ಕಾರ್ಕಳ: ಕೌಡೂರು ಗ್ರಾಮದ ಹಾಡಿಮನೆ ಎಂಬಲ್ಲಿ ಯುವಕನೊಬ್ಬ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನವೆಂಬರ್ 5ರಂದು ನಡೆದಿದೆ.
ಮೃತರನ್ನು ಕೌಡೂರು ಗ್ರಾಮದ ಸೂರಾಜ್ ಭಂಡಾರಿ ಅವರ ತಮ್ಮ ಸುದೇಶ ಭಂಡಾರಿ (32) ಎಂದು ಗುರುತಿಸಲಾಗಿದೆ.
ಸುದೇಶ ಅವರು ನವೆಂಬರ್ 2ರಂದು ಕುಮಟದಿಂದ ಕೌಡೂರಿನಲ್ಲಿರುವ ತಮ್ಮ ಮನೆಗೆ ಬಂದಿದ್ದರು. ನವೆಂಬರ್ 5ರಂದು ಮತ್ತೆ ಕುಮಟಕ್ಕೆ ಕೆಲಸಕ್ಕೆ ತೆರಳಲು ಸಿದ್ಧತೆ ನಡೆಸುತ್ತಿದ್ದ ಅವರು, ಬೆಳಗ್ಗೆ ಸುಮಾರು 7:45ರ ವೇಳೆಗೆ ಮನೆಯ ರೂಮಿನ ಬಾಗಿಲನ್ನು ಒಳಗಿನಿಂದ ಚಿಲಕ ಹಾಕಿಕೊಂಡು ಮನೆಯ ಟೆರೇಸ್‌ನಲ್ಲಿರುವ ಫ್ಯಾನ್‌ಗೆ ಚೂಡಿದಾರದ ಶಾಲಿನಿಂದ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಈ ಕುರಿತು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







