Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

3 ತಿಂಗಳ ಮಗುವಿನ ಯಕೃತ್ತಿನ ಕ್ಯಾನ್ಸರ್ ಗೆಡ್ಡೆ ಯಶಸ್ವಿಯಾಗಿ ತೆರವು: ಮಣಿಪಾಲ ಕಸ್ತೂರ್ಬಾ ಆಸ್ಪತ್ರೆ ವೈದ್ಯರ ಸಾಧನೆ

ಮಕ್ಕಳ ಕ್ಯಾನ್ಸರ್ ಶಸ್ತ್ರಚಿಕಿತ್ಸೆಯ ಒಂದು ಅಪರೂಪದ ಸಾಧನೆಯಾಗಿ, ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ತಂಡವೊಂದು ಕೇವಲ ಮೂರು ತಿಂಗಳ ಹಸುಗೂಸಿಗೆ ಶಸ್ತ್ರಚಿಕಿತ್ಸೆ ನಡೆಸಿತು; ಇದೀಗ ಮೂರು ವರ್ಷಗಳ ನಂತರ ಆ ಮಗು ಆರೋಗ್ಯವಾಗಿದ್ದು, ಕ್ಯಾನ್ಸರ್ ಮುಕ್ತವಾಗಿದೆ.

Dhrishya News by Dhrishya News
15/09/2026
in ಸುದ್ದಿಗಳು
0
3 ತಿಂಗಳ ಮಗುವಿನ ಯಕೃತ್ತಿನ ಕ್ಯಾನ್ಸರ್ ಗೆಡ್ಡೆ ಯಶಸ್ವಿಯಾಗಿ ತೆರವು: ಮಣಿಪಾಲ ಕಸ್ತೂರ್ಬಾ ಆಸ್ಪತ್ರೆ ವೈದ್ಯರ ಸಾಧನೆ
0
SHARES
6
VIEWS
Share on FacebookShare on Twitter

ಮಣಿಪಾಲ, 15 ಸೆಪ್ಟೆಂಬರ್ 2026: ಮಕ್ಕಳ ಕ್ಯಾನ್ಸರ್ ಶಸ್ತ್ರಚಿಕಿತ್ಸೆಯ ಒಂದು ಅಪರೂಪದ ಸಾಧನೆಯಾಗಿ, ಮಾಹೆ ಮಣಿಪಾಲದ ಬೋಧನಾ ಆಸ್ಪತ್ರೆಗಳ ಅಂಗವಾಗಿರುವ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ವೈದ್ಯರ ತಂಡ ಮೂರು ತಿಂಗಳ ಹಸುಳೆಯ ಯಕೃತ್ತಿನಿಂದ (ಲಿವರ್) ದೊಡ್ಡ ಗಾತ್ರದ ಗೆಡ್ಡೆಯನ್ನು ಯಶಸ್ವಿಯಾಗಿ ತೆಗೆದುಹಾಕಿದೆ. ಮೂರು ವರ್ಷಗಳ ನಂತರವೂ ಆ ಮಗು ಆರೋಗ್ಯವಾಗಿದ್ದು, ಉತ್ತಮವಾಗಿ ಬೆಳೆಯುತ್ತಿದೆ ಮತ್ತು ಕ್ಯಾನ್ಸರ್ ಮುಕ್ತವಾಗಿದೆ.

ಮಗುವಿಗೆ ಯಕೃತ್ತು ದೊಡ್ಡದಾಗಿರುವುದು ಮತ್ತು ಯಕೃತ್ತಿನ ಕ್ಯಾನ್ಸರ್‌ನ ಸೂಚಕವಾದ ಆಲ್ಫಾ-ಫೆಟೊಪ್ರೊಟೀನ್ (ಎಎಫ್‌ಪಿ) ಮಟ್ಟವು ಆತಂಕಕಾರಿಯಾಗಿ ಹೆಚ್ಚಿರುವುದು ಪತ್ತೆಯಾದ ನಂತರ, ನವಜಾತ ಶಿಶುವಾಗಿದ್ದಾಗಲೇ ಮಗುವನ್ನು ಆಸ್ಪತ್ರೆಗೆ ಕರೆತರಲಾಗಿತ್ತು. ಪರೀಕ್ಷೆಗಳಿಂದ ಇದು ಹೆಪಟೊಬ್ಲಾಸ್ಟೋಮಾ (Hepatoblastoma) ಎಂಬುದು ದೃಢಪಟ್ಟಿತು. ಇದು ಮಕ್ಕಳಲ್ಲಿ ಕಂಡುಬರುವ ಅತ್ಯಂತ ಅಪರೂಪದ ಕ್ಯಾನ್ಸರ್‌ಗಳಲ್ಲಿ ಒಂದಾಗಿದ್ದು, ಪ್ರತೀ ಮಿಲಿಯನ್ ಮಕ್ಕಳಲ್ಲಿ ಒಂದೆರಡು ಜನರಿಗೆ ಮಾತ್ರ ಇದು ಕಾಣಿಸಿಕೊಳ್ಳುತ್ತದೆ.

ಈ ಪ್ರಕರಣವನ್ನು ಇನ್ನಷ್ಟು ಅಸಾಮಾನ್ಯವಾಗಿಸಿದ್ದು ಇದರ ಆನುವಂಶಿಕ ಅಂಶ. ವಿವರವಾದ ತನಿಖೆಯ ನಂತರ ಮಗುವಿಗೆ ಸಿಂಪ್ಸನ್-ಗೋಲಾಬಿ-ಬೆಹ್ಮೆಲ್ ಸಿಂಡ್ರೋಮ್ (Simpson-Golabi-Behmel syndrome) ಇರುವುದು ತಿಳಿದುಬಂದಿದೆ. ಇದು ಮಕ್ಕಳಲ್ಲಿ ಇಂತಹ ಗೆಡ್ಡೆಗಳು ಬೆಳೆಯಲು ಕಾರಣವಾಗುವ ಅಪರೂಪದ ವಂಶಪಾರಂಪರ್ಯ ಅತಿವೃದ್ಧಿ (overgrowth) ಸಮಸ್ಯೆಯಾಗಿದೆ. ಈ ಸಿಂಡ್ರೋಮ್ ಜೊತೆಗೆ ಹೆಪಟೊಬ್ಲಾಸ್ಟೋಮಾ ಕಾಣಿಸಿಕೊಂಡಿರುವ 15 ಕ್ಕಿಂತ ಕಡಿಮೆ ಪ್ರಕರಣಗಳು ಮಾತ್ರ ಜಗತ್ತಿನಲ್ಲಿ ವರದಿಯಾಗಿವೆ ಎಂದು ವೈದ್ಯರು ತಿಳಿಸಿದ್ದಾರೆ.

ಗೆಡ್ಡೆಯು ಯಕೃತ್ತಿನ ತೀರಾ ಕೇಂದ್ರ ಭಾಗದಲ್ಲಿದ್ದು, ಪ್ರಮುಖ ರಕ್ತನಾಳಗಳಿಂದ ಸುತ್ತುವರಿಯಲ್ಪಟ್ಟಿತ್ತು. ಇದರಿಂದಾಗಿ ತಕ್ಷಣವೇ ಶಸ್ತ್ರಚಿಕಿತ್ಸೆ ನಡೆಸುವುದು ಸಾಧ್ಯವಿರಲಿಲ್ಲ. ಹಾಗಾಗಿ ಡಾ ವಾಸುದೇವ ಭಟ್ ನೇತೃತ್ವದ ಮಕ್ಕಳ ಆಂಕೊಲಾಜಿ (ಕ್ಯಾನ್ಸರ್) ತಂಡವು ಮೊದಲು ಶಿಶುವಿಗೆ ನಿಯೋಅಡ್ಜುವಂಟ್ ಕೀಮೋಥೆರಪಿ ನೀಡಿ ರೋಗವನ್ನು ನಿಯಂತ್ರಣಕ್ಕೆ ತಂದು, ಶಸ್ತ್ರಚಿಕಿತ್ಸೆ ಸಾಧ್ಯವಾಗುವಂತೆ ಮಾಡಿತು.

ಬಳಿಕ ಶಸ್ತ್ರಚಿಕಿತ್ಸಾ ಆಂಕೊಲಾಜಿ ತಂಡವು ಸೆಂಟ್ರಲ್ ಹೆಪ್ಟೆಕ್ಟಮಿ (Central hepatectomy) ನಡೆಸಿತು. ಇದು ಅತ್ಯಂತ ಕ್ಲಿಷ್ಟವಾದ ಶಸ್ತ್ರಚಿಕಿತ್ಸೆಯಾಗಿದ್ದು, ಇದರಲ್ಲಿ ಯಕೃತ್ತಿನ ಹಾನಿಗೊಳಗಾದ ಕೇಂದ್ರ ಭಾಗವನ್ನು (ಸೆಗ್ಮೆಂಟ್ 4, 5 ಮತ್ತು 8) ಮಾತ್ರ ತೆಗೆದುಹಾಕಲಾಗುತ್ತದೆ. ಅದೇ ಸಮಯದಲ್ಲಿ ಆರೋಗ್ಯಕರವಾದ ಬಲ ಮತ್ತು ಎಡ ಭಾಗಗಳನ್ನು ಸಂರಕ್ಷಿಸಲಾಗುತ್ತದೆ, ಇದರಿಂದ ಅಂಗವು ಪುನರುತ್ಪತ್ತಿಗೊಂಡು ಮಗು ಸಾಮಾನ್ಯಯಾಗಿ ಬೆಳೆಯಲು ಸಾಧ್ಯವಾಗುತ್ತದೆ. ಇಷ್ಟು ಚಿಕ್ಕ ವಯಸ್ಸಿನ ರೋಗಿಗೆ ವಿರಳವಾಗಿ ನಡೆಸಲಾಗುವ ಈ ಶಸ್ತ್ರಚಿಕಿತ್ಸೆಯು, ಕ್ಯಾನ್ಸರ್ ಸಂಪೂರ್ಣವಾಗಿ ನಿವಾರಣೆಯಾಗುವುದನ್ನು ಮತ್ತು ಪ್ರಮುಖ ರಕ್ತನಾಳಗಳು ಸುರಕ್ಷಿತವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಇಂಟ್ರಾಆಪರೇಟಿವ್ ಅಲ್ಟ್ರಾಸೌಂಡ್ (intraoperative ultrasound) ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ನೆರವೇರಿತು.

ಯಾವುದೇ ತೊಡಕುಗಳಿಲ್ಲದ ಚೇತರಿಕೆಯ ನಂತರ, ಮಗುವನ್ನು ಸ್ಥಿರವಾದ ಆರೋಗ್ಯ ಸ್ಥಿತಿಯಲ್ಲಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು. ಚಿಕಿತ್ಸೆಯ ನಂತರ ಮೂರು ವರ್ಷಗಳಿಗೂ ಹೆಚ್ಚು ಕಾಲದ ಇತ್ತೀಚಿನ ತಪಾಸಣೆಯಲ್ಲಿ, ಸ್ಕ್ಯಾನ್ ಅಥವಾ ರಕ್ತ ಪರೀಕ್ಷೆಗಳಲ್ಲಿ ಮಗುವಿನಲ್ಲಿ ಯಾವುದೇ ರೋಗದ ಲಕ್ಷಣಗಳು ಕಂಡುಬಂದಿಲ್ಲ ಮತ್ತು ನಿರಂತರ ಮೇಲ್ವಿಚಾರಣೆಯೊಂದಿಗೆ ಮಗು ತನ್ನ ವಯಸ್ಸಿಗೆ ಅನುಗುಣವಾದ ಬೆಳವಣಿಗೆಯ ಹಂತಗಳನ್ನು ತಲುಪುತ್ತಿದೆ.

ಯಕೃತ್ತಿನ ಕೇಂದ್ರ ಭಾಗದಲ್ಲಿರುವ ಗೆಡ್ಡೆಗಾಗಿ ಮೂರು ತಿಂಗಳ ಮಗುವಿಗೆ ಶಸ್ತ್ರಚಿಕಿತ್ಸೆ ನಡೆಸುವುದು ಮಕ್ಕಳ ಶಸ್ತ್ರಚಿಕಿತ್ಸಾ ಆಂಕೊಲಾಜಿಯ ಅತ್ಯಂತ ಸವಾಲಿನ ಕೆಲಸಗಳಲ್ಲಿ ಒಂದಾಗಿದೆ. ಮಗು ಬೆಳೆಯಲು ಸಾಕಷ್ಟು ಆರೋಗ್ಯಕರ ಯಕೃತ್ತು ಉಳಿಯುವಂತೆ ಎಚ್ಚರಿಕೆ ವಹಿಸಿ ಹಾನಿಗೊಳಗಾದ ಕೇಂದ್ರ ಭಾಗಗಳನ್ನು ನಾವು ತೆಗೆದುಹಾಕಬೇಕಿತ್ತು. ಸ್ಪಷ್ಟವಾದ ಕ್ಯಾನ್ಸರ್ ಮಿತಿಯನ್ನು ಖಚಿತಪಡಿಸಿಕೊಳ್ಳಲು ಮತ್ತು ಪ್ರಮುಖ ರಕ್ತನಾಳಗಳನ್ನು ಸುರಕ್ಷಿತವಾಗಿಡಲು ಇಂಟ್ರಾ-ಆಪರೇಟಿವ್ ಅಲ್ಟ್ರಾಸೌಂಡ್ ನಮಗೆ ಅಮೂಲ್ಯವಾಗಿ ಸಹಾಯ ಮಾಡಿತು. ಅದೇ ಮಗು ಮೂರು ವರ್ಷಗಳ ನಂತರ ಆರೋಗ್ಯವಾಗಿ, ನಗುನಗುತ್ತಾ, ಕ್ಯಾನ್ಸರ್ ಮುಕ್ತವಾಗಿ ವಾಪಸ್ ಬರುವುದನ್ನು ನೋಡುವುದೇ ಯಾವುದೇ ಶಸ್ತ್ರಚಿಕಿತ್ಸಾ ತಂಡಕ್ಕೆ ಸಿಗುವ ಅತ್ಯಂತ ದೊಡ್ಡ ಬಹುಮಾನವಾಗಿದೆ” ಎಂದು ಶಸ್ತ್ರಚಿಕಿತ್ಸೆನಡೆಸಿದ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ಶಸ್ತ್ರಚಿಕಿತ್ಸಾ ಆಂಕೊಲಾಜಿ ವಿಭಾಗದ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥ ಡಾ. ನವೀನಾ ಕುಮಾರ್ ಎ.ಎನ್. ತಿಳಿಸಿದ್ದಾರೆ.

ಈ ಪ್ರಕರಣವು ಶಸ್ತ್ರಚಿಕಿತ್ಸಾ ಆಂಕೊಲಾಜಿ (surgical oncology), ಮಕ್ಕಳ ರಕ್ತಶಾಸ್ತ್ರ-ಆಂಕೊಲಾಜಿ (paediatric haemato-oncology), ಮಕ್ಕಳ ಶಸ್ತ್ರಚಿಕಿತ್ಸೆ, ನವಜಾತ ಶಿಶುಶಾಸ್ತ್ರ (neonatology), ವೈದ್ಯಕೀಯ ತಳಿಶಾಸ್ತ್ರ (medical genetics) ಮತ್ತು ಅರಿವಳಿಕೆ (anesthesia) ವಿಭಾಗಗಳನ್ನು ಒಂದೆಡೆ ಸೇರಿಸಿತು. ಈ ಅಪರೂಪದ ಪರಿಸ್ಥಿತಿಗಳ ಸಂಯೋಜನೆಗೆ ಸಂಬಂಧಿಸಿದ ಜಾಗತಿಕ ಸಾಹಿತ್ಯಕ್ಕೆ ಕೊಡುಗೆ ನೀಡುವ ನಿಟ್ಟಿನಲ್ಲಿ ಈ ಪ್ರಕರಣವನ್ನು ಈಗ peer-reviewed ಅಂತರರಾಷ್ಟ್ರೀಯ ಜರ್ನಲ್ ಆದ ‘BMJ ಕೇಸ್ ರಿಪೋರ್ಟ್ಸ್ (2025)’ ನಲ್ಲಿ ದಾಖಲಿಸಲಾಗಿದೆ.

ಈ ಯಶಸ್ಸು ನಮ್ಮ ಆಸ್ಪತ್ರೆಗಳಾದ್ಯಂತ ಇರುವ ವಿವಿಧ ವಿಭಾಗಗಳ ಪರಿಣತಿಯ ಆಳವನ್ನು ಪ್ರತಿಬಿಂಬಿಸುತ್ತದೆ. ಮಕ್ಕಳ ಆಂಕೊಲಾಜಿ, ಶಸ್ತ್ರಚಿಕಿತ್ಸಾ ಆಂಕೊಲಾಜಿ, ನವಜಾತ ಶಿಶುಶಾಸ್ತ್ರ, ತಳಿಶಾಸ್ತ್ರ ಮತ್ತು ಅರಿವಳಿಕೆ ವಿಭಾಗಗಳು ಒಂದೇ ತಂಡವಾಗಿ ಒಟ್ಟಾಗಿ ಕೆಲಸ ಮಾಡಿವೆ. ಇಂತಹ ಪ್ರಕರಣಗಳು ಕರಾವಳಿ ಕರ್ನಾಟಕ ಮತ್ತು ಇತರೆಡೆಯ ಮಕ್ಕಳಿಗೂ ವಿಶ್ವದರ್ಜೆಯ ಕ್ಯಾನ್ಸರ್ ಚಿಕಿತ್ಸೆಯನ್ನು ಅವರ ಮನೆಯ ಹತ್ತಿರವೇ ತಲುಪಿಸುವ ನಮ್ಮ ಬದ್ಧತೆಯನ್ನು ಪುನರುಚ್ಚರಿಸುತ್ತವೆ. ನಮ್ಮ ವೈದ್ಯರ ಬಗ್ಗೆ ನಮಗೆ ಹೆಮ್ಮೆ ಇದೆ ಮತ್ತು ನಮ್ಮ ಮೇಲೆ ನಂಬಿಕೆ ಇಟ್ಟ ಕುಟುಂಬಕ್ಕೆ ನಾವು ಕೃತಜ್ಞರಾಗಿದ್ದೇವೆ” ಎಂದು ಮಾಹೆ ಬೋಧನಾ ಆಸ್ಪತ್ರೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ (COO) ಡಾ. ಸುಧಾಕರ್ ಕಂಟಿಪುಡಿ ತಿಳಿಸಿದ್ದಾರೆ.

ಆರಂಭಿಕ ಮತ್ತು ನಿಖರವಾದ ರೋಗನಿರ್ಣಯ, ಸಮನ್ವಯತೆಯ ತಂಡದ ಪ್ರಯತ್ನ ಹಾಗೂ ದೀರ್ಘಕಾಲೀನ ಶಿಸ್ತುಬದ್ಧ ನಿಗಾ ಮಗುವಿನ ಚೇತರಿಕೆಗೆ ಪ್ರಮುಖ ಕಾರಣಗಳಾಗಿವೆ ಎಂದು ವೈದ್ಯರು ಹೇಳಿದ್ದಾರೆ. ಅಲ್ಲದೆ, ನವಜಾತ ಶಿಶುಗಳು ಮತ್ತು ಹಸುಗೂಸುಗಳಲ್ಲಿ ಅಸಾಮಾನ್ಯ ಲಕ್ಷಣಗಳು ಕಂಡುಬಂದ ಕೂಡಲೇ ತಜ್ಞರ ಬಳಿ ತಕ್ಷಣದ ತಪಾಸಣೆ ನಡೆಸುವಂತೆ ಅವರು ಪೋಷಕರಿಗೆ ಸಲಹೆ ನೀಡಿದ್ದಾರೆ.

Previous Post

ಕುಂದಾಪುರ: ಚಲಿಸುತ್ತಿದ್ದ ರೈಲಿನಲ್ಲಿ ಮಹಿಳೆಯ ಚಿನ್ನದ ಸರ ಕಳವು

Next Post

ಕಾರ್ಕಳ ಹೋಟೆಲ್ ಕೊಠಡಿಯಲ್ಲಿ ವ್ಯಕ್ತಿ ಮೃತ್ಯು..!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಕಾರ್ಕಳ ಹೋಟೆಲ್ ಕೊಠಡಿಯಲ್ಲಿ ವ್ಯಕ್ತಿ ಮೃತ್ಯು..!

ಕಾರ್ಕಳ ಹೋಟೆಲ್ ಕೊಠಡಿಯಲ್ಲಿ ವ್ಯಕ್ತಿ ಮೃತ್ಯು..!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 24k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ದೇವಸ್ಥಾನದಲ್ಲಿ 2.5 ಲಕ್ಷ ರೂ. ಮೌಲ್ಯದ ಚಿನ್ನದ ಸರ ಕಳವು

ದೇವಸ್ಥಾನದಲ್ಲಿ 2.5 ಲಕ್ಷ ರೂ. ಮೌಲ್ಯದ ಚಿನ್ನದ ಸರ ಕಳವು

16/09/2026
ದೇವಸ್ಥಾನದಲ್ಲಿ 3 ಲಕ್ಷ ರೂ. ಮೌಲ್ಯದ ಕರಿಮಣಿ ಸರ ಕಳವು

ದೇವಸ್ಥಾನದಲ್ಲಿ 3 ಲಕ್ಷ ರೂ. ಮೌಲ್ಯದ ಕರಿಮಣಿ ಸರ ಕಳವು

16/09/2026
ಬೈಂದೂರು: ನೇಣು ಬಿಗಿದ ಸ್ಥಿತಿಯಲ್ಲಿ ವ್ಯಕ್ತಿ ಪತ್ತೆ; ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಸಾವು

ಬೈಂದೂರು: ನೇಣು ಬಿಗಿದ ಸ್ಥಿತಿಯಲ್ಲಿ ವ್ಯಕ್ತಿ ಪತ್ತೆ; ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಸಾವು

16/09/2026
ಬವುಮಾ ಕೊನೆಕ್ಸ್‌ಪೋ ಇಂಡಿಯಾ 2026ರಲ್ಲಿ ಮುಂದಿನ ಪೀಳಿಗೆಯ ಅಗ್ರಿಗೇಟ್ಸ್ ಪ್ರದರ್ಶಿಸಿದ ಟಾಟಾ ಮೋಟಾರ್ಸ್

ಬವುಮಾ ಕೊನೆಕ್ಸ್‌ಪೋ ಇಂಡಿಯಾ 2026ರಲ್ಲಿ ಮುಂದಿನ ಪೀಳಿಗೆಯ ಅಗ್ರಿಗೇಟ್ಸ್ ಪ್ರದರ್ಶಿಸಿದ ಟಾಟಾ ಮೋಟಾರ್ಸ್

16/09/2026

Recent News

ದೇವಸ್ಥಾನದಲ್ಲಿ 2.5 ಲಕ್ಷ ರೂ. ಮೌಲ್ಯದ ಚಿನ್ನದ ಸರ ಕಳವು

ದೇವಸ್ಥಾನದಲ್ಲಿ 2.5 ಲಕ್ಷ ರೂ. ಮೌಲ್ಯದ ಚಿನ್ನದ ಸರ ಕಳವು

16/09/2026
ದೇವಸ್ಥಾನದಲ್ಲಿ 3 ಲಕ್ಷ ರೂ. ಮೌಲ್ಯದ ಕರಿಮಣಿ ಸರ ಕಳವು

ದೇವಸ್ಥಾನದಲ್ಲಿ 3 ಲಕ್ಷ ರೂ. ಮೌಲ್ಯದ ಕರಿಮಣಿ ಸರ ಕಳವು

16/09/2026
ಬೈಂದೂರು: ನೇಣು ಬಿಗಿದ ಸ್ಥಿತಿಯಲ್ಲಿ ವ್ಯಕ್ತಿ ಪತ್ತೆ; ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಸಾವು

ಬೈಂದೂರು: ನೇಣು ಬಿಗಿದ ಸ್ಥಿತಿಯಲ್ಲಿ ವ್ಯಕ್ತಿ ಪತ್ತೆ; ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಸಾವು

16/09/2026
ಬವುಮಾ ಕೊನೆಕ್ಸ್‌ಪೋ ಇಂಡಿಯಾ 2026ರಲ್ಲಿ ಮುಂದಿನ ಪೀಳಿಗೆಯ ಅಗ್ರಿಗೇಟ್ಸ್ ಪ್ರದರ್ಶಿಸಿದ ಟಾಟಾ ಮೋಟಾರ್ಸ್

ಬವುಮಾ ಕೊನೆಕ್ಸ್‌ಪೋ ಇಂಡಿಯಾ 2026ರಲ್ಲಿ ಮುಂದಿನ ಪೀಳಿಗೆಯ ಅಗ್ರಿಗೇಟ್ಸ್ ಪ್ರದರ್ಶಿಸಿದ ಟಾಟಾ ಮೋಟಾರ್ಸ್

16/09/2026
imunify-bot-check