬೈಂದೂರು ಮಾಜಿ ಶಾಸಕ ಗೋಪಾಲ ಪೂಜಾರಿ ಮಾತನಾಡಿ, ಈ ವರದಿ ಜಾರಿಯಾದರೆ ಕಾಡಂಚಿನ ಗ್ರಾಮಗಳಲ್ಲಿ ನೆಲೆಸಿರುವ ಸಾವಿರಾರು ಕುಟುಂಬಗಳಿಗೆ ಎಲ್ಲದಕ್ಕೂ ಸಮಸ್ಯೆಯಾಗಲಿದೆ. ಜನರಿಗೆ ಮಾತ್ರವಲ್ಲ, ಕೆಲ ಗ್ರಾಮಗಳ ಸರಕಾರಿ ಕಟ್ಟಡಗಳು ಅದೇ ವಲಯದಲ್ಲಿವೆ. ನಮ್ಮ ಹಕ್ಕನ್ನು ಕಸಿಯಲು ನಾವು ಬಿಡಬಾರದು. ಈ ನೆಲೆಯಲ್ಲಿ ಒಗ್ಗೂಡಿ ಹೋರಾಡಬೇಕು. ರಾಜ್ಯದಿಂದ ಕೇಂದ್ರಕ್ಕೆ ಸರ್ವಪಕ್ಷ ನಿಯೋಗ ತೆರಳಿ ಮನವಿ ಮಾಡುವ ಅಗತ್ಯವಿದೆ. ಜನರೆಲ್ಲ ಒಗ್ಗೂಡಿ ವಿಧಾನಸೌಧದ ಎದುರು ಧರಣಿ ಮಾಡಬೇಕಾಗಿದೆ ಎಂದರು.

ಹಳ್ಳಿಹೊಳೆ ಗ್ರಾಮಸ್ಥರ ಹಿತರಕ್ಷಣಾ ಸಮಿತಿ ಅ‘ಕ್ಷ ಮಂಜುನಾಥ್ ಶೆಟ್ಟಿ ಅ‘ಕ್ಷತೆ ವಹಿಸಿದ್ದರು.

ಮುದ್ದೂರು ಹಿತರಕ್ಷಣಾ ಸಮಿತಿ ಅಧ್ಯಕ್ಷ ಲಕ್ಷ್ಮಲ ಶೆಟ್ಟಿ, ವಂಡ್ಸೆ ಹಿತರಕ್ಷಣಾ ಸಮಿತಿ ಅಧ್ಯಕ್ಷ ಡಾ ಅತುಲ್ ಕುಮಾರ್ ಶೆಟ್ಟಿ, ಹಳ್ಳಿಹೊಳೆ ಗ್ರಾಮಸ್ಥರ ಹಿತರಕ್ಷಣಾ ಸಮಿತಿ ಸದಸ್ಯರಾದ ಪ್ರಭಾಕರ ನಾಯ್ಕ, ಗುಲಾಬಿ, ನೇತ್ರಾವತಿ, ಗಿರಿಜಾ, ದಿನೇಶ್ ನಾಯ್ಕ್, ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಹಳ್ಳಿಹೊಳೆ ಗ್ರಾಮಸ್ಥರ ಹಿತರಕ್ಷಣಾ ಸಮಿತಿ ಗೌರವಾಧ್ಯಕ್ಷ ಎಸ್ ಕೃಷ್ಣ ಚಾತ್ರ ಸ್ವಾಗತಿಸಿದರು. ಜಡ್ಕಲ್ ಹಿತರಕ್ಷಣಾ ಸಮಿತಿ ಅಧ್ಯಕ್ಷ ದೇವದಾಸ್ ವಿ.ಜೆ. ಪ್ರಾಸ್ತಾವಿಕ ಮಾತನಾಡಿದರು. ಹಳ್ಳಿಹೊಳೆ ಗ್ರಾಮಸ್ಥರ ಹಿತರಕ್ಷಣಾ ಸಮಿತಿ ಸದಸ್ಯ ಪ್ರದೀಪ್ ಕೊಠಾರಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Previous Post

ಉಡುಪಿ: ನ್ಯಾಯಾಲಯ ಮತ್ತು ವಕೀಲರ ಸಂಘದ ಶತಮಾನೋತ್ತರ ಬೆಳ್ಳಿ ಹಬ್ಬ- ಧರ್ಮಸ್ಥಳದಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆ..!!

Next Post

ಕುಖ್ಯಾತ ಅಂತಾರಾಜ್ಯ ಕಳ್ಳರ ಬಂಧನ..!!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post

ಕುಖ್ಯಾತ ಅಂತಾರಾಜ್ಯ ಕಳ್ಳರ ಬಂಧನ..!!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 24k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಧನಾತ್ಮಕ ಮನೋಭಾವ ಬೆಳೆಸಲು ಮಹಾಭಾರತ ಪ್ರೇರಣೆ

ಧನಾತ್ಮಕ ಮನೋಭಾವ ಬೆಳೆಸಲು ಮಹಾಭಾರತ ಪ್ರೇರಣೆ

29/09/2026
ವಿಶ್ವ ಹೃದಯ ದಿನ: ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ಹೃದಯ ಆರೋಗ್ಯ ಜಾಗೃತಿ ಶಿಲ್ಪ ಅನಾವರಣ

ವಿಶ್ವ ಹೃದಯ ದಿನ: ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ಹೃದಯ ಆರೋಗ್ಯ ಜಾಗೃತಿ ಶಿಲ್ಪ ಅನಾವರಣ

29/09/2026
ಉಡುಪಿ ಶ್ರೀಕೃಷ್ಣ ಮಠಕ್ಕೆ ತೆಲಂಗಾಣ ಸಚಿವ ಅದ್ಲೂರಿ ಲಕ್ಷ್ಮಣ್ ಕುಮಾರ್ ಭೇಟಿ

ಉಡುಪಿ ಶ್ರೀಕೃಷ್ಣ ಮಠಕ್ಕೆ ತೆಲಂಗಾಣ ಸಚಿವ ಅದ್ಲೂರಿ ಲಕ್ಷ್ಮಣ್ ಕುಮಾರ್ ಭೇಟಿ

29/09/2026
ಕಾಪು: ಅಡುಗೆ ಮಾಡುವ ವೇಳೆ ನೈಟಿಗೆ ಬೆಂಕಿ ತಗುಲಿ ಮಹಿಳೆ ಸಾವು

ಕಾಪು: ಅಡುಗೆ ಮಾಡುವ ವೇಳೆ ನೈಟಿಗೆ ಬೆಂಕಿ ತಗುಲಿ ಮಹಿಳೆ ಸಾವು

29/09/2026

Recent News

ಧನಾತ್ಮಕ ಮನೋಭಾವ ಬೆಳೆಸಲು ಮಹಾಭಾರತ ಪ್ರೇರಣೆ

ಧನಾತ್ಮಕ ಮನೋಭಾವ ಬೆಳೆಸಲು ಮಹಾಭಾರತ ಪ್ರೇರಣೆ

29/09/2026
ವಿಶ್ವ ಹೃದಯ ದಿನ: ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ಹೃದಯ ಆರೋಗ್ಯ ಜಾಗೃತಿ ಶಿಲ್ಪ ಅನಾವರಣ

ವಿಶ್ವ ಹೃದಯ ದಿನ: ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ಹೃದಯ ಆರೋಗ್ಯ ಜಾಗೃತಿ ಶಿಲ್ಪ ಅನಾವರಣ

29/09/2026
ಉಡುಪಿ ಶ್ರೀಕೃಷ್ಣ ಮಠಕ್ಕೆ ತೆಲಂಗಾಣ ಸಚಿವ ಅದ್ಲೂರಿ ಲಕ್ಷ್ಮಣ್ ಕುಮಾರ್ ಭೇಟಿ

ಉಡುಪಿ ಶ್ರೀಕೃಷ್ಣ ಮಠಕ್ಕೆ ತೆಲಂಗಾಣ ಸಚಿವ ಅದ್ಲೂರಿ ಲಕ್ಷ್ಮಣ್ ಕುಮಾರ್ ಭೇಟಿ

29/09/2026
ಕಾಪು: ಅಡುಗೆ ಮಾಡುವ ವೇಳೆ ನೈಟಿಗೆ ಬೆಂಕಿ ತಗುಲಿ ಮಹಿಳೆ ಸಾವು

ಕಾಪು: ಅಡುಗೆ ಮಾಡುವ ವೇಳೆ ನೈಟಿಗೆ ಬೆಂಕಿ ತಗುಲಿ ಮಹಿಳೆ ಸಾವು

29/09/2026
imunify-bot-check