Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

ಐಶ್ವರ್ಯಾ ರೈ ಬಚ್ಚನ್ ಅಭಿನಯದ ಸ್ಟೇ ಇನ್ ದ ಮೊಮೆಂಟ್ ಅಭಿಯಾನ ಅನಾವರಣಗೊಳಿಸಿದ ಜೆಡಬ್ಲ್ಯು ಮ್ಯಾರಿಯಟ್

ವಿರಮಿಸಿ, ಬೆರೆತು, ವರ್ತಮಾನದ ಕ್ಷಣವನ್ನು ಪೂರ್ಣವಾಗಿ ಅನುಭವಿಸುವಂತೆ ಅತಿಥಿಗಳಿಗೆ ಸಾರಿದ ಪ್ರಚಾರ ಕಿರುಚಿತ್ರ

Dhrishya News by Dhrishya News
13/10/2026
in ಸುದ್ದಿಗಳು
0
ಐಶ್ವರ್ಯಾ ರೈ ಬಚ್ಚನ್ ಅಭಿನಯದ ಸ್ಟೇ ಇನ್ ದ ಮೊಮೆಂಟ್ ಅಭಿಯಾನ ಅನಾವರಣಗೊಳಿಸಿದ ಜೆಡಬ್ಲ್ಯು ಮ್ಯಾರಿಯಟ್
0
SHARES
3
VIEWS
Share on FacebookShare on Twitter

ಬೆಂಗಳೂರು, ಅಕ್ಟೋಬರ್ 13, 2026: ಮ್ಯಾರಿಯಟ್ ಬಾನ್ವಾಯ್‌ನ 30ಕ್ಕೂ ಅಧಿಕ ಜಾಗತಿಕ ಬ್ರ್ಯಾಂಡ್‌ಗಳ ಸಮೂಹದ ಪ್ರಮುಖ ಭಾಗವಾಗಿರುವ ಜೆಡಬ್ಲ್ಯು ಮ್ಯಾರಿಯಟ್, ತನ್ನ ಜಾಗತಿಕ ಬ್ರ್ಯಾಂಡ್ ರಾಯಭಾರಿ ಐಶ್ವರ್ಯಾ ರೈ ಬಚ್ಚನ್ ಅಭಿನಯದ ನೂತನ ಪ್ರಚಾರ ಕಿರುಚಿತ್ರವನ್ನು ಅನಾವರಣಗೊಳಿಸಿದೆ.

ಬ್ರ್ಯಾಂಡ್‌ನ ಜಾಗತಿಕ ತತ್ವವಾದ ಸ್ಟೇ ಇನ್ ದ ಮೊಮೆಂಟ್ ಪ್ರೇರಣೆಯಿಂದ ರೂಪಿಸಲಾಗಿರುವ ಈ ಕಿರುಚಿತ್ರವು, ನಾವೆಲ್ಲರೂ ವರ್ತಮಾನದ ಕ್ಷಣಕ್ಕೆ ನಮ್ಮನ್ನು ಸಂಪೂರ್ಣವಾಗಿ ಸಮರ್ಪಿಸಿಕೊಂಡಾಗ ಅನಾವರಣಗೊಳ್ಳುವ ಆನಂದ ಮತ್ತು ಆಪ್ತ ಬಾಂಧವ್ಯವನ್ನು ಸಂಭ್ರಮಿಸುತ್ತದೆ. ನಿಜವಾದ ಕ್ಷೇಮ ಮತ್ತು ನೆಮ್ಮದಿಯು ವರ್ತಮಾನದ ಕ್ಷಣದೊಂದಿಗೆ ಬೆರೆತು, ಪರಿಪೂರ್ಣತೆಯನ್ನು ಅನುಭವಿಸಲು ಸಮಯ ಮೀಸಲಿಡುವುದರಿಂದಲೇ ಪ್ರಾರಂಭವಾಗುತ್ತದೆ ಎಂಬ ಜೆಡಬ್ಲ್ಯು ಮ್ಯಾರಿಯಟ್‌ನ ದೀರ್ಘಕಾಲೀನ ನಂಬಿಕೆಯನ್ನು ಈ ಅಭಿಯಾನದ ಮೂಲ ಆಶಯವು ಪ್ರತಿಬಿಂಬಿಸುತ್ತದೆ.

ಕಳೆದ ಜೂನ್ ತಿಂಗಳಲ್ಲಿ ಘೋಷಿಸಲಾದ ಸಹಭಾಗಿತ್ವದ ಮುಂದುವರಿದ ಭಾಗವಾಗಿರುವ ಈ ಚಿತ್ರವು, “ಒಂದು ಕ್ಷಣವನ್ನು ನಿಜವಾದ ಕ್ಷಣವನ್ನಾಗಿಸುವುದು ಯಾವುದು?” ಎಂಬ ಸರಳ ಪ್ರಶ್ನೆಯೊಂದಿಗೆ ಆರಂಭವಾಗುತ್ತದೆ. ಜೆಡಬ್ಲ್ಯು ಮ್ಯಾರಿಯಟ್ ಜುಹುದಲ್ಲಿ ಚಿತ್ರೀಕರಣಗೊಂಡಿರುವ ಈ ಕಿರುಚಿತ್ರದಲ್ಲಿ, ಐಶ್ವರ್ಯಾ ರೈ ಬಚ್ಚನ್ ಅವರು ಅತ್ಯಂತ ಆಪ್ತವಾದ, ಆತುರವಿಲ್ಲದ ಮತ್ತು ಸಂತೋಷದಿಂದ ಕೂಡಿರುವ ಸರಣಿ ಕ್ಷಣಗಳ ಮೂಲಕ ಸಾಗುವುದನ್ನು ಸೆರೆಹಿಡಿಯಲಾಗಿದೆ. ಮದುವೆಯ ಸಂಭ್ರಮದ ಸನ್ನಿವೇಶವಿರಲಿ, ನಗು, ಪ್ರೀತಿ ಮತ್ತು ಅತ್ಯಂತ ಆಪ್ತರ ಸಾಮೀಪ್ಯವಿರಲಿ, ಜತೆಯಾಗಿ ಊಟ ಸವಿಯುವುದು, ಹರ್ಷೋದ್ಗಾರದ ಟೋಸ್ಟ್ ಎತ್ತುವುದು ಅಥವಾ ಹೊಸದನ್ನು ಅನ್ವೇಷಿಸುವುದು -ಪ್ರತಿಯೊಂದು ಪುಟ್ಟ ಅನುಭವವೂ ನಾವು ಆ ಕ್ಷಣದಲ್ಲಿ ಸಂಪೂರ್ಣವಾಗಿ ಲೀನವಾದಾಗ ಎಷ್ಟು ಅರ್ಥಪೂರ್ಣವಾಗುತ್ತದೆ ಎಂಬುದನ್ನು ಈ ಚಿತ್ರವು ಕಣ್ಣಿಗೆ ಕಟ್ಟುವಂತೆ ಬಿಂಬಿಸುತ್ತದೆ. “ನಾವು ಆ ಕ್ಷಣದಲ್ಲೇ ಉಳಿದುಕೊಂಡಾಗ ಮಾತ್ರ ಅದೊಂದು ಅಮೂಲ್ಯ ಕ್ಷಣವಾಗುತ್ತದೆ” ಎಂಬ ಆಳವಾದ ಚಿಂತನೆಯೊಂದಿಗೆ ಈ ಕಿರುಚಿತ್ರವು ಮುಕ್ತಾಯಗೊಳ್ಳುತ್ತದೆ.

ಇಂದಿನ ಐಷಾರಾಮಿ ಪ್ರಯಾಣಿಕರಿಗೆ ನೆಮ್ಮದಿ ಎಂದರೆ ಬದುಕಿನ ವೇಗವನ್ನು ಕೊಂಚ ತಗ್ಗಿಸಿ, ಪರಸ್ಪರ ಬೆರೆತು, ಪ್ರತಿಯೊಂದು ಕ್ಷಣವನ್ನೂ ಇನ್ನಷ್ಟು ಆಳವಾಗಿ ಅನುಭವಿಸುವ ಅವಕಾಶವಾಗಿದೆ. ಮ್ಯಾರಿಯಟ್ ಇಂಟರ್‌ನ್ಯಾಷನಲ್‌ನ ದ ಲಕ್ಸುರಿ ಗ್ರೂಪ್ 2025ರಲ್ಲಿ ಕೈಗೊಂಡ ಅಧ್ಯಯನದ ಪ್ರಕಾರ, ಏಷ್ಯಾ-ಪೆಸಿಫಿಕ್ ವಲಯದ ಶೇ. 90ರಷ್ಟು ಶ್ರೀಮಂತ ಪ್ರಯಾಣಿಕರು ತಮ್ಮ ಹೋಟೆಲ್ ಬುಕಿಂಗ್ ನಿರ್ಧಾರಗಳಲ್ಲಿ ಕ್ಷೇಮ ಮತ್ತು ವಿಶ್ರಾಂತಿಯ ಅನುಭವಗಳಿಗೆ (ವೆಲ್‌ನೆಸ್ ವಿಭಾಗ) ಆದ್ಯತೆ ನೀಡುವುದಾಗಿ ಸ್ಪಷ್ಟಪಡಿಸಿದ್ದಾರೆ. ಇದು ಹಿಂದಿನ ವರ್ಷದ ಶೇ. 80ಕ್ಕೆ ಹೋಲಿಸಿದರೆ ಗಣನೀಯ ಪ್ರಮಾಣದ ಏರಿಕೆಯಾಗಿದೆ. ಅರ್ಥಪೂರ್ಣ ಹಾಗೂ ಉದ್ದೇಶಪೂರ್ವಕ ಪ್ರಯಾಣದ ಈ ಬಯಕೆಯನ್ನು ಸಾಕಾರಗೊಳಿಸುವಂತೆ ರೂಪಿಸಲಾಗಿರುವ ಸ್ಟೇ ಇನ್ ದ ಮೊಮೆಂಟ್ ಅಭಿಯಾನವು, ವೇಗದ ಬದುಕಿನಿಂದ ಕೊಂಚ ವಿರಮಿಸಿ, ತಮಗೆ ಪ್ರಮುಖರಾದವರೊಂದಿಗೆ ಅರ್ಥಪೂರ್ಣ ಕ್ಷಣಗಳನ್ನು ಹಂಚಿಕೊಳ್ಳುವಂತೆ ಜಾಗತಿಕ ಅತಿಥಿಗಳಿಗೆ ಮುಕ್ತ ಆಹ್ವಾನ ನೀಡುತ್ತದೆ.

ವೀಡಿಯೋ ನೋಡಲು ಈ ಲಿಂಕ್ ಒತ್ತಿರಿ: https://www.instagram.com/p/DeYsa–s3rm/.

Previous Post

ಹೃದಯದ ಸಮಸ್ಯೆಯ ನಡುವೆಯೂ ಅಪರೂಪದ ಹೆರಿಗೆ ಪ್ರಕರಣ ಯಶಸ್ವಿ: ತಾಯಿ, ಮಗು, ಗರ್ಭಾಶಯ ಉಳಿಸಿ ಕಸ್ತೂರ್ಬಾ ಆಸ್ಪತ್ರೆ ವೈದ್ಯರ ಸಾಧನೆ

Next Post

ಬೆಂಗಳೂರಿನಲ್ಲಿ ಇಂದ್ರಿಯ 6ನೇ ಮಳಿಗೆ ಉದ್ಘಾಟನೆ: ಕರ್ನಾಟಕದಲ್ಲಿ ಹೆಜ್ಜೆಗುರುತು ವಿಸ್ತರಣೆ

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಬೆಂಗಳೂರಿನಲ್ಲಿ ಇಂದ್ರಿಯ 6ನೇ ಮಳಿಗೆ ಉದ್ಘಾಟನೆ: ಕರ್ನಾಟಕದಲ್ಲಿ ಹೆಜ್ಜೆಗುರುತು ವಿಸ್ತರಣೆ

ಬೆಂಗಳೂರಿನಲ್ಲಿ ಇಂದ್ರಿಯ 6ನೇ ಮಳಿಗೆ ಉದ್ಘಾಟನೆ: ಕರ್ನಾಟಕದಲ್ಲಿ ಹೆಜ್ಜೆಗುರುತು ವಿಸ್ತರಣೆ

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 24k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಬೆಂಗಳೂರಿನಲ್ಲಿ ಇಂದ್ರಿಯ 6ನೇ ಮಳಿಗೆ ಉದ್ಘಾಟನೆ: ಕರ್ನಾಟಕದಲ್ಲಿ ಹೆಜ್ಜೆಗುರುತು ವಿಸ್ತರಣೆ

ಬೆಂಗಳೂರಿನಲ್ಲಿ ಇಂದ್ರಿಯ 6ನೇ ಮಳಿಗೆ ಉದ್ಘಾಟನೆ: ಕರ್ನಾಟಕದಲ್ಲಿ ಹೆಜ್ಜೆಗುರುತು ವಿಸ್ತರಣೆ

13/10/2026
ಐಶ್ವರ್ಯಾ ರೈ ಬಚ್ಚನ್ ಅಭಿನಯದ ಸ್ಟೇ ಇನ್ ದ ಮೊಮೆಂಟ್ ಅಭಿಯಾನ ಅನಾವರಣಗೊಳಿಸಿದ ಜೆಡಬ್ಲ್ಯು ಮ್ಯಾರಿಯಟ್

ಐಶ್ವರ್ಯಾ ರೈ ಬಚ್ಚನ್ ಅಭಿನಯದ ಸ್ಟೇ ಇನ್ ದ ಮೊಮೆಂಟ್ ಅಭಿಯಾನ ಅನಾವರಣಗೊಳಿಸಿದ ಜೆಡಬ್ಲ್ಯು ಮ್ಯಾರಿಯಟ್

13/10/2026
ಹೃದಯದ ಸಮಸ್ಯೆಯ ನಡುವೆಯೂ ಅಪರೂಪದ ಹೆರಿಗೆ ಪ್ರಕರಣ ಯಶಸ್ವಿ: ತಾಯಿ, ಮಗು, ಗರ್ಭಾಶಯ ಉಳಿಸಿ ಕಸ್ತೂರ್ಬಾ ಆಸ್ಪತ್ರೆ ವೈದ್ಯರ ಸಾಧನೆ

ಹೃದಯದ ಸಮಸ್ಯೆಯ ನಡುವೆಯೂ ಅಪರೂಪದ ಹೆರಿಗೆ ಪ್ರಕರಣ ಯಶಸ್ವಿ: ತಾಯಿ, ಮಗು, ಗರ್ಭಾಶಯ ಉಳಿಸಿ ಕಸ್ತೂರ್ಬಾ ಆಸ್ಪತ್ರೆ ವೈದ್ಯರ ಸಾಧನೆ

13/10/2026
ಡಲ್ಲಾಸ್‌ನಲ್ಲಿ ಪುತ್ತಿಗೆ ಶ್ರೀಗಳಿಗೆ ಭವ್ಯ ಗುರುವಂದನೆ

ಡಲ್ಲಾಸ್‌ನಲ್ಲಿ ಪುತ್ತಿಗೆ ಶ್ರೀಗಳಿಗೆ ಭವ್ಯ ಗುರುವಂದನೆ

13/10/2026

Recent News

imunify-bot-check