Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಮುಖಪುಟ

ಇಂಧನದ ಗುಣಮಟ್ಟ ಪತ್ತೆಗೆ ‘ಎಐ’ ಆಧಾರಿತ ತ್ವರಿತ ಮೇಲ್ವಿಚಾರಣಾ ವ್ಯವಸ್ಥೆ: ಜಿಹೆಚ್‌ಸಿಎಲ್ ಲಿ. ಜತೆ ಮಾಹೆ ಒಪ್ಪಂದ

Dhrishya News by Dhrishya News
07/08/2026
in ಮುಖಪುಟ
0
ಇಂಧನದ ಗುಣಮಟ್ಟ ಪತ್ತೆಗೆ ‘ಎಐ’ ಆಧಾರಿತ ತ್ವರಿತ ಮೇಲ್ವಿಚಾರಣಾ ವ್ಯವಸ್ಥೆ: ಜಿಹೆಚ್‌ಸಿಎಲ್ ಲಿ. ಜತೆ ಮಾಹೆ ಒಪ್ಪಂದ
0
SHARES
8
VIEWS
Share on FacebookShare on Twitter

ಮಣಿಪಾಲ, ಆಗಸ್ಟ್ 07, 2026: ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಶನ್‌ (ಮಾಹೆ) ವಿಶ್ವವಿದ್ಯಾಲಯ ಎಂದು ಪರಿಗಣಿತವಾಗಿರುವ ಉತ್ಕೃಷ್ಟ ಸಂಸ್ಥೆಯು, ಇಂಗಾಲ ಆಧಾರಿತ ಇಂಧನಗಳ ಒಟ್ಟು ಕ್ಯಾಲೋರಿಫಿಕ್ ಮೌಲ್ಯವನ್ನು (ಜಿಸಿವಿ) ತ್ವರಿತವಾಗಿ ಪತ್ತೆಹಚ್ಚುವ ಅತ್ಯಾಧುನಿಕ ‘ಎಲ್‌ಐಬಿಎಸ್‌’ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲು ದೇಶದ ಪ್ರಮುಖ ರಾಸಾಯನಿಕ ಕಂಪನಿಯಾದ ಜಿಹೆಚ್‌ಸಿಎಲ್ ಲಿಮಿಟೆಡ್ ಜತೆ ಒಪ್ಪಂದಕ್ಕೆ ಸಹಿ ಹಾಕಿದೆ. ಜಿಹೆಚ್‌ಸಿಎಲ್‌ನ ವಾಣಿಜ್ಯ ವಿಭಾಗದ ಉಪಾಧ್ಯಕ್ಷ ಸಂಜಯ್ ಗುಪ್ತ ಹಾಗೂ ಮಾಹೆಯ ಕುಲಸಚಿವ ಡಾ. ಪಿ. ಗಿರಿಧರ್ ಕಿಣಿ ಅವರು ಈ ಒಪ್ಪಂದದ ಪತ್ರಗಳನ್ನು ವಿನಿಮಯ ಮಾಡಿಕೊಂಡರು.

ಅತ್ಯಾಧುನಿಕ ಸ್ಪೆಕ್ಟ್ರೋಸ್ಕೋಪಿ, ಕೃತಕ ಬುದ್ಧಿಮತ್ತೆ (ಎಐ) ಮತ್ತು ಯಂತ್ರ ಕಲಿಕೆ (ಎಂಎಲ್‌) ತಂತ್ರಜ್ಞಾನಗಳನ್ನು ಬಳಸಿ ಸ್ಥಳದಲ್ಲೇ ಇಂಧನದ ಗುಣಮಟ್ಟವನ್ನು ವೇಗವಾಗಿ ಪರೀಕ್ಷಿಸುವ ವ್ಯವಸ್ಥೆಯನ್ನು ಈ ಒಪ್ಪಂದದಡಿ ಅಭಿವೃದ್ಧಿಪಡಿಸಲಾಗುತ್ತಿದೆ. ಹೆಚ್ಚು ಸಮಯ ಬೇಡುವ ಹಳೆಯ ಪರೀಕ್ಷಾ ವಿಧಾನಗಳನ್ನು ಕೈಬಿಟ್ಟು, ನಿಖರ ದತ್ತಾಂಶ ಆಧಾರಿತ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಮೂಲಕ ಪ್ರಯೋಗಾಲಯ ಮತ್ತು ಕೈಗಾರಿಕೆಗಳ ನಡುವಿನ ಅಂತರವನ್ನು ಕಡಿಮೆ ಮಾಡಲು ಈ ಉಪಕ್ರಮ ಮುಂದಾಗಿದೆ. ಇದರಿಂದಾಗಿ ಕೈಗಾರಿಕಾ ವಲಯದಲ್ಲಿ ತ್ವರಿತ ಹಾಗೂ ನಿಖರ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗಲಿದೆ.

ಭಾರತದ ಪ್ರಮುಖ ರಾಸಾಯನಿಕ ಉತ್ಪಾದನಾ ಸಂಸ್ಥೆಯಾದ ಜಿಹೆಚ್‌ಸಿಎಲ್, ಶಕ್ತಿ ಉತ್ಪಾದನೆ ಹಾಗೂ ಕೈಗಾರಿಕಾ ತಾಪನಕ್ಕಾಗಿ ಇಂಗಾಲದ ಇಂಧನಗಳನ್ನೇ ನೆಚ್ಚಿಕೊಂಡಿದೆ. ಅತ್ಯುತ್ತಮ ಇಂಧನವು ಕಾರ್ಯದಕ್ಷತೆಯನ್ನು ಹೆಚ್ಚಿಸಿ, ವೆಚ್ಚವನ್ನು ತಗ್ಗಿಸುತ್ತದೆ ಎಂಬುದನ್ನು ಅರಿತಿರುವ ಸಂಸ್ಥೆಯು, ಇದೀಗ ತ್ವರಿತ ಮತ್ತು ಹೆಚ್ಚು ನಿಖರವಾದ ನೈಜ-ಸಮಯದ ಮೇಲ್ವಿಚಾರಣಾ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವ ಮೂಲಕ ಇಂಧನದ ಗುಣಮಟ್ಟವನ್ನು ಕಾಯ್ದುಕೊಳ್ಳಲು ಮುಂದಾಗಿದೆ.

ಬೃಹತ್ ಕೈಗಾರಿಕೆಗಳ ನಿರ್ವಹಣಾ ವೆಚ್ಚದಲ್ಲಿ ಇಂಗಾಲ ಆಧಾರಿತ ಇಂಧನಗಳದ್ದೇ ಸಿಂಹಪಾಲು. ಇದುವರೆಗೆ ಗುಣಮಟ್ಟ ಪರೀಕ್ಷೆಗಾಗಿ ಪ್ರಯೋಗಾಲಯಗಳನ್ನು ಅವಲಂಬಿಸಿದ್ದರಿಂದ ಸಾಕಷ್ಟು ವಿಳಂಬವಾಗುತ್ತಿತ್ತು. ಇದನ್ನು ತಪ್ಪಿಸಲು ಜಿಹೆಚ್‌ಸಿಎಲ್ ಲಿಮಿಟೆಡ್ ಮತ್ತು ಮಾಹೆಯ ‘ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಅಪ್ಲೈಡ್ ಫಿಸಿಕ್ಸ್’ (ಎಂಐಎಪಿ) ಕೈಜೋಡಿಸಿವೆ.

ಇಂಧನ ಪೂರೈಕೆಯಾಗುವ ಸ್ಥಳದಲ್ಲಿಯೇ ಕ್ಷಣಾರ್ಧದಲ್ಲಿ ಅದರ ಗುಣಮಟ್ಟವನ್ನು ನಿಖರವಾಗಿ ಪತ್ತೆಹಚ್ಚುವ ಸುಧಾರಿತ ಮೇಲ್ವಿಚಾರಣಾ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವುದು ಈ ಒಪ್ಪಂದದ ಪ್ರಮುಖ ಉದ್ದೇಶವಾಗಿದೆ. ಇದು ಕೈಗಾರಿಕೆಗಳ ಕಾರ್ಯದಕ್ಷತೆಯನ್ನು ಹೆಚ್ಚಿಸುವ ಜೊತೆಗೆ ಇಂಧನದ ಸದ್ಬಳಕೆಗೆ ನೆರವಾಗಲಿದೆ.

ಜಿಹೆಚ್‌ಸಿಎಲ್‌ನ ಸುತ್ರಾಪಾದ ಘಟಕದ ಕಾರ್ಯಾಚರಣೆ ಮುಖ್ಯಸ್ಥ ಮಯೂರೇಶ್ ಹೆಡೆ ಪ್ರತಿಕ್ರಿಯಿಸಿ, ‘ಕಾರ್ಯದಕ್ಷತೆ ಮತ್ತು ಸುಸ್ಥಿರತೆಗಾಗಿ ನವೀನ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ನಮ್ಮ ಬದ್ಧತೆಗೆ ಈ ಒಪ್ಪಂದ ಸಾಕ್ಷಿಯಾಗಿದೆ. ಹಳೆಯ ಪರೀಕ್ಷಾ ವಿಧಾನಗಳ ಬದಲಿಗೆ ನೈಜ-ಸಮಯದ ವಿಶ್ಲೇಷಣಾ ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳುವುದರಿಂದ ಗೊಂದಲಗಳು ನಿವಾರಣೆಯಾಗಿ, ಕಾರ್ಯನಿರ್ವಹಣೆಯ ವೇಗ ಹೆಚ್ಚಲಿದೆ. ಕೈಗಾರಿಕಾ ವಲಯದಲ್ಲಿ ಇಂಧನ ಗುಣಮಟ್ಟ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಈ ಹೊಸ ಉಪಕ್ರಮವು ಹೊಸ ಮೈಲಿಗಲ್ಲಾಗಲಿದೆ ಎಂಬ ವಿಶ್ವಾಸ ನಮಗಿದೆ’ ಎಂದರು.

ಮಾಹೆ ಕುಲಪತಿ ಡಾ. ಶರತ್ ಕೆ. ರಾವ್ ಪ್ರತಿಕ್ರಿಯಿಸಿ, ’ಶೈಕ್ಷಣಿಕ ಸಂಶೋಧನೆಯು ಕೈಗಾರಿಕಾ ವಲಯದ ಜಟಿಲ ಸಮಸ್ಯೆಗಳನ್ನು ಹೇಗೆ ಬಗೆಹರಿಸಬಲ್ಲದು ಎಂಬುದನ್ನು ಈ ಯೋಜನೆ ತೋರಿಸಿಕೊಡಲಿದೆ. ಎಲ್‌ಐಬಿಎಸ್‌ ತಂತ್ರಜ್ಞಾನದೊಂದಿಗೆ ಎಐ ಮತ್ತು ಎಂಎಲ್‌ ಅನ್ನು ಬೆರೆಸಿ, ವೈಜ್ಞಾನಿಕ ಹಾಗೂ ವಾಣಿಜ್ಯಿಕವಾಗಿ ಅತ್ಯಂತ ಉಪಯುಕ್ತವಾದ ನವೀನ ವ್ಯವಸ್ಥೆಯನ್ನು ನಾವು ರೂಪಿಸುತ್ತಿದ್ದೇವೆ. ಅತಿ ಹೆಚ್ಚು ಇಂಧನ ಬಳಸುವ ವಿವಿಧ ಕೈಗಾರಿಕಾ ವಲಯಗಳಿಗೆ ಅನುಕೂಲವಾಗುವಂತಹ ಪ್ರಾಯೋಗಿಕ ಸಂಶೋಧನೆಗೆ ಈ ಸಹಯೋಗವು ಭದ್ರ ಬುನಾದಿ ಹಾಕಲಿದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಎಂಐಎಪಿಯ ಪ್ರಧಾನ ಸಂಶೋಧಕರಾಗಿ ಡಾ. ಉಣ್ಣಿಕೃಷ್ಣನ್ ವಿ.ಕೆ. ಅವರು ಈ ಯೋಜನೆಯನ್ನು ಮುನ್ನಡೆಸುತ್ತಿದ್ದಾರೆ. ಈ ಕಾರ್ಯಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಮಾಹೆಯ ತಂತ್ರಜ್ಞಾನ ಮತ್ತು ವಿಜ್ಞಾನ ವಿಭಾಗದ ಸಹ ಕುಲಪತಿ ಪ್ರೊ. ಕರುಣಾಕರ್ ಕೋಟೆಗಾರ್ ಭರವಸೆ ನೀಡಿದರು. ಒಪ್ಪಂದದ ಸಂದರ್ಭದಲ್ಲಿ ಎಂಐಎಪಿ ನಿರ್ದೇಶಕ ಡಾ. ಸಾಜನ್ ಡೇನಿಯಲ್ ಜಾರ್ಜ್ ಮತ್ತು ಮಾಹೆಯ ಕಾರ್ಪೊರೇಟ್ ಸಂಪರ್ಕ ವಿಭಾಗದ ನಿರ್ದೇಶಕ ಡಾ. ಹರೀಶ್‌ಕುಮಾರ್ ಹಾಜರಿದ್ದರು. 

ಬೌದ್ಧಿಕ ಆಸ್ತಿಯನ್ನು (ಐಪಿ) ರೂಪಿಸುವುದು ಹಾಗೂ ವಾಣಿಜ್ಯ ಬಳಕೆಗೆ ಸೂಕ್ತವಾದ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವುದು ಈ ಒಪ್ಪಂದದ ಮತ್ತೊಂದು ಪ್ರಮುಖ ಉದ್ದೇಶವಾಗಿದೆ. ಈ ಯೋಜನೆ ಯಶಸ್ವಿಯಾದರೆ, ಇಂಗಾಲ ಆಧಾರಿತ ಇಂಧನ ಬಳಸುವ ಎಲ್ಲಾ ಕೈಗಾರಿಕೆಗಳಿಗೂ ಈ ‘ಎಲ್‌ಐಬಿಎಸ್‌’ ಮೇಲ್ವಿಚಾರಣಾ ವ್ಯವಸ್ಥೆ ಒಂದು ಅತ್ಯುತ್ತಮ ಮಾದರಿಯಾಗಲಿದೆ. ಇದು ಹೊಸ ಆವಿಷ್ಕಾರಗಳಿಗೆ ಉತ್ತೇಜನ ನೀಡುವುದರ ಜತೆಗೆ, ಕೈಗಾರಿಕೆ ಮತ್ತು ಶೈಕ್ಷಣಿಕ ಸಂಸ್ಥೆಗಳ ಜಂಟಿ ಕಾರ್ಯಾಚರಣೆಯ ಮಹತ್ವವನ್ನು ಸಾರಲಿದೆ.

Previous Post

ಈಶ್ವರ ನಗರದಲ್ಲಿ ನಗರಸಭೆ ಪಂಪ್‌ ಹೌಸ್‌ಗೆ ನುಗ್ಗಿದ ಆಟೋ; ತಾಯಿ–ಮಕ್ಕಳಿಗೆ ಗಾಯ

Next Post

ಗೀತೆಯನ್ನು ಓದುವುದಷ್ಟೇ ಅಲ್ಲ, ಜೀವನದಲ್ಲಿ ಅಳವಡಿಸಿಕೊಳ್ಳಬೇಕು: ಅಲೋಕ್ ಕುಮಾರ್‌ಜಿ

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಗೀತೆಯನ್ನು ಓದುವುದಷ್ಟೇ ಅಲ್ಲ, ಜೀವನದಲ್ಲಿ ಅಳವಡಿಸಿಕೊಳ್ಳಬೇಕು: ಅಲೋಕ್ ಕುಮಾರ್‌ಜಿ

ಗೀತೆಯನ್ನು ಓದುವುದಷ್ಟೇ ಅಲ್ಲ, ಜೀವನದಲ್ಲಿ ಅಳವಡಿಸಿಕೊಳ್ಳಬೇಕು: ಅಲೋಕ್ ಕುಮಾರ್‌ಜಿ

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 24k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಶಂಕರನಾರಾಯಣ: ರಬ್ಬರ್ ಟ್ಯಾಪಿಂಗ್‌ಗೆ ಬಳಸುವ ದ್ರಾವಣ ಸೇವಿಸಿ ವ್ಯಕ್ತಿ ಮೃತ್ಯು

ಉಡುಪಿ: ಬನ್ನಂಜೆ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಪಾರ್ಕಿಂಗ್ ಸ್ಥಳದಲ್ಲಿ ಅಪರಿಚಿತ ವ್ಯಕ್ತಿ ಆತ್ಮಹತ್ಯೆ

21/09/2026
ಉಚ್ಚಿಲ ದಸರಾ 2026: ‘ಅಬ್ಬರದ ಪಿಲಿ ಪಂಥ’ ಕಾರ್ಯಕ್ರಮದ ಅಧಿಕೃತ ಪೋಸ್ಟರ್ ಬಿಡುಗಡೆ

ಉಚ್ಚಿಲ ದಸರಾ 2026: ‘ಅಬ್ಬರದ ಪಿಲಿ ಪಂಥ’ ಕಾರ್ಯಕ್ರಮದ ಅಧಿಕೃತ ಪೋಸ್ಟರ್ ಬಿಡುಗಡೆ

21/09/2026
ಶಂಕರನಾರಾಯಣ: ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವನೆಗೆ ನೀಡುತ್ತಿದ್ದ ವ್ಯಕ್ತಿಯ ವಿರುದ್ಧ ಪ್ರಕರಣ

ಶಂಕರನಾರಾಯಣ: ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವನೆಗೆ ನೀಡುತ್ತಿದ್ದ ವ್ಯಕ್ತಿಯ ವಿರುದ್ಧ ಪ್ರಕರಣ

21/09/2026
ಶಿರ್ವದಲ್ಲಿ ಕೋಳಿ ಜೂಜಾಟ: 9 ಮಂದಿ ಬಂಧನ, 13 ಕೋಳಿ ಹುಂಜಗಳು ಸಹಿತ ವಿವಿಧ ವಸ್ತುಗಳ ಸ್ವಾಧೀನ

ಶಿರ್ವದಲ್ಲಿ ಕೋಳಿ ಜೂಜಾಟ: 9 ಮಂದಿ ಬಂಧನ, 13 ಕೋಳಿ ಹುಂಜಗಳು ಸಹಿತ ವಿವಿಧ ವಸ್ತುಗಳ ಸ್ವಾಧೀನ

21/09/2026

Recent News

imunify-bot-check