Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

ಕೆಎಂಸಿಯಿಂದ ವಿಶೇಷ ಗಾಯ ನಿಭಾವಣೆಯ ಕಾರ್ಯಾಗಾರ ಆಯೋಜನೆ..!!

Dhrishya News by Dhrishya News
23/07/2024
in ಸುದ್ದಿಗಳು
0
0
SHARES
40
VIEWS
Share on FacebookShare on Twitter

ಮಣಿಪಾಲ 23, ಜುಲೈ 2024 : ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಶನ್‌ [ಮಾಹೆ] ನ ಕಸ್ತೂರ್ಬಾ ಮೆಡಿಕಲ್‌ ಹಾಸ್ಪಿಟಲ್‌ [ಕೆಎಂಸಿ] ಯಲ್ಲಿ ಕಾರ್ಯನಿರ್ವಹಿಸುವ ದ ಮಣಿಪಾಲ್‌ ಸೆಂಟರ್‌ ಫಾರ್‌ ಇಂಟರ್‌ಪ್ರೊಫೆಶನಲ್‌ ಅಡ್ವಾನ್ಸ್‌ಡ್‌ ಹೆಲ್ತ್‌ ಕೇರ್‌, ಸೆಂಟರ್‌ ಫಾರ್‌ ರೀ-ಸಸ್ಸಿಟೇಶನ್‌, ಅಕ್ಯೂಟ್‌ ಕೇರ್‌ ಮತ್ತು ಸೆಮಲ್ಟೇಶನ್‌ ಟ್ರೆನಿಂಗ್‌ [ಸಿಆರ್‌ಇಎಸ್‌ಟಿ], ಸೆಂಟರ್‌ ಫಾರ್‌ ಕ್ಲಿನಿಕಲ್‌ ಆ್ಯಂಡ್‌ ಇನ್ನೋವೇಟಿವ್‌ ಫೋರೆನ್ಸಿಕ್ಸ್‌-ಇವುಗಳ ಸಹಭಾಗಿತ್ವದಲ್ಲಿ ವಿವಿಧ ರೀತಿಯ ಆಘಾತ ಮತ್ತು ಗಾಯಗಳ ನಿರ್ವಹಣೆಯ ಕುರಿತ ಕಾರ್ಯಾಗಾರಗಳನ್ನು ಜುಲೈ 19, 2024 ರಂದು ಆಯೋಜಿಸಲಾಗಿದ್ದು, ವ್ರಣಗಳಿಗೆ ಪ್ರತಿಕ್ರಿಯಾತ್ಮಕವಾಗಿ ಕೈಗೊಳ್ಳುವ ಆರೈಕೆ ಕ್ರಮಗಳ ಬಗ್ಗೆ ಮತ್ತು ಗಾಯಗಳು ತೀವ್ರಗೊಂಡು ಪ್ರಾಣಾಪಾಯವಾಗುವುದನ್ನು ತಪ್ಪಿಸುವ ಬಗ್ಗೆ ಈ ಕಾರ್ಯಾಗಾರದಲ್ಲಿ ತರಬೇತಿಯನ್ನು ನೀಡಲಾಯಿತು. ತುರ್ತು ಸಂದರ್ಭದಲ್ಲಿ ತರಬೇತಿ ಹೊಂದಿದ ಪ್ರತಿಪ್ರೇಷಕ [ರೆಸ್ಪಾಂಡರ್‌] ರು ಆಘಾತಕ್ಕೊಳಗಾದವರ ಸ್ಥಿತಿಯನ್ನು ಸ್ಥಿರಗೊಳಿಸಿ, ಸಂಪನ್ಮೂಲಗಳನ್ನು ಬಳಸಿ, ಅವರನ್ನು ಹೇಗೆ ಬದುಕುಳಿಯುವಂತೆ ಮಾಡಬಹುದು ಎಂಬ ವಿಚಾರದ ಬಗ್ಗೆ ಕಾರ್ಯಾಗಾರದ ಆಶಯ ಕೇಂದ್ರೀಕೃತವಾಗಿತ್ತು. 

ಉಡುಪಿಯ ಹೆಚ್ಚುವರಿ ಪೊಲೀಸ್‌ ಅಧೀಕ್ಷಕರಾದ ಪರಮೇಶ್ವರ ಎ. ಹೆಗ್ಡೆ ಅವರು ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತ್ತ, ‘ಆಘಾತಕ್ಕೊಳಗಾಗುವವರ ಗಾಯವನ್ನು ಆರೈಕೆ ಮಾಡುವ ಪ್ರಥಮ ಪ್ರತಿಪ್ರೇಷಕ [ಫರ್ಸ್ಟ್‌ ರೆಸ್ಪಾಂಡರ್‌] ರ ಕೌಶಲವನ್ನು ಹೆಚ್ಚಿಸುವುದು ಇಂದಿನ ಅಗತ್ಯವಾಗಿದೆ. ಆಘಾತಗಳನ್ನು ಪ್ರಾಯೋಗಿಕವಾಗಿ ನಿರ್ವಹಿಸಿ ಮಾನವೀಯವಾಗಿ ಸ್ಪಂದಿಸುವ ನೆಲೆಯಲ್ಲಿ ಉಡುಪಿಗೆ ಅತ್ಯುನ್ನತ ಸ್ಥಾನ ದೊರಕಿಸಿಕೊಡಬೇಕಿದೆ. ಈ ನಿಟ್ಟಿನಲ್ಲಿ ತರಬೇತಿ ಕಾರ್ಯಾಗಾರಗಳ ಪಾತ್ರ ಮಹತ್ತ್ವದ್ದಾಗಿದೆ’ ಎಂದರು. 

ಕೆಎಂಸಿಯ ತುರ್ತು ಚಿಕಿತ್ಸಾ ವಿಭಾಗದ ಪ್ರಾಧ್ಯಾಪಕರಾದ ಡಾ. ವಿಮಲ್‌ ಕೃಷ್ಣನ್‌, ನುರಿತ ದಾದಿಯಾಗಿ ಸಕ್ರಿಯವಾಗಿರುವ ಪ್ರಸನ್ನ ಕುಮಾರ, ಫೋರೆನ್ಸಿಕ್‌ ಸಾಯನ್ಸಸ್‌ ಪ್ರೊಫೆಸರ್‌ ಡಾ. ವಿನೋದ್‌ ನಾಯಕ್‌, ಪ್ಲಾಸ್ಟಿಕ್‌ ಸರ್ಜರಿ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ತನ್ವಿ ರಾವ್‌, ಮಾಹೆಯ ಫೈಮೆರ್‌ ಇಂಟರ್‌ನೇಶನಲ್‌ ಇನ್‌ಸ್ಟಿಟ್ಯೂಟ್‌ನ ನಿರ್ದೇಶಕರಾದ ಮತ್ತು ಮಣಿಪಾಲ್‌ ಸೆಂಟರ್‌ ಫಾರ್‌ ಎಕ್ಸಲೆನ್ಸ್‌ ಇನ್‌ ಇಂಟರ್‌ಪ್ರೊಫೆಶನಲ್‌ ಎಡ್ವಾನ್ಸ್‌ಡ್‌ ವೂಂಡ್‌ ಕೇರ್‌ನ ಸಂಚಾಲಕರಾದ ಡಾ. ಎಲ್ಸಾ ಸನಾತೊಂಬಿ ದೇವಿ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಅವರು ವಿವಿಧ ಆಘಾತಗಳ ನಿರ್ವಹಣೆಯಲ್ಲಿ ಪ್ರಥಮ ಪ್ರತಿಪ್ರೇಷಕ [ಫರ್ಸ್ಟ್‌ ರೆಸ್ಪಾಂಡರ್‌] ನ ಪಾತ್ರದ ಕುರಿತು ವಿವರಿಸಿದರು.

ಪಿಎಚ್‌ಡಿ ವಿದ್ಯಾರ್ಥಿಗಳಾದ ಶ್ರೀನಿಧಿ ಜೋಗಿ ಮತ್ತು ಇಫೆನ್ಸಿಯಾ ಡಿ. ವಾಹ್‌ಲ್ಯಾಂಗ್‌ ಅವರು ಕಾರ್ಯಾಗಾರದ ಸಂಯೋಜಕರಾಗಿ ಸಹಕರಿಸಿ, ಕಾರ್ಯಾಗಾರದಲ್ಲಿ ಭಾಗಿಯಾದವರ ಪ್ರಾಯೋಗಿಕ ಅನುಭವ ಮತ್ತು ಪ್ರತಿಪ್ರೇಷಕ ಸಾಮರ್ಥ್ಯ ಅಧಿಕವಾಗುವಂಥ ಅಭ್ಯಾಸಗಳನ್ನು ನಡೆಸಿಕೊಟ್ಟರು. 

ಮಣಿಪಾಲ್‌ ಕಾಲೇಜ್‌ ಆಪ್‌ ನರ್ಸಿಂಗ್‌ನ ಸಹ-ಡೀನ್‌ ಆಗಿರುವ ಡಾ. ಟ್ರೆಸ್ಸಿ ಟ್ರೀಸಾ ಜೋಸ್‌, ಐವೂಂಡ್‌ ಗ್ಲೋಬಲ್‌ನ ನಿರ್ದೇಶಕ ಪ್ರೊ ಸೆಲ್ವಮ್‌ ವಾಟ್ಸ್‌ ಅವರು ಕಾರ್ಯಾಗಾರದ ಮಹತ್ತ್ವವನ್ನು ವಿವಿರಿಸಿ, ಆಯೋಜಕರನ್ನು ಅಭಿನಂದಿಸಿದರು.

ಮಣಿಪಾಲ ಮತ್ತು ಮಂಗಳೂರು ಕೆಎಂಸಿಯ ವಿವಿಧ ವಿಭಾಗಗಳ ಸಿಬಂದಿಗಳು. ದಾದಿಯರು, ಪೊಲೀಸ್‌ ಇಲಾಖೆಯ ಸಿಬಂದಿಗಳು ಈ ಕಾರ್ಯಾಗಾರದಲ್ಲಿ ಸಕ್ರಿಯವಾಗಿ ಭಾಗವಹಿಸಿದರು

Previous Post

ಶಾಸಕ ಸುನೀಲ್ ಕುಮಾರ್ ಅವರಿಂದ ಹಿಂದೂ‌ ಭಾವನೆಗಳಿಗೆ ದಕ್ಕೆ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಟೀಕೆ..!!

Next Post

ನವೀನ ಮಾದರಿಯ ಎಂಡೋಸ್ಕೋಪಿಕ್ ಕಾರ್ಯವಿಧಾನವನ್ನು ಯಶಸ್ವಿಯಾಗಿ ನಿರ್ವಹಿಸಿದ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆ ..!!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post

ನವೀನ ಮಾದರಿಯ ಎಂಡೋಸ್ಕೋಪಿಕ್ ಕಾರ್ಯವಿಧಾನವನ್ನು ಯಶಸ್ವಿಯಾಗಿ ನಿರ್ವಹಿಸಿದ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆ ..!!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಮಣಿಪಾಲದಲ್ಲಿ ಮ್ಯಾಗ್ಸ್‌ಕಾನ್–2026 ಸಮಾವೇಶಕ್ಕೆ ಚಾಲನೆ

ಮಣಿಪಾಲದಲ್ಲಿ ಮ್ಯಾಗ್ಸ್‌ಕಾನ್–2026 ಸಮಾವೇಶಕ್ಕೆ ಚಾಲನೆ

24/03/2026
ಏಪ್ರಿಲ್ 1ರಿಂದ ರಾಷ್ಟ್ರೀಯ ಹೆದ್ದಾರಿ ಟೋಲ್ ದರ ಏರಿಕೆ

ಏಪ್ರಿಲ್ 1ರಿಂದ ರಾಷ್ಟ್ರೀಯ ಹೆದ್ದಾರಿ ಟೋಲ್ ದರ ಏರಿಕೆ

24/03/2026
ರಘುಪತಿ ಭಟ್ ಧರಣಿಗೆ ಒಂದೇ ದಿನದಲ್ಲಿ ಯಶಸ್ಸು: ರೆಸಾರ್ಟ್ ಏಕವಿನ್ಯಾಸ ನಕ್ಷೆ ಮಂಜೂರು

ರಘುಪತಿ ಭಟ್ ಧರಣಿಗೆ ಒಂದೇ ದಿನದಲ್ಲಿ ಯಶಸ್ಸು: ರೆಸಾರ್ಟ್ ಏಕವಿನ್ಯಾಸ ನಕ್ಷೆ ಮಂಜೂರು

24/03/2026
ಆರೋಗ್ಯ ಕೇಂದ್ರದಲ್ಲಿ ತೆರಿಗೆ ಪಾವತಿ ಕೇಂದ್ರ ಕಾಮಗಾರಿ: ಆರೋಗ್ಯ ಇಲಾಖೆ ಆಕ್ಷೇಪ – ಕಾಮಗಾರಿ ಸ್ಥಗಿತಕ್ಕೆ ಸೂಚನೆ

ಆರೋಗ್ಯ ಕೇಂದ್ರದಲ್ಲಿ ತೆರಿಗೆ ಪಾವತಿ ಕೇಂದ್ರ ಕಾಮಗಾರಿ: ಆರೋಗ್ಯ ಇಲಾಖೆ ಆಕ್ಷೇಪ – ಕಾಮಗಾರಿ ಸ್ಥಗಿತಕ್ಕೆ ಸೂಚನೆ

24/03/2026

Recent News

ಮಣಿಪಾಲದಲ್ಲಿ ಮ್ಯಾಗ್ಸ್‌ಕಾನ್–2026 ಸಮಾವೇಶಕ್ಕೆ ಚಾಲನೆ

ಮಣಿಪಾಲದಲ್ಲಿ ಮ್ಯಾಗ್ಸ್‌ಕಾನ್–2026 ಸಮಾವೇಶಕ್ಕೆ ಚಾಲನೆ

24/03/2026
ಏಪ್ರಿಲ್ 1ರಿಂದ ರಾಷ್ಟ್ರೀಯ ಹೆದ್ದಾರಿ ಟೋಲ್ ದರ ಏರಿಕೆ

ಏಪ್ರಿಲ್ 1ರಿಂದ ರಾಷ್ಟ್ರೀಯ ಹೆದ್ದಾರಿ ಟೋಲ್ ದರ ಏರಿಕೆ

24/03/2026
ರಘುಪತಿ ಭಟ್ ಧರಣಿಗೆ ಒಂದೇ ದಿನದಲ್ಲಿ ಯಶಸ್ಸು: ರೆಸಾರ್ಟ್ ಏಕವಿನ್ಯಾಸ ನಕ್ಷೆ ಮಂಜೂರು

ರಘುಪತಿ ಭಟ್ ಧರಣಿಗೆ ಒಂದೇ ದಿನದಲ್ಲಿ ಯಶಸ್ಸು: ರೆಸಾರ್ಟ್ ಏಕವಿನ್ಯಾಸ ನಕ್ಷೆ ಮಂಜೂರು

24/03/2026
ಆರೋಗ್ಯ ಕೇಂದ್ರದಲ್ಲಿ ತೆರಿಗೆ ಪಾವತಿ ಕೇಂದ್ರ ಕಾಮಗಾರಿ: ಆರೋಗ್ಯ ಇಲಾಖೆ ಆಕ್ಷೇಪ – ಕಾಮಗಾರಿ ಸ್ಥಗಿತಕ್ಕೆ ಸೂಚನೆ

ಆರೋಗ್ಯ ಕೇಂದ್ರದಲ್ಲಿ ತೆರಿಗೆ ಪಾವತಿ ಕೇಂದ್ರ ಕಾಮಗಾರಿ: ಆರೋಗ್ಯ ಇಲಾಖೆ ಆಕ್ಷೇಪ – ಕಾಮಗಾರಿ ಸ್ಥಗಿತಕ್ಕೆ ಸೂಚನೆ

24/03/2026
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved