Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

ನವೀನ ಮಾದರಿಯ ಎಂಡೋಸ್ಕೋಪಿಕ್ ಕಾರ್ಯವಿಧಾನವನ್ನು ಯಶಸ್ವಿಯಾಗಿ ನಿರ್ವಹಿಸಿದ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆ ..!!

ಎಂಡೋಲ್ಟ್ರಾಸೌಂಡ್-ಗೈಡೆಡ್ ಗ್ಯಾಸ್ಟ್ರೋಜೆಜುನೋಸ್ಟೊಮಿ (EUS-GJ) ಕಾರ್ಯವಿಧಾನವನ್ನು ಯಶಸ್ವಿಯಾಗಿ ನಿರ್ವಹಿಸಿದ ಈ ಭಾಗದ ಮೊದಲ ಆಸ್ಪತ್ರೆ 

Dhrishya News by Dhrishya News
23/07/2024
in ಸುದ್ದಿಗಳು
0
ನವೀನ ಮಾದರಿಯ ಎಂಡೋಸ್ಕೋಪಿಕ್ ಕಾರ್ಯವಿಧಾನವನ್ನು ಯಶಸ್ವಿಯಾಗಿ ನಿರ್ವಹಿಸಿದ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆ ..!!
0
SHARES
22
VIEWS
Share on FacebookShare on Twitter

ಮಣಿಪಾಲ, 23 ಜುಲೈ 2024: ಗಮನಾರ್ಹವಾದ ವೈದ್ಯಕೀಯ ಪ್ರಗತಿಯಲ್ಲಿ, ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯು ಎಂಡೋಲ್ಟ್ರಾಸೌಂಡ್-ಗೈಡೆಡ್ ಗ್ಯಾಸ್ಟ್ರೋಜೆಜುನೋಸ್ಟೊಮಿ (EUS-GJ) ಎಂದು ಕರೆಯಲ್ಪಡುವ ನವೀನ ಎಂಡೋಸ್ಕೋಪಿಕ್ ವಿಧಾನವನ್ನು ಯಶಸ್ವಿಯಾಗಿ ನಿರ್ವಹಿಸಿದೆ. ಹಿರಿಯ ವಯಸ್ಸಿನ ವ್ಯಕ್ತಿಯೊಬ್ಬರಿಗೆ ಈ ವಿಧಾನವನ್ನು ನಡೆಸಲಾಯಿತು, ಅವರು ತೀವ್ರ ತೆರನಾದ ಗ್ಯಾಸ್ಟ್ರಿಕ್ ಔಟ್ಲೆಟ್ ಅಡಚಣೆಯಿಂದ ಬಳಲುತ್ತಿದ್ದರು, ಇದರಿಂದಾಗಿ ಅವರಿಗೆ ಆಹಾರ ಸೇವಿಸಲು ಸಾಧ್ಯವಾಗುತ್ತಿರಲಿಲ್ಲ.

ಗ್ಯಾಸ್ಟ್ರೋಎಂಟರಾಲಜಿ ಮತ್ತು ಹೆಪಟಾಲಜಿಯ ಪ್ರಾಧ್ಯಾಪಕರಾದ ಡಾ.ಶಿರನ್ ಶೆಟ್ಟಿ ನೇತೃತ್ವದ ವೈದ್ಯಕೀಯ ತಂಡವು ಕನಿಷ್ಟ ಅರಿವಳಿಕೆಯಲ್ಲಿ ಈ ಅತ್ಯಾಧುನಿಕ ವಿಧಾನವನ್ನು ಕೈಗೊಳ್ಳಲು ನಿರ್ಧರಿಸಿತು . ಇದು ಜಪಾನಿನ ಎಂಡೋಸ್ಕೋಪಿಸ್ಟ್‌ಗಳ ಆವಿಷ್ಕಾರವಾಗಿದೆ . ಈ ಕಾರ್ಯವಿಧಾನದ ಮೂಲಕ ಹೊಟ್ಟೆಯನ್ನು ಸಣ್ಣ ಕರುಳಿಗೆ ಸಂಪರ್ಕಿಸಲು ಸಾದ್ಯವಾಗತ್ತದೆ, ಇದರಿಂದಾಗಿ ಆಹಾರ ಸೇವಿಸಲು ಇದ್ದ ಅಡಚಣೆಯನ್ನು ತಪ್ಪಿಸಲಾಗುತ್ತದೆ ಮತ್ತು ರೋಗಿಯು ಮೌಖಿಕವಾಗಿ ಆಹಾರವನ್ನು ತೆಗೆದುಕೊಳ್ಳಲು ಅನುವು ಮಾಡಿಕೊಡುತ್ತದೆ ಎಂದು ಡಾ.ಶಿರನ್ ಶೆಟ್ಟಿ ವಿವರಿಸಿದ್ದಾರೆ. 

ರೋಗಿಯು ಈ ನವೀನ ಕಾರ್ಯವಿಧಾನಕ್ಕೆ ಉತ್ತಮವಾಗಿ ಸ್ಪಂದಿಸಿದರು , ಮೌಖಿಕವಾಗಿ ಆಹಾರವನ್ನು ತೆಗೆದುಕೊಳ್ಳಲು ಪ್ರಾರಂಭಿಸಿದರು ಮತ್ತು ಕೇವಲ 48 ಗಂಟೆಗಳಲ್ಲಿ ಆಸ್ಪತ್ರಯಿಂದ ಬಿಡುಗಡೆ ಮಾಡಲಾಯಿತು. ಗ್ಯಾಸ್ಟ್ರೋಎಂಟರಾಲಜಿ ಮತ್ತು ಹೆಪಟಾಲಜಿ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ. ಗಣೇಶ್ ಭಟ್ ಅವರು , “ಈ ಕನಿಷ್ಠ ಆಕ್ರಮಣಕಾರಿ ಕಾರ್ಯವಿಧಾನದ ಪ್ರಯೋಜನಗಳನ್ನು ಎತ್ತಿ ತೋರಿಸಿದರು, “ಇದು ಕನಿಷ್ಟ ಅರಿವಳಿಕೆಯಲ್ಲಿ ಮಾಡಲ್ಪಟ್ಟಿರುವುದರಿಂದ, ಆಸ್ಪತ್ರೆಯ ವಾಸ್ತವ್ಯವು ತುಂಬಾ ಕಡಿಮೆಯಾಗಿದೆ, ನಂತರ ಎರಡು ದಿನಗಳಲ್ಲಿ ಆಸ್ಪತ್ರಯಿಂದ ಬಿಡುಗಡೆ ಮಾಡಲು ಅವಕಾಶ ನೀಡುತ್ತದೆ. ಈ ವಿಧಾನವನ್ನು ನಮ್ಮ ಹೊಸ ಅತ್ಯಾಧುನಿಕ ಎಂಡೋಸ್ಕೋಪಿ ಕೋಣೆಯಲ್ಲಿ ನಡೆಸಲಾಯಿತು” ಎಂದಿದ್ದಾರೆ.

ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ಅವರು ಆಸ್ಪತ್ರೆಯ ಈ ಸಾಧನೆ ಕುರಿತು ಹೆಮ್ಮೆ ವ್ಯಕ್ತಪಡಿಸಿದರು, “ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯು ಈ ಭಾಗದಲ್ಲಿ ತರಬೇತಿ ಪಡೆದ ವೈದ್ಯರ ತಂಡದೊಂದಿಗೆ ಈ ಸುಧಾರಿತ ಸೌಲಭ್ಯವನ್ನು ಒದಗಿಸಿದ ಕರ್ನಾಟಕದ ಮೊದಲ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಾಗಿದೆ. ಈ ಕಾರ್ಯವಿಧಾನವನ್ನು ಯಶಸ್ವಿಯಾಗಿ ನಿರ್ವಹಿಸಿದ್ದಕ್ಕಾಗಿ ಡಾ. ಶಿರನ್ ಶೆಟ್ಟಿ ಮತ್ತು ಅವರ ತಂಡವನ್ನು ಅಭಿನಂದಿಸುತ್ತೇನೆ” ಎಂದಿದ್ದಾರೆ.

ಈ ಯಶಸ್ವಿ ಕಾರ್ಯವಿಧಾನದ ಮೂಲಕ ಕಸ್ತೂರ್ಬಾ ಆಸ್ಪತ್ರೆ ಮಹತ್ವದ ಮೈಲಿಗಲ್ಲನ್ನು ಗುರುತಿಸುತ್ತದೆ, ಸುಧಾರಿತ ವೈದ್ಯಕೀಯ ಚಿಕಿತ್ಸೆಗಳು ಮತ್ತು ತರಬೇತಿ ಪಡೆದ ತಜ್ಞ ವೈದ್ಯರುಗಳಿಂದ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲವು ಈ ಭಾಗದಲ್ಲಿ ರೋಗಿಗಳ ಆರೈಕೆಯಲ್ಲಿ ಉನ್ನತ ಸೇವೆ ಸಲ್ಲಿಸುತ್ತಿದೆ.

Previous Post

ಕೆಎಂಸಿಯಿಂದ ವಿಶೇಷ ಗಾಯ ನಿಭಾವಣೆಯ ಕಾರ್ಯಾಗಾರ ಆಯೋಜನೆ..!!

Next Post

ಉಡುಪಿ :ಜಾನಪದ ಸಮ್ಮೇಳನದ ಪೂರ್ವಭಾವಿ ಸಭೆ ಸಂಪನ್ನ..!!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಉಡುಪಿ :ಜಾನಪದ ಸಮ್ಮೇಳನದ ಪೂರ್ವಭಾವಿ ಸಭೆ ಸಂಪನ್ನ..!!

ಉಡುಪಿ :ಜಾನಪದ ಸಮ್ಮೇಳನದ ಪೂರ್ವಭಾವಿ ಸಭೆ ಸಂಪನ್ನ..!!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023
ಉಡುಪಿ: ಮಳೆ ಕಡಿಮೆ ಇರುವುದರಿಂದ ಉಡುಪಿ ಜಿಲ್ಲೆ ಶಾಲಾ ಕಾಲೇಜುಗಳಿಗೆ ಗುರುವಾರ ರಜೆ ಇರುವುದಿಲ್ಲ : ಜಿಲ್ಲಾಧಿಕಾರಿ ಮಾಹಿತಿ…!!

ಉಡುಪಿ: ಮಳೆ ಕಡಿಮೆ ಇರುವುದರಿಂದ ಉಡುಪಿ ಜಿಲ್ಲೆ ಶಾಲಾ ಕಾಲೇಜುಗಳಿಗೆ ಗುರುವಾರ ರಜೆ ಇರುವುದಿಲ್ಲ : ಜಿಲ್ಲಾಧಿಕಾರಿ ಮಾಹಿತಿ…!!

26/06/2024

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಉಡುಪಿ:ನಿಯಂತ್ರಣ ತಪ್ಪಿ ರಸ್ತೆಬದಿಯ ಚರಂಡಿಗೆ ಉರುಳಿ ಬಿದ್ದ ಕಾರು: ವಾಹನದಲ್ಲಿದ್ದವರಿಗೆ ಸಣ್ಣಪುಟ್ಟ ಗಾಯ..!!

ಉಡುಪಿ:ನಿಯಂತ್ರಣ ತಪ್ಪಿ ರಸ್ತೆಬದಿಯ ಚರಂಡಿಗೆ ಉರುಳಿ ಬಿದ್ದ ಕಾರು: ವಾಹನದಲ್ಲಿದ್ದವರಿಗೆ ಸಣ್ಣಪುಟ್ಟ ಗಾಯ..!!

06/12/2025
ಉಡುಪಿ ಪರ್ಯಾಯ ಶ್ರೀ ಪುತ್ತಿಗೆ ಶ್ರೀ ಕೃಷ್ಣ ಮಠದಲ್ಲಿಡಿಸೆಂಬರ್ 7ರಂದು ಗೀತೋತ್ಸವ ಸಮಾರೋಪ..!!

ಉಡುಪಿ ಪರ್ಯಾಯ ಶ್ರೀ ಪುತ್ತಿಗೆ ಶ್ರೀ ಕೃಷ್ಣ ಮಠದಲ್ಲಿಡಿಸೆಂಬರ್ 7ರಂದು ಗೀತೋತ್ಸವ ಸಮಾರೋಪ..!!

06/12/2025
ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ: ಫಲಾನುಭವಿಗಳಿಗೆ ಯೋಜನೆಯ ಕಿಟ್ ವಿತರಣೆ..!!

ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ: ಫಲಾನುಭವಿಗಳಿಗೆ ಯೋಜನೆಯ ಕಿಟ್ ವಿತರಣೆ..!!

06/12/2025
ಮಂಗಳೂರು-ನವಿ ಮುಂಬೈ ನಡುವೆ ಡಿ.25ರಿಂದ ಇಂಡಿಗೋ ವಿಮಾನ ಸೇವೆ ಆರಂಭ..!!

ಸಾವಿರಕ್ಕೂ ಅಧಿಕ ಇಂಡಿಗೊ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ – ಪ್ರಯಾಣಿಕರ ತೀವ್ರ ಪರದಾಟ..!!

05/12/2025

Recent News

ಉಡುಪಿ:ನಿಯಂತ್ರಣ ತಪ್ಪಿ ರಸ್ತೆಬದಿಯ ಚರಂಡಿಗೆ ಉರುಳಿ ಬಿದ್ದ ಕಾರು: ವಾಹನದಲ್ಲಿದ್ದವರಿಗೆ ಸಣ್ಣಪುಟ್ಟ ಗಾಯ..!!

ಉಡುಪಿ:ನಿಯಂತ್ರಣ ತಪ್ಪಿ ರಸ್ತೆಬದಿಯ ಚರಂಡಿಗೆ ಉರುಳಿ ಬಿದ್ದ ಕಾರು: ವಾಹನದಲ್ಲಿದ್ದವರಿಗೆ ಸಣ್ಣಪುಟ್ಟ ಗಾಯ..!!

06/12/2025
ಉಡುಪಿ ಪರ್ಯಾಯ ಶ್ರೀ ಪುತ್ತಿಗೆ ಶ್ರೀ ಕೃಷ್ಣ ಮಠದಲ್ಲಿಡಿಸೆಂಬರ್ 7ರಂದು ಗೀತೋತ್ಸವ ಸಮಾರೋಪ..!!

ಉಡುಪಿ ಪರ್ಯಾಯ ಶ್ರೀ ಪುತ್ತಿಗೆ ಶ್ರೀ ಕೃಷ್ಣ ಮಠದಲ್ಲಿಡಿಸೆಂಬರ್ 7ರಂದು ಗೀತೋತ್ಸವ ಸಮಾರೋಪ..!!

06/12/2025
ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ: ಫಲಾನುಭವಿಗಳಿಗೆ ಯೋಜನೆಯ ಕಿಟ್ ವಿತರಣೆ..!!

ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ: ಫಲಾನುಭವಿಗಳಿಗೆ ಯೋಜನೆಯ ಕಿಟ್ ವಿತರಣೆ..!!

06/12/2025
ಮಂಗಳೂರು-ನವಿ ಮುಂಬೈ ನಡುವೆ ಡಿ.25ರಿಂದ ಇಂಡಿಗೋ ವಿಮಾನ ಸೇವೆ ಆರಂಭ..!!

ಸಾವಿರಕ್ಕೂ ಅಧಿಕ ಇಂಡಿಗೊ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ – ಪ್ರಯಾಣಿಕರ ತೀವ್ರ ಪರದಾಟ..!!

05/12/2025
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved