Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಕರಾವಳಿ

ಸುರತ್ಕಲ್‌: ಜೆಸಿಬಿ ಬಳಸಿ ಎಟಿಎಂ ಹಣ ಕದಿಯಲು ಯತ್ನಿಸಿದ ಕಳ್ಳರು – ಯತ್ನ ವಿಫಲ ಜೋಕಟ್ಟೆ ಬಳಿ ಜೆಸಿಬಿ ಬಿಟ್ಟು ಪರಾರಿ..!!

Dhrishya News by Dhrishya News
05/08/2023
in ಕರಾವಳಿ, ಮುಖಪುಟ, ರಾಜ್ಯ/ ರಾಷ್ಟ್ರೀಯ, ಸುದ್ದಿಗಳು
0
0
SHARES
50
VIEWS
Share on FacebookShare on Twitter

ಸುರತ್ಕಲ್‌: ಸುರತ್ಕಲ್‌ನ ವಿದ್ಯಾದಾಯಿನೀ ಶಾಲಾ ಮುಂಭಾಗದಲ್ಲಿರುವ ಸೌತ್‌ ಇಂಡಿಯನ್‌ ಬ್ಯಾಂಕ್‌ನ ಶಾಖಾ ಕಚೇರಿ ಪಕ್ಕದ ಇದೇ ಬ್ಯಾಂಕಿನ ಎಟಿಎಂ ಕೇಂದ್ರದಲ್ಲಿ ಜೆಸಿಬಿ ಬಳಸಿ ಹಣ ಕಳ್ಳತನಕ್ಕೆ ವಿಫಲ ಯತ್ನ ನಡೆಸಿದ ಘಟನೆ ಶುಕ್ರವಾರ ತಡರಾತ್ರಿ 2 ಗಂಟೆಗೆ ನಡೆದಿದೆ.

ಕಳ್ಳತನ ಯತ್ನದ ವೇಳೆ ಸಕಾಲದಲ್ಲಿ ಬ್ಯಾಂಕ್‌ ಸೈರನ್‌ ಮೊಳಗಿದ್ದರಿಂದ ಜೆಸಿಬಿ ಸಹಿತ ಕಳ್ಳರು ಪರಾರಿ ಯಾಗಿದ್ದರೂ, ಸಿಕ್ಕಿ ಬೀಳುವ ಭೀತಿಯಿಂದ ಜೋಕಟ್ಟೆ ಬಳಿ ಕೃತ್ಯಕ್ಕೆ ಬಳಸಿದ ಜೆಸಿಬಿಯನ್ನು ಬಿಟ್ಟು ಹೋಗಿದ್ದಾರೆ. ಕಳೆದ ಎರಡು ದಿನದ ಹಿಂದೆ ಪಡುಬಿದ್ರಿಯಲ್ಲಿ ಜೆಸಿಬಿ ಕಳವು ಮಾಡಿದ ಜೆಸಿಬಿ ಇದೆಂದು ತಿಳಿದು ಬಂದಿದೆ.

ಸುರತ್ಕಲ್‌ನ ವಿದ್ಯಾದಾಯಿನಿ ಹೆದ್ದಾರಿ ಒಂದು ಬದಿ ವಾಣಿಜ್ಯ ಕಟ್ಟಡಗಳು ಮಾತ್ರ ಇದ್ದು ,ಇನ್ನೊಂದು ಬದಿ ಶಾಲಾ ವಠಾರವಿದೆ. ಇಲ್ಲಿನ ಹೆದ್ದಾರಿಯ ಅಂಡರ್‌ ಪಾಸ್‌ ಮೇಲ್ಛಾವಣಿ ಅಡ್ಡವಿರುವುದರಿಂದ ಹೆದ್ದಾರಿಯಲ್ಲಿ ಸಾಗುವ ವಾಹನಗಳಿಗೆ ತಕ್ಷಣಕ್ಕೆ ದಾರಿ ಹೋಕರಿಗೆ ಕಾಣದ ಕಾರಣದಿಂದ ಇದೇ ಸ್ಥಳದಲ್ಲಿನ ಎಟಿಎಂ ದೋಚಲು ಕಳ್ಳಲು ಕೈ ಚಳಕ ತೋರಿಸಲು ಯತ್ನಿಸಿದ್ದಾರೆ. ಜೆಸಿಬಿಯಿಂದ ಗೋಡೆ ಒಡೆದು ಹಾಕಿದ ಪರಿಣಾಮ ತಡೆಗೋಡೆ ಕೆಳಗೆ ಉರುಳಿ ಬಿದ್ದರೆ, ಕಟ್ಟಡದ ಶೆಟರ್‌ನ ಕೀಲು ಒಂದೇ ಏಟಿಗೆ ಹೊರಗೆ ಬಂದಿದೆ. ಮುಂಭಾಗದಲ್ಲಿ ಅಳವಡಿಸಿದ್ದ ಗಾಜನ್ನು ಒಡೆದು ಹಾಕಿದ ಬಳಿಕ ಒಳಗಿದ್ದ ಎಟಿಎಂ ಯಂತ್ರವನ್ನು ಒಡೆದು ಸಾಗಿಸಲು ಮುಂದಾದಾಗ ಸೈರನ್‌ ಮೊಳಗುತ್ತಿದ್ದರಿಂದ ಜನರು ಹಾಗೂ ಪೊಲೀಸರು ಬರುವ ಭೀತಿಯಿಂದ ಅರ್ದದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ.

ಎಟಿಎಂ ಯಂತ್ರ ಒಡೆಯುವ ಸಂದರ್ಭ ಬ್ಯಾಂಕ್‌ ಮ್ಯಾನೇಜರ್‌ಗೆ ಸೈರನ್‌ ಸಂದೇಶ ಹೋಗಿದೆ. ತಕ್ಷಣ ಇದಕ್ಕೆ ಸ್ಪಂದಿಸಿ ಪೊಲೀಸರಿಗೆ ಮಾಹಿತಿ ನೀಡಿ, ಬ್ಯಾಂಕ್‌ ಅಧಿಕಾರಿಗಳು ಬಂದಾಗ ಅದಾಗಲೇ ಕಳ್ಳರು ಜೆಸಿಬಿ ಸಹಿತ ನಾಪತ್ತೆಯಾಗಿದ್ದರು.

ಶುಕ್ರವಾರ ಬೆಳಗ್ಗೆ ಘಟನಾ ಸ್ಥಳಕ್ಕೆ ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ದಿನೇಶ್‌ ಕುಮಾರ್‌ ಆಗಮಿಸಿ ಪರಿಶೀಲನೆ ನಡೆಸಿದರು. ಶ್ವಾನ ದಳ ಬೆರಳಚ್ಚು  ತಂಡ ಆಗಮಿಸಿತು.ಚಾಲಾಕಿ ಕಳ್ಳರು ಜೆಸಿಬಿ ಮೂಲಕವೇ ಕಳ್ಳತಕ್ಕೆ ಸಂಚು ರೂಪಿಸಿದ್ದರಿಂದ ಹೆಚ್ಚಿನ ಸಾಕ್ಷ ಸಿಕ್ಕಿಲ್ಲ.

ಪಡುಬಿದ್ರಿ ಠಾಣಾ ವ್ಯಾಪ್ತಿಯಲ್ಲಿ ಜೆಸಿಬಿ ಕಳವುಗೈದು ಸುರತ್ಕಲ್‌ನ ಎಟಿಎಂನಲ್ಲಿನ ಹಣ ದೋಚಲು ಬಳಸಿರುವುದನ್ನು ಪತ್ತೆಮಾಡಲಾಗಿದೆ.

ಇಲ್ಲಿನ ಎಟಿಎಂ ಯಂತ್ರವನ್ನು ಸಣ್ಣ ಬೋಲ್ಟ್ ಮೂಲಕ ನಿಲ್ಲಿಸಲಾಗಿದ್ದು ಜೆಸಿಬಿಯಲ್ಲಿ ದೂಡಿದ ಪರಿಣಾಮ ಒಂದೇ ಎಟಿಗೆ ಎದ್ದು ಬಂದಿತ್ತು. ಅಲ್ಲದೆ ಇಲ್ಲಿನ ಬ್ಯಾಂಕ್‌ ಶಾಖೆಗೆ ಕಾವಲುಗಾರರು ಇಲ್ಲದ್ದನ್ನು ಗಮನಿಸಿಕೊಂಡೇ ಮುಸುಕು ಹಾಕಿದ ಬಂದ ಕಳ್ಳರ ತಂಡ ಈ ಕೃತ್ಯ ಎಸಗಿದೆ.ಈ ಹಿಂದೆ ಎಟಿಎಂ ಕೇಂದ್ರಗಳಲ್ಲಿ ಕಡ್ಡಾಯವಾಗಿ ಕಾವಲುಗಾರರ ನೇಮಕವಾಗುತ್ತಿತ್ತು. ಆದರೆ ಇದೀಗ ಕೇಂದ್ರಗಳಲ್ಲಿ ಭದ್ರತೆಗಾಗಿ ಸಿಸಿ ಕಣ್ಗಾವಲು ಮಾತ್ರ ಹಾಕಲಾಗುತ್ತಿದೆ.

Previous Post

ಬೆಳ್ತಂಗಡಿ- ಮಾನಹಾನಿ ಹಾಗೂ ಹಲ್ಲೆಗೆ ಯತ್ನ: ಸೌಜನ್ಯಾ ತಾಯಿಯಿಂದ ದೂರು..!!

Next Post

ಮಂಗಳೂರು: ಮಹಿಳೆ ಸ್ನಾನ ಮಾಡುವ ವೀಡಿಯೊ‌ ರೆಕಾರ್ಡ್ -ಪೊಲೀಸರಿಗೆ ಒಪ್ಪಿಸಿದ ಸಾರ್ವಜನಿಕರು..!!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post

ಮಂಗಳೂರು: ಮಹಿಳೆ ಸ್ನಾನ ಮಾಡುವ ವೀಡಿಯೊ‌ ರೆಕಾರ್ಡ್ -ಪೊಲೀಸರಿಗೆ ಒಪ್ಪಿಸಿದ ಸಾರ್ವಜನಿಕರು..!!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಸರ್ಕಾರಿ ಪಾಲಿಟೆಕ್ನಿಕ್ ಕಾರ್ಕಳದಲ್ಲಿ ರೋಟರಾಕ್ಟ್ ಕ್ಲಬ್‌ನ ನೂತನ ಪದಾಧಿಕಾರಿಗಳ ಪದಗ್ರಹಣ

ಸರ್ಕಾರಿ ಪಾಲಿಟೆಕ್ನಿಕ್ ಕಾರ್ಕಳದಲ್ಲಿ ರೋಟರಾಕ್ಟ್ ಕ್ಲಬ್‌ನ ನೂತನ ಪದಾಧಿಕಾರಿಗಳ ಪದಗ್ರಹಣ

14/08/2026
ಕ್ರೈಸ್ಟ್ ವಿವಿ ಸಹಭಾಗಿತ್ವದಲ್ಲಿ ಐಬಿಎಂ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಇನ್ನೋವೇಶನ್ ಸೆಂಟರ್ ಸ್ಥಾಪನೆ: ಎಐ ಕ್ಷೇತ್ರದಲ್ಲಿ ಸಂಶೋಧನೆ, ತರಬೇತಿ, ಪ್ರತಿಭಾ ಸಂಪನ್ಮೂಲ ಅಭಿವೃದ್ಧಿಗೆ ಬಲ

ಕ್ರೈಸ್ಟ್ ವಿವಿ ಸಹಭಾಗಿತ್ವದಲ್ಲಿ ಐಬಿಎಂ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಇನ್ನೋವೇಶನ್ ಸೆಂಟರ್ ಸ್ಥಾಪನೆ: ಎಐ ಕ್ಷೇತ್ರದಲ್ಲಿ ಸಂಶೋಧನೆ, ತರಬೇತಿ, ಪ್ರತಿಭಾ ಸಂಪನ್ಮೂಲ ಅಭಿವೃದ್ಧಿಗೆ ಬಲ

13/08/2026
ದಕ್ಷಿಣ ಭಾರತದ ಮಾರುಕಟ್ಟೆಗಳಿಗೆ ನಟಿ ಕೃತಿ ಶೆಟ್ಟಿ ಇಂದ್ರಿಯಾ ಬ್ರ್ಯಾಂಡ್ ರಾಯಭಾರಿ: ನೂತನ ವರಮಹಾಲಕ್ಷ್ಮಿ ಅಭಿಯಾನ ಅನಾವರಣ

ದಕ್ಷಿಣ ಭಾರತದ ಮಾರುಕಟ್ಟೆಗಳಿಗೆ ನಟಿ ಕೃತಿ ಶೆಟ್ಟಿ ಇಂದ್ರಿಯಾ ಬ್ರ್ಯಾಂಡ್ ರಾಯಭಾರಿ: ನೂತನ ವರಮಹಾಲಕ್ಷ್ಮಿ ಅಭಿಯಾನ ಅನಾವರಣ

13/08/2026
ಮಾಹೆಯ 5 ಅಂಗಸಂಸ್ಥೆಗಳಲ್ಲಿ ಮೈಕ್ರೋಸಾಫ್ಟ್ ಲ್ಯಾಬ್‌: ಎಐ ಹಾಗೂ ನಾವೀನ್ಯತೆಯತ್ತ ದೃಢ ಹೆಜ್ಜೆ

ಮಾಹೆಯ 5 ಅಂಗಸಂಸ್ಥೆಗಳಲ್ಲಿ ಮೈಕ್ರೋಸಾಫ್ಟ್ ಲ್ಯಾಬ್‌: ಎಐ ಹಾಗೂ ನಾವೀನ್ಯತೆಯತ್ತ ದೃಢ ಹೆಜ್ಜೆ

13/08/2026

Recent News