Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

ಫೀನಿಕ್ಸ್‌ನಲ್ಲಿ ಶ್ರೀ ವೆಂಕಟಕೃಷ್ಣ ಕ್ಷೇತ್ರದ ನೂತನ ದೇವಾಲಯಕ್ಕೆ ಶಿಲಾನ್ಯಾಸ

ಸುಮಾರು 15 ಮಿಲಿಯನ್ ಡಾಲರ್ ವೆಚ್ಚದ ದೇವಾಲಯ ಸಂಕೀರ್ಣಕ್ಕೆ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರಿಂದ ಭೂಮಿಪೂಜೆ

Dhrishya News by Dhrishya News
26/10/2026
in ಸುದ್ದಿಗಳು
0
ಫೀನಿಕ್ಸ್‌ನಲ್ಲಿ ಶ್ರೀ ವೆಂಕಟಕೃಷ್ಣ ಕ್ಷೇತ್ರದ ನೂತನ ದೇವಾಲಯಕ್ಕೆ ಶಿಲಾನ್ಯಾಸ
0
SHARES
2
VIEWS
Share on FacebookShare on Twitter

ಫೀನಿಕ್ಸ್, ಅಕ್ಟೋಬರ್ 25, 2026: ಅಮೆರಿಕದಲ್ಲಿರುವ ಶ್ರೀ ಪುತ್ತಿಗೆ ಮಠದ ಮೊದಲ ಶಾಖೆಯಾದ ಫೀನಿಕ್ಸ್‌ನ ಶ್ರೀ ವೆಂಕಟಕೃಷ್ಣ ಕ್ಷೇತ್ರದಲ್ಲಿ ನೂತನ ದೇವಾಲಯ ಸಂಕೀರ್ಣ ನಿರ್ಮಾಣಕ್ಕೆ ಇಂದು ಶಿಲಾನ್ಯಾಸ ನೆರವೇರಿತು.

ಭಕ್ತರ ಸಹಕಾರದಿಂದ ಸುಮಾರು ನಾಲ್ಕು ಎಕರೆ ವಿಶಾಲ ಜಾಗದಲ್ಲಿ ನಿರ್ಮಾಣವಾಗಲಿರುವ ದೇವಾಲಯಕ್ಕೆ, ಶರದ್‌ಪೂರ್ಣಿಮೆಯ ಶುಭ ಮುಹೂರ್ತದಲ್ಲಿ ಬೆಳಿಗ್ಗೆ ಸುಮಾರು 8:15ಕ್ಕೆ ಪರಮಪೂಜ್ಯ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಶಿಲಾನ್ಯಾಸ ಮಾಡಿದರು.

ಪುತ್ತಿಗೆ ಮಠದ ರಾಘವೇಂದ್ರ ಭಟ್ಟ ಕೊಡಂಚ ಅವರು ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು. ಶ್ರೀನಿವಾಸ ದೇವರ ಉತ್ಸವಮೂರ್ತಿಯನ್ನು ತಂದು ವಿಶೇಷ ಪೂಜೆ ಸಲ್ಲಿಸಲಾಯಿತು. ಭಕ್ತರ ಜಯಘೋಷ, ಶ್ರೀನಿವಾಸ ನಾಮಸಂಕೀರ್ತನೆ ಮತ್ತು ಮಂಗಳವಾದ್ಯಗಳ ನಡುವೆ ಶ್ರೀಪಾದರು ಶಿಲಾಕಲ್ಲು ಇರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಭೂಮಿಪೂಜೆಯ ಅಂಗವಾಗಿ ಭಕ್ತರು ನಾಣ್ಯಗಳು ಹಾಗೂ ಮುತ್ತು–ರತ್ನಗಳನ್ನು ಸಮರ್ಪಿಸಿದರು.

ತಮ್ಮ ಅನುಗ್ರಹ ಸಂದೇಶದಲ್ಲಿ ಶ್ರೀಪಾದರು, ಫೀನಿಕ್ಸ್‌ನ ಈ ದೇವಾಲಯವು ಪಾರಂಪರಿಕ ಸೊಬಗಿನಿಂದ ಕೂಡಿದ ಸುಂದರ ಕ್ಷೇತ್ರವಾಗಿ ರೂಪುಗೊಳ್ಳಲಿದೆ ಎಂದರು. ಉಡುಪಿಯ ಶ್ರೀಕೃಷ್ಣನ ಸಾನ್ನಿಧ್ಯ ಮತ್ತು ಪರ್ವತದ ಮೇಲಿರುವ ಶ್ರೀವೆಂಕಟೇಶ್ವರನ ಭವ್ಯತೆಯನ್ನು ನೆನಪಿಸುವ ಶ್ರೀ ವೆಂಕಟಕೃಷ್ಣನ ದಿವ್ಯ ಸಮಾಗಮವು ಇಲ್ಲಿ ಭಕ್ತರಿಗೆ ಭಕ್ತಿ ಮತ್ತು ನೆಮ್ಮದಿಯನ್ನು ನೀಡಲಿ ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ಪುತ್ತಿಗೆ ಮಠದ ದಿವಾನ ನಾಗರಾಜ ಆಚಾರ್ಯರು, ಅಂತರರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯರು, ಕ್ಷೇತ್ರದ ಪ್ರಧಾನ ಅರ್ಚಕ ಕಿರಣ ಆಚಾರ್ಯರು ಸೇರಿದಂತೆ ಅನೇಕ ಭಕ್ತರು ಮತ್ತು ದಾನಿಗಳು ಉಪಸ್ಥಿತರಿದ್ದರು. ಮೂರುನೂರಕ್ಕೂ ಹೆಚ್ಚು ಭಕ್ತರು ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

Previous Post

ಫೀನಿಕ್ಸ್‌ನಲ್ಲಿ ಭಗವದ್ಗೀತಾ ಲೇಖನ ಯಜ್ಞ ಸಂಪನ್ನ

Next Post

ಫೀನಿಕ್ಸ್‌ನಲ್ಲಿ ವೈಭವದ ಗುರುವಂದನಾ ಮಹೋತ್ಸವ

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಫೀನಿಕ್ಸ್‌ನಲ್ಲಿ ವೈಭವದ ಗುರುವಂದನಾ ಮಹೋತ್ಸವ

ಫೀನಿಕ್ಸ್‌ನಲ್ಲಿ ವೈಭವದ ಗುರುವಂದನಾ ಮಹೋತ್ಸವ

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 24k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಕಾರ್ಕಳದ ಮಹಿಳಾ ಒಕ್ಕೂಟದಲ್ಲಿ ಮಹಿಳಾ ನಿರ್ಣಾಯಕ್ಕೆ ಬೆಲೆ ಇಲ್ಲ : ಶ್ರೀಮತಿ ರಮಿತಾ ಸೂರ್ಯವಂಶಿ

ಕಾರ್ಕಳದ ಮಹಿಳಾ ಒಕ್ಕೂಟದಲ್ಲಿ ಮಹಿಳಾ ನಿರ್ಣಾಯಕ್ಕೆ ಬೆಲೆ ಇಲ್ಲ : ಶ್ರೀಮತಿ ರಮಿತಾ ಸೂರ್ಯವಂಶಿ

26/10/2026
ಕೋಟೇಶ್ವರದ ಕೋಟಿತೀರ್ಥ ಪುಷ್ಕರಣಿಗೆ ಹಾರಿ ಯುವಕ ಆತ್ಮಹತ್ಯೆ; ಶೋಧ ಕಾರ್ಯಾಚರಣೆ ಬಳಿಕ ಮೃತದೇಹ ಪತ್ತೆ

ಮಲ್ಪೆ ಬಂದರಿನಲ್ಲಿ ಕುಸಿದು ಬಿದ್ದ ಮೀನುಗಾರಿಕಾ ದೋಣಿಯ ಕಾರ್ಮಿಕ ಸಾವು

26/10/2026
ಬ್ಯಾಂಕುಗಳ ಖಾಸಗೀಕರಣ ಬೇಡ: ಐಡಿಬಿಐ ಬ್ಯಾಂಕ್ ಷೇರು ಮಾರಾಟಕ್ಕೆ ಸಿಪಿಐ(ಎಂ) ವಿರೋಧ..!

ಬ್ಯಾಂಕುಗಳ ಖಾಸಗೀಕರಣ ಬೇಡ: ಐಡಿಬಿಐ ಬ್ಯಾಂಕ್ ಷೇರು ಮಾರಾಟಕ್ಕೆ ಸಿಪಿಐ(ಎಂ) ವಿರೋಧ..!

26/10/2026
ಫೀನಿಕ್ಸ್‌ನಲ್ಲಿ ವೈಭವದ ಗುರುವಂದನಾ ಮಹೋತ್ಸವ

ಫೀನಿಕ್ಸ್‌ನಲ್ಲಿ ವೈಭವದ ಗುರುವಂದನಾ ಮಹೋತ್ಸವ

26/10/2026

Recent News

imunify-bot-check