Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

ಫೀನಿಕ್ಸ್‌ನಲ್ಲಿ ವೈಭವದ ಗುರುವಂದನಾ ಮಹೋತ್ಸವ

ಚತುರ್ಥ ವಿಶ್ವಗೀತಾ ಪರ್ಯಾಯವನ್ನು ಯಶಸ್ವಿಯಾಗಿ ಪೂರೈಸಿ ಆಗಮಿಸಿದ ಪುತ್ತಿಗೆ ಶ್ರೀಗಳಿಗೆ ಭಕ್ತಿಪೂರ್ವಕ ಗೌರವ

Dhrishya News by Dhrishya News
26/10/2026
in ಸುದ್ದಿಗಳು
0
ಫೀನಿಕ್ಸ್‌ನಲ್ಲಿ ವೈಭವದ ಗುರುವಂದನಾ ಮಹೋತ್ಸವ
0
SHARES
2
VIEWS
Share on FacebookShare on Twitter

ಫೀನಿಕ್ಸ್, ಅಕ್ಟೋಬರ್ 24, 2026: ಚತುರ್ಥ ವಿಶ್ವಗೀತಾ ಪರ್ಯಾಯವನ್ನು ಯಶಸ್ವಿಯಾಗಿ ಪೂರೈಸಿ ಅಮೆರಿಕದ ಫೀನಿಕ್ಸ್‌ಗೆ ಆಗಮಿಸಿದ ಉಡುಪಿ ಶ್ರೀಪುತ್ತಿಗೆ ಮಠದ ಪರಮಪೂಜ್ಯ ಯತಿಕುಲ ಚಕ್ರವರ್ತಿ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರಿಗೆ ಶ್ರೀ ವೆಂಕಟಕೃಷ್ಣ ಕ್ಷೇತ್ರದಲ್ಲಿ ವೈಭವದ ಗುರುವಂದನಾ ಮಹೋತ್ಸವ ನಡೆಯಿತು.

ಶ್ರೀಧರ್ ಚೆನ್ನಗಿರಿ ಅವರು ಶ್ರೀಪಾದರನ್ನು ಸ್ವಾಗತಿಸಿ, ನೂತನ ದೇವಾಲಯ ಸಂಕೀರ್ಣಕ್ಕಾಗಿ ಭೂಮಿ ಸ್ವಾಧೀನಪಡಿಸಿಕೊಂಡಿರುವುದು ಸಂಸ್ಥೆಯ ಐತಿಹಾಸಿಕ ಮೈಲಿಗಲ್ಲು ಎಂದರು. ಭಕ್ತರು ಶ್ರೀಪಾದರಿಗೆ ಮಾನಪತ್ರ ಸಮರ್ಪಿಸಿ, ಶಾಲು ಹೊದಿಸಿ, ಪುಷ್ಪಾರ್ಪಣೆ ಹಾಗೂ ಪುಷ್ಪವೃಷ್ಟಿಯೊಂದಿಗೆ ಗೌರವ ಸಲ್ಲಿಸಿದರು.

ಖ್ಯಾತ ಸಮಾಜಚಿಂತಕ ಹಾಗೂ ವಾಗ್ಮಿ ಶ್ರೀ ರವೀಂದ್ರ ಜೋಶಿ ಅವರು, ಶ್ರೀಪಾದರು ವಿಶ್ವದಾದ್ಯಂತ ಭಾರತೀಯ ಸಂಸ್ಕೃತಿ ಮತ್ತು ಆಧ್ಯಾತ್ಮಿಕತೆಯ ಸಂದೇಶವನ್ನು ಹರಡುತ್ತಿರುವ ಮಹಾನ್ ಧರ್ಮಪ್ರಚಾರಕರು ಎಂದು ಬಣ್ಣಿಸಿದರು.

ಸ್ಥಳೀಯ ಭಕ್ತರಾದ ರಾಧಾ–ರವಿ ಅವರು ಶ್ರೀಪಾದರ ಅವಿಶ್ರಾಂತ ಸೇವೆ ಮತ್ತು ದೂರದೃಷ್ಟಿಯನ್ನು ಸ್ಮರಿಸಿದರು. ಮುಕುಂದ್ ಅವರು, ವಿದೇಶದಲ್ಲಿರುವ ಭಾರತೀಯರಿಗೆ ಪೂಜೆ, ಹೋಮ, ಹಬ್ಬ ಮತ್ತು ಧಾರ್ಮಿಕ ಆಚರಣೆಗಳನ್ನು ನಡೆಸಲು ಶ್ರೀಪಾದರು ಕಲ್ಪಿಸಿರುವ ವೇದಿಕೆ ಅಮೂಲ್ಯವಾದುದು ಎಂದರು.

ಡಾ. ದಿನಕರ ಮಲ್ಲಾಡಿ ಅವರು, ಸುಮಾರು ಇಪ್ಪತ್ತು ವರ್ಷಗಳಿಂದ ಶ್ರೀಪಾದರೊಂದಿಗೆ ಹೊಂದಿರುವ ಒಡನಾಟ ಹಾಗೂ ಅವರ ಪ್ರೀತಿ ಮತ್ತು ಭಕ್ತವಾತ್ಸಲ್ಯವನ್ನು ಸ್ಮರಿಸಿದರು. ಮೀರಾ ತಾಡಪತ್ರಿ ಅವರು, ಶ್ರೀಪಾದರು ಧರ್ಮವನ್ನು ಕೇವಲ ಬೋಧಿಸದೆ ತಮ್ಮ ಜೀವನದಲ್ಲೇ ಆಚರಿಸುತ್ತಿರುವ ಆದರ್ಶ ಗುರುಗಳು ಎಂದರು. ಭಕ್ತರಾದ ಶ್ರೀ ಪವಮಾನ ಅವರು, ಶ್ರೀ ವೆಂಕಟಕೃಷ್ಣ ಕ್ಷೇತ್ರವು ಫೀನಿಕ್ಸ್‌ನ ಭಾರತೀಯ ಸಮುದಾಯಕ್ಕೆ ಎರಡನೇ ಮನೆಯಾಗಿದೆ ಎಂದು ಹೇಳಿದರು.

ಆಶೀರ್ವಚನ ನೀಡಿದ ಶ್ರೀಪಾದರು, “ಎಲ್ಲವನ್ನೂ ನಾನು ಮಾಡುತ್ತಿದ್ದೇನೆ ಎಂಬ ಅಹಂಕಾರವನ್ನು ತೊರೆದು, ಭಗವಂತನೇ ನಮ್ಮ ಮೂಲಕ ಕಾರ್ಯ ಮಾಡಿಸುತ್ತಿದ್ದಾನೆ ಎಂಬ ಭಾವದಿಂದ ಸೇವೆ ಸಲ್ಲಿಸಿದಾಗ ಜೀವನದಲ್ಲಿ ಶಾಂತಿ ಮತ್ತು ಸಂತೋಷ ದೊರೆಯುತ್ತದೆ” ಎಂದರು.

ಕೋಟಿಗೀತಾ ಲೇಖನ ಯಜ್ಞ ಸೇರಿದಂತೆ ಅನೇಕ ಯೋಜನೆಗಳ ಮೂಲಕ ಭಗವದ್ಗೀತೆಯ ಸಂದೇಶವನ್ನು ವಿಶ್ವದಾದ್ಯಂತ ಪಸರಿಸುವುದೇ ವಿಶ್ವಗೀತಾ ಪರ್ಯಾಯದ ಮುಖ್ಯ ಸಂಕಲ್ಪವಾಗಿತ್ತು ಎಂದು ತಿಳಿಸಿದರು. ಅಮೆರಿಕದ ಭೌತಿಕ ಪ್ರಗತಿ ಮತ್ತು ಭಾರತದ ಆಧ್ಯಾತ್ಮಿಕ ಶಕ್ತಿ ಒಂದಾದಾಗ ವಿಶ್ವಕ್ಕೆ ಉತ್ತಮ ಮಾರ್ಗದರ್ಶನ ದೊರೆಯುತ್ತದೆ. AI ಎಂದರೆ America and India ಎಂಬ ಸಂದೇಶದ ಮೂಲಕ ಉಭಯ ದೇಶಗಳ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಸಹಕಾರದ ಮಹತ್ವವನ್ನು ವಿವರಿಸಿದರು.

ವಿದೇಶದಲ್ಲಿರುವ ಭಾರತೀಯರು ತಮ್ಮ ಸಂಸ್ಕೃತಿ, ಆಧ್ಯಾತ್ಮಿಕತೆ ಮತ್ತು ಸನಾತನ ಧರ್ಮವನ್ನೇ ನಿಜವಾದ ಗುರುತಾಗಿ ಉಳಿಸಿಕೊಂಡು ಮುಂದಿನ ಪೀಳಿಗೆಗೆ ನೀಡಬೇಕು. ನೂತನ ಭವ್ಯ ದೇವಾಲಯದ ನಿರ್ಮಾಣಕ್ಕೆ ಭಕ್ತರೆಲ್ಲರೂ ಸಂಪೂರ್ಣ ಸಹಕಾರ ನೀಡಬೇಕು ಎಂದು ಶ್ರೀಪಾದರು ಕರೆ ನೀಡಿದರು.

ಪುತ್ತಿಗೆ ಮಠದ ಅಂತಾರಾಷ್ಟ್ರೀಯ ಕಾರ್ಯದರ್ಶಿ ಶ್ರೀ ಪ್ರಸನ್ನಾಚಾರ್ಯರು ಹಾಗೂ ದಿವಾನ್ ಶ್ರೀ ನಾಗರಾಜಾಚಾರ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಪ್ರಧಾನ ಅರ್ಚಕರಾದ ಶ್ರೀ ಕಿರಣ್ ರಾವ್ ಅವರು ಧನ್ಯವಾದ ಸಮರ್ಪಿಸಿದರು.

ಸಭೆಯ ಬಳಿಕ ಶ್ರೀ ವೆಂಕಟಕೃಷ್ಣ ಹಾಗೂ ಶ್ರೀನಿವಾಸ ದೇವರಿಗೆ ವೈಭವದ ಪಲ್ಲಕ್ಕಿ ಉತ್ಸವ ನಡೆಯಿತು. ಉಡುಪಿಯ ಸಾಂಪ್ರದಾಯಿಕ ಚಂಡೆ ವಾದನದೊಂದಿಗೆ ದೇವರ ಮೆರವಣಿಗೆ ಜರುಗಿತು. ಉದಯಕುಮಾರ್ ಅವರು ದೇವರನ್ನು ಹೊತ್ತು ಭಕ್ತಿಪೂರ್ವಕ ನೃತ್ಯಸೇವೆ ಸಲ್ಲಿಸಿದರು.

ಭಾರತದಿಂದ ಆಗಮಿಸಿದ ಪ್ರಕಾಶ್ ದೇವಾಡಿಗ ಮತ್ತು ಹೊನ್ನಪ್ಪ ದೇವಾಡಿಗ ಅವರ ಸ್ಯಾಕ್ಸೊಫೋನ್ ವಾದನಸೇವೆ ಉತ್ಸವದ ವಿಶೇಷ ಆಕರ್ಷಣೆಯಾಗಿತ್ತು. ಮಠದ ವಿದ್ವಾಂಸರು, ಅರ್ಚಕರು, ಟ್ರಸ್ಟಿಗಳು, ಸೇವಾಕರ್ತರು ಹಾಗೂ ಅಪಾರ ಸಂಖ್ಯೆಯ ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Previous Post

ಫೀನಿಕ್ಸ್‌ನಲ್ಲಿ ಶ್ರೀ ವೆಂಕಟಕೃಷ್ಣ ಕ್ಷೇತ್ರದ ನೂತನ ದೇವಾಲಯಕ್ಕೆ ಶಿಲಾನ್ಯಾಸ

Next Post

ಬ್ಯಾಂಕುಗಳ ಖಾಸಗೀಕರಣ ಬೇಡ: ಐಡಿಬಿಐ ಬ್ಯಾಂಕ್ ಷೇರು ಮಾರಾಟಕ್ಕೆ ಸಿಪಿಐ(ಎಂ) ವಿರೋಧ..!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಬ್ಯಾಂಕುಗಳ ಖಾಸಗೀಕರಣ ಬೇಡ: ಐಡಿಬಿಐ ಬ್ಯಾಂಕ್ ಷೇರು ಮಾರಾಟಕ್ಕೆ ಸಿಪಿಐ(ಎಂ) ವಿರೋಧ..!

ಬ್ಯಾಂಕುಗಳ ಖಾಸಗೀಕರಣ ಬೇಡ: ಐಡಿಬಿಐ ಬ್ಯಾಂಕ್ ಷೇರು ಮಾರಾಟಕ್ಕೆ ಸಿಪಿಐ(ಎಂ) ವಿರೋಧ..!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 24k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಕಾರ್ಕಳದ ಮಹಿಳಾ ಒಕ್ಕೂಟದಲ್ಲಿ ಮಹಿಳಾ ನಿರ್ಣಾಯಕ್ಕೆ ಬೆಲೆ ಇಲ್ಲ : ಶ್ರೀಮತಿ ರಮಿತಾ ಸೂರ್ಯವಂಶಿ

ಕಾರ್ಕಳದ ಮಹಿಳಾ ಒಕ್ಕೂಟದಲ್ಲಿ ಮಹಿಳಾ ನಿರ್ಣಾಯಕ್ಕೆ ಬೆಲೆ ಇಲ್ಲ : ಶ್ರೀಮತಿ ರಮಿತಾ ಸೂರ್ಯವಂಶಿ

26/10/2026
ಕೋಟೇಶ್ವರದ ಕೋಟಿತೀರ್ಥ ಪುಷ್ಕರಣಿಗೆ ಹಾರಿ ಯುವಕ ಆತ್ಮಹತ್ಯೆ; ಶೋಧ ಕಾರ್ಯಾಚರಣೆ ಬಳಿಕ ಮೃತದೇಹ ಪತ್ತೆ

ಮಲ್ಪೆ ಬಂದರಿನಲ್ಲಿ ಕುಸಿದು ಬಿದ್ದ ಮೀನುಗಾರಿಕಾ ದೋಣಿಯ ಕಾರ್ಮಿಕ ಸಾವು

26/10/2026
ಬ್ಯಾಂಕುಗಳ ಖಾಸಗೀಕರಣ ಬೇಡ: ಐಡಿಬಿಐ ಬ್ಯಾಂಕ್ ಷೇರು ಮಾರಾಟಕ್ಕೆ ಸಿಪಿಐ(ಎಂ) ವಿರೋಧ..!

ಬ್ಯಾಂಕುಗಳ ಖಾಸಗೀಕರಣ ಬೇಡ: ಐಡಿಬಿಐ ಬ್ಯಾಂಕ್ ಷೇರು ಮಾರಾಟಕ್ಕೆ ಸಿಪಿಐ(ಎಂ) ವಿರೋಧ..!

26/10/2026
ಫೀನಿಕ್ಸ್‌ನಲ್ಲಿ ವೈಭವದ ಗುರುವಂದನಾ ಮಹೋತ್ಸವ

ಫೀನಿಕ್ಸ್‌ನಲ್ಲಿ ವೈಭವದ ಗುರುವಂದನಾ ಮಹೋತ್ಸವ

26/10/2026

Recent News

imunify-bot-check